AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ‘ಮಹಿಳೆಯರಲ್ಲಿ ಮಾನಸಿಕ ಚಿಂತೆ ಹೆಚ್ಚು ಕಾಡುತ್ತಿದೆ’ ಪರಿಹಾರಗಳೇನು? ತಜ್ಞರ ಸಲಹೆಗಳೇನು?

ಅತಿರೇಕವಾಗಿ ಯಾವುದೇ ಒಂದು ವಿಷಯದ ಬಗ್ಗೆ ಚಿಂತಿಸುವುದನ್ನು ಬಿಡಬೇಕು. ಅನಗತ್ಯ ಯೋಚನೆ ನಿಮ್ಮ ಮಸ್ಥಿತಿಯನ್ನು ಕೆಡಿಸುತ್ತದೆ. ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

Women Health: ‘ಮಹಿಳೆಯರಲ್ಲಿ ಮಾನಸಿಕ ಚಿಂತೆ ಹೆಚ್ಚು ಕಾಡುತ್ತಿದೆ’ ಪರಿಹಾರಗಳೇನು? ತಜ್ಞರ ಸಲಹೆಗಳೇನು?
ಸಾಂದರ್ಭಿಕ ಚಿತ್ರ
Shruthi Hegde
| Edited By: |

Updated on: Jul 16, 2021 | 7:40 PM

Share

ನಮ್ಮ ಆರೋಗ್ಯದ ಕಾಳಜಿಯನ್ನು ನಾವೇ ಮಾಡಿಕೊಳ್ಳಬೇಕು. ಉತ್ತಮ ಪೌಷ್ಟಿಕ ಆಹಾರ, ವ್ಯಾಯಾಮ, ಕಾಳಜಿಯ ಮೂಲಕ ಆರೋಗ್ಯ ಸುಧಾರಿಸುವಂತೆ ನೋಡಿಕೊಳ್ಳಬೇಕು. ನಮ್ಮ ಪ್ರತಿಯೊಬ್ಬರ ದೇಹ ಪ್ರಕೃತಿಯೂ ಸಹ ಬೇರೆ ಬೇರೆ ತೆರೆನಾಗಿರುತ್ತದೆ. ಕೆಲವರಿಗೆ ಏನೇ ತಿಂದರೂ ಸಹ ಜೀರ್ಣಿಸಿಕೊಳ್ಳುವ ಶಕ್ತಿ ಇದೆ. ಇನ್ನು ಕೆಲವರಿಗೆ ಅದೇ ಆಹಾರ ಸಮಸ್ಯೆಯನ್ನು ತರಬಹುದು. ಹಾಗಾಗಿ ನಿಮ್ಮ ಆರೋಗ್ಯಕ್ಕೆ ಯಾವ ಪದಾರ್ಥ ಒಗ್ಗುತ್ತದೆ ಯಾವುದು ಒಗ್ಗುವುದಿಲ್ಲ ಎಂಬುದರ ಕುರಿತಾಗಿ ತಿಳಿಯಬೇಕು. 

ಆಹಾರ ವ್ಯವಸ್ಥೆಯೇ ಕೆಲವರಿಗೆ ಸಮಸ್ಯೆಯನ್ನು ತಂದೊಡ್ಡುತ್ತಿರುವುದು. ಇದನ್ನು ಬಿಟ್ಟರೆ ಮಾನಸಿಕ ಸ್ಥಿತಿ ಹಲವರ ಆರೋಗ್ಯವನ್ನು ಕಿತ್ತುಕೊಳ್ಳುತ್ತಿದೆ. ಅದರಲ್ಲಿಯೂ ಸೂಕ್ಷ್ಮ ಮನಸ್ಸುಳ್ಳ ಮಹಿಳೆಯರು ಮತ್ತು ಯುವತಿಯರಲ್ಲಿ ಚಿಂತೆ ಕಾಡುವುದು ಹೆಚ್ಚು. ಮನುಷ್ಯನ ಚಿಂತೆ ಆತನ ನೆಮ್ಮದಿಯನ್ನೇ ಕೆಡಿಸುತ್ತದೆ. ಹಾಗಿರುವಾಗ ಇವುಗಳಿಗೆಲ್ಲಾ ಪರಿಹಾರವೇನು? ನಾವು ಯಾವ ರೀತಿಯ ಆಹಾರನ್ನು ಸೇವಿಸಬೇಕು ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿರಬಹುದು. ಇವುಗಳಿಗೆಲ್ಲಾ ನ್ಯೂಟ್ರೀಷಿಯನಿಸ್ಟ್​ ತಜ್ಞರಾದ ವೀಣಾ ಭಟ್​ ಶಿರಸಿ ಟಿವಿ9 ಕನ್ನಡದ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅತಿರೇಕವಾದ ಯೋಚನೆ ಯಾವುದೇ ಒಂದು ವಿಷಯವಾಗಲಿ ಯುವತಿಯರು ಅಥವಾ ಮಹಿಳೆಯರು ಹೆಚ್ಚು ಯೋಚಿಸುತ್ತಾರೆ. ಮನಸ್ಸಿನಲ್ಲಿ ಕೊರೆತ ಜಾಸ್ತಿ ಏನು ಮಾಡುವುದು? ಎಂಬ ಗೊಂದಲದಲ್ಲಿರುವ ಮಹಿಳೆಯರೇ ಹೆಚ್ಚು. ಹಾಗಾಗಿ ಅತಿರೇಕವಾಗಿ ಯಾವುದೇ ಒಂದು ವಿಷಯದ ಬಗ್ಗೆ ಚಿಂತಿಸುವುದನ್ನು ಬಿಡಬೇಕು. ಅನಗತ್ಯ ಯೋಚನೆ ನಿಮ್ಮ ಮಸ್ಥಿತಿಯನ್ನು ಕೆಡಿಸುತ್ತದೆ. ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.

ಧ್ಯಾನ ಮಾಡಿ ಬೆಳಿಗ್ಗೆ ಬೇಗ ಏಳುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಬೇಗ ಎದ್ದು ಮುಖ ತೊಳೆದು ಧ್ಯಾನ ಮಾಡುವ ಅಭ್ಯಾಸ ದೇಹಕ್ಕೆ ಮತ್ತು ನಿಮ್ಮ ಮನಸ್ಸಿನ ಸ್ಥಿತಿಗೆ ಒಳ್ಳೆಯದು. ಇದು ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಡುತ್ತದೆ. ಜತೆಗೆ ಆರೋಗ್ಯಕ್ಕೂ ಒಳ್ಳೆಯದು. ಸಂಜೆಯ ಸಮಯದಲ್ಲೂ ಸಹ ನೀವು ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ಮನಸ್ಸಿನ ಏಕಾಗ್ರತೆಗೆ ಸಂಬಂಧಿಸಿದ ವ್ಯಾಯಾಮವನ್ನು ಹೆಚ್ಚು ಮಾಡಿ. ನಿಮ್ಮ ಆರೋಗ್ಯದ ಸ್ಥಿತಿಯರನ್ನು ಸುಧಾರಿಸಿಕೊಳ್ಳಲು ಇದು ಉತ್ತಮ ಅಭ್ಯಾಸ.

ಕುಟುಂಬದವರ ಜತೆ ಸಮಯ ಕಳೆಯಿರಿ ಒಬ್ಬಂಟಿಯಾದ ಜೀವನ ಹೆಚ್ಚು ಭಯವನ್ನೂ, ಆತಂಕವನ್ನೂ ಸೃಷ್ಟಿಸುತ್ತದೆ. ಜತೆಗೆ ಮನಸ್ಸು ಹೆಚ್ಚು ಖುಷಿಯಿಂದಿರಬೇಕು ಎಂದಾದರೆ ಹೆಚ್ಚು ಸಮಯ ಮನೆಯವರೊಂದಿಗೆ ಸಮಯ ಕಳೆಯಬೇಕು. ಈಗಿನ ಯುವತಿಯರು ಮೊಬೈಲ್​ಗಳಿಗೆ ಅಂಟಿಕೊಂಡಿರುತ್ತಾರೆ. ಒಬ್ಬಂಟಿ ಭಾವ ಕಾಡತೊಡಗುತ್ತದೆ. ಇದು ಮಾನಸಿಕ ಸ್ಥಿತಿಯನ್ನು ಹದಗೆಡಿಸುತ್ತದೆ. ಹಾಗಾಗಿ ಕುಟುಂಬದವರ ಜತೆ ಹೆಚ್ಚು ಸಮಯ ಕಳೆಯುವ ಅಭ್ಯಾಸವನ್ನು ಮಾಡಿಕೊಳ್ಳಿ.

ಅಸೂಯೆ ಭಾವದಿಂದ ಯೋಚಿಸಬೇಡಿ ಇನ್ನಿತರರನ್ನು ಕಂಡು ಅಸೂಯೆ ಪಡುವ ಮನೋಭಾವ ಎಂದಿಗೂ ಬೇಡ. ಇದು ನಿಮ್ಮ ಮಾನಸಿಕ ಸ್ಥಿತಿಯನ್ನು ಬದಲಾಯಿಸುತ್ತದೆ. ಜತೆಗೆ ಮನಸ್ಸಿನ ಏಕಾಗ್ರತೆಯನ್ನು ಕಿತ್ತುಕೊಳ್ಳುತ್ತದೆ. ಇದರಿಂದ ಹೆಚ್ಚು ಚಿಂತೆ ಕಾಡುತ್ತದೆ. ಇನ್ನಿತರರ ಬಗ್ಗೆ ಹೆಚ್ಚು ಅಸೂಯ ಭಾವದಿಂದ ಯೋಚಿಸುವುದು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಜತೆಗೆ ಜಗಳ, ಕೋಪ, ಸಿಟ್ಟು ಇವುಗಳನ್ನು ಬಿಟ್ಟಿಬಿಡಿ. ಜನರೊಡನೆ ಹೆಚ್ಚು ಖುಷಿಯಿಂದ ವರ್ತಿಸಲು ಪ್ರಯತ್ನಿಸಿ. ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಸಂವಹನ ಈಗಿನ ಯುವತಿಯರ ದೊಡ್ಡ ಸಮಸ್ಯೆ ಎಂದರೆ ಮಾತು. ಯಾರ ಬಳಿಯೂ ಮಾತನಾಡುವುದಿಲ್ಲ. ತಾವಾಯ್ತು ತಮ್ಮ ಪಾಡಾಯ್ತು.. ಬಿಟ್ರೆ ಮೊಬೈಲ್​. ಹೀಗಾಗಿಯೇ ಅರ್ಐ ಮಾನಸಿಕ ಸ್ಥಿತಿ ಹದಗೆಡುತ್ತಿರುವುದು. ನೀವು ಮಾತನಾಡಲು ಪ್ರಾರಂಭಿಸಿದರೆ ಮಾತ್ರ ನಿಮ್ಮ ಆರೋಗ್ಯ ಸಮಸ್ಯೆ ಸುಧಾರಿಸುತ್ತದೆ. ಪ್ರತಿಯೊಂದು ನೋವನ್ನು, ಸಮಸ್ಯೆಯನ್ನು ನಿಮ್ಮ ಆಪ್ತರಲ್ಲಿ ಹೇಳಿಕೊಳ್ಳಿ. ಇದು ನಿಮಗೆ ಮನಸ್ಸಿಗೆ ವಿಶ್ರಾಂತಿಯನ್ನು ಕೊಡುತ್ತದೆ. ನಿರಾಳ ಭಾವನೆ ನಿಮ್ಮಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.

ಜತೆಗೆ ಉತ್ತಮವಾದ ಆಹಾರ ನಿಮ್ಮದಾಗಿರಬೇಕು. ಒಳ್ಳೆಯ ಆಹಾರ, ಪೌಷ್ಟಿಕ ಆಹಾರ ನಿಮ್ಮ ಆರೋಗ್ಯವನ್ನು ಸದೃಢವಾಗಿರಿಸಲು ಸಹಾಯ ಮಾಡುತ್ತದೆ. ಹಾಗಿರುವಾಗ ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ಇರಲಿ. ಯಾವುದೇ ಒಂದು ಸಮಸ್ಯೆಗೆ ಪರಿಹಾರವನ್ನು ಮೊಬೈಲ್​ಗಳಲ್ಲಿ ಹುಡುಕುವುದಕ್ಕಿಂತ ತಜ್ಞರೊಂದಿಗೆ ನೇರವಾಗಿ ಮೌಖಿಕ ಸಂವಹ ನಡೆಸುವ ಮೂಲಕ ಪರಿಹಾರ ಕಂಡುಕೊಳ್ಳುವುದು ಉತ್ತಮ. ಇದು ನಿಮ್ಮ ಆರೋಗ್ಯವನ್ನು ಮತ್ತು ಮಾನಸಿಕ ಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:

Women Health: ತೂಕ ಕಡಿಮೆಯಾಗಿದೆ ಎಂದು ಅತಿಯಾಗಿ ತಿಂದರೆ ಏನಾಗಬಹುದು? ತಜ್ಞರ ಸಲಹೆಗಳು ಇಲ್ಲಿದೆ

Women Health: ಟೈಟ್​ ಡ್ರೆಸ್​ ತೊಡುವುದು ಟ್ರೆಂಡ್​ ಆಗಿರಬಹುದು; ಆದರೆ ಧರಿಸುವ ಮುನ್ನ ಆರೋಗ್ಯದ ಬಗ್ಗೆಯೂ ಒಮ್ಮೆ ಯೋಚಿಸಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ