Green Chilli, Green Mirchi: ನಮ್ಮ ದೈನಂದಿನ ಆಹಾರದಲ್ಲಿ ಹಸಿ ಮೆಣಸಿನಕಾಯಿ ಅಥವಾ ಹಸಿರು ಮಿರ್ಚಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ದೇಹದ ಆರೋಗ್ಯವನ್ನು (Health) ಸುಧಾರಿಸುವ ಶಕ್ತಿಯನ್ನು ಹೊಂದಿವೆ. ಹಾಗಾದರೆ ಹಸಿರು ಮೆಣಸಿನಕಾಯಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳೋಣ. ದೀರ್ಘಕಾಲದ ಕಾಯಿಲೆಗಳಿಂದ ರಕ್ಷಣೆ: ಆಂಟಿಆಕ್ಸಿಡೆಂಟ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಫೀನಾಲ್‌ಗಳಂತಹ ಗುಣಲಕ್ಷಣಗಳನ್ನು ಹೊಂದಿರುವ ಹಸಿರು ಮೆಣಸಿನಕಾಯಿಯು ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ತೂಕ ನಷ್ಟ: ಇದರಲ್ಲಿ ಕ್ಯಾಪ್ಸೈಸಿನ್ ಸಂಯುಕ್ತವು ಚಯಾಪಚಯ ಗತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ತೂಕ ನಷ್ಟಕ್ಕೆ ಇದು ಉಪಯುಕ್ತವಾಗಿದೆ.
ರೋಗನಿರೋಧಕ ವ್ಯವಸ್ಥೆ: ಹಸಿರು ಮೆಣಸಿನಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಪರಿಣಾಮವಾಗಿ, ದೇಹವು ಋತುಮಾನದ ಕಾಯಿಲೆಗಳಿಂದ ತನ್ನನ್ನು ತಾನೇ ರಕ್ಷಿಸಿಕೊಳ್ಳಬಹುದು.
ಇದನ್ನೂ ಓದಿ: ಹಸಿಮೆಣಸಿನಕಾಯಿಯ ಆರೋಗ್ಯ ಪ್ರಯೋಜನಗಳು; ಸೇವಿಸುವ ಮೊದಲು ತಿಳಿದಿರಬೇಕಾದ ವಿಷಯ
ಚರ್ಮಕ್ಕೆ ಪ್ರಯೋಜನಕಾರಿ: ವಿಟಮಿನ್ ಸಿ ಮತ್ತು ಇ ಸಮೃದ್ಧವಾಗಿರುವ ಹಸಿರು ಮೆಣಸಿನಕಾಯಿಗಳು ವಯಸ್ಸಾಗುವ ಪ್ರಕ್ರಿಯೆಯನ್ನು ತಡೆಯುತ್ತದೆ ಮತ್ತು ನಿಮಗೆ ಹೊಳೆಯುವ ಚರ್ಮವನ್ನು ನೀಡುತ್ತದೆ. ಮೊಡವೆ ಮತ್ತು ಕಲೆಗಳನ್ನು ತಡೆಯುತ್ತದೆ.
ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣ: ಹಸಿರು ಮೆಣಸಿನ ಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ಸಂಯುಕ್ತವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅಲ್ಲದೆ ಇನ್ಸುಲಿನ್ ಸೆನ್ಸಿಟಿವಿಟಿಯನ್ನು ಹೆಚ್ಚಿಸುತ್ತದೆ.
ರಕ್ತಹೀನತೆ: ಕಬ್ಬಿಣದ ಉತ್ತಮ ಮೂಲ ಇದಾಗಿದೆ, ಹಸಿರು ಮೆಣಸಿನ ಕಾಯಿಯು ರಕ್ತಹೀನತೆಯನ್ನು ತಡೆಯುತ್ತದೆ. ವಿಟಮಿನ್ ಸಿ ಕಬ್ಬಿಣವನ್ನು ಹೀರಿಕೊಳ್ಳಲು ಸಹ ಸಹಾಯ ಮಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: