ಕೊರೊನಾ ನೆಗೆಟಿವ್ ಬಂದರೂ ನಿಮ್ಮಲ್ಲಿ ಕೆಲವು ಪ್ರಶ್ನೆಗಳಿರಬಹುದು, ಅವೆಲ್ಲದಕ್ಕೂ ಉತ್ತರ ಇಲ್ಲಿದೆ

| Updated By: ಆಯೇಷಾ ಬಾನು

Updated on: Apr 29, 2021 | 8:07 AM

ಕೊರೊನಾ ಸೋಂಕಿತ ವ್ಯಕ್ತಿ ನೇರ ಸಂಪರ್ಕದಲ್ಲಿದ್ದಾಗ ಕೊರೊನಾ ಸೊಂಕು ಬಹಬೇಗ ನಿಮ್ಮ ದೇಹಕ್ಕೆ ಪ್ರವೇಶಿಸುತ್ತದೆ. ಕೊರೊನಾ ಸೋಂಕು ತಗುಲಿದ ವ್ಯಕ್ತಿಗೆ ಮತ್ತು ಇತರರಿಗೆ ಹಲವಾರು ಪ್ರಶ್ನೆಗಳು ಎದುರಾಗಿರಬಹುದು ಅದೆಕ್ಕೆಲ್ಲಾ ಉತ್ತರ ಇಲ್ಲಿದೆ.

ಕೊರೊನಾ ನೆಗೆಟಿವ್ ಬಂದರೂ ನಿಮ್ಮಲ್ಲಿ ಕೆಲವು ಪ್ರಶ್ನೆಗಳಿರಬಹುದು, ಅವೆಲ್ಲದಕ್ಕೂ ಉತ್ತರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ಕೊವಿಡ್​ 19 ಎಂಬುದು ಇತ್ತೀಚೆಗೆ ಪತ್ತೆಯಾದ ಒಂದು ಸಾಂಕ್ರಾಮಿಕ ಖಾಯಿಲೆ. ಸೋಂಕಿತ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ ಲಾಲಾರಸದ ಹನಿಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮೂಗು, ಬಾಯಿ ಮತ್ತು ಕಣ್ಣುಗಳ ಮೂಲಕ ಇತರರ ದೇಹ ಪ್ರವೇಶಿಸುತ್ತದೆ. ಇತ್ತೀಚಿಗಿನ ಅಧ್ಯಯನಗಳ ಪ್ರಕಾರ ಕೊರೊನಾ ಸೋಂಕು ಗಾಳಿಯಿಂದ ಹರಡುತ್ತದೆ ಎಂಬ ಮಾಹಿತಿಗಳೂ ಕೇಳಿ ಬಂದಿವೆ. ಕಚೇರಿಗಳಲ್ಲಿ, ಎಸಿ ಕ್ಯಾಬ್​ಗಳಲ್ಲಿ, ಬಸ್​ಗಳಲ್ಲಿ ಶಾಪಿಂಗ್​ ಮಾಲ್​ಗಳಲ್ಲಿ ಮತ್ತು ಚಿತ್ರ ಮಂದಿರಗಳಂತಹ ಮುಚ್ಚಿದ ಗಾಳಿನಿಯಂತ್ರಿತ ಪರಿಸರದಲ್ಲಿ ಹೆಚ್ಚು ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮತ್ತು ಕೊರೊನಾ ಸೋಂಕಿತ ವ್ಯಕ್ತಿ ನೇರ ಸಂಪರ್ಕದಲ್ಲಿದ್ದಾಗ ಕೊರೊನಾ ಸೊಂಕು ಬಹುಬೇಗ ನಿಮ್ಮ ದೇಹಕ್ಕೆ ಪ್ರವೇಶಿಸುತ್ತದೆ. ಕೊರೊನಾ ಸೋಂಕು ತಗುಲಿದ ವ್ಯಕ್ತಿಗೆ ಮತ್ತು ಇತರರಿಗೆ ಹಲವಾರು ಪ್ರಶ್ನೆಗಳು ಎದುರಾಗಿರಬಹುದು ಅದೆಕ್ಕೆಲ್ಲಾ ಉತ್ತರ ಇಲ್ಲಿದೆ.

ಚೇತರಿಕೆಯಾದರೂ ಕೊರೊನಾ ಲಕ್ಷಣ ಮುಂದುವರೆಯುತ್ತಿದ್ದರೆ ಏನು ಮಾಡಬೇಕು?
ಕೊರೊನಾ ಲಕ್ಷಣ ಕಾಣಿಸಿಕೊಂಡ ನಂತರ ಗುಣಮುಖರಾಗಿ ಹೊರ ಬಂದರೂ ಕೂಡಾ ಕೊರೊನಾ ಲಕ್ಷಣಗಳು ವಾಸಿಯಾಗದೇ ಹಾಗೆಯೇ ಉಳಿದುಬಿಡಬಹುದು. ಹಾಗಿದ್ದಾಗ ಹೆಚ್ಚು ಚಿಂತೆಗೊಳಗಾಗದೇ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ಸಲಹೆಗಾರರೊಂದಿಗೆ ಸಲಹೆ ಪಡೆದುಕೊಳ್ಳಿ.

ಪ್ರತ್ಯೇಕತೆಯನ್ನು ಕೊನೆಗೊಳಿಸುವುದು ಯಾವಾಗ ಸುರಕ್ಷಿತ?
ಮೊದಲು ವೈದ್ಯರಲ್ಲಿ ಸಲಹೆ ಪಡೆದ ನಂತರವೇ ಇತರ ಜನರೊಂದಿಗೆ ಸಂಪರ್ಕವನ್ನು ಪುನರಾರಂಭಿಸಬಹುದು. ಜ್ವರದಿಂದ ಗುಣಮುಖರಾಗಿ 3 ದಿನಗಳಾಗಿದ್ದರೆ, ರೋಗ ಲಕ್ಷಣಗಳಿಂದ ಹೊರಬಂದು 17 ದಿನಗಳಾಗಿದ್ದರೆ, ಕೊರೊನಾ ಸೋಂಕಿನ ಲಕ್ಷಣಗಳು ಕಡಿಮೆಯಾಗಿದ್ದರೆ, ರೋಗನಿರೋಧಕ ಶಕ್ತಿ ಕುಂಠಿತಗೊಳ್ಳದೇ ಸದೃಢವಾಗಿದ್ದರೆ, ವೈದ್ಯರು ಸೂಚಿಸಿದಂತೆ ನೀವು ನಿಯಮ ಪಾಲಿಸಬೇಕಾಗುತ್ತದೆ.

ಆಫೀಸ್​ಗೆ ತೆರಳುವುದು ಯಾವಾಗ?
ವೈದ್ಯರು ನಿಮ್ಮ ಆರೋಗ್ಯವನ್ನು ಪರಿಶೀಲಿಸಿ ಅನುಮತಿ ನೀಡಿದ ನಂತರ ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಬಹುದು. ಕೊರೊನಾ ಪಾಸಿಟಿವ್​ ವರದಿ ಬಳಿಕ ರೋಗದಿಂಗ ಗುಣಮುಖರಾಗಿ 17 ದಿನ ಕಳೆದ ಬಳಿಕ ವೈದ್ಯಕೀಯ ಸಲಹೆಯ ಮೆರೆಗೆ ನೀವು ಕೆಲಸಕ್ಕೆ ತೆರಳಬಹುದು. ನೀವು ರೋಗದ ಲಕ್ಷಣದಿಂದ ಹೊರಬಂದಿದ್ದೀರಿ ಮತ್ತು ದೇಹದಲ್ಲಿ ಶಕ್ತಿಯ ಮಟ್ಟ ಸುಧಾರಿಸಿದ್ದರೆ ನೀವು ಬಹುಬೇಗ ಗುಣಮುಖರಾಗುತ್ತೀರಿ.

ರೋಗ ಲಕ್ಷಣಗಳಿಲ್ಲದ ಜನರಿಂದ ವೈರಸ್​ ಹರಡಬಹುದೇ?
ಕೊರೊನಾ ಸೋಂಕಿತ ಜನರು ರೋಗ ಲಕ್ಷಣಗಳನ್ನು ಹೊಂದಿರದಿದ್ದರೂ ಸಹ ವೈರಸ್​ ಇನ್ನಿತರರಿಗೆ ಹರಡುತ್ತದೆ. ಇದಕ್ಕಾಗಿಯೇ ಸೋಂಕಿಗೆ ಒಳಗಾದ ಎಲ್ಲರನ್ನೂ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಹಾಗೂ ಅವರ ರೋಗ ತೀವ್ರತೆ ಆಧಾರದ ಮೇಲೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ಪ್ರತ್ಯೇಕವಾಗಿರುವುದರಿಂದ ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

ಇತ್ತೀಚಿಗಿನ ಅಧ್ಯಯನದ ಪ್ರಕಾರ ಕೊವಿಡ್​ ಸೋಂಕು ಸಣ್ಣ ಹನಿಗಳ ಮೂಲಕ ಹರಡಬಹುದು. ಗಾಳಿಯಲ್ಲಿಯೂ ಹರಡಬಹುದು. ಹಾಗಾಗಿ ಮುಚ್ಚಿದ ಪ್ರದೇಶಗಳಲ್ಲಿ ಮುಖಗವಸನ್ನು ಮರೆಯದೇ ಧರಿಸುವುದು ಮುಖ್ಯ. ಗಾಳಿಯನ್ನು ಮರುಬಳಕೆ ಮಾಡುವುದು, ಮುಚ್ಚಿದ ಕೋಣೆಗಳಲ್ಲಿ ಎಸಿ ಬಳಕೆ ಮತ್ತು ಫ್ಯಾನ್​ ಗಾಳಿಯಿಂದ ಬಹುಬೇಗ ಸೋಂಕು ಹರಡುವಿಕೆ ಉಂಟಾಗುತ್ತದೆ. ಹಾಗಾಗಿ ಕೋಣೆಯ ಕಿಟಕಿಯನ್ನು ತೆರೆದು ನೈಸರ್ಗಿಕ ಗಾಳಿಯ ಬಳಕೆ ಉತ್ತಮ.

ನೀರಿನ ಟ್ಯಾಂಕ್​ಅನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಮತ್ತು ನೀರನ್ನು ಆಗಾಗ ಖಾಲಿ ಮಾಡಿ ಪುನಃ ತುಂಬಿಸುವುದು ಉತ್ತಮ. ಮನೆಯೊಳಗೆ ಹೊರಗಿನ ಗಾಳಿ ಪ್ರವೇಶ ಇರುವಂತೆ ಕಿಟಕಿಗಳನ್ನು ತೆರೆದಿಡಿ. ಆದಷ್ಟು ಮುಚ್ಚಿದ ಪ್ರದೇಶದಿಂದ (ಕೋಣೆಗಳಂತಹ) ಹೊರಗುಳಿಯಿರಿ. ಆದಷ್ಟು ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾರ್ಗಸೂಚನೆಗಳನ್ನು ಪಾಲಿಸಿ. ಕೊವಿಡ್​ ನಿಯಂತ್ರಣ ತಡೆಗೆ ಹೊರಡಿಸಿದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.

ಇದನ್ನೂ ಓದಿ: Karnataka Lockdown: ನಾಳೆ ಸಂಜೆಯಿಂದ ಕರ್ನಾಟಕದಲ್ಲಿ ಕೊವಿಡ್​ ಕರ್ಫ್ಯೂ​! ಕೊರೊನಾ ನಿಯಂತ್ರಣಕ್ಕಾಗಿ 14 ದಿನ ರಾಜ್ಯಕ್ಕೆ ಬೀಗ