Vitamin B12 Deficiency: ನೀವು ಸಸ್ಯಾಹಾರಿಗಳೇ, ಹಾಗಿದ್ದಲ್ಲಿ ವಿಟಮಿನ್ ಬಿ 12 ಕೊರತೆಯಿಂದ ನೀವು ಬಳಲುತ್ತಿರಬಹುದು! 6 ಸಾಮಾನ್ಯ ರೋಗಲಕ್ಷಣಗಳು

ನಿಮ್ಮ ಬುದ್ದಿ ಶಕ್ತಿಯ ಸಮಸ್ಯೆಗಳು, ಮೂಡ್ ಬದಲಾವಣೆಗಳು ಅಥವಾ ರಾತ್ರಿಯ ಬೆವರುವಿಕೆ ವಿಟಮಿನ್ ಬಿ 12 ಕೊರತೆಯಿಂದಾಗಿರಬಹುದು. ನೀವು ತಿಳಿದಿರಬೇಕಾದ ರೋಗಲಕ್ಷಣಗಳು ಇಲ್ಲಿವೆ

Vitamin B12 Deficiency: ನೀವು ಸಸ್ಯಾಹಾರಿಗಳೇ, ಹಾಗಿದ್ದಲ್ಲಿ ವಿಟಮಿನ್ ಬಿ 12 ಕೊರತೆಯಿಂದ ನೀವು ಬಳಲುತ್ತಿರಬಹುದು! 6 ಸಾಮಾನ್ಯ ರೋಗಲಕ್ಷಣಗಳು
Vitamin B12Image Credit source: TOI
Follow us
TV9 Web
| Updated By: ನಯನಾ ಎಸ್​ಪಿ

Updated on: Mar 14, 2023 | 6:28 PM

ಪ್ರಪಂಚದಾದ್ಯಂತದ ಯುವಕರಿಗೆ ಹೋಲಿಸಿದರೆ ವಯಸ್ಸಾದವರಲ್ಲಿ ವಿಟಮಿನ್ ಬಿ 12 (Vitamin B12) ಕೊರತೆಯು ಹೆಚ್ಚು ಕಾಣಿಸಿಕೊಳ್ಳುತ್ತದೆ. ಕನಿಷ್ಠ 47% ಸಸ್ಯಾಹಾರಿ (Vegetarian) ಭಾರತೀಯರು ವಿಟಮಿನ್ ಬಿ 12 ಕೊರತೆಯನ್ನು ಹೊಂದಿದ್ದಾರೆ. ಪ್ರಮುಖ ಸೂಕ್ಷ್ಮ ಪೋಷಕಾಂಶ (Micronutrients), ವಿಟಮಿನ್ ಬಿ 12 ದೇಹದ ವಿವಿಧ ಕಾರ್ಯಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ನಮ್ಮ ದೇಹವು ನೈಸರ್ಗಿಕವಾಗಿ ಅದನ್ನು ಉತ್ಪಾದಿಸುವುದಿಲ್ಲವಾದ್ದರಿಂದ, ಆಹಾರದ ,ಮೂಲಕವೇ ಇದನ್ನೂ ಸೇವಿಸಬೇಕಾಗಿದೆ. ವಿಟಮಿನ್ ಬಿ 12 ಮುಖ್ಯವಾಗಿ ಡೈರಿ, ಮಾಂಸ ಮತ್ತು ಮೊಟ್ಟೆಗಳಂತಹ ಪ್ರಾಣಿ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಸಸ್ಯಾಹಾರಿಗಳು ಅಗತ್ಯವಿರುವ ವಿಟಮಿನ್ ಬಿ 12 ಮಟ್ಟವನ್ನು ಪೂರೈಸಲು ವಿಟಮಿನ್ ಬಿ 12-ಬಲವರ್ಧಿತ ಆಹಾರಗಳು ಅಥವಾ ಪೂರಕಗಳನ್ನು ಸೇವಿಸಬಹುದು.

“ನರ ಕೋಶಗಳನ್ನು ನಿರ್ವಹಿಸಲು ಮತ್ತು ದೇಹದ ಆನುವಂಶಿಕ ಅಂಶವನ್ನು (DNA) ಉತ್ಪಾದಿಸಲು ದೇಹವು B12 ಅನ್ನು ಅವಲಂಬಿಸಿದೆ. B12 ಕೊರತೆಯು ಸಾಮಾನ್ಯವಾಗಿ ಕಾಳಜಿಯ ವಿಷಯವಲ್ಲ ಆದರೆ ಸರಿಯಾದ ಸಮಯದಲ್ಲಿ ನಿಭಾಯಿಸದಿದ್ದಲ್ಲಿ ತೊಂದರೆಯಾಗಬಹುದು. ಈ ರೋಗಲಕ್ಷಣಗಳನ್ನು ಗಮನಿಸುವುದರ ಮೂಲಕ ನೀವು ವಿಟಮಿನ್ ಬಿ 12 ಕೊರತೆಯನ್ನು ಹೊಂದಿದ್ದೀರ ಎಂದು ತಿಳಿಯಬಹುದು ” ಎಂದು ಝೆನ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಚೆಂಬೂರ್‌ನ ಕನ್ಸಲ್ಟಿಂಗ್ ಫಿಸಿಶಿಯನ್, ಸಾಂಕ್ರಾಮಿಕ ರೋಗ ತಜ್ಞ ಡಾ.ವಿಕ್ರಾಂತ್ ಷಾ ಹಿಂದೂಸ್ತಾನ್ ಟೈಮ್ಸ್​ಗೆ ಹೇಳುತ್ತಾರೆ.

ವಿಟಮಿನ್ ಬಿ 12 ಕೊರತೆಯ ಲಕ್ಷಣಗಳು:

ಡಾ. ಷಾ, ವಿಟಮಿನ್ ಬಿ 12 ಕೊರತೆಯ ಲಕ್ಷಣಗಳನ್ನು ಹಂಚಿಕೊಂಡಿದ್ದಾರೆ:

  • ಮನಸ್ಥಿತಿಯಲ್ಲಿ ಏರುಪೇರು: ವಿಟಮಿನ್ ಬಿ 12 ಕೊರತೆಯುಳ್ಳವರು ಮೂಡ್ ಬದಲಾವಣೆ ಅಥವಾ ಮನ್ಸಟಿಟಿಯಲ್ಲಿ ಏರುಪೇರುಗಳನ್ನು ಅನುಭವಿಸುತ್ತಾರೆ.
  • ಜ್ಞಾಪಕಶಕ್ತಿ ಸಮಸ್ಯೆಗಳು: ಕೀಗಳನ್ನು ಅಥವಾ ವಾಲೆಟ್ ಅನ್ನು ಎಲ್ಲಿ ಇರಿಸಿದ್ದಾರೆಂದು ನೆನಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅದು ಕಡಿಮೆ ವಿಟಮಿನ್ ಬಿ 12 ಮಟ್ಟಗಳ ಕಾರಣದಿಂದಾಗಿ. ಹೀಗಿದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
  • ಬ್ಯಾಲೆನ್ಸ್ ಸಮಸ್ಯೆಗಳು: ನೀವು ನಿರಂತರವಾಗಿ ಅಲ್ಲಿ ಇಲ್ಲಿ ಬೀಳುತ್ತಿರುತ್ತೀರಾ? ಹಾಗಾದರೆ ಇದು ವಿಟಮಿನ್ ಬಿ 12 ಕೊರತೆಯಿಂದಾಗಿರಬಹುದು.
  • ಸ್ನಾಯು ದೌರ್ಬಲ್ಯ: ಇದು ವಿಟಮಿನ್ ಬಿ 12 ಕೊರತೆಯ ಲಕ್ಷಣಗಳಲ್ಲಿ ಒಂದಾಗಿದೆ ಮತ್ತು ಇದನ್ನು ನಿರ್ಲಕ್ಷಿಸಬಾರದು.
  • ಖಿನ್ನತೆ: ನೀವು ಮೊದಲು ಇಷ್ಟಪಡುತ್ತಿದ್ದ ಚಟುವಟಿಕೆಗಳನ್ನು ನೀವು ಈಗ ಮಾಡಲು ಹಿಂಜರೆಯಿತ್ತಿದ್ದೀರಾ? ನಿಮ್ಮ ಆತ್ಮಸ್ಥೈರ್ಯ ಮೊದಲಿಗಿಂತ ಕಡಿಮೆಯಾಗಿದೆಯೇ? ಹತಾಶ ಅಥವಾ ಅಸಹಾಯಕ ಭಾವನೆ ಹೊಂದಿದ್ದೀರಾ? ಇದು ವಿಟಮಿನ್ ಬಿ 12 ಕೊರತೆಯಿಂದ ಆಗಿರಬಹುದು.
  • ಆಯಾಸ ಮತ್ತು ರಾತ್ರಿಯ ಬೆವರುವಿಕೆ: ನೀವು ಇಂತಹ ಲಕ್ಷಣಗಳನ್ನು ತೋರಿಸಿದರೆ ನೀವು ವಿಟಮಿನ್ ಬಿ 12 ಕೊರತೆಯನ್ನು ಹೊಂದಿರಬಹುದು.

ಇದನ್ನು ಓದಿ: ನೀವು ಯಾವ ಅಡುಗೆ ಎಣ್ಣೆ ಬಳಸುತ್ತಿದ್ದೀರಾ? ಈ 3 ಎಣ್ಣೆ ಆರೋಗ್ಯಕ್ಕೆ ಹಾನಿಕರ!

“ವೈದ್ಯರು ಸೂಚಿಸಿದಂತೆ ಬಿ 12 ಪೂರಕಗಳನ್ನು ತೆಗೆದುಕೊಳ್ಳಿ ಅಥವಾ ಮೀನು, ಮೊಟ್ಟೆ, ಪಾಲಕ, ಹಾಲು ಮತ್ತು ಡೈರಿಗಳಂತಹ ಆಹಾರವನ್ನು ಸೇವಿಸಿ” ಎಂದು ಡಾ.ಷಾ ಹೇಳುತ್ತಾರೆ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ