ಚಳಿಗಾಲದಲ್ಲಿ ಇತರರಿಗಿಂತ ತುಸು ಹೆಚ್ಚೆ ನಿಮ್ಗೆ ಚಳಿಯಾಗುತ್ತಾ? ಇದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ

ಮನೆಯೊಳಗಿದ್ದರೂ ಬೆಚ್ಚಗಿನ ಬಟ್ಟೆ, ಸಾಕ್ಸ್ ಮತ್ತು ಕಂಬಳಿ ಹೊದ್ದು ಕುಳಿತುಕೊಳ್ಳುತ್ತೀರಾ, ಹಾಗಿದ್ದಲ್ಲಿ ಚಳಿಯಾಗುತ್ತಿರುವುದು ಬಾಹ್ಯ ಹವಾಮಾನದಿಂದ ಮಾತ್ರವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ. ಹೌದು, ದೇಹದೊಳಗಿನ ಕೆಲವು ಅಸಮತೋಲನ ಮತ್ತು ದೈಹಿಕ ಬದಲಾವಣೆಗಳು ಸಹ ಈ ರೀತಿಯಾಗುವುದಕ್ಕೆ ಕಾರಣವಾಗಿರುತ್ತವೆ. ಇನ್ನು, ಶೀತ ವಾತಾವರಣದಲ್ಲಿ ಅತಿಯಾಗಿ ಚಳಿಯಾಗುವುದು ಒಳ್ಳೆಯದಲ್ಲ. ಹಾಗಾದರೆ ಈ ರೀತಿಯಾಗುವುದಕ್ಕೆ ಕಾರಣವೇನು, ಚಳಿಗಾಲದಲ್ಲಿ ಕೈ, ಕಾಲು ತಂಪಗಾಗುವುದನ್ನು ತಡೆಯುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಳಿಗಾಲದಲ್ಲಿ ಇತರರಿಗಿಂತ ತುಸು ಹೆಚ್ಚೆ ನಿಮ್ಗೆ ಚಳಿಯಾಗುತ್ತಾ? ಇದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ
Vitamin Deficiency Cold Feeling

Updated on: Dec 16, 2025 | 2:06 PM

ನಿಮಗೆ ಬೇರೆಯವರಿಗಿಂತಲೂ ಹೆಚ್ಚು ಚಳಿಯಾಗುತ್ತಾ, ಬೇರೆಯವರು ಆರಮದಲ್ಲಿದ್ದಾಗ ನೀವು ನಡುಗುತ್ತಿರುತ್ತೀರಾ, ಮನೆಯೊಳಗಿದ್ದರೂ ಬೆಚ್ಚಗಿನ ಬಟ್ಟೆ, ಸಾಕ್ಸ್ ಮತ್ತು ಕಂಬಳಿ ಹೊದ್ದು ಕುಳಿತುಕೊಳ್ಳುತ್ತೀರಾ, ಹಾಗಿದ್ದಲ್ಲಿ ಚಳಿಯಾಗುತ್ತಿರುವುದು ಬಾಹ್ಯ ಹವಾಮಾನದಿಂದ ಮಾತ್ರವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ. ಹೌದು, ದೇಹದೊಳಗಿನ ಕೆಲವು ಅಸಮತೋಲನ ಮತ್ತು ದೈಹಿಕ ಬದಲಾವಣೆಗಳು ಸಹ ಈ ರೀತಿಯಾಗುವುದಕ್ಕೆ ಕಾರಣವಾಗಿರುತ್ತವೆ. ನಿಮ್ಮ ದೇಹದ ಉಷ್ಣತೆಯು ಇತರರಿಗಿಂತ ಸ್ವಲ್ಪ ಕಡಿಮೆ ಇರಬಹುದು ಆದರೆ ಸುತ್ತಮುತ್ತಲಿನ ಹವಾಮಾನ ಸಾಮಾನ್ಯವಾಗಿದ್ದರೂ ಸಹ, ದೇಹ ತಣ್ಣಗಾದ ಅನುಭವವಾಗುವುದು (Cold), ಅದರಲ್ಲಿಯೂ ಶೀತ ವಾತಾವರಣದಲ್ಲಿ ಅತಿಯಾಗಿ ಚಳಿಯಾಗುವುದು ಒಳ್ಳೆಯದಲ್ಲ. ಹಾಗಾದರೆ ಈ ರೀತಿಯಾಗುವುದಕ್ಕೆ ಕಾರಣವೇನು, ಚಳಿಗಾಲದಲ್ಲಿ (Winter) ಕೈ, ಕಾಲು ತಂಪಗಾಗುವುದನ್ನು ತಡೆಯುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ದೇಹದ ಉಷ್ಣತೆ, ರಕ್ತ ಪರಿಚಲನೆ ಮತ್ತು ಶಕ್ತಿಯ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ, ಇದರ ಪರಿಣಾಮವಾಗಿ ಕೈ ಮತ್ತು ಪಾದಗಳು ತಣ್ಣಗಾಗುವುದು ಮತ್ತು ಆಗಾಗ ಚಳಿಯಾದಂತೆ ಅನಿಸುತ್ತದೆ. ಹಾಗಾಗಿ ಇಂತಹವರು ಚಳಿಗಾಲದಲ್ಲಿ ಹೆಚ್ಚುವರಿ ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲಿಯೂ ಚಯಾಪಚಯ ಕ್ರಿಯೆಯು ದೇಹದಲ್ಲಿ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದ್ದು, ವ್ಯಕ್ತಿಯ ಚಯಾಪಚಯ ಕ್ರಿಯೆ ನಿಧಾನವಾಗಿದ್ದಾಗ, ದೇಹವು ಸಾಕಷ್ಟು ಶಾಖ ಮತ್ತು ಶಕ್ತಿಯನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಚಳಿಗಾಲದಲ್ಲಿ, ಕೈಕಾಲುಗಳು ತಣ್ಣಗಾಗುವುದು, ಆಯಾಸ ಮತ್ತು ದೇಹದಲ್ಲಿ ಉಷ್ಣತೆಯ ಕೊರತೆ ಕಂಡುಬರುತ್ತದೆ. ಇನ್ನು, ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಸಾಕಷ್ಟು ರಕ್ತವು ಕೈಗಳು, ಪಾದಗಳು ಮತ್ತು ಇತರ ಅಂಗಗಳಿಗೆ ತಲುಪುವುದಿಲ್ಲ. ರಕ್ತದ ಹರಿವು ಕಡಿಮೆಯಾಗುವುದರಿಂದ, ಈ ಪ್ರದೇಶಗಳಲ್ಲಿ ಉಷ್ಣತೆಯೂ ಕಡಿಮೆಯಾಗುತ್ತದೆ, ಇದರಿಂದಾಗಿ ಅವು ತಣ್ಣಗಾಗುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ದೀರ್ಘಕಾಲ ಕುಳಿತುಕೊಳ್ಳುವುದು, ದೈಹಿಕ ಚಟುವಟಿಕೆಯ ಕೊರತೆ ಅಥವಾ ಕೆಲವು ದೈಹಿಕ ಪರಿಸ್ಥಿತಿಗಳು ರಕ್ತ ಪರಿಚಲನೆಯನ್ನು ದುರ್ಬಲಗೊಳಿಸಬಹುದು.

ಹೆಚ್ಚು ಚಳಿಯಾಗುವುದಕ್ಕೆ ಯಾವ ವಿಟಮಿನ್ ಕೊರತೆ ಕಾರಣ?

ದೇಹದಲ್ಲಿ ಕೆಂಪು ರಕ್ತ ಕಣಗಳ ರಚನೆಯಲ್ಲಿ ವಿಟಮಿನ್ ಬಿ 12 ಪ್ರಮುಖ ಪಾತ್ರ ವಹಿಸುತ್ತದೆ. ಈ ರಕ್ತ ಕಣಗಳು ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕವನ್ನು ಸಾಗಿಸುತ್ತವೆ. ವಿಟಮಿನ್ ಬಿ 12 ಕೊರತೆಯಿದ್ದಾಗ, ರಕ್ತದಲ್ಲಿ ಸಾಕಷ್ಟು ಕೆಂಪು ರಕ್ತ ಕಣಗಳು ರೂಪುಗೊಳ್ಳುವುದಿಲ್ಲ, ಇದು ರಕ್ತಹೀನತೆಗೆ ಕಾರಣವಾಗುತ್ತದೆ. ಇದರಿಂದ, ದೇಹದ ಜೀವಕೋಶಗಳು ಅಗತ್ಯ ಪ್ರಮಾಣದ ಆಮ್ಲಜನಕ ಮತ್ತು ಶಾಖವನ್ನು ಪಡೆಯುವುದಿಲ್ಲ, ಆಗ ದೇಹ ತಣ್ಣಗಾಗುತ್ತದೆ. ಇನ್ನು, ವಿಟಮಿನ್ ಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದಲ್ಲಿನ ಆಂತರಿಕ ಶಾಖದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಕೊರತೆಯಿರುವವರು ಶೀತ ಅಥವಾ ಜ್ವರದಂತಹ ಕಾಲೋಚಿತ ಕಾಯಿಲೆಗಳಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ವಿವಿಧ ಅಧ್ಯಯನಗಳು ಕಂಡುಕೊಂಡಿವೆ. ಅಷ್ಟೇ ಅಲ್ಲ, ವಿಟಮಿನ್ ಡಿ ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತದೆ. ಥೈರಾಯ್ಡ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ದೇಹವು ಕಡಿಮೆ ಶಾಖವನ್ನು ಉತ್ಪಾದಿಸುತ್ತದೆ, ಇದು ಶೀತಕ್ಕೆ ಹೆಚ್ಚಿನ ಸಂವೇದನೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: ವಿಟಮಿನ್ ಬಿ12 ಕೊರತೆ ಇದ್ದು ನೀವು ಸಸ್ಯಾಹಾರಿಗಳಾಗಿದ್ದರೆ ಈ 4 ಸೊಪ್ಪುಗಳನ್ನು ತಪ್ಪದೆ ತಿನ್ನಿ!

ಚಳಿಯಿಂದ ರಕ್ಷಿಸಿಕೊಳ್ಳಲು ಯಾವ ರೀತಿಯ ಆಹಾರ ಸೇವಿಸಬೇಕು?

ಸಾಮಾನ್ಯವಾಗಿ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಪಾಲಕ್, ಬೀಟ್ರೂಟ್, ಮೊಟ್ಟೆ, ಮೀನು, ಕೋಳಿ ಹಾಲು, ಮೊಸರು ಮುಂತಾದ ಕಬ್ಬಿಣದ ಅಂಶ ಮತ್ತು ಬಿ 12 ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಿ. ಇನ್ನು, ಸೂಪ್ ಅಥವಾ ಚಹಾಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ ಮತ್ತು ದೇಹವು ಬೆಚ್ಚಗಿರುತ್ತದೆ. ಬಾದಾಮಿ, ವಾಲ್ನಟ್ಸ್ ಮತ್ತು ಖರ್ಜೂರ ಶಕ್ತಿಯನ್ನು ನೀಡುತ್ತವೆ. ಜೊತೆಗೆ ಜೀರಿಗೆ, ಅರಿಶಿನ ಮತ್ತು ಕರಿಮೆಣಸಿನಂತಹ ಮಸಾಲೆಗಳು ನಿಮ್ಮನ್ನು ಒಳಗಿನಿಂದ ಬೆಚ್ಚಗಿಡಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ