ನಮ್ಮ ದೇಹ ಸದೃಢವಾಗಿ, ಆರೋಗ್ಯವಾಗಿ ಇರಬೇಕೆಂದರೆ ಎಲ್ಲ ರೀತಿಯ ವಿಟಮಿನ್ಗಳು, ಖನಿಜಾಂಶಗಳು, ಪೋಷಕಾಂಶಗಳು ಹದ ಪ್ರಮಾಣದಲ್ಲಿ ಬೇಕಾಗುತ್ತದೆ. ಎಲ್ಲ ರೀತಿಯ ಪೋಷಕಾಂಶಗಳನ್ನೂ ನಾವು ಆಹಾರದ ಮೂಲಕವೇ ಪಡೆಯಬಹುದು. ಆದರೂ ಭಾರತದಲ್ಲಿ ಬಹುಪಾಲು ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ರಕ್ತಹೀನತೆ ಎಂಬುದು ಎಡಬಿಡದೆ ಕಾಡುತ್ತಿದೆ. ಅದೂ ಹೆಚ್ಚಾಗಿ ಮಹಿಳೆಯರಲ್ಲೇ ಕಾಣಿಸಿಕೊಳ್ಳುವ ಇದು ಹಲವು ಕಾಯಿಲೆಗಳನ್ನು ಹೊತ್ತು ತರಬಲ್ಲದು.
ನಮ್ಮ ದೇಹದಲ್ಲಿ ನಿರ್ದಿಷ್ಟ ಕೆಂಪು ರಕ್ತಕಣಗಳು ನಿರ್ದಿಷ್ಟ ಪ್ರಮಾಣದಲ್ಲಿ ಇರಬೇಕು. ಅದಕ್ಕಿಂತಲೂ ಕಡಿಮೆ ಆದಾಗ ಅದು ಅನೀಮಿಯಾ ಅಥವಾ ರಕ್ತಹೀನತೆ ಎನ್ನಿಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ದೇಹದಲ್ಲಿ ಕಬ್ಬಿಣಾಂಶ ಕಡಿಮೆ ಆಗುವುದು. ತುರ್ತು ಪರಿಸ್ಥಿತಿಗಳಲ್ಲಿ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುತ್ತದೆ. ಆದರೆ ರಕ್ತಹೀನತೆಯಿಂದ ಪಾರಾಗಲು ನಾವು ನಿತ್ಯ ಬಳಸುವ ಆಹಾರದಲ್ಲೇ ಕೆಲವು ಬದಲಾವಣೆ ಮಾಡಿಕೊಳ್ಳಬಹುದು. ಕಬ್ಬಿಣದ ಅಂಶ ಹೆಚ್ಚು ಇರುವ ಆಹಾರಗಳನ್ನು ಸೇವಿಸಬೇಕು. ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆ ಆದರೆ ಆಗುವ ಸಮಸ್ಯೆಗಳು ಅನೇಕ. ತೀವ್ರ ಕಡಿಮೆಯಾದಾಗ ಸರಿಯಾದ ಸಮಯದಲ್ಲಿ ಚಿಕಿತ್ಸೆ ಬೀಳದಿದ್ದರೆ ಪ್ರಾಣಕ್ಕೂ ಅಪಾಯ ಕಟ್ಟಿಟ್ಟಬುತ್ತಿ. ಹೀಗಾದಾಗ ದೇಹದ ಬಗ್ಗೆ ಗಮನ ಇರಬೇಕು. ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ, ವೈದ್ಯರ ಬಳಿ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಆರ್ಬಿಸಿ ಕೌಂಟ್ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕು.
ರಕ್ತಹೀನತೆಯ ಲಕ್ಷಣಗಳೇನು?
ದೇಹದಲ್ಲಿ ಸಣ್ಣಪ್ರಮಾಣದಲ್ಲಿ ರಕ್ತಹೀನತೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಅದು ಅಷ್ಟುಬೇಗ ಗೊತ್ತಾಗುವುದೂ ಇಲ್ಲ. ಆದರೆ ಕೆಂಪುರಕ್ತದ ಕಣಗಳ ಪ್ರಮಾಣ ಕಡಿಮೆಯಾಗುತ್ತ ಹೋದಂತೆ ಕೆಲವು ಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ. ಅದರಲ್ಲಿ ಪ್ರಮುಖವಾಗಿ
ಹೀಗೆ ಒಬ್ಬೊಬ್ಬರಲ್ಲಿ ಒಂದೊಂದು ವಿಧದಲ್ಲಿ ರಕ್ತಹೀನತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಾಧ್ಯವಾದಷ್ಟು ಅದನ್ನು ಗುರುತಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಒಂದೊಮ್ಮೆ ನಿರ್ಲಕ್ಷಿಸುತ್ತ ಹೋದರೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಈ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ನಿಮ್ಮಲ್ಲಿ ಕಾಣಿಸಿಕೊಳ್ಳಬಹುದು..
ರಕ್ತಹೀನತೆಗೆ ಖಂಡಿತ ಒಳ್ಳೆಯ ಚಿಕಿತ್ಸೆ ಇದೆ. ಕೆಲವು ಮಾತ್ರೆಗಳು, ಟಾನಿಕ್ಗಳನ್ನೂ ಕೊಡುತ್ತಾರೆ. ಅದಕ್ಕಿಂತ ಹೆಚ್ಚಾಗಿ ಸಿ ಜೀವಸತ್ವ ಹೆಚ್ಚಿರುವ ಆಹಾರಗಳನ್ನು ಸೇವಿಸಲು ಹೇಳುತ್ತಾರೆ. ಸರಿಯಾದ ಆಹಾರ, ಪೂರಕ ಔಷಧಗಳಿಂದ ಕೆಂಪುರಕ್ತಕಣಗಳ ಪ್ರಮಾಣ ವೇಗವಾಗಿ ಹೆಚ್ಚುತ್ತದೆ. ಇದರಿಂದ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ನಿಮಗೇ ಗೊತ್ತಾಗುತ್ತದೆ. ಅದಕ್ಕೂ ಮಿಗಿಲಾಗಿ ರಕ್ತ ಹೀನತೆಯಿಂದ ಪಾರಾಗಲು ನಾವು ಕೆಲವು ಹಣ್ಣು, ತರಕಾರಿಗಳನ್ನು ಸೇವಿಸಬೇಕು.
ಹಸಿರು ತರಕಾರಿ, ಸೊಪ್ಪುಗಳು, ಒಣಹಣ್ಣುಗಳು, ಸಿ ವಿಟಮಿನ್ ಇರುವ ಕಿತ್ತಳೆ ಹಣ್ಣು, ಸ್ಟ್ರಾಬೆರಿ, ಬಟಾಣಿ, ಬೀನ್ಸ್ಗಳನ್ನು ಸೇವಿಸಬೇಕು. ಇನ್ನು ಚಿಕನ್, ಕೆಂಪು ಮಾಂಸಗಳೂ ರಕ್ತಹೀನತೆ ನಿವಾರಿಸುವ ಆಹಾರಗಳು ಎಂದು ಪರಿಗಣಿಸಲ್ಪಡುತ್ತವೆ.
ಇದನ್ನೂ ಓದಿ: Health: ಲಿಂಬು ನೀರು ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ನೋಡಿ..