ಡೆಂಗ್ಯೂ ಜ್ವರವಿದ್ದಾಗ ಈ ಆಹಾರಗಳನ್ನು ಸೇವಿಸಿ: ಡಾ ರವಿಕಿರಣ ಪಟವರ್ಧನ

|

Updated on: Jun 25, 2024 | 10:15 AM

ಡೆಂಗ್ಯೂ ವಿರುದ್ಧ ಹೋರಾಡಲು ಒಂದು ಮಾರ್ಗವೆಂದರೆ ರೋಗಿಯ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವ ಮೂಲಕ ಅವನಿಗೆ/ಆಕೆಗೆ ಅಗತ್ಯವಾದ ಪೋಷಕಾಂಶಗಳನ್ನು ಆಹಾರದ ಮೂಲಕ ಒದಗಿಸುವುದು. ಆದ್ದರಿಂದ ಡೆಂಗ್ಯೂನಿಂದ ಬಳಲುತ್ತಿರುವವರ ಆಹಾರ ಕ್ರಮದಲ್ಲಿ ಈ ಪದಾರ್ಥಗಳನ್ನು ಸೇರಿಸಿ.

ಡೆಂಗ್ಯೂ ಜ್ವರವಿದ್ದಾಗ ಈ ಆಹಾರಗಳನ್ನು ಸೇವಿಸಿ: ಡಾ ರವಿಕಿರಣ ಪಟವರ್ಧನ
Food for Dengue
Follow us on

ಡೆಂಗ್ಯೂ ಜ್ವರ ಇದ್ದಾಗ ರೋಗಿಗಳು ಆದಷ್ಟು ತಮ್ಮ ಆಹಾರದ ಬಗ್ಗೆ ಗಮನಹರಿಸಬೇಕಾಗುತ್ತದೆ. ಈ ಕಾಯಿಲೆಯ ಸಮಯದಲ್ಲಿ ಕೆಲವು ನಿರ್ದಿಷ್ಟ ಆಹಾರಗಳ ಸೇವನೆ ಮೂಲಕ ರೋಗ ಲಕ್ಷಣಗ ಬೇಗ ವಾಸಿಯಾಗುವಂತೆ ಮಾಡಬಹುದು. ಡೆಂಗ್ಯೂದಲ್ಲಿ ಈ ಮುಂದೆ ಹೇಳಿದ ಆಹಾರವನ್ನು ಸ್ವೀಕರಿದರೆ ರೋಗ,ರೋಗದ ನಂತರದ ಹಲವು ತೊಂದರೆಗಳು ಸುಲಭ ನಿವಾರಣೆಯಾಗಬಹುದು. ಡೆಂಗ್ಯೂ ನಲ್ಲಿ ಬದಲಾದಂತಹ ಪರಿಸ್ಥಿತಿ ಸಹಜವಾಗಲು ಈ ಕೆಳಗಿನ ಕೆಲವು ಉಪಾಯಗಳು ರೋಗೊತ್ತರ ಉತ್ತಮ.

  • ವಿಟಮಿನ್ ಸಿ-ಭರಿತ ಆಹಾರಗಳಾದ ನೆಲ್ಲಿಕಾಯಿ ಮತ್ತು ಕಿತ್ತಳೆ ರಸವು antibodiesಗಳನ್ನು ಉತ್ತೇಜಿಸುತ್ತದೆ.
  • ಬೇಯಿಸಿದ ಹಸಿರು ತರಕಾರಿಗಳು, ಸೇಬು, ಬಾಳೆಹಣ್ಣುಗಳು, ಸೂಪ್‌ಗಳು ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಬೇಕು.
  • ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುವ ಆಹಾರಗಳಲ್ಲಿ ತಾಜಾ ಹಣ್ಣುಗಳು, ದಾಳಿಂಬೆ ಅಥವಾ ಕಪ್ಪು ದ್ರಾಕ್ಷಿ ರಸ, ಬೇಯಿಸಿದ ಹಸಿರು ಎಲೆಗಳ ತರಕಾರಿಗಳು, ಕಾಡ್ ಲಿವರ್ ಎಣ್ಣೆ, ಅಗಸೆಬೀಜದ ಎಣ್ಣೆ ಸೇರಿವೆ.
  • ಡೆಂಗ್ಯೂ ರೋಗಿ ಮಸಾಲೆಯುಕ್ತ ಆಹಾರಗಳು, ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಆಹಾರಗಳು, ಸಂಸ್ಕರಿಸಿದ ಆಹಾರಗಳು ಮತ್ತು ಕೃತಕ ಸಿಹಿ ಇರುವ ಪಾನೀಯಗಳಿಂದ ದೂರವಿರಬೇಕು ಮತ್ತು ಬೇಯಿಸದ ತರಕಾರಿಗಳಿಂದ ದೂರವಿರಬೇಕು.
  • ನಿರ್ಜಲೀಕರಣವನ್ನು ನಿಲ್ಲಿಸಲು ಸಾಕಷ್ಟು ನೀರು ಕುಡಿಯಿರಿ. ತೆಂಗಿನ ನೀರು, ತಾಜಾ ರಸಗಳು ಮತ್ತು ಪುನರ್ಜಲೀಕರಣ (ORS)
  • ಓಆರ್​ಎಸ್ ಈ ಶಬ್ದ ತಾವೆಲ್ಲರೂ ಈಗಾಗಲೇ ಕೇಳಿದ್ದೀರಿ ಇದರಲ್ಲಿಯೇ ಸ್ವಲ್ಪ ಬದಲಾವಣೆಯೊಂದಿಗೆ ನೀವು ಮನೆಯಲ್ಲಿ ORS ತಯಾರಿಸಬಹುದು. 1 ಲೀಟರ್ ನೀರಿಗೆ 20 ಗ್ರಾಮಿನಷ್ಟು ಧನಿಯ ಪೌಡರ್ ಅನ್ನು ಹಾಕಿ 15 ನಿಮಿಷ ಕುದಿಸಿರಿ. ನಂತರ ಅದನ್ನು ಸೋಸಿ 6 ಚಮಚೆ ಸಕ್ಕರೆ(ಮಧುಮೇಹಿಗಳನ್ನು ಹೊರತುಪಡಿಸಿ),1/2 ಚಮಚೆಯಷ್ಟು ಉಪ್ಪು ಹಾಕಿ ಸ್ವಲ್ಪ ಸ್ವಲ್ಪ ಕುಡಿಯಿರಿ. ಇದು ಸುಸ್ತಿನಿಂದ ಬೇಗನೆ ಹೊರಬರಲು ಇದು ಸಹಾಯ ಮಾಡುತ್ತದೆ.
  • ದಿನವಿಡೀ ನೀರನ್ನು ಕುಡಿಯುವುದು ಕಷ್ಟ. ಆದ್ದರಿಂದ ಎಳೆನೀರನ್ನು ಸೇವಿಸಿ,ಇದು ಅಗತ್ಯವಾದ ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿರುವ ನೀರಿನ ನೈಸರ್ಗಿಕ ಆಗರವಾಗಿದೆ.
  • ಬಿಳಿ ಎಳ್ಳು, ಚಿಯಾ ,ಅಗಸೆ ,ಕುಂಬಳಕಾಯಿ , ಸೂರ್ಯಕಾಂತಿ ಬೀಜ ಬೀಜಗಳು ಪ್ಲೇಟ್‌ಲೆಟ್‌ಗಳ ಉತ್ಪಾದನೆಗೆ ಅಗತ್ಯವಾದ ವಿಟಮಿನ್‌ಗಳು ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ. ಈ ಸಣ್ಣ ಕೋಶಗಳ ರಚನೆಯಲ್ಲಿ ಒಳಗೊಂಡಿರುವ ಪ್ರೋಟೀನ್ಗಳು ಮತ್ತು ವಿಟಮಿನ್ ಎ, ನಿಯಮಿತವಾಗಿ ಸೇವಿಸಿದಾಗ ಉತ್ತಮವಾಗಿ ಹೀರಲ್ಪಡುತ್ತದೆ.
  • ಹೆಚ್ಚುವರಿಯಾಗಿ, ಬೀಜಗಳು ಪ್ರಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ಮತ್ತು ಸ್ವತಂತ್ರ ರಾಡಿಕಲ್ಗಳ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡಲು ಅವು ಅತ್ಯುತ್ತಮವಾಗಿವೆ.
  • ನಿಮ್ಮ ಪ್ಲೇಟ್‌ಲೆಟ್ ಮಟ್ಟವನ್ನು ಕಾಪಾಡಲು ಪಾಲಕ್​​, ಕುಂಬಳಕಾಯಿ, ಕೆಂಪುಮೆಣಸು, ಕ್ಯಾರೆಟ್, ಎಲೆಕೋಸು, ಕೋಸುಗಡ್ಡೆ ಮತ್ತು ಬೀಟ್‌ರೂಟ್‌ನಂತಹ ತರಕಾರಿಗಳಿಂದ ಉತ್ತೇಜಿಸುತ್ತದೆ, ಅನೇಕ ವಿಧಗಳಲ್ಲಿ ಆರೋಗ್ಯವನ್ನು ಬೆಂಬಲಿಸುವ ಆಹಾರವೆಂದರೆ ಪಾಲಕ್. ಇದು ಪ್ರೋಟೀನ್ ಮತ್ತು ವಿಟಮಿನ್ ಕೆ ಯ ಮೂಲವಾಗಿದೆ. ಇದು ಅಧಿಕ ರಕ್ತಸ್ರಾವದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ.
  • ಮೊಸರು ಗಣನೀಯ ಪ್ರಮಾಣದ ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ, ಇದನ್ನು ಸಾಮಾನ್ಯವಾಗಿ ಸಕ್ರಿಯ ಬ್ಯಾಕ್ಟೀರಿಯಾ ಎಂದು ಕರೆಯಲಾಗುತ್ತದೆ.
  • ರೋಗಕಾರಕ ಬ್ಯಾಕ್ಟೀರಿಯಾಗಳು ಮತ್ತು ರೋಗಗಳನ್ನು ಉಂಟುಮಾಡುವ ಸೂಕ್ಷ್ಮಜೀವಿಗಳಿಂದ ಕರುಳನ್ನು ಮುಕ್ತವಾಗಿಡಲು ಇವು ಹೆಚ್ಚು ಸಹಾಯಕವಾಗಿವೆ. ನಿಯಮಿತ ಸೇವನೆಯು ಬಲವಾದ ರಕ್ಷಣೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ಕಳಲೆ (ಬಾಂಬೂ ಶೂಟ್) ಅನಾನಸ,ನುಗ್ಗೇಕಾಯಿ ಉಪಯೋಗಿಸಿದೇ ಇದ್ದರೆ ಹೆಚ್ಚು ಉತ್ತಮ.

ಗಮನಿಸಿ: ಈ  ಮೇಲಿನ ಉಪಾಯಗಳನ್ನ ನಿಮ್ಮ ವೈದ್ಯರ ಸಲಹೆ ಸೂಚನೆಯಂತೆ ಇತಿಮಿತಿಯಲ್ಲಿ ಉಪಯೋಗಿಸಿ.

ಲೇಖನ: ಡಾ ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ ಶಿರಸಿ

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: