Mouth Cancer: ಧೂಮಪಾನ ಮಾಡದವರಿಗೂ ಬಾಯಿಯ ಕ್ಯಾನ್ಸರ್ ಬರಲು ಕಾರಣ ಇಲ್ಲಿದೆ

ಬಾಯಿಯ ಕ್ಯಾನ್ಸರ್ ಬಾಯಿಯನ್ನು ರೂಪಿಸುವ ಯಾವುದೇ ಭಾಗಗಳಲ್ಲಿ ಬೆಳವಣಿಗೆಯಾಗುವ ಕ್ಯಾನ್ಸರ್ ಆಗಿದೆ. ತುಟಿಗಳು, ಒಸಡುಗಳು, ನಾಲಿಗೆ, ಕೆನ್ನೆಗಳ ಒಳ ಪದರ, ಬಾಯಿಯ ಮೇಲ್ಭಾಗ, ನಾಲಿಗೆಯ ಕೆಳಗೆ ಕ್ಯಾನ್ಸರ್​ಕಾರಕ ಗೆಡ್ಡೆಗಳು ಬೆಳೆಯಬಹುದು. ಧೂಮಪಾನ ಮಾಡದವರಿಗೆ ಕೂಡ ಇತ್ತೀಚೆಗೆ ಬಾಯಿಯ ಕ್ಯಾನ್ಸರ್ ಬರುತ್ತಿದೆ. ಇದಕ್ಕೆ ಕಾರಣವೇನೆಂಬುದರ ಬಗ್ಗೆ ತಜ್ಞರು ತಿಳಿಸಿದ್ದಾರೆ.

Mouth Cancer: ಧೂಮಪಾನ ಮಾಡದವರಿಗೂ ಬಾಯಿಯ ಕ್ಯಾನ್ಸರ್ ಬರಲು ಕಾರಣ ಇಲ್ಲಿದೆ
ಬಾಯಿಯ ಕ್ಯಾನ್ಸರ್ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 02, 2024 | 4:15 PM

ಮನುಷ್ಯನನ್ನು ಹೆಚ್ಚಾಗಿ ಕಾಡುತ್ತಿರುವ ಹಲವಾರು ರೀತಿಯ ಕ್ಯಾನ್ಸರ್‌ಗಳಲ್ಲಿ ಬಾಯಿ ಕ್ಯಾನ್ಸರ್  (Mouth Cancer) ಕೂಡ ಒಂದು. ಬಾಯಿಯ ಒಳಭಾಗದಲ್ಲಿ ಸಂಭವಿಸುವ ಕ್ಯಾನ್ಸರ್ ಅನ್ನು ಬಾಯಿಯ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಈ ಬಾಯಿಯ ಕ್ಯಾನ್ಸರ್ ಭಾರತದಲ್ಲಿ ಅಸ್ತಿತ್ವದಲ್ಲಿರುವ ಎರಡನೇ ಅತ್ಯಂತ ಪ್ರಚಲಿತ ಕ್ಯಾನ್ಸರ್ ಆಗಿದೆ. ಧೂಮಪಾನ (Smoking) ಮತ್ತು ತಂಬಾಕು ಸೇವನೆಯಿಂದ ಬಾಯಿಯ ಕ್ಯಾನ್ಸರ್ (Oral Cancer) ಅಪಾಯ ಜಾಸ್ತಿಯಾಗುತ್ತದೆ. ಹೀಗಾಗಿ, ತಂಬಾಕು ಸೇವನೆ, ಸಿಗರೇಟ್ ಸೇದುವುದನ್ನು ಅವಾಯ್ಡ್ ಮಾಡಬೇಕೆಂದು ಎಚ್ಚರಿಕೆ ಸಂದೇಶಗಳನ್ನು ನೀಡಲಾಗುತ್ತದೆ. ಆದರೆ, ಧೂಮಪಾನ ಮಾಡದವರಿಗೆ ಕೂಡ ಬಾಯಿಯ ಕ್ಯಾನ್ಸರ್ ಬರುವ ಸಾಧ್ಯತೆಗಳು ಇರುತ್ತವೆ.

ಪ್ರತಿ ವರ್ಷ ಫೆಬ್ರವರಿ 4ರಂದು ‘ವಿಶ್ವ ಕ್ಯಾನ್ಸರ್ ದಿನ’ವನ್ನು ಆಚರಿಸುವ ಮೂಲಕ ಕ್ಯಾನ್ಸರ್ ಕುರಿತು ಜಾಗೃತಿಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಈ ರೋಗವನ್ನು ಎದುರಿಸಲು ಜಾಗತಿಕ ಪ್ರಯತ್ನವನ್ನು ಮಾಡಲಾಗುತ್ತಿದೆ. ಭಾರತದ ದ್ವಾರಕಾದಲ್ಲಿರುವ ಯೂನಿಕ್ ಹಾಸ್ಪಿಟಲ್ ಕ್ಯಾನ್ಸರ್ ಸೆಂಟರ್‌ನಲ್ಲಿ ವೈದ್ಯಕೀಯ ಆಂಕೊಲಾಜಿ ಮುಖ್ಯಸ್ಥರಾದ ಡಾ. ಆಶಿಶ್ ಗುಪ್ತಾ, ಧೂಮಪಾನಿಗಳಲ್ಲದವರಲ್ಲಿ ಬಾಯಿಯ ಕ್ಯಾನ್ಸರ್‌ನ ಕಾರಣಗಳ ಬಗ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ: Bowel Cancer: ಕರುಳಿನ ಕ್ಯಾನ್ಸರ್ ಅಪಾಯ ತಡೆಯುವ 8 ಆಹಾರಗಳಿವು

ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಸೋಂಕು:

ಧೂಮಪಾನಿಗಳಲ್ಲದವರಲ್ಲಿ ಬಾಯಿ ಕ್ಯಾನ್ಸರ್‌ಗೆ ಗಮನಾರ್ಹ ಅಪಾಯಕಾರಿ ಅಂಶವೆಂದರೆ HPV ಸೋಂಕು. ಅದರಲ್ಲೂ ವಿಶೇಷವಾಗಿ HPV-16 ಸೋಂಕು. ಈ ವೈರಸ್ ಹೆಚ್ಚಾಗಿ ಮೌಖಿಕ ಸಂಭೋಗ ಮತ್ತು ನಿಕಟ ಸಂಪರ್ಕದ ಮೂಲಕ ಹರಡುತ್ತದೆ. ಈ ಪ್ರಕರಣಗಳನ್ನು ತಡೆಗಟ್ಟಲು HPV ಲಸಿಕೆ ಹಾಕಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ಹೆಚ್​ಪಿವಿ ಸೋಂಕು ಗರ್ಭಕಂಠದ ಕ್ಯಾನ್ಸರ್​ಗೆ ಕೂಡ ಪ್ರಮುಖ ಕಾರಣವಾಗಿದೆ.

ಆಲ್ಕೋಹಾಲ್ ಸೇವನೆ:

ತಂಬಾಕು ಬಳಕೆಯಿಲ್ಲದಿದ್ದರೂ ಸಹ ದೀರ್ಘಕಾಲದ ಆಲ್ಕೊಹಾಲ್ ಸೇವನೆಯು ಬಾಯಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆಲ್ಕೋಹಾಲ್ ಉದ್ರೇಕಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದರ ದೀರ್ಘಾವಧಿಯ ಬಳಕೆಯು ಬಾಯಿಯಲ್ಲಿರುವ ಕೋಶಗಳನ್ನು ಹಾನಿಗೊಳಿಸುತ್ತದೆ. ಸುಮಾರು 30% ಬಾಯಿಯ ಕ್ಯಾನ್ಸರ್‌ಗಳು ಆಲ್ಕೋಹಾಲ್ ಸೇವನೆಯೊಂದಿಗೆ ಸಂಬಂಧ ಹೊಂದಿವೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ಕೆಟ್ಟ ಆಹಾರ ಪದ್ಧತಿ:

ಕಳಪೆ ಆಹಾರ ಅದರಲ್ಲೂ ವಿಶೇಷವಾಗಿ ಕಡಿಮೆ ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಬಾಯಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಈ ಆಹಾರಗಳಲ್ಲಿನ ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳು ಜೀವಕೋಶದ ರಕ್ಷಣೆಗೆ ನಿರ್ಣಾಯಕವಾಗಿವೆ. ತಾಜಾ ಉತ್ಪನ್ನಗಳ ಕೊರತೆಯಿರುವ ಆಹಾರವು ಬಾಯಿಯ ಕ್ಯಾನ್ಸರ್ ಅಪಾಯವನ್ನು 50%ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧನೆ ತೋರಿಸುತ್ತದೆ.

ಇದನ್ನೂ ಓದಿ: Cervical Cancer: ಪೂನಂ ಪಾಂಡೆ ಸಾವಿಗೆ ಕಾರಣವಾದ ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳೇನು?

ಪರಿಸರದ ಅಂಶಗಳು:

ವಿಪರೀತವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಿಕೆಯು ತುಟಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಇದು ಕೂಡ ಒಂದು ರೀತಿಯ ಬಾಯಿ ಕ್ಯಾನ್ಸರ್ ಆಗಿದೆ.

ಕುಟುಂಬದ ಇತಿಹಾಸ:

ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಬಾಯಿಯ ಕ್ಯಾನ್ಸರ್ ಇದ್ದರೆ ಅದರಿಂದ ಕೂಡ ನಿಮಗೆ ಬಾಯಿಯ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ