Bones Health: ಈ ಹಣ್ಣುಗಳ ಸೇವನೆ ಮೂಳೆಗಳ ಬಲವರ್ಧನೆಗೆ ಸಹಕಾರಿ
Bones Health: ಹಿಂದೆಲ್ಲಾ ಕೀಲು ನೋವು ಅಥವಾ ಸ್ನಾಯು ಸೆಳೆತ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಈ ಸಮಸ್ಯೆಗಳು ಎಲ್ಲರನ್ನೂ ಕಾಡುತ್ತಿವೆ. ಕೆಲವೊಂದು ಹಣ್ಣುಗಳ ಸೇವನೆಯಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು. ಸೇಬು, ಅನಾನಸ್, ಸ್ಟ್ರಾಬೆರಿ ಹಾಗೂ ಬಾಳೆಹಣ್ಣು ಮೂಳೆಗಳ ಬಲವರ್ಧನೆಗೆ ಸಹಕಾರಿಯಾಗಿವೆ.
Bones Health: ಹಿಂದೆಲ್ಲಾ ಕೀಲು ನೋವು ಅಥವಾ ಸ್ನಾಯು ಸೆಳೆತ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಈ ಸಮಸ್ಯೆಗಳು ಎಲ್ಲರನ್ನೂ ಕಾಡುತ್ತಿವೆ. ಯುವ ಜನಾಂಗವೂ ಇದಕ್ಕೆ ಹೊರತಾಗಿಲ್ಲ. ಆದರೆ ಕೆಲವೊಂದು ಹಣ್ಣುಗಳ ಸೇವನೆಯಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು. ಮೂಳೆಗಳನ್ನು ಹಣ್ಣುಗಳ ಸೇವನೆಯಿಂದ ದೃಢವಾಗಿಸಬಹುದು.
1 / 5
ಸೇಬು: ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಅದಕ್ಕಾಗಿಯೇ ದಿನಕ್ಕೆ ಒಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎನ್ನುತ್ತಾರೆ. ಹೆಚ್ಚಿನ ಕ್ಯಾಲ್ಸಿಯಂ ಹೊಂದಿರುವ ಸೇಬುಗಳನ್ನು ತಿನ್ನುವುದು ಮೂಳೆಗಳನ್ನು ಬಲಪಡಿಸಲು ಉತ್ತಮ ಮಾರ್ಗವಾಗಿದೆ ಎನ್ನುತ್ತಾರೆ ತಜ್ಞರು.