ಕಣ್ಣುಗಳು ನಮ್ಮ ದೇಹದ ಅತ್ಯಂತ ಪ್ರಮುಖವಾದ ಅಂಗ. ನಮ್ಮ ದೃಷ್ಟಿಯನ್ನು ಆರೋಗ್ಯಕರವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಮೊಬೈಲ್, ಕಂಪ್ಯೂಟರ್ಗಳನ್ನು ದಿನವಿಡೀ ನೋಡುವುದರಿಂದ ನಮ್ಮ ದೃಷ್ಟಿಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಕೆಲವು ಆಹಾರಗಳು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತವೆ. ಅವುಗಳಲ್ಲಿ ಕ್ಯಾರೆಟ್ ಬಹಳ ಮುಖ್ಯವಾದುದು. ಆದರೆ, ಅದರ ಹೊರತಾಗಿಯೂ ಕೆಲವು ಡ್ರೈಫ್ರೂಟ್ಗಳನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ವಿವಿಧ ರೀತಿಯ ಡ್ರೈಫ್ರೂಟ್ಗಳು ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ಹೇರಳವಾಗಿ ಒದಗಿಸುತ್ತವೆ. ಇವು ರುಚಿಕರವಾಗಿರುವುದರ ಜೊತೆಗೆ ನಮ್ಮ ದೃಷ್ಟಿಯನ್ನು ಪೋಷಿಸಲು ಮತ್ತು ರಕ್ಷಿಸಲು ಸಹಾಯ ಮಾಡುತ್ತವೆ. ಅಂತ 8 ಡ್ರೈಫ್ರೂಟ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ದಿನವೂ ಮಧ್ಯರಾತ್ರಿ ಕುಳಿತು ಕುರುಕುಲು ತಿಂಡಿ ತಿನ್ನುತ್ತೀರಾ?
ಬಾದಾಮಿ:
ಬಾದಾಮಿಯಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಹೇರಳವಾಗಿದೆ. ಈ ಪೋಷಕಾಂಶಗಳು ಕಣ್ಣುಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ದೃಷ್ಟಿ ತೀಕ್ಷ್ಣತೆಯನ್ನು ಸುಧಾರಿಸುತ್ತದೆ.
ವಾಲ್‌ನಟ್ಸ್:
ಹೆಚ್ಚಿನ ಒಮೆಗಾ -3 ಕೊಬ್ಬಿನಾಮ್ಲ ಅಂಶದಿಂದಾಗಿ ವಾಲ್‌ನಟ್ಸ್ ರೆಟಿನಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ಆಗಾಗ ವಾಲ್‌ನಟ್ಸ್ ಸೇವನೆ ಮಾಡುವುದರಿಂದ ದೃಷ್ಟಿ ತೀಕ್ಷ್ಣವಾಗಿರಲು ಮತ್ತು ವಯಸ್ಸಿಗೆ ಸಂಬಂಧಿಸಿದ ದೃಷ್ಟಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಗೋಡಂಬಿ:
ರೆಟಿನಾದ ಆರೋಗ್ಯವನ್ನು ಕಾಪಾಡಲು ಮುಖ್ಯವಾದ ಸತುವು ಗೋಡಂಬಿಯಲ್ಲಿ ಹೇರಳವಾಗಿದೆ. ನಿಮ್ಮ ಆಹಾರದಲ್ಲಿ ಗೋಡಂಬಿ ಸೇರಿಸಿಕೊಳ್ಳುವುದರಿಂದ ತೀಕ್ಷ್ಣವಾದ ದೃಷ್ಟಿಯನ್ನು ಸುಧಾರಿಸುವ ಮೂಲಕ ಇದು ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಸಮಸ್ಯೆಗಳ ವಿರುದ್ಧ ರಕ್ಷಣೆ ನೀಡುತ್ತದೆ.
ಒಣದ್ರಾಕ್ಷಿ:
ಒಣದ್ರಾಕ್ಷಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್ ಅಂಶ ಕಣ್ಣುಗಳ ಮೇಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಸುಧಾರಿತ ದೃಷ್ಟಿಯನ್ನು ಕಾಪಾಡಿಕೊಳ್ಳಲು ಮತ್ತು ಸೆಲ್ಯುಲಾರ್ ಹಾನಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಎಪ್ರಿಕಾಟ್:
ಬೀಟಾ-ಕ್ಯಾರೋಟಿನ್ ಅಂಶ ಸಮೃದ್ಧವಾಗಿರುವ ಎಪ್ರಿಕಾಟ್‌ಗಳು ದೇಹವು ಈ ಖನಿಜವನ್ನು ವಿಟಮಿನ್ ಎ ಆಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಇದು ದೃಷ್ಟಿ ಸುಧಾರಿಸಲು ಮತ್ತು ರಾತ್ರಿ ಕುರುಡುತನವನ್ನು ತಡೆಯಲು ಅವಶ್ಯಕವಾಗಿದೆ.
ಇದನ್ನೂ ಓದಿ: ಬೆಳಿಗ್ಗೆ ಯಾವ ಡ್ರೈಫ್ರೂಟ್ಸ್ ತಿನ್ನಬೇಕು? ಯಾವುದನ್ನು ಸೇವಿಸಬಾರದು?
ಒಣಗಿದ ಬೆರಿ ಹಣ್ಣುಗಳು:
ಆಂಥೋಸಯಾನಿನ್‌ಗಳು ಎಂಬ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಬೆರಿ ಹಣ್ಣುಗಳು ದೃಷ್ಟಿಯ ಮೇಲೆ ಅನುಕೂಲಕರ ಪರಿಣಾಮವನ್ನು ಬೀರುತ್ತವೆ. ಒಣಗಿದ ಬೆರಿಹಣ್ಣುಗಳು ರೆಟಿನಾದ ಹಾನಿಯನ್ನು ತಡೆಗಟ್ಟಲು ಮತ್ತು ದೃಷ್ಟಿ ತೀಕ್ಷ್ಣತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಖರ್ಜೂರ:
ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ವಿಟಮಿನ್ ಎ ಅಂಶ ಖರ್ಜೂರದಲ್ಲಿ ಕಂಡುಬರುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಕಣ್ಣುಗಳು ಒಣಗುವುದನ್ನು ತಡೆಯಲು ವಿಟಮಿನ್ ಎ ಅತ್ಯಗತ್ಯ.
ಬ್ರೆಜಿಲ್ ನಟ್ಸ್:
ಬ್ರೆಜಿಲ್ ನಟ್ಸ್ನಲ್ಲಿ ಸೆಲೆನಿಯಂ ಅಂಶ ಅಧಿಕವಾಗಿದ್ದು, ಆಕ್ಸಿಡೇಟಿವ್ ಹಾನಿಯಿಂದ ಕಣ್ಣುಗಳನ್ನು ರಕ್ಷಿಸುವ ಪ್ರಬಲವಾದ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳನ್ನು ಹೆಚ್ಚು ತಿನ್ನುವುದರಿಂದ ನೀವು ಉತ್ತಮ ದೃಷ್ಟಿ ಹೊಂದಲು ಸಹಾಯ ಮಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ