ಆಹಾರ ಭದ್ರತೆ ಸಾಧನೆಗೆ ಆಹಾರ ಭವಿಷ್ಯತ್: ಇಲ್ಲಿದೆ ತಜ್ಞರ ಸಲಹೆ

Protein: ಹವಾಮಾನ ವೈಪರೀತ್ಯ ಹಾಗೂ ಸಾಂಕ್ರಾಮಿಕ ರೀತಿಯ ಸವಾಲುಗಳ ಹಿನ್ನೆಲೆಯಲ್ಲಿ ಭಾರತಕ್ಕೆ ಹೆಚ್ಚು ಸುಭದ್ರ, ಸುಸ್ಥಿರ ಹಾಗೂ ನ್ಯಾಯೋಚಿತ ಆಹಾರ ವ್ಯವಸ್ಥೆಯ ಅಗತ್ಯವಿದೆ. ತಜ್ಞರ ಸಲಹೆ ಪ್ರಕಾರ ತಂತ್ರಜ್ಞಾನ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಹೊರಹೊಮ್ಮಿತ್ತಿರುವ ನಾವೀನ್ಯತೆ ಮತ್ತು ಕುಲಾಂತರಿ ತಳಿ ಆಧಾರಿತ ಆಹಾರದಿಂದ ಭಾರತ, ಆಹಾರ ಭದ್ರತೆ, ಸಾರ್ವಜನಿಕ ಆರೋಗ್ಯ ಸುಸ್ಥಿರತೆ ಮತ್ತು ಪೋಷಕಾಂಶಯುಕ್ತ ಪ್ರೋಟೀನ್ ಹಾಗೂ ಗುಣಮಟ್ಟ ಹೆಚ್ಚಳವನ್ನು ಸಾಧಿಸಬಹುದಾಗಿದೆ.

ಆಹಾರ ಭದ್ರತೆ ಸಾಧನೆಗೆ ಆಹಾರ ಭವಿಷ್ಯತ್: ಇಲ್ಲಿದೆ ತಜ್ಞರ ಸಲಹೆ
ಪ್ರಾತಿನಿಧಿಕ ಚಿತ್ರ
Edited By:

Updated on: Apr 20, 2022 | 6:41 PM

ಭವಿಷ್ಯದ ಆಹಾರ ಮರುಕಲ್ಪಿಸಿಕೊಳ್ಳಲು ಇದು ಸೂಕ್ತ ಸಮಯ. ಆಹಾರ ಸಮರ್ಪಕತೆ ಗುರಿ ಮುಟ್ಟುವಲ್ಲಿ ಭಾರತ ಬಹುದೂರ ಕ್ರಮಿಸಿದೆ. ಭಾರತದ ಮುಂದಿರುವ ಗುರಿ ಈಗ ರಾಸಾಯನಿಕ ಕ್ರಿಮಿನಾಶಕಗಳ ಮೇಲೆ ಅವಲಂಬಿಸದೆ ಸಮತೋಲನ ಆಹಾರಕ್ಕೆ ಆರೋಗ್ಯಕರ ಪೌಷ್ಟಿಕ ಆಹಾರದ ಲಭ್ಯತೆ ಖಾತ್ರಿಪಡಿಸಿಕೊಳ್ಳುವುದಾಗಿದೆ. ಮಾನವ ಜೀವಿಸುವ, ಆಹಾರ ಸೇವಿಸುವ ಹಾಗೂ ಪ್ರಯಾಣಿಸುವ ಮಾದರಿಯಲ್ಲೇ ವಿಜ್ಞಾನ, ತಂತ್ರಜ್ಞಾನದಲ್ಲಿಂದು ಕ್ರಾಂತಿಯಾಗಿದೆ. ಹವಾಮಾನ ವೈಪರೀತ್ಯ ಹಾಗೂ ಸಾಂಕ್ರಾಮಿಕ ರೀತಿಯ ಸವಾಲುಗಳ ಹಿನ್ನೆಲೆಯಲ್ಲಿ ಭಾರತಕ್ಕೆ ಹೆಚ್ಚು ಸುಭದ್ರ, ಸುಸ್ಥಿರ ಹಾಗೂ ನ್ಯಾಯೋಚಿತ ಆಹಾರ ವ್ಯವಸ್ಥೆಯ ಅಗತ್ಯವಿದೆ. ತಜ್ಞರ ಸಲಹೆ ಪ್ರಕಾರ ತಂತ್ರಜ್ಞಾನ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಹೊರಹೊಮ್ಮಿತ್ತಿರುವ ನಾವೀನ್ಯತೆ ಮತ್ತು ಕುಲಾಂತರಿ ತಳಿ ಆಧಾರಿತ ಆಹಾರದಿಂದ ಭಾರತ, ಆಹಾರ ಭದ್ರತೆ (Food Security), ಸಾರ್ವಜನಿಕ ಆರೋಗ್ಯ ಸುಸ್ಥಿರತೆ ಮತ್ತು ಪೋಷಕಾಂಶಯುಕ್ತ ಪ್ರೋಟೀನ್ ಹಾಗೂ ಗುಣಮಟ್ಟ ಹೆಚ್ಚಳವನ್ನು ಸಾಧಿಸಬಹುದಾಗಿದೆ.

ಉತ್ತಮ ಗುಣಮಟ್ಟದ ಆಹಾರ ಉತ್ಪಾದಿಸಲು ಇಂದು ಉಚ್ಚಮಟ್ಟದ ವಿಜ್ಞಾನ ಆಧಾರಿತ ತಂತ್ರಜ್ಞಾನ ಲಭ್ಯವಿದೆ. ನಾವು ಪ್ರಸ್ತಾಪಿಸುತ್ತಿರುವುದು ಕುಲಾಂತರಿ ಆಹಾರ ಉತ್ಪಾದನೆಗೆ ಜೆನೆಟಿಕ್ ಇಂಜಿನಿಯರಿಂಗ್ ಅಂದರೆ ತಳಿ ವಿಜ್ಞಾನ ಹಾಗೂ ತಂತ್ರಜ್ಞಾನದ ಬಳಕೆ. ನಮ್ಮ ಆಹಾರದ ಪ್ರಮಾಣ ಹಾಗೂ ಗುಣಮಟ್ಟ ಹೆಚ್ಚಿಸಲು ನಾವು ಸಾಂಪ್ರದಾಯಿಕ ವಿಧಾನಗಳನ್ನು ಬಳಸುತ್ತಿದ್ದು, ಈ ದಿನಗಳಲ್ಲಿ ಇತ್ತೀಚೆಗೆ ಅಭಿವೃದ್ಧಿಪಡಿಸಿದ ಜಿನೋಮ್ ಎಡಿಟಿಂಗ್ ಅಂದರೆ ಆನುವಂಶಿಕ ವಿನ್ಯಾಸ ವಿಧಾನ ಜಗತ್ತಿನಲ್ಲಿ ಪ್ರಚಲಿತವಾಗಿದೆ ಎನ್ನುತ್ತಾರೆ ನವದೆಹಲಿಯ ಐಸಿಎಆರ್ ನ ನ್ಯಾಷನಲ್ ಬ್ಯುರೊ ಆಫ್ ಪ್ಲಾಂಟ್ ಜೆನೆಟಿಕ್ಸ್ ನ ಮಾಜಿ ನಿರ್ದೇಶಕ ಪ್ರೋ.ಬನ್ಸಾಲ್.

ತಳಿ ವಿನ್ಯಾಸಗೊಳಿಸಿದ ಆಹಾರ ವಸ್ತುಗಳು ಭಾರತಕ್ಕೆ ಹೇಗೆ ಉಪಯೋಗವಾಗಲಿದೆ ಎಂಬ ವಿಚಾರವನ್ನು ಒತ್ತಿ ಹೇಳಿದ ಡಾ. ಬನ್ಸಾಲ್, ಕೃಷಿ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನ ಅಳವಡಿಕೆಗಳನ್ನು ಸರ್ಕಾರ ಹೆಚ್ಚು ಪ್ರೋತ್ಸಾಹಿಸಬೇಕು ಎನ್ನುತ್ತಾರೆ. “ಭಾರತದಲ್ಲಿ ಎಣ್ಣೆಕಾಳು ಮತ್ತು ಬೇಳೆಕಾಳುಗಳ ಬೆಳೆಗೆ ಹೆಚ್ಚು ಒತ್ತು ನೀಡಬೇಕಿದೆ. ಕಡಲೆ, ಬಟಾಣಿಯಂತಹ ಬೇಳೆಕಾಳುಗಳು ಕಾಳುಕೊರಕನ ಬಾಧೆಗೆ ಹೆಚ್ಚು ತುತ್ತಾಗುತ್ತವೆ. ತಳಿ ಮಾರ್ಪಡಿಸಿದ ಅಂದರೆ ಕುಲಾಂತರಿ ತಂತ್ರಜ್ಞಾನವನ್ನು ಈ ರೀತಿಯ ಬೆಳೆಗಳ ರಕ್ಷಣೆಗೆ ಬಳಸಲಾಗುತ್ತದೆ. ಈ ತಂತ್ರಜ್ಞಾನವನ್ನು ಇನ್ನು ಹೆಚ್ಚು ವಿಳಂಬ ಮಾಡದೆ, ರೈತರ ಜಮೀನಿಗೆ ಭಾರತ ಸರ್ಕಾರ ತಲುಪಿಸಬೇಕಿದೆ. ಇದರ ಉದ್ದೇಶ ಈ ತಂತ್ರಜ್ಞಾನ ಬಳಸಿ, ಬೆಳೆಗಳನ್ನು ವಿನಾಶಕಾರಿ ಕೀಟಗಳಿಂದ ರಕ್ಷಿಸುವುದು ಹಾಗೂ ಕ್ರಿಮಿನಾಶಕಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವುದಾಗಿದೆ. ಆದ್ದರಿಂದ ಕುಲಾಂತರಿ ತಂತ್ರಜ್ಞಾನ ಆಹಾರ ಪ್ರಮಾಣವನ್ನಷ್ಟೆ ಅಲ್ಲ ಗುಣಮಟ್ಟವನ್ನು ಹೆಚ್ಚಿಸಲಿದೆ ” ಎಂದು ಬನ್ಸಾಲ್ ಸಲಹೆ ನೀಡುತ್ತಾರೆ.

ಕೀಟಗಳ ನಿರ್ವಹಣೆಯಲ್ಲದೆ, ಆಹಾರ ವಿಜ್ಞಾನದಲ್ಲಿ ಸಾರವರ್ಧಿತ ಮತ್ತು ಪೌಷ್ಠಿಕ ಪ್ರೋಟಿನ್ ಯುಕ್ತ ಆಹಾರ ಒದಗಿಸಲು ಹಲವು ಆಯ್ಕೆಗಳಿವೆ. ಭಾರತದ ಪೌಷ್ಠಿಕ ಭದ್ರತೆ ಪಯಣದಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸಲಿದೆ.

“ನಾವು ಒಂದು ಸಮುದಾಯ, ಉದ್ಯಮ ಹಾಗೂ ಸರ್ಕಾರವಾಗಿ ಒಟ್ಟು ಸೇರಿ ಕೈಗೆಟಕುವ ದರದಲ್ಲಿ ರುಚಿಕರ ಆಹಾರದ ಸೃಷ್ಟಿಗೆ ಆಹಾರ ವಿಜ್ಞಾನವನ್ನು ಬಳಸಿಕೊಳ್ಳಬೇಕಿದೆ. ಇದು ಬಳಕೆದಾರರಿಗೆ ಸೂಕ್ತ ಆಹಾರದ ಆಯ್ಕೆಯನ್ನು ನಿತ್ಯ ಜೀವನದಲ್ಲಿ ಮಾಡಿಕೊಳ್ಳುವ ಹಕ್ಕನ್ನು ಒದಗಿಸುತ್ತದೆ. ಆಹಾರ ವಿಜ್ಞಾನದ ಬಳಕೆ ಹಲವು ಭರವಸೆಗಳನ್ನು ಹೊಂದಿದೆ. ಸಸ್ಯಜನ್ಯ ಮಾಂಸದ ಉತ್ಪನ್ನಗಳಿಗೆ ಆದ್ಯತೆ ಹೆಚ್ಚುತ್ತಿದೆ. ಈ ರೀತಿಯ ವಿನೂತನ ಉತ್ಪನ್ನಗಳು ಮಾಂಸದ ರುಚಿಯನ್ನು ಅನುಕರಿಸುವಲ್ಲಿ ಯಶಸ್ವಿಯಾಗಿದೆ. ಬಳಕೆದಾರರು ಸಾರ್ವಜನಿಕ ಹಿತ ಕಾಪಾಡಲು ಹಾಗೂ ಭೂಮಿಯ ಒಳಿತಿಗಾಗಿ ಇದನ್ನು ಅರ್ಥಮಾಡಿಕೊಂಡು ಅದರತ್ತ ಒಲವು ತೋರಿದ್ದಾರೆ” ಎಂದು ಗುಡ್ ಫುಡ್ ಇನ್ಸ್ಟಿಟ್ಯೂಟ್‌ನ ವ್ಯವಸ್ಥಾಪಕ ನಿರ್ದೇಶಕ ವರುಣ್ ದೇಶಪಾಂಡೆ ಹೇಳುತ್ತಾರೆ.

ನ್ಯೂಟ್ರಿವೆಲ್ ಹೆಲ್ತ್ ಇಂಡಿಯಾದ ಸಂಸ್ಥಾಪಕಿ ಹೆಸರಾಂತ ಪೌಷ್ಠಿಕ ತಜ್ಞೆ ಡಾ. ಶಿಖಾ ಶರ್ಮಾ ಹೇಳುತ್ತಾರೆ, ಆಹಾರ ವಿಜ್ಞಾನದ ಅಳವಡಿಕೆಯಿಂದ ಆಹಾರ ಸಂಸ್ಕರಣೆ, ದಾಸ್ತಾನು ಹಾಗೂ ಸಾಗಣೆ ವೇಳೆಯಲ್ಲಿ ಆಗುವ ನಷ್ಟವನ್ನು ತಡೆಯಲಿವೆ ಎಂದು.
‘‘ಶೇಕಡಾ 60ರಷ್ಟು ತರಕಾರಿಯಂತಹ ತಾಜಾ ಉತ್ಪನ್ನ, ಉಗ್ರಾಣಗಳಲ್ಲಿ ಸೂಕ್ತವಾಗಿ ದಾಸ್ತಾನು ಮಾಡದೆ ಅಥವಾ ಸಾಗಣೆ ವೇಳೆ ಸೂಕ್ತ ರಕ್ಷಣೆ ಒದಗಿಸದ ಕಾರಣ ನಾಶವಾಗುತ್ತವೆ. ಸೂಕ್ತವಾಗಿ ದಾಸ್ತಾನು ಮಾಡದ ಕಾರಣ ಅಥವಾ ಇಲಿಗಳು ತಿನ್ನುವುದರಿಂದ ಟನ್ ಗಟ್ಟಲೆ ಆಹಾರ ಹಾಳಾಗುವ ಪ್ರಕರಣಗಳನ್ನು ನಾವು ಗಮನಿಸಿದ್ದೇವೆ. ವೈಜ್ಞಾನಿಕ ತಂತ್ರಗಳನ್ನು ಆಹಾರ ದಾಸ್ತಾನು ಸಂಸ್ಕರಣೆ ಹಾಗೂ ವಿತರಣೆಯಲ್ಲಿ ಬಳಸಿದರೆ ಆಹಾರ ಭದ್ರತೆ ಗಣನೀಯವಾಗಿ ಸುಧಾರಿಸಲಿದೆ ” ಎನ್ನುತ್ತಾರೆ – ಡಾ. ಶಿಖಾ ಶರ್ಮಾ.

ಮಿತಿಯಾದ ಸಂಪನ್ಮೂಲಗಳಿಂದ ಆಹಾರ ಧಾನ್ಯ ಉತ್ಪಾದನೆ ಹೆಚ್ಚಳಕ್ಕೆ ತಂತ್ರಜ್ಞಾನದ ಪಾತ್ರವನ್ನು ಒತ್ತಿ ಹೇಳಿದ ಪ್ರೊ. ಬನ್ಸಾಲ್, ” ಆಹಾರ ಉತ್ಪಾದನೆಗೆ ಬೀಜ ಮೂಲಭೂತ ವಸ್ತುವಾಗಿದೆ. ಕಡಿಮೆ ಕೃಷಿ ರಾಸಾಯನಿಕ, ಕಡಿಮೆ ಭೂಮಿ, ನೀರು ಹಾಗೂ ರಸಗೊಬ್ಬರ ಬಳಸಿ ಉತ್ಕೃಷ್ಟ ಉತ್ಪನ್ನ ನೀಡಲು ಬೀಜವನ್ನು ಸುಧಾರಿಸಲು ತಳಿವಿನ್ಯಾಸ ತಂತ್ರಜ್ಞಾನಕ್ಕೆ ಸಾಮರ್ಥ್ಯವಿದೆ. ಸದ್ಯದ ಭವಿಷ್ಯದಲ್ಲಿ ಭಾರತ 300 ಮಿಲಿಯನ್ ಟನ್ ಗಿಂತ ಹೆಚ್ಚಿನ ಆಹಾರ ಧಾನ್ಯ ಉತ್ಪಾದನೆಯನ್ನು ಸುಸ್ಥಿರವಾಗಿ ಮಾಡಬೇಕಿದ್ದರೆ ಪರೀಕ್ಷಿಸಿದ ರುಜುವಾತದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ನಮಗೆ ಅಗತ್ಯವಾಗಿದೆ” ಎಂದಿದ್ದಾರೆ.

ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಗುತ್ತಿರುವ ಭಾರಿ ಆವಿಷ್ಕಾರಗಳು, ಭವಿಷ್ಯತ್ ಆಹಾರ ಭಾರತ ಪೌಷ್ಠಿಕ ಹಾಗೂ ಆಹಾರ ಭದ್ರತೆಯತ್ತ ದಾಪುಗಾಲು ಹಾಕಲು ನೆರವಾಗಲಿವೆ.