AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Egg vs Avocado: ನಿಮ್ಮ ಆರೋಗ್ಯಕ್ಕೆ ಯಾವುದು ಬೆಸ್ಟ್ ತಿಳಿದುಕೊಳ್ಳಿ

ಮೊಟ್ಟೆ ಮತ್ತು ಅವಕಾಡೋ ಎರಡೂ ಕೂಡ ಪೌಷ್ಟಿಕ ಆಹಾರಗಳಾದರೂ ಅವುಗಳ ಪ್ರಯೋಜನಗಳು ವಿಭಿನ್ನ. ಮೊಟ್ಟೆ ಉತ್ತಮ ಗುಣಮಟ್ಟದ ಪ್ರೋಟೀನ್, ಕೋಲಿನ್ ಮತ್ತು ಕೆಲವು ಪ್ರಮುಖ ವಿಟಮಿನ್‌ಗಳನ್ನು ನೀಡಿದರೆ, ಅವಕಾಡೋ ಫೈಬರ್, ಪೊಟ್ಯಾಸಿಯಂ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒದಗಿಸುತ್ತದೆ. ತೂಕ ನಿಯಂತ್ರಣ, ಆರೋಗ್ಯ ಅಥವಾ ಹೃದಯ ಸ್ನೇಹಿ ಆಹಾರಕ್ಕೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಎರಡನ್ನೂ ಸಮತೋಲಿತವಾಗಿ ಸೇವಿಸಬಹುದು.

Egg vs Avocado: ನಿಮ್ಮ ಆರೋಗ್ಯಕ್ಕೆ ಯಾವುದು ಬೆಸ್ಟ್ ತಿಳಿದುಕೊಳ್ಳಿ
Egg Vs AvocadoImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 17, 2026 | 8:15 PM

Share

ಆರೋಗ್ಯಕರ ಆಹಾರ ಎಂದಾಕ್ಷಣ ಮೊಟ್ಟೆ ಮತ್ತು ಅವಕಾಡೋ ಎರಡೂ ಕೂಡ ನೆನಪಿಗೆ ಬರುತ್ತವೆ. ಆದರೆ ಪ್ರೋಟೀನ್, ಫೈಬರ್ ಅಂಶ ಹೆಚ್ಚಿಸಿಕೊಳ್ಳಲು ಮೊಟ್ಟೆ ಅಥವಾ ಅವಕಾಡೋ ಇವೆರಡರಲ್ಲಿ ಯಾವುದು ಬೆಸ್ಟ್ ಎಂಬ ಪ್ರಶ್ನೆ ಮೂಡುತ್ತದೆ. ವಾಸ್ತವವಾಗಿ ಈ ಎರಡೂ ಆಹಾರಗಳ ಪೌಷ್ಟಿಕ ಗುಣಗಳು ವಿಭಿನ್ನವಾಗಿವೆ. ಮೊಟ್ಟೆ ಉತ್ತಮ ಗುಣಮಟ್ಟದ ಪ್ರೋಟೀನ್‌ನ ಮೂಲವಾಗಿದ್ದರೆ, ಅವಕಾಡೋ ಫೈಬರ್, ಪೊಟ್ಯಾಸಿಯಂ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒದಗಿಸುತ್ತದೆ. ಹೀಗಾಗಿ ನಿಮ್ಮ ಗುರಿಗೆ ಅನುಗುಣವಾಗಿ ಆಯ್ಕೆ ಮಾಡುವುದು ಬಹಳ ಮುಖ್ಯ.

ಅವಕಾಡೋದಲ್ಲಿ ಏನಿದೆ?

ಅವಕಾಡೋದಲ್ಲಿ ಮೋನೋಅನ್‌ಸ್ಯಾಚುರೇಟೆಡ್ ಫ್ಯಾಟ್ಸ್, ಫೈಬರ್, ಪೊಟ್ಯಾಸಿಯಂ, ವಿಟಮಿನ್ ಸಿ, ಕೆ, ಇ ಮತ್ತು ಫೋಲೇಟ್ ಸೇರಿದಂತೆ ಹಲವು ಪೋಷಕಾಂಶಗಳಿವೆ. ಇದರಲ್ಲಿರುವ ಫೈಬರ್ ಹೊಟ್ಟೆ ತುಂಬಿದ ಅನುಭವ ನೀಡುವುದಕ್ಕೆ ಸಹಾಯ ಮಾಡಬಹುದು.

ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು

ಒಂದು ದೊಡ್ಡ ಮೊಟ್ಟೆಯಲ್ಲಿ ಸುಮಾರು 6 ಗ್ರಾಂ ಪ್ರೋಟೀನ್ ಸಿಗುತ್ತದೆ. ಜೊತೆಗೆ ವಿಟಮಿನ್ ಬಿ12, ವಿಟಮಿನ್ ಡಿ, ಸೆಲೆನಿಯಂ ಮತ್ತು ಕೋಲಿನ್‌ನಂತಹ ಪೋಷಕಾಂಶಗಳಿವೆ. ಮೊಟ್ಟೆಯ ಪ್ರೋಟೀನ್ ದೇಹಕ್ಕೆ ಅಗತ್ಯವಾದ ಎಲ್ಲಾ essential amino acids‌ಗಳನ್ನು ಒದಗಿಸುತ್ತದೆ. ಮೊಟ್ಟೆ ಅವಕಾಡೋಗಿಂತ ಹೆಚ್ಚು ಪ್ರೋಟೀನ್ ಒದಗಿಸುತ್ತದೆ. ವ್ಯಾಯಾಮ ಮಾಡುವವರು ಮೊಟ್ಟೆಯ ಜೊತೆಗೆ ಬೇಳೆ, ಮೊಸರು, ಮೀನು, ಸೋಯಾ ಮುಂತಾದ ಇತರ ಪ್ರೋಟೀನ್ ಮೂಲಗಳನ್ನೂ ಆಹಾರದಲ್ಲಿ ಸೇರಿಸಬಹುದು.

ಇದನ್ನೂ ಓದಿ: Mix Fruits: ಹಣ್ಣುಗಳನ್ನು ಮಿಕ್ಸ್ ಮಾಡಿ ತಿನ್ನುವ ಮುನ್ನ ಈ ವಿಷಯ ತಿಳಿಯಿರಿ

ಫೈಬರ್ ಮತ್ತು ಹೆಲ್ದಿ ಫ್ಯಾಟ್ಸ್‌ಗೆ ಅವಕಾಡೋ!

ಸಾಮಾನ್ಯವಾಗಿ ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಪಡೆಯಲು ಅವಕಾಡೋ ಉಪಯುಕ್ತ ಆಯ್ಕೆಯಾಗಿದೆ. ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಿರುವ ಆಹಾರಗಳ ಬದಲಿಗೆ ಕೊಬ್ಬುಗಳಿರುವ ಆಹಾರಗಳನ್ನು ಆಯ್ಕೆ ಮಾಡುವುದು ಒಳ್ಳೆಯದು.

ತೂಕ ನಿಯಂತ್ರಣದಲ್ಲಿಡಲು ಯಾವುದು ಒಳ್ಳೆಯದು?

ಮೊಟ್ಟೆ ಕಡಿಮೆ ಕ್ಯಾಲೊರಿಗಳಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ನೀಡುತ್ತದೆ. ಅವಕಾಡೋದಲ್ಲಿನ ಫೈಬರ್ ಮತ್ತು ಕೊಬ್ಬು ಹೊಟ್ಟೆ ತುಂಬಿದ ಅನುಭವಕ್ಕೆ ಸಹಾಯ ಮಾಡಬಹುದು. ಆದರೆ ತೂಕ ಕಡಿಮೆಯಾಗುವುದನ್ನು ಒಂದೇ ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ. ಒಟ್ಟು ಕ್ಯಾಲೊರಿ ಸೇವನೆ, ಆಹಾರದ ಗುಣಮಟ್ಟ, ವ್ಯಾಯಾಮ, ನಿದ್ರೆ ಎಲ್ಲವೂ ಮುಖ್ಯವಾಗುತ್ತದೆ.

ಕಣ್ಣು ಮತ್ತು ಮೆದುಳಿನ ಆರೋಗ್ಯ

ಮೊಟ್ಟೆಯ ಹಳದಿ ಭಾಗದಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಕ್ಯಾರೋಟಿನಾಯ್ಡ್‌ಗಳಿವೆ. ಇವು ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಪೋಷಕಾಂಶಗಳಾಗಿವೆ. ಮೊಟ್ಟೆಯಲ್ಲಿರುವ ಕೋಲಿನ್ ಮೆದುಳು ಮತ್ತು ನರಮಂಡಲದ ಹಲವು ಕಾರ್ಯಗಳಲ್ಲಿ ಪಾತ್ರವಹಿಸುತ್ತದೆ.

ಎರಡನ್ನೂ ಒಟ್ಟಿಗೆ ತಿನ್ನಬಹುದೇ?

ಹೌದು. ಮೊಟ್ಟೆ, ಅವಕಾಡೋ, ತರಕಾರಿಗಳು ಮತ್ತು ಸಂಪೂರ್ಣ ಧಾನ್ಯಗಳನ್ನು ಒಳಗೊಂಡ ಉಪಾಹಾರದಿಂದ ಪ್ರೋಟೀನ್ + ಫೈಬರ್ + ಆರೋಗ್ಯಕರ ಕೊಬ್ಬುಗಳು ದೊರೆಯಬಹುದು. ಹೀಗಾಗಿ ಒಂದನ್ನು ಮತ್ತೊಂದಕ್ಕೆ ಪರ್ಯಾಯವೆಂದು ನೋಡುವ ಬದಲು, ಸಮತೋಲಿತ ಆಹಾರದ ಭಾಗವಾಗಿ ಎರಡನ್ನೂ ಬಳಸಬಹುದು. ಪ್ರೋಟೀನ್‌ಗಾಗಿ ಮೊಟ್ಟೆ, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿಗಾಗಿ ಅವಕಾಡೋ ಹೆಚ್ಚು ಉಪಯುಕ್ತ. ಆದರೆ “ಯಾವುದು ಆರೋಗ್ಯಕರ?” ಎನ್ನುವುದಕ್ಕೆ ಒಂದೇ ಉತ್ತರ ಇಲ್ಲ. ನಿಮ್ಮ ಪೌಷ್ಟಿಕ ಅಗತ್ಯ ಮತ್ತು ಒಟ್ಟು ಆಹಾರ ಪದ್ಧತಿಯನ್ನು ಗಮನಿಸಿ ಎರಡನ್ನೂ ಸೂಕ್ತ ಪ್ರಮಾಣದಲ್ಲಿ ಸೇರಿಸಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್​​
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್​​
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
2028ಕ್ಕೆ ರಾಮನಗರದಿಂದಲೇ ಸ್ಪರ್ಧೆ: ನಿಖಿಲ್​ ಕುಮಾರಸ್ವಾಮಿ
2028ಕ್ಕೆ ರಾಮನಗರದಿಂದಲೇ ಸ್ಪರ್ಧೆ: ನಿಖಿಲ್​ ಕುಮಾರಸ್ವಾಮಿ
ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಚಲುವರಾಯಸ್ವಾಮಿ
ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಚಲುವರಾಯಸ್ವಾಮಿ