AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಟಮಿನ್ ಬಿ12 ಕೊರತೆ ಇದ್ದು ನೀವು ಸಸ್ಯಾಹಾರಿಗಳಾಗಿದ್ದರೆ ಈ 4 ಸೊಪ್ಪುಗಳನ್ನು ತಪ್ಪದೆ ತಿನ್ನಿ!

ನೀವು ಕೂಡ ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ನಿಮಗೆ ಸಹಾಯ ಮಾಡುವ ಕೆಲವು ಆಹಾರಗಳು ಇಲ್ಲಿವೆ. ಅದರಲ್ಲಿಯೂ ನೀವು ಸಸ್ಯಹಾರಿಗಳಾಗಿದ್ದರೆ ಈ ನಾಲ್ಕು ಸೊಪ್ಪುಗಳನ್ನು ಸೇವನೆ ಮಾಡಲೇಬೇಕು. ಇವು ನಿಮ್ಮ ದೇಹದಲ್ಲಿ ಉಂಟಾದ ಬಿ 12 ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಹಾಗಾದರೆ ಆ ಸೊಪ್ಪುಗಳು ಯಾವವು? ಅವುಗಳಿಂದ ಸಿಗುವ ಮತ್ತಷ್ಟು ಪ್ರಯೋಜನಗಳ ಬಗೆಗಿನ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.

ವಿಟಮಿನ್ ಬಿ12 ಕೊರತೆ ಇದ್ದು ನೀವು ಸಸ್ಯಾಹಾರಿಗಳಾಗಿದ್ದರೆ ಈ 4 ಸೊಪ್ಪುಗಳನ್ನು ತಪ್ಪದೆ ತಿನ್ನಿ!
ವಿಟಮಿನ್ ಬಿ 12 ಕೊರತೆ ನೀಗಿಸುವ ಸೊಪ್ಪುಗಳು
ಪ್ರೀತಿ ಭಟ್​, ಗುಣವಂತೆ
|

Updated on: Dec 12, 2025 | 7:35 PM

Share

ದೇಹಕ್ಕೆ ಪ್ರತಿಯೊಂದು ಪೋಷಕಾಂಶ ಕೂಡ ಬಹಳ ಮುಖ್ಯವಾಗುತ್ತದೆ. ಅವುಗಳಲ್ಲಿ ಸ್ವಲ್ಪ ಕೊರತೆಯಾದರೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುವುದರಲ್ಲಿ ಸಂಶಯವಿಲ್ಲ. ಅದರಲ್ಲಿಯೂ ದೇಹಕ್ಕೆ ಬಹಳ ಅಗತ್ಯವಾದ ವಿಟಮಿನ್ ಎಂದರೆ ಅದು ಬಿ 12 (Vitamin B12). ಇದನ್ನು ದೇಹ ಸ್ವಂತವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ ಈ ವಿಟಮಿನ್ ಗಳನ್ನು ಆಹಾರ ಮೂಲಗಳಿಂದ ಪಡೆಯಬೇಕಾಗುತ್ತದೆ. ಇದು ಸಸ್ಯಾಹಾರಿ ಆಹಾರಗಳಿಂದ ಸಿಗುವುದು ಬಹಳ ಕಡಿಮೆಯಾದರೂ ಕೂಡ ಕೆಲವು ಸೊಪ್ಪುಗಳು ಈ ವಿಟಮಿನ್ ಕೊರತೆಯಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಹಾಗಾದರೆ ಅವು ಯಾವುವು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿಯಿರಿ.

ವಿಟಮಿನ್ ಬಿ 12 ಕೊರತೆ ನೀಗಿಸಲು ಸಲಹೆಗಳು:

ನುಗ್ಗೆ ಸೊಪ್ಪು:

ಸಾಮಾನ್ಯವಾಗಿ ಈ ಎಲೆಗಳು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದ್ದು ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಾರಿನಂಶದಿಂದ ಸಮೃದ್ಧವಾಗಿವೆ. ಇವುಗಳ ಸೇವನೆಯಿಂದ ದೇಹದ ದೌರ್ಬಲ್ಯ ನಿವಾರಣೆಯಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಪಾಲಕ್:

ಈ ಸೊಪ್ಪಿನ ಸೇವನೆಯಿಂದ ವಿಟಮಿನ್ ಬಿ 12 ಸಿಗುತ್ತದೆ. ಅಷ್ಟೇ ಅಲ್ಲ, ಇದು ಕಬ್ಬಿಣ ಮತ್ತು ಫೋಲೇಟ್‌ನ ಉತ್ತಮ ಮೂಲವಾಗಿದ್ದು ನಿಯಮಿತವಾಗಿ ಸೇರಿಸಿಕೊಳ್ಳುವುದರಿಂದ ಆಯಾಸ ಮತ್ತು ಆಲಸ್ಯವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ವಿಟಮಿನ್ ಕೆ ಕೊರತೆ ಆದಾಗ ದೇಹ ನೀಡುವ ಈ ಸೂಚನೆಗಳನ್ನು ಎಂದಿಗೂ ಕಡೆಗಣಿಸಬೇಡಿ!

ಹರಿವೆ:

ಚಳಿಗಾಲದಲ್ಲಿ ಹರಿವೆಯ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಈ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಯಿಂದ ಸಮೃದ್ಧವಾಗಿದ್ದು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ವಿಟಮಿನ್ ಬಿ 12 ಕೊರತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಕರಿಬೇವು:

ದಿನನಿತ್ಯ ಬಳಸುವ ಕರಿಬೇವು ವಿಟಮಿನ್ ಬಿ 12 ನ ಉತ್ತಮ ಮೂಲವಾಗಿದೆ. ಇವುಗಳಲ್ಲಿ ಪ್ರೋಟೀನ್, ಕೊಬ್ಬು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಬಿ 12 ಅನ್ನು ಹೊಂದಿದ್ದು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ