ಹೃದ್ರೋಗದ ಅಪಾಯದಿಂದ ಪಾರಾಗಲು ಈ ಒಂದು ಅಭ್ಯಾಸ ಬದಲಾಯಿಸಿಕೊಳ್ಳಿ!

Heart Health Tips: ಬಿಪಿ, ಡಯಾಬಿಟಿಸ್, ಹೃದಯಾಘಾತ ಇವೆಲ್ಲವೂ ಶ್ರೀಮಂತರ ಅಥವಾ ಅನುಕೂಲಸ್ಥರಿಗೆ ಬರುವ ರೋಗ ಎಂಬ ನಂಬಿಕೆ ಹಲವರಲ್ಲಿತ್ತು. ಆದರೆ, ಈ ಯಾವ ರೋಗಗಳೂ ಯಾರನ್ನೂ ಹೇಳಿಕೇಳಿ ಬರುವಂಥದ್ದಲ್ಲ. ನಾವು ಈ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಿದರೆ ಮಾತ್ರ ಇವುಗಳನ್ನು ದೂರ ಇಡಲು ಸಾಧ್ಯ. ಆದರೆ, ಕೆಲವೊಮ್ಮೆ ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ರೂಢಿಸಿಕೊಳ್ಳುವ ಕೆಲವು ಅಭ್ಯಾಸಗಳಿಂದಾಗಿ ನಾವೇ ಕೆಲವು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುತ್ತೇವೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬೇಕೆಂದರೆ ನಿಮ್ಮ ಒಂದು ಅಭ್ಯಾಸದಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕು. ಯಾವುದು ಅದು?

ಹೃದ್ರೋಗದ ಅಪಾಯದಿಂದ ಪಾರಾಗಲು ಈ ಒಂದು ಅಭ್ಯಾಸ ಬದಲಾಯಿಸಿಕೊಳ್ಳಿ!
ಸಾಂದರ್ಭಿಕ ಚಿತ್ರ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 02, 2024 | 11:40 AM

ಇತ್ತೀಚೆಗೆ ಹೃದ್ರೋಗವೆಂಬುದು (Heart Disease) ಸಾಮಾನ್ಯವಾಗಿಬಿಟ್ಟಿದೆ. ಇದರಿಂದಲೇ ಸಣ್ಣಪುಟ್ಟ ಎದೆನೋವು ಬಂದರೂ ಜನರು ಆತಂಕದಿಂದ ಹೃದ್ರೋಗತಜ್ಞರನ್ನು ಭೇಟಿಯಾಗುತ್ತಿದ್ದಾರೆ. ಕಳೆದ ಐದಾರು ವರ್ಷಗಳಿಂದ ಹೃದ್ರೋಗತಜ್ಞರನ್ನು ಭೇಟಿಯಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಜಾಗತಿಕವಾಗಿ ಪ್ರತಿ ವರ್ಷ ಅತಿ ಹೆಚ್ಚು ಸಾವುಗಳಿಗೆ ಹೃದ್ರೋಗ ಮುಖ್ಯ ಕಾರಣವಾಗಿದೆ. ಪ್ರಮುಖ ರೋಗಲಕ್ಷಣಗಳನ್ನು ಹೊಂದಿರುವ ಈ ಆರೋಗ್ಯ ಸಮಸ್ಯೆ (Health Problem) ಮಾರಣಾಂತಿಕವಾಗಿರುತ್ತದೆ. ಹಾಗಾದರೆ, ಹೃದ್ರೋಗ ಬಾರದಂತೆ ತಡೆಯಲು ನಾವು ಏನು ಮಾಡಬೇಕು?

ನಮ್ಮ ಆಹಾರ ಮತ್ತು ಜೀವನಶೈಲಿಯ ಆಯ್ಕೆಗಳ ಮೇಲೆ ಹೃದ್ರೋಗವನ್ನು ತಡೆಗಟ್ಟುವುದು ಕೇಂದ್ರೀಕೃತವಾಗಿರುತ್ತದೆ. ಹೃದಯಾಘಾತ, ಪಾರ್ಶ್ವವಾಯು ಹೀಗೆ ಹಲವಾರು ರೋಗಗಳಿಗೆ ನಮ್ಮ ಜೀವನಶೈಲಿಯೇ ಮುಖ್ಯ ಕಾರಣವಾಗಿರುತ್ತದೆ. ಕುಟುಂಬದ ಇತಿಹಾಸ (ಹೆರಿಡಿಟಿ)ದಿಂದ ಧೂಮಪಾನದವರೆಗೆ, ಜೀವನಶೈಲಿಯಿಂದ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳ ಅತಿಯಾದ ಸೇವನೆಯವರೆಗೆ ಹಲವು ಅಂಶಗಳು ಇದಕ್ಕೆ ಕಾರಣವಾಗುತ್ತವೆ. ಆದರೆ ಹೃದ್ರೋಗತಜ್ಞರ ಪ್ರಕಾರ, ಕೇವಲ ಒಂದು ಸರಳವಾದ ಆಹಾರದ ಬದಲಾವಣೆಯಿಂದ ನಿಮ್ಮ ಆರೋಗ್ಯದಲ್ಲಿ ಬಹಳ ವ್ಯತ್ಯಾಸಗಳನ್ನು ನೋಡಬಹುದು.

ಇದನ್ನೂ ಓದಿ: ಚಳಿಗಾಲದಲ್ಲಿ ಹೃದಯಾಘಾತದ ಅಪಾಯದಿಂದ ಪಾರಾಗುವುದು ಹೇಗೆ?

ಸಂಶೋಧನೆಯ ಪ್ರಕಾರ, ತಿನ್ನುವ ಆಹಾರದ ಪ್ರಕಾರಗಳನ್ನು ಬದಲಾಯಿಸುವುದು ಮಾತ್ರವಲ್ಲದೆ ಊಟದ ಸಮಯವನ್ನು ಗಮನದಲ್ಲಿಟ್ಟುಕೊಳ್ಳುವುದು ನಮ್ಮ ಆರೋಗ್ಯದಲ್ಲಿ ಬಹಳ ಬದಲಾವಣೆಯನ್ನು ಉಂಟುಮಾಡುತ್ತದೆ. ಹೃದ್ರೋಗ ತಜ್ಞರ ಪ್ರಕಾರ, ದಿನವೂ ಬೇಗ ಊಟ ಮಾಡುವುದರಿಂದ ಹೃದ್ರೋಗದ ಅಪಾಯವನ್ನು ತಗ್ಗಿಸಬಹುದು. ಹೃದಯರಕ್ತನಾಳದ ಸಮಸ್ಯೆಗಳ ತಡೆಗಟ್ಟುವಿಕೆಯಲ್ಲಿ ಆಹಾರವು ಮಹತ್ವದ ಪಾತ್ರವನ್ನು ಹೊಂದಿದೆ ಎಂದು ವೈದ್ಯರು ಹೇಳುತ್ತಾರೆ.

2023ರ ಡಿಸೆಂಬರ್ ತಿಂಗಳಿಂದ ವಿಜ್ಞಾನಿಗಳು 1,00,000ಕ್ಕೂ ಹೆಚ್ಚು ಜನರ ಡೇಟಾವನ್ನು ವಿಶ್ಲೇಷಿಸಿದ್ದಾರೆ. ರಾತ್ರಿ ತಡವಾಗಿ ತಿನ್ನುವುದು, ಬೆಳಗಿನ ತಿಂಡಿ ಎರಡೂ ಹೃದಯದ ಕಾಯಿಲೆಗಳ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ ಎಂದು ಕಂಡುಹಿಡಿಯಲಾಗಿದೆ. ಆಹಾರ ಸೇವನೆಯಲ್ಲಿ ಒಂದು ಗಂಟೆಯ ವಿಳಂಬವೂ ಸಹ ಹೃದಯರಕ್ತನಾಳದ ಬಿಕ್ಕಟ್ಟಿನಿಂದ ಬಳಲುವ ಸಾಧ್ಯತೆಯನ್ನು ಶೇ. 6ರಷ್ಟು ಹೆಚ್ಚಿಸಬಹುದು ಎಂದು ಸಂಶೋಧನೆಗಳು ಸೂಚಿಸುತ್ತವೆ. ಇದರರ್ಥ ಬೆಳಿಗ್ಗೆ 9 ಗಂಟೆಗೆ ಉಪಾಹಾರ ಸೇವಿಸುವ ಜನರು 8 ಗಂಟೆಗೆ ತಿನ್ನುವ ಜನರಿಗಿಂತ ಶೇ. 6ರಷ್ಟು ಹೆಚ್ಚು ಹೃದಯದ ಕಾಯಿಲೆಯಿಂದ ಬಳಲುವ ಅಪಾಯ ಹೊಂದಿರುತ್ತಾರೆ.

ಇದನ್ನೂ ಓದಿ: ಮಕ್ಕಳಲ್ಲಿ ಹೃದಯಾಘಾತ ಉಂಟಾಗುವ ಲಕ್ಷಣಗಳೇನು?

ರಾತ್ರಿ ತಡವಾಗಿ ಊಟ ಮಾಡುವುದರಿಂದ ಕೂಡ ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ. ರಾತ್ರಿ 8 ಗಂಟೆಯ ನಂತರ ಊಟ ಮಾಡುವುದರಿಂದ ಸ್ಟ್ರೋಕ್‌ನಿಂದ ಬಳಲುವ ಅಪಾಯ ಶೇ. 28ರಷ್ಟು ಹೆಚ್ಚಾಗುತ್ತದೆ. ಹೀಗಾಗಿ, ರಾತ್ರಿ 8 ಗಂಟೆಗೂ ಮೊದಲು ತಿನ್ನುವುದು ಉತ್ತಮ. ತಿನ್ನುವುದರ ನಡುವೆ ಹೆಚ್ಚು ವಿರಾಮಗಳನ್ನು ತೆಗೆದುಕೊಳ್ಳುವುದು ನಮ್ಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ದಿನದ ಕೊನೆಯ ಊಟ ಮತ್ತು ಮರುದಿನದ ಮೊದಲ ತಿಂಡಿಯ ನಡುವೆ ಹೆಚ್ಚು ಸಮಯ ಉಪವಾಸ ಮಾಡಿದರೆ ಅದು ಉತ್ತಮವಾಗಿರುತ್ತದೆ. ಇದು ಪಾರ್ಶ್ವವಾಯು ಅಪಾಯವನ್ನು ಮತ್ತಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರರ್ಥ ರಾತ್ರಿಯಲ್ಲಿ ದೀರ್ಘಾವಧಿಯ ಉಪವಾಸವು ಹೃದಯರಕ್ತನಾಳದ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ. ಆದ್ದರಿಂದ, ದಿನವೂ ಸಾಧ್ಯವಾದಷ್ಟು ಬೇಗ ಊಟವನ್ನು ಮಾಡಬೇಕು ಮತ್ತು ದೀರ್ಘಾವಧಿಯಲ್ಲಿ ಉತ್ತಮ ಹೃದಯದ ಆರೋಗ್ಯಕ್ಕಾಗಿ ಸಮಯಕ್ಕೆ ಸರಿಯಾಗಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್