Kitchen tips​: ನಿಂಬೆಹಣ್ಣನ್ನು ತಾಜಾ ಆಗಿ ದೀರ್ಘಕಾಲದವರೆಗೆ ಸಂಗ್ರಹಿಸಿಡಬೇಕಾದರೆ ಮಾಡಬೇಕಾದ ಉಪಾಯಗಳೇನು?

|

Updated on: Mar 15, 2023 | 6:55 AM

ಕಿಚನ್ ಟಿಪ್ಟ್​: ಮಾರುಕಟ್ಟೆಯಲ್ಲಿ ತಾಜಾ ಆಗಿ ಖರೀದಿಸಿ ತಂದ ನಿಂಬೆಹಣ್ಣುಗಳನ್ನು ನೀರಿನಲ್ಲಿ ಹಾಕಿಡಿ: ನಿಂಬೆಹಣ್ಣುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು, ಅವುಗಳನ್ನು ನೀರು ತುಂಬಿದ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಬಹುದು. ಹೀಗೆ ಮಾಡುವುದರಿಂದ ದಿನಗಟ್ಟಲೆ ತಾಜಾ ಮತ್ತು ರಸಭರಿತವಾಗಿರುತ್ತದೆ. 

Kitchen tips​: ನಿಂಬೆಹಣ್ಣನ್ನು ತಾಜಾ ಆಗಿ ದೀರ್ಘಕಾಲದವರೆಗೆ ಸಂಗ್ರಹಿಸಿಡಬೇಕಾದರೆ ಮಾಡಬೇಕಾದ ಉಪಾಯಗಳೇನು?
ನಿಂಬೆಹಣ್ಣನ್ನು ಹೆಚ್ಚು ಕಾಲ ತಾಜಾ ಆಗಿಡುವುದು ಹೇಗೆ
Follow us on

ಬೇಸಿಗೆ (Summer) ಆರಂಭವಾಗುತ್ತಿದ್ದಂತೆ ನಿಂಬೆಹಣ್ಣಿಗೆ ಉತ್ತಮ ಬೇಡಿಕೆ ಇದೆ. ಮಾರುಕಟ್ಟೆಯಿಂದ ನಿಂಬೆಹಣ್ಣುಗಳನ್ನು (Lemon) ಖರೀದಿಸುವಾಗ ಮೊದಲು ಅದು ತಾಜಾವಾಗಿ ಇದೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಅದಾದಮೇಲೆ ಅವುಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಬೇಕಾದರೆ ಮಾಡಬೇಕಾದ ಉಪಾಯಗಳೇನು? ಎಂಬುದರ ಬಗ್ಗೆ ಆಲೋಚಿಸುತ್ತೇವೆ. ನಿಂಬೆಹಣ್ಣು ಬಹುತೇಕ ಎಲ್ಲರ ಮನೆಗಳಲ್ಲಿ ಕಂಡುಬರುತ್ತದೆ. ವಿವಿಧ ಭಕ್ಷ್ಯಗಳ ರುಚಿಯನ್ನು ಹೆಚ್ಚಿಸುವುದು ಇದರ ಕಾರ್ಯವಾಗಿದೆ. ನಿಂಬೆಹಣ್ಣುಗಳು ಆಮ್ಲೀಯವಾಗಿವೆ. ಸರಿಯಾದ ತಾಪಮಾನದಲ್ಲಿ ಅವುಗಳನ್ನು ಶೇಖರಿಸಿಡುವುದು ಅವಶ್ಯಕ. ಇಲ್ಲದಿದ್ದರೆ ತ್ವರಿತವಾಗಿ ಹಾಳಾಗುವ ಅವಕಾಶವಿರುತ್ತದೆ. ಏಕೆಂದರೆ ನಿಂಬೆ ಬಹಳ ಕಡಿಮೆ ಶೆಲ್ಫ್ ಜೀವನವನ್ನು ಹೊಂದಿದೆ. ಅವು ಬೇಗನೆ ಒಣಗುತ್ತವೆ ಮತ್ತು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಆದ್ದರಿಂದ ಅವುಗಳನ್ನು ಸಂಗ್ರಹಿಸುವಾಗ ನೆನಪಿನಲ್ಲಿಡಬೇಕಾದ ಹಲವು ಅಂಶಗಳಿವೆ. ಸಾಮಾನ್ಯವಾಗಿ ಜನರು ಅಡುಗೆಮನೆಯಲ್ಲಿ ನಿಂಬೆಹಣ್ಣುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಬಯಸುತ್ತಾರೆ. ಕೆಲವರು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಮಾರುಕಟ್ಟೆಯಿಂದ ನಿಂಬೆಹಣ್ಣುಗಳನ್ನು ಖರೀದಿಸುವಾಗ, ಯಾವಾಗಲೂ ತಾಜಾ ಆಗಿರುವುದನ್ನು ಮಾತ್ರ ಖರೀದಿಸಲು ಮರೆಯದಿರಿ. ನಿಂಬೆಯನ್ನು ಹೆಚ್ಚು ಕಾಲ ತಾಜಾವಾಗಿಡುವುದು ಹೇಗೆ ಎಂದು ತಿಳಿಯೋಣ (Kitchen tips).

  1. ಮಾರುಕಟ್ಟೆಯಲ್ಲಿ ತಾಜಾ ಆಗಿ ಖರೀದಿಸಿ ತಂದ ನಿಂಬೆಹಣ್ಣುಗಳನ್ನು ನೀರಿನಲ್ಲಿ ಹಾಕಿಡಿ: ನಿಂಬೆಹಣ್ಣುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು, ಅವುಗಳನ್ನು ನೀರು ತುಂಬಿದ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಬಹುದು. ನಿಂಬೆಹಣ್ಣುಗಳನ್ನು ನೀರಿನಿಂದ ತುಂಬಿದ ಜಾರ್​ನಲ್ಲಿ ಇರಿಸಿದ ನಂತರ, ಅವುಗಳನ್ನು ಫ್ರಿಡ್ಜಿನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ದಿನಗಟ್ಟಲೆ ತಾಜಾ ಮತ್ತು ರಸಭರಿತವಾಗಿರುತ್ತದೆ.
  2. ಸೇಬು, ಬಾಳೆಹಣ್ಣುಗಳ ಜೊತೆಗೆ ಶೇಖರಿಸಬೇಡಿ: ಎಥಿಲೀನ್ ಒಂದು ಹಾರ್ಮೋನ್ ಆಗಿದ್ದು ಅದು ಕಾಯಿಗಳನ್ನು ಹಣ್ಣಾಗಲು ಮತ್ತು ರಾನ್ಸಿಡಿಟಿಗೆ ಕಾರಣವಾಗುತ್ತದೆ. ನಿಂಬೆಹಣ್ಣುಗಳು ಬಹಳ ಸೂಕ್ಷ್ಮವಾಗಿರುತ್ತವೆ. ಆದ್ದರಿಂದ ಸೇಬು, ಬಾಳೆಹಣ್ಣು, ಏಪ್ರಿಕಾಟ್​​ (ಜರ್ದಾಳು -Apricot) ಮುಂತಾದ ಎಥಿಲೀನ್ ಹೊರಸೂಸುವ ಹಣ್ಣುಗಳೊಂದಿಗೆ ಇಡುವುದನ್ನು ತಪ್ಪಿಸಿ.
  3.  ಸೀಲ್ ಮಾಡಿಡುವುದು: ನಿಂಬೆಹಣ್ಣುಗಳನ್ನು ಸಂಗ್ರಹಿಸಲು ಇದು ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ನಿಂಬೆಹಣ್ಣು ಹಾಳಾಗುವುದನ್ನು ತಡೆಯಲು, ನೀವು ಅವುಗಳನ್ನು ಮೊಹರು ಮಾಡಿದ ಜಿಪ್-ಲಾಕ್ ಚೀಲದಲ್ಲಿ ಸಂಗ್ರಹಿಸಬಹುದು. ಇದು ಚೀಲದೊಳಕ್ಕೆ ಗಾಳಿ ಪ್ರವೇಶಿಸುವುದನ್ನು ತಡೆಯುತ್ತದೆ. ಇದು ನಿಂಬೆಯನ್ನು ಹೆಚ್ಚು ಕಾಲ ತಾಜಾವಾಗಿರಿಸುತ್ತದೆ.
  4.  ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಿ: ಈಗ ಎಲ್ಲರ ಮನೆಗಳಲ್ಲಿ ಪ್ಲಾಸ್ಟಿಕ್ ಡಬ್ಬಿಗಳು ಇರುತ್ತವೆ. ಆ ಪಾತ್ರೆಗಳನ್ನು ಬಳಸಿ. ಮೊದಲು ನಿಂಬೆಹಣ್ಣನ್ನು ಪ್ಲಾಸ್ಟಿಕ್ ಪಾಲಿಥೀನ್‌ನಲ್ಲಿ ಸುತ್ತಿಡಿ. ನಂತರ ಅವುಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಜ್ ನಲ್ಲಿಡಿ.
  5. ಅಲ್ಯೂಮಿನಿಯಂ ಫಾಯಿಲ್​ನಲ್ಲಿ ಸುತ್ತಿಡಿ: ನೀವು ನಿಂಬೆಹಣ್ಣುಗಳನ್ನು ಶೇಖರಿಸಿಡಬೇಕಿದ್ದರೆ ಅಲ್ಯೂಮಿನಿಯಂ ಫಾಯಿಲ್ ಅನ್ನು ಬಳಸಬಹುದು. ಪ್ರತಿ ನಿಂಬೆಯನ್ನು ಅಲ್ಯೂಮಿನಿಯಂ ಫಾಯಿಲ್​ನಲ್ಲಿ ಸುತ್ತಿಟ್ಟುಕೊಳ್ಳಿ. ಅಲ್ಯೂಮಿನಿಯಂ ಫಾಯಿಲ್​ನಲ್ಲಿ ಸುತ್ತಿಡುವುದರಿಂದ ತೇವಾಂಶವನ್ನು ಕಾಪಾಡುತ್ತದೆ.