AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ನೀವು ಆರೋಗ್ಯವಂತರಾಗಿರಬೇಕೇ? ಈ ಟಿಪ್ಸ್ ಅಳವಡಿಸಿಕೊಳ್ಳಿ

ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವೃದ್ಧವರೆಗೂ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತದೆ. ಒತ್ತಡದ ಜೀವನ ಹಾಗೂ ಆರೋಗ್ಯ ಶೈಲಿಗಳು ಕೂಡ ಆರೋಗ್ಯ ಸಮಸ್ಯೆಯೂ ಉಂಟಾಗಳು ಮುಖ್ಯ ಕಾರಣ. ಹೀಗಾಗಿ ಆರೋಗ್ಯದ ವೃದ್ಧಿಗಾಗಿ ನಮ್ಮ ಜೀವನ ಶೈಲಿಯನ್ನು ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಇರುವಷ್ಟು ದಿನ ಆರೋಗ್ಯವಂತರಾಗಿರಬಹುದು.

Health Tips: ನೀವು ಆರೋಗ್ಯವಂತರಾಗಿರಬೇಕೇ? ಈ  ಟಿಪ್ಸ್  ಅಳವಡಿಸಿಕೊಳ್ಳಿ
Health TipsImage Credit source: Pinterest
ಸಾಯಿನಂದಾ
| Edited By: |

Updated on: Feb 02, 2024 | 8:10 PM

Share

ಇಂದಿನ ಒತ್ತಡ ತುಂಬಿದ ಧಾವಂತದ ಜೀವನ ಶೈಲಿಯಿಂದ ಯಾರಿಗೂ ಕೂಡ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಮಯವಿಲ್ಲ. ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ನಾನಾ ರೀತಿಯ ರೋಗಗಳನ್ನು ಆಹ್ವಾನಿಸುತ್ತಿದ್ದೇವೆ. ಆದರೆ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಆರೋಗ್ಯ ಚೆನ್ನಾಗಿದ್ದು ಬಿಟ್ಟರೆ ಕೈ ತುಂಬಾ ದುಡಿಯಬಹುದು. ಹೀಗಾಗಿ ಆರೋಗ್ಯವನ್ನು ವೃದ್ಧಿಸಲು ಕೆಲವು ಸಣ್ಣ ಪುಟ್ಟ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು.

ಆರೋಗ್ಯ ವೃದ್ಧಿಸಲು ಈ ಆಹಾರಗಳತ್ತ ಗಮನ ಕೊಡಿ:

  • ಪ್ರತಿದಿನವೂ ಎದ್ದ ಕೂಡಲೇ ಒಂದು ಬಟ್ಟಲು ನೊರೆಹಾಲನ್ನು ದಿನವೂ ಸೇವಿಸುತ್ತಿದ್ದರೆ ಆರೋಗ್ಯ ವೃದ್ಧಿಸುವುದು.
  • ದಿನಾಲು ಸೇಬುಹಣ್ಣನ್ನು ಊಟ ಆದ ನಂತರ ಸೇವಿಸುವುದರಿಂದ ಆರೋಗ್ಯ ವೃದ್ಧಿಸುವುದರೊಂದಿಗೆ ಮುಖದಲ್ಲಿನ ಕಳೆ ಹೆಚ್ಚಾಗುತ್ತದೆ.
  • ಊಟವಾದ ಬಳಿಕ ನಿತ್ಯವು ಬಾಳೆಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುವುದರೊಂದಿಗೆ, ಆರೋಗ್ಯವುವು ಸುಧಾರಣೆಯಾಗುತ್ತದೆ.
  • ನುಗ್ಗೆಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ, ಮಕ್ಕಳಿಗೆ ಕುಡಿಸುವುದರಿಂದ ರಕ್ತ ಶುದ್ಧಿಯಾಗಿ ಆರೋಗ್ಯವಂತರಾಗಿರಬಹುದು.
  • ಅಡುಗೆಯಲ್ಲಿ ಕುಂಬಳಕಾಯಿಯನ್ನು ವಿವಿಧ ರೀತಿಯಲ್ಲಿ ಬಳಸುವುದರಿಂದ ಆರೋಗ್ಯದಲ್ಲಿ ಬದಲಾವಣೆಯನ್ನು ಕಾಣಬಹುದು.
  • ಹಸಿ ಬಟಾಣಿಯನ್ನು ನೀರಿನಲ್ಲಿ ಬೇಯಿಸಿ, ಉಪ್ಪು,ಬೆರೆಸದೆ ತಿನ್ನುತ್ತಿದ್ದರೆ ಆರೋಗ್ಯವು ಸುಧಾರಣೆಯಾಗುತ್ತದೆ.
  • ಮುಸುಕಿನ ಜೋಳವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೈಹಿಕ ಶಕ್ತಿ ಹೆಚ್ಚಾಗುತ್ತದೆ.
  • ನಿತ್ಯ ರಾಗಿ ಅಂಬುಲಿಯನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
  • ನವಿಲುಕೋಸು ಹಸಿಯಾಗಿ ತುರಿದು, ಕೋಸುಂಬರಿ ಮಾಡಿ ತಿಂದರೆ ರಕ್ತ ಶುದ್ಧಿಯಾಗಿ ಆರೋಗ್ಯವು ಉತ್ತಮವಾಗಿರುತ್ತದೆ.
  • ಚಪ್ಪರದವರೆಕಾಯಿ ಪಲ್ಯ ಅಥವಾ ಸಾರು ಮಾಡಿಕೊಂಡು ಊಟ ಮಾಡುವುದರಿಂದಲೂ ಆರೋಗ್ಯ ಸುಧಾರಿಸುವುದು.
  • ಬಲಿತ ಚಕ್ರಮುನಿ ಸೊಪ್ಪನ್ನು ಚೆನ್ನಾಗಿ ಒಣಗಿಸಿ, ತುಪ್ಪದಲ್ಲಿ ಹುರಿದು, ಒಣಗಿದ ಮೆಣಸಿನಕಾಯಿ, ಉಪ್ಪು, ಹುಣಸೆ ಹಣ್ಣು ಬೆರೆಸಿ, ಕುಟ್ಟಿ ಪುಡಿ ಮಾಡಿದ ಚಟ್ಟಿಪುಡಿ ಸೇವಿಸಿದರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
  • ರಾತ್ರಿ ಮಲಗುವ ಎರಡು ಗಂಟೆಯ ಮೊದಲು ಒಂದು ಲೋಟ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.
  • ಬೆಳಗ್ಗೆ ಎದ್ದ ಕೂಡಲೇ ರಾತ್ರಿ ನೆನೆಸಿಟ್ಟ ಒಣ ದ್ರಾಕ್ಷಿಯನ್ನು ನೀರು ಸಮೇತ ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ.
  • ಸೀತಾಫಲದ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಮಾಂಸ ಖಂಡಗಳ ಶಕ್ತಿಯೂ ಹೆಚ್ಚಾಗಿ ಆರೋಗ್ಯವು ಉತ್ತಮವಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ