ಹೊಟ್ಟೆಯ ಕೊಬ್ಬು ಕರಗಿಸಲು ಪ್ರತಿದಿನ ಈ ಎಲೆಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿ

ಕರಿಬೇವಿನ ಎಲೆಯಲ್ಲಿ ಹಲವು ಆರೋಗ್ಯ ಪ್ರಯೋಜನಗಳು ಇವೆ. ಇದನ್ನು ಅಡುಗೆ ಬಳಸುವುದರಿಂದ ಇದು ಆರೋಗ್ಯ ವೃದ್ಧಿಸುವುದರ ಜೊತೆಗೆ ದೇಹದಲ್ಲಿರುವ ವಿಷದ ಅಂಶಗಳನ್ನು ತೆಗೆದು ಹಾಕುತ್ತದೆ. ಜೊತೆಗೆ ಈ ಕರಿಬೇವಿನ ಎಲೆಯನ್ನು ಹಸಿಯಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಹೊಟ್ಟೆ ಬೊಜ್ಜನ್ನು ಹಾಗೂ ತೂಕವನ್ನು ಕಡಿಮೆ ಮಾಡಬಹುದು. ಈ ಕರಿಬೇವಿನ ಎಲೆಯನ್ನು ಯಾವೆಲ್ಲಾ ರೀತಿಯಲ್ಲಿ ಸೇವನೆ ಮಾಡಬಹುದು ಎಂಬುದನ್ನು ಇಲ್ಲಿ ಹೇಳಲಾಗಿದೆ ನೋಡಿ.

ಹೊಟ್ಟೆಯ ಕೊಬ್ಬು ಕರಗಿಸಲು ಪ್ರತಿದಿನ ಈ ಎಲೆಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿ
ಸಾಂದರ್ಭಿಕ ಚಿತ್ರ
Image Credit source: pinterest

Updated on: Jul 13, 2025 | 6:34 PM

ಕರಿಬೇವಿನ ಎಲೆ (Curry leaves) ಒಗ್ಗರಣೆಗೆ ಮಾತ್ರ ಉಪಯೋಗ ಆಗುತ್ತದೆ ಎಂಬ ಕಲ್ಪನೆ ಮಾತ್ರ ಇದೆ. ಆದರೆ ಇದರಲ್ಲೂ ಆರೋಗ್ಯದ ಗುಟ್ಟು ಅಡಗಿದೆ. ಇದು ಕೂಡ ಅನೇಕ ರೋಗಗಳಿಗೆ ದಿವ್ಯ ಔಷಧಿಯಾಗಿದೆ. ಕರಿಬೇವಿನ ಎಲೆಯನ್ನು ಅಡುಗೆ ಬಳಸುವುದರಿಂದ ಆಹಾರದಲ್ಲಿ ಹಾಗೂ ದೇಹದಲ್ಲಿರುವ ವಿಷ ಅಂಶಗಳನ್ನು ತೆಗೆದು ಹಾಕುವ ಶಕ್ತಿ ಇದೆ. ಇದರ ಜತೆಗೆ ಕರಿಬೇವಿನ ಎಲೆಯನ್ನು ಹಸಿಯಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಸಹ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಜೊತೆಗೆ ತೂಕ ಇಳಿಕೆಗೂ ಸಹಕಾರಿ. ಹಾಗಿದ್ದರೆ ಕರಿಬೇವಿನ ಎಲೆಯನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ ಬನ್ನಿ.

ತೂಕ ಇಳಿಸಿಕೊಳ್ಳಲು ಕರಿಬೇವು ಹೇಗೆ ಸಹಕಾರಿ?

ಈ ಎಲೆಗಳು ಕಾರ್ಬಜೋಲ್ ಮತ್ತು ಕ್ಷಾರೀಯ ಗುಣಗಳನ್ನು ಹೊಂದಿದ್ದು, ಇದು ನಿಮ್ಮ ತೂಕವನ್ನು ವೇಗವಾಗಿ ಕಡಿಮೆ ಮಾಡುತ್ತದೆ. ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 5 ರಿಂದ 7 ಎಲೆಗಳನ್ನು ಅಗಿಯುತ್ತಿದ್ದರೆ, ನಿಮ್ಮ ಹೊಟ್ಟೆಯ ಕೊಬ್ಬು ಬೇಗನೆ ಕಡಿಮೆಯಾಗುತ್ತದೆ. ಇದು ನಿಮ್ಮ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುವುದಲ್ಲದೆ ದೇಹದಿಂದ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಕರಿಬೇವಿನ ಎಲೆಗಳ ಚಹಾ ತಯಾರಿಸುವ ಮೂಲಕವೂ ನೀವು ನಿಮ್ಮ ತೂಕವನ್ನು ಕಡಿಮೆ ಮಾಡಬಹುದು. ಚಹಾದ ರುಚಿಗಾಗಿ ನಿಂಬೆ ರಸ ಮತ್ತು ಒಂದು ಟೀ ಚಮಚ ಜೇನುತುಪ್ಪವನ್ನು ಸೇರಿಸಿ. 1 ತಿಂಗಳಲ್ಲಿ ನಿಮ್ಮ ತೂಕದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಕರಿಬೇವಿನ ಎಲೆಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಆಲ್ಕಲಾಯ್ಡ್‌ಗಳು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ: ಹೃದಯದ ಆರೋಗ್ಯಕ್ಕೂ ಬೇಕು ಕಾಳಜಿ !

ಇದನ್ನೂ ಓದಿ
ಮೊಸರಿನೊಂದಿಗೆ ಸಕ್ಕರೆ ಬೆರೆಸಿ ತಿಂದ್ರೆ ಎಷ್ಟೋ ಸಮಸ್ಯೆಗಳು ಕಡಿಮೆಯಾಗುತ್ತೆ!
ಮಧುಮೇಹಿಗಳು ಯಾವ ತರಕಾರಿ ತಿನ್ನಬಾರದು ಗೊತ್ತಾ?
ಪೇರಳೆ ಹಣ್ಣು ಇಷ್ಟನಾ? ಆದ್ರೆ ನಿಮಗೆ ಈ ಖಾಯಿಲೆ ಇದ್ರೆ ತಿನ್ನಬೇಡಿ
ಅಪ್ಪಿತಪ್ಪಿಯೂ ಮಳೆಗಾಲದಲ್ಲಿ ಈ ಹಣ್ಣುಗಳ ಸೇವನೆ ಮಾಡಬೇಡಿ

ಕರಿಬೇವಿನ ಎಲೆಗಳ ಪ್ರಯೋಜನ:

ಕರಿಬೇವು ಸೇವಿಸುವುದರಿಂದ ತೂಕ ಕಡಿಮೆಯಾಗುವುದಲ್ಲದೆ ಜೀರ್ಣಕ್ರಿಯೆಯೂ ಆರೋಗ್ಯಕರವಾಗಿರುತ್ತದೆ. ಇದರಲ್ಲಿ ಮೆಗ್ನೀಸಿಯಮ್, ಫೈಬರ್, ರಂಜಕ, ಕಾರ್ಬೋಹೈಡ್ರೇಟ್‌ ಇರುವುದರಿಂದ ನಿಮ್ಮ ತೂಕ ವೇಗವಾಗಿ ಕಡಿಮೆಯಾಗುತ್ತದೆ. ಈ ಎಲೆಯು ಅಧಿಕ ರಕ್ತದಲ್ಲಿರುವ ಸಕ್ಕರೆ ಇರುವವರಿಗೂ ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಹಾಗೂ ಈ ಎಲೆಗಳು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ನಿಮ್ಮ ಸ್ಮರಣೆಯನ್ನು ಚುರುಕುಗೊಳಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ