ಚಿಕ್ಕ ಗಾಯಗಳಾದಾಗ ನಿರ್ಲಕ್ಷ್ಯಿಸುವ ಅಭ್ಯಾಸ ನಿಮಗಿದೆಯೇ? ಇದು ಮಾರಣಾಂತಿಕ ಕಾಯಿಲೆಗೆ ಕಾರಣವಾಗಬಹುದು

|

Updated on: Feb 19, 2023 | 5:52 PM

ಮಾಂಸವನ್ನು ತಿನ್ನುವ ಬ್ಯಾಕ್ಟೀರಿಯಾ ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಸೋಂಕಿಗೆ ಕಾರಣವಾದ ಕೆಲವೇ ದಿನಗಳಲ್ಲಿ ಫ್ಲೋರಿಡಾದಲ್ಲಿ 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ಚಿಕ್ಕ ಗಾಯಗಳಾದಾಗ ನಿರ್ಲಕ್ಷ್ಯಿಸುವ ಅಭ್ಯಾಸ ನಿಮಗಿದೆಯೇ? ಇದು ಮಾರಣಾಂತಿಕ ಕಾಯಿಲೆಗೆ ಕಾರಣವಾಗಬಹುದು
ನೆಕ್ರೋಟೈಸಿಂಗ್ ಫ್ಯಾಸಿಟಿಸ್
Follow us on

ಫ್ಲೋರಿಡಾದ ವಿಂಟರ್ ಪಾರ್ಕ್‌ನಲ್ಲಿರುವ ಲೇಕ್‌ಮಾಂಟ್ ಎಲಿಮೆಂಟರಿ ಸ್ಕೂಲ್‌ನಲ್ಲಿ ಐದನೇ ತರಗತಿಯ ಜೆಸ್ಸಿ ಬ್ರೌನ್ ಎಂಬ ಬಾಲಕ ಮಾರಣಾಂತಿಕ ಸ್ಟ್ರೆಪ್ ಎ (IGAS) ಸೋಂಕು ಹೆಚ್ಚಾಗಿರುವ ಎರಡು ವಾರಗಳ ನಂತರ ಸಾವನ್ನಪ್ಪಿದ್ದಾನೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ವೈದ್ಯರ ಪ್ರಕಾರ, ಸ್ಟ್ರೆಪ್ ಎ ಅಂದರೆ ಸ್ಟ್ರೆಪ್ ಗಂಟಲು ಧ್ವನಿಪೆಟ್ಟಿಗೆಯನ್ನು ಹಾನಿಗೊಳಿಸುವ ಕಾಯಿಲೆಯಾಗಿದೆ. ಇದು ಬಾಲಕನಲ್ಲಿ ಮೊದಲು ಕಾಣಿಸಿಕೊಂಡಿದ್ದು, ನಂತರ ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಆಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ. ಈ ಕಾಯಿಲೆಯೂ ಅಂದರೆ ಯಾವುದೇ ಅಪಘಾತಗಳು ಆದ ನಂತರ ಗಾಯಗಳು ವಾಸಿಯಾಗದೇ, ಆ ಜಾಗದಲ್ಲಿ ಚರ್ಮದ ಬಣ್ಣ ಬದಲಾಗುವುದು. ಇದು ಈ ಕಾಯಿಲೆಯ ಮೊದಲ ಲಕ್ಷಣವಾಗಿದೆ. ಇದೇ ರೀತಿ ಅಪಘಾತದ ಕೆಲವು ದಿನಗಳ ನಂತರ ಹುಡುಗನ ಕಾಲು ಕೆಂಪು-ನೇರಳೆ ಬಣ್ಣಕ್ಕೆ ತಿರುಗಿತ್ತು. ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಸೋದರ ಸಂಬಂಧಿ ತಿಳಿಸಿದ್ದಾರೆ.

ಏನಿದು ಸ್ಟ್ರೆಪ್ ಎ ವೈರಸ್?

ಸ್ಟ್ರೆಪ್ ಎ ವೈರಸ್ ಒಂದು ರೀತಿಯ ಒಂದು ಬ್ಯಾಕ್ಟೀರಿಯಾವಾಗಿದ್ದು, ಇದು ಗಂಟಲೂತ, ಸ್ಕಾರ್ಲೆಟ್ ಜ್ವರ ಮತ್ತು ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಸೇರಿದಂತೆ ಹಲವಾರು ಸೋಂಕುಗಳಿಗೆ ಕಾರಣವಾಗಬಹುದು. ಸೂಕ್ಷ್ಮಜೀವಿಗಳಿಂದ ಮುಕ್ತವಾಗಿರುವ ದೇಹದ ಭಾಗಗಳನ್ನು ಈ ಬ್ಯಾಕ್ಟೀರಿಯಾಗಳು ಆಕ್ರಮಿಸಿ, ಹಾನಿಯುಂಟು ಮಾಡುತ್ತವೆ.

ಇದನ್ನೂ ಓದಿ: ದೇಹದಲ್ಲಿ ಕೊಬ್ಬು ಹೆಚ್ಚಾದರೆ, ಆರೋಗ್ಯದ ಮೇಲೆ ಯಾವ ರೀತಿ ದುಷ್ಪರಿಣಾಮಗಳಾಗಬಹುದು ತಿಳಿಯಿರಿ

ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಎಂದರೇನು?

ನೆಕ್ರೋಟೈಸಿಂಗ್ ಫ್ಯಾಸಿಟಿಸ್ ದೇಹದಲ್ಲಿ ಬಹಳ ವೇಗವಾಗಿ ಹರಡುವ ಅಪರೂಪದ ಮಾರಣಾಂತಿಕ ಬ್ಯಾಕ್ಟೀರಿಯಾದ ಸೋಂಕು. ನೆಕ್ರೋಟೈಸಿಂಗ್ ಫ್ಯಾಸಿಟಿಸ್​​ಗೆ ಕಾರಣವಾಗುವ ಹಲವು ವಿಧದ ಬ್ಯಾಕ್ಟೀರಿಯಾಗಳಿವೆ.

ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಹೇಗೆ ಉಂಟಾಗುತ್ತದೆ?

ಯಾವುದೇ ಗಾಯ, ಕಡಿತ, ಸುಟ್ಟಗಾಯಗಳು, ಕೀಟಗಳ ಕಡಿತ, ಪಂಕ್ಚರ್ ಗಾಯಗಳು, ಶಸ್ತ್ರಚಿಕಿತ್ಸಾ ಗಾಯಗಳಿಂದಾಗಿ ಬ್ಯಾಕ್ಟೀರಿಯಾವು ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದು ನೆಕ್ರೋಟೈಸಿಂಗ್ ಫ್ಯಾಸಿಟಿಸ್​​ ಕಾಯಿಲೆಗೆ ಕಾರಣವಾಗಿದೆ.

ನೆಕ್ರೋಟೈಸಿಂಗ್ ಫ್ಯಾಸಿಟಿಸ್​​ನ ಲಕ್ಷಣಗಳು?

  • ಸೋಂಕಿತ ಪ್ರದೇಶದ ಚರ್ಮವು ಕೆಂಪು, ಬೆಚ್ಚಗಿರುತ್ತದೆ ಅಥವಾ ಊದಿಕೊಂಡಿರುತ್ತದೆ.
  • ತೀವ್ರ ನೋವು, ಜ್ವರ.
  • ಹುಣ್ಣುಗಳು, ಗುಳ್ಳೆಗಳು ಅಥವಾ ಚರ್ಮದ ಮೇಲೆ ಕಪ್ಪು ಕಲೆಗಳು.
  • ಚರ್ಮದ ಬಣ್ಣದಲ್ಲಿ ಬದಲಾವಣೆಗಳು
  • ತಲೆತಿರುಗುವಿಕೆ
  • ಆಯಾಸ (ದಣಿವು) ಅತಿಸಾರ ಅಥವಾ ವಾಕರಿಕೆ

ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಚಿಕಿತ್ಸೆ ಹೇಗೆ?

ಈ ಅಪರೂಪದ ಕಾಯಿಲೆಯಿಂದ ನಿಮ್ಮನ್ನು ತಡೆಯಲು ಯಾವುದೇ ಲಸಿಕೆಗಳಿಲ್ಲ. ಈ ಸೋಂಕಿನಿಂದ ಮಾತ್ರ ನಿಮ್ಮನ್ನು ತಡೆಯಬಹುದು. ಆದರೆ ನಿಮಗೆ ಯಾವುದೇ ಗಾಯಗಳಾದ ಅದನ್ನು ನಿರ್ಲಕ್ಷ್ಯಿಸದಿರಿ. ಬೆಚ್ಚಗಿನ ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆಯಿರಿ, ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಅಥವಾ ಸ್ಯಾನಿಟೈಜರ್ ಅನ್ನು ಬಳಸಿ, ಸೋಪ್ ಮತ್ತು ನೀರಿನಿಂದ ಗಾಯಗಳನ್ನು ಸ್ವಚ್ಛಗೊಳಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 5:51 pm, Sun, 19 February 23