Health Tips: ಪಪ್ಪಾಯಿ, ಬಾಳೆಹಣ್ಣನ್ನು ಒಟ್ಟಿಗೆ ಸೇವಿಸಿದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ?

| Updated By: ಅಕ್ಷತಾ ವರ್ಕಾಡಿ

Updated on: Jan 10, 2025 | 2:50 PM

ಪಪ್ಪಾಯಿ ಮತ್ತು ಬಾಳೆಹಣ್ಣನ್ನು ಒಟ್ಟಿಗೆ ಸೇವಿಸಿದರೆ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಬಾಳೆಹಣ್ಣು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪಪ್ಪಾಯಿ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದರೂ ಈ ಎರಡು ಹಣ್ಣುಗಳನ್ನು ಒಟ್ಟಿಗೆ ತಿನ್ನುವುದು ದೇಹಕ್ಕೆ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ಒಟ್ಟಿಗೆ ತಿನ್ನುವುದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Health Tips: ಪಪ್ಪಾಯಿ, ಬಾಳೆಹಣ್ಣನ್ನು ಒಟ್ಟಿಗೆ ಸೇವಿಸಿದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ?
Eating Papaya, Banana Together
Follow us on

ನಾವು ಪ್ರತಿನಿತ್ಯ ಹಲವಾರು ರೀತಿಯ ಹಣ್ಣುಗಳನ್ನು ಸೇವನೆ ಮಾಡುತ್ತೇವೆ. ಆದರೆ ಕೆಲವು ಹಣ್ಣುಗಳ ಜೊತೆ ಬೇರೆ ಬೇರೆ ರೀತಿಯ ಹಣ್ಣುಗಳನ್ನು ಸೇರಿಕೊಂಡು ಸೇವನೆ ಮಾಡುತ್ತೇವೆ. ನಮಗರಿವಿಲ್ಲದಂತೆ ವಿರುದ್ಧ ಗುಣಗಳಿರುವ ಹಣ್ಣುಗಳನ್ನು ತಿನ್ನುತ್ತೇವೆ. ಇದು ನಮ್ಮ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬೀರಬಹುದು. ಹಾಗಾಗಿ ಯಾವ ಹಣ್ಣಿನ ಜೊತೆ ಬೇರೆ ಯಾವ ಹಣ್ಣಿನ ಸೇವನೆ ಒಳ್ಳೆಯದು? ಯಾವುದನ್ನು ಒಟ್ಟಿಗೆ ಸೇವನೆ ಮಾಡಬಾರದು ಎಂಬುದರ ಬಗ್ಗೆ ತಿಳಿದಿರಬೇಕಾಗುತ್ತದೆ. ಈ ಅಂಶ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಬಹಳ ಮುಖ್ಯವಾಗುತ್ತದೆ. ಹಾಗಾದರೆ ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ಒಟ್ಟಿಗೆ ಸೇವನೆ ಮಾಡಬಾರದು ಎನ್ನಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಬಾಳೆಹಣ್ಣು ತಿನ್ನುವುದು ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಹಣ್ಣು ದೇಹಕ್ಕೆ ಅಗತ್ಯವಿರುವ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ ಮತ್ತು ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ. ಪಪ್ಪಾಯಿಯನ್ನು ನಿಯಮಿತವಾಗಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಇವೆರಡು ಹಣ್ಣುಗಳಿಗೆ ಅದರದ್ದೇ ಆದ ಗುಣಗಳಿವೆ. ಜೊತೆಗೆ ಇವು ವಿಭಿನ್ನ ರೀತಿಯಲ್ಲಿ ದೇಹಕ್ಕೆ ಪ್ರಯೋಜನಕಾರಿಯಾಗಿದೆ.

ಒಟ್ಟಿಗೆ ಸೇವನೆ ಮಾಡಬಾರದು ಎನ್ನಲು ಕಾರಣವೇನು?

ಬಾಳೆಹಣ್ಣು ಮತ್ತು ಪಪ್ಪಾಯಿ ವಿಭಿನ್ನ ಸ್ವಭಾವದ ಎರಡು ಹಣ್ಣುಗಳು. ಅದಕ್ಕಾಗಿಯೇ ಅವುಗಳನ್ನು ಒಟ್ಟಿಗೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ. ವಾಂತಿ, ಅಲರ್ಜಿ, ಅಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು. ಉಸಿರಾಟದ ತೊಂದರೆ ಇರುವವರು ಪಪ್ಪಾಯಿ ತಿನ್ನುವುದು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ಒಟ್ಟಿಗೆ ತಿನ್ನುವುದರಿಂದ ಅಸ್ತಮಾ ಮತ್ತು ಇತರ ಉಸಿರಾಟದ ತೊಂದರೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಈ ಹಣ್ಣುಗಳ ಸಂಯೋಜನೆ ಹಲವಾರು ರೀತಿಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಜೊತೆಗೆ ಕಾಮಾಲೆಯಿಂದ ಬಳಲುತ್ತಿರುವವರು ಪಪ್ಪಾಯಿ ತಿನ್ನಬಾರದು ಎಂದು ವೈದ್ಯರು ಹೇಳುತ್ತಾರೆ. ಇದರಲ್ಲಿರುವ ಪಪೈನ್ ಮತ್ತು ಬೀಟಾ- ಕ್ಯಾರೋಟಿನ್ ಕಾಮಾಲೆ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ದೇಹದಲ್ಲಿ ಹೆಚ್ಚಿನ ಮಟ್ಟದ ಪೊಟ್ಯಾಸಿಯಮ್ ಇದ್ದರೆ ಬಾಳೆಹಣ್ಣುಗಳನ್ನು ತಿನ್ನಬಾರದು.

ಇದನ್ನೂ ಓದಿ: ಫ್ರಿಡ್ಜ್ ನಲ್ಲಿ ನಿಂಬೆಹಣ್ಣಿನ ತುಂಡನ್ನು ಇಟ್ಟರೆ ಏನಾಗುತ್ತೆ ತಿಳಿದಿದೆಯೇ?

ಹಾಗಾಗಿ ಈ ರೀತಿಯ ಸಮಸ್ಯೆಗಳನ್ನು ತಡೆಯಲು ಪಪ್ಪಾಯಿ ಮತ್ತು ಬಾಳೆಹಣ್ಣನ್ನು ಪ್ರತ್ಯೇಕವಾಗಿ ತಿನ್ನುವುದು ದೇಹಕ್ಕೆ ಒಳ್ಳೆಯದು. ಆಯುರ್ವೇದದ ಪ್ರಕಾರ, ಬಾಳೆಹಣ್ಣು ದೇಹವನ್ನು ತಂಪಾಗಿಸುತ್ತದೆ. ಪಪ್ಪಾಯಿ ದೇಹವನ್ನು ಬಿಸಿ ಮಾಡುತ್ತದೆ. ಈ ಎರಡು ಪದಾರ್ಥಗಳನ್ನು ಒಟ್ಟಿಗೆ ಸೇವಿಸಿದರೆ, ಜೀರ್ಣಾಂಗ ವ್ಯವಸ್ಥೆಯು ಹದಗೆಡಬಹುದು ಮತ್ತು ತಲೆನೋವು, ವಾಂತಿ, ತಲೆತಿರುಗುವಿಕೆ, ಅಲರ್ಜಿ, ಅಜೀರ್ಣ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ತಿನ್ನುವಾಗ ಯೋಚಿಸಿ. ಅಗತ್ಯವಿಲ್ಲದಿದ್ದರೆ ಒಟ್ಟಿಗೆ ಸೇವನೆ ಮಾಡುವುದನ್ನು ತಪ್ಪಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ