AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೂ ಬೆಳಿಗ್ಗೆ ಎದ್ದ ತಕ್ಷಣ ತಲೆನೋವು ಬರುತ್ತಾ, ಹಾಗಿದ್ರೆ ನಿರ್ಲಕ್ಷ್ಯ ಮಾಡದೆಯೇ ತಜ್ಞರ ಈ ಸಲಹೆ ಪಾಲಿಸಿ

ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ತಲೆನೋವು ಶುರುವಾಗುತ್ತದೆ. ಆದರೆ ಇದರಿಂದ ಪರಿಹಾರ ಕಂಡುಕೊಳ್ಳುವ ಬದಲು ಇದನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಸಾಮಾನ್ಯವಾಗಿ ಈ ರೀತಿ ಆಗುವುದಕ್ಕೆ ದೇಹದಲ್ಲಿನ ಅಗತ್ಯ ಪೋಷಕಾಂಶಗಳ ಕೊರತೆಯೇ ಕಾರಣವಾಗಿರುತ್ತದೆ. ಆದಕಾರಣ, ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ತಲೆನೋವು ಬಂದರೆ, ಅದನ್ನು ಹಗುರವಾಗಿ ಪರಿಗಣಿಸಬೇಡಿ. ಹಾಗಾದರೆ ಈ ರೀತಿ ತಲೆನೋವು ಬಂದಾಗ ಏನು ಮಾಡಬೇಕು? ಇದನ್ನು ತಡೆಯಲು ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಮಗೂ ಬೆಳಿಗ್ಗೆ ಎದ್ದ ತಕ್ಷಣ ತಲೆನೋವು ಬರುತ್ತಾ, ಹಾಗಿದ್ರೆ ನಿರ್ಲಕ್ಷ್ಯ ಮಾಡದೆಯೇ ತಜ್ಞರ ಈ ಸಲಹೆ ಪಾಲಿಸಿ
Morning Headache Triggers
ಪ್ರೀತಿ ಭಟ್​, ಗುಣವಂತೆ
|

Updated on: Dec 13, 2025 | 10:45 AM

Share

ಚಳಿಗಾಲದಲ್ಲಿ, ಅನೇಕರಿಗೆ ಬೆಳಿಗ್ಗೆ ಎದ್ದ ತಕ್ಷಣ ತಲೆನೋವು (Headaches) ಬರುತ್ತದೆ. ಈ ನೋವು ಸೌಮ್ಯವಾಗಿರಬಹುದು ಅಥವಾ ದಿನಪೂರ್ತಿ ಬಾಧಿಸುವಂತಿರಬಹುದು. ಆದರೆ ಇದನ್ನು ನಿರ್ಲಕ್ಷಿಸಬಾರದು, ಏಕೆಂದರೆ ಇದು ನೀವು ಸೇವನೆ ಮಾಡುವ ಆಹಾರಗಳಿಂದ ಅಥವಾ ದೇಹದಲ್ಲಿನ ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ. ಹೌದು, ಚಳಿಗಾಲದಲ್ಲಿ ದೇಹದ ಚಯಾಪಚಯ ಕ್ರಿಯೆ ನಿಧಾನವಾಗುವುದರಿಂದ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಮೆದುಳಿಗೆ ಸಾಕಷ್ಟು ಆಮ್ಲಜನಕ ತಲುಪುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲ, ದೈನಂದಿನ ಆಹಾರದಲ್ಲಿ ಪೋಷಕಾಂಶಗಳ ಕೊರತೆಯಾದರೂ ಕೂಡ ತಲೆನೋವು ಬರುತ್ತದೆ. ಹಾಗಾಗಿ, ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ತಲೆನೋವು ಬಂದರೆ, ಅದನ್ನು ಹಗುರವಾಗಿ ಪರಿಗಣಿಸಬೇಡಿ. ಅದು ನಿಮ್ಮ ದೇಹಕ್ಕೆ ಸರಿಯಾದ ಪೋಷಣೆ ಮತ್ತು ಸಮತೋಲಿತ ಆಹಾರದ ಅಗತ್ಯವಿದೆ ಎಂಬ ಸಂಕೇತವಾಗಿರಬಹುದು. ಹಾಗಾದರೆ ಈ ರೀತಿ ತಲೆನೋವು ಬಂದಾಗ ಏನು ಮಾಡಬೇಕು? ಇದನ್ನು ತಡೆಯಲು ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಬೆಳಿಗ್ಗೆ ಎದ್ದ ತಕ್ಷಣ ತಲೆನೋವು ಬರುವುದಕ್ಕೆ ಕಾರಣವೇನು?

ಆಹಾರದಲ್ಲಿ ಕೆಲವು ಅಗತ್ಯ ಪೋಷಕಾಂಶಗಳ ಕೊರತೆಯಾದಾಗ ಈ ರೀತಿಯಾಗುತ್ತದೆ. ಅದರಲ್ಲಿಯೂ ಮೆಗ್ನೀಸಿಯಮ್ ಕೊರತೆಯಿಂದ ನರಗಳಲ್ಲಿ ಒತ್ತಡ ಉಂಟಾಗಿ ಇದು ತಲೆನೋವು ಮತ್ತು ಮೈಗ್ರೇನ್‌ನಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ವಿಟಮಿನ್ ಬಿ 2 ಮತ್ತು ಬಿ 12 ಕೊರತೆ ಕೂಡ ಈ ರೀತಿ ಸಮಸ್ಯೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುವುದು, ಆಹಾರದಲ್ಲಿ ಕಬ್ಬಿಣ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಕೊರತೆ ಕೂಡ ತಲೆನೋವಿಗೆ ಕಾರಣವಾಗಬಹುದು.

ಇದನ್ನೂ ಓದಿ: ವಿಟಮಿನ್ ಬಿ12 ಕೊರತೆ ಇದ್ದು ನೀವು ಸಸ್ಯಾಹಾರಿಗಳಾಗಿದ್ದರೆ ಈ 4 ಸೊಪ್ಪುಗಳನ್ನು ತಪ್ಪದೆ ತಿನ್ನಿ!

ಯಾವ ರೀತಿಯ ಆಹಾರ ಸೇವನೆ ಮಾಡಬೇಕು?

ಬೆಳಗಿನ ತಲೆನೋವನ್ನು ಕಡಿಮೆ ಮಾಡಲು, ಆಹಾರದಲ್ಲಿ ಪೋಷಕಾಂಶ ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು. ಮೆಗ್ನೀಸಿಯಮ್‌ಗಾಗಿ, ಬಾದಾಮಿ, ಕುಂಬಳಕಾಯಿ ಬೀಜ, ಪಾಲಕ್ ಮತ್ತು ಬಾಳೆಹಣ್ಣುಗಳನ್ನು ಸೇವಿಸಬೇಕು. ಏಕೆಂದರೆ ಇವು ನರಗಳನ್ನು ಸಡಿಲಗೊಳಿಸುತ್ತವೆ ಮತ್ತು ನೋವನ್ನು ಕಡಿಮೆ ಮಾಡುತ್ತವೆ. ವಿಟಮಿನ್ ಬಿ 12 ಮತ್ತು ಬಿ 2 ಗಾಗಿ, ಮೊಟ್ಟೆ, ಹಾಲು, ಮೊಸರು ಮತ್ತು ಧಾನ್ಯಗಳು ಪ್ರಯೋಜನಕಾರಿ, ಏಕೆಂದರೆ ಈ ರೀತಿಯ ಆಹಾರಗಳು ಮೆದುಳಿಗೆ ಶಕ್ತಿಯನ್ನು ಒದಗಿಸುತ್ತವೆ ಮತ್ತು ಬೆಳಗಿನ ಸಮಯದಲ್ಲಿ ಕಂಡುಬರುವ ಆಲಸ್ಯವನ್ನು ನಿವಾರಿಸುತ್ತವೆ. ಇನ್ನು ಕಬ್ಬಿಣದ ಅಂಶಕ್ಕಾಗಿ, ಪಾಲಕ್, ಬೆಲ್ಲ, ಕಡಲೆ ಮತ್ತು ಮಸೂರವನ್ನು ಸೇವಿಸಿ, ಏಕೆಂದರೆ ಅವು ರಕ್ತದಲ್ಲಿ ಸರಿಯಾದ ಆಮ್ಲಜನಕದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಒಮೆಗಾ -3 ಕೊಬ್ಬಿನಾಮ್ಲಗಳಿಗೆ, ವಾಲ್ನಟ್ಸ್, ಅಗಸೆ ಬೀಜಗಳು ಮತ್ತು ಚಿಯಾ ಬೀಜಗಳು ಅತ್ಯುತ್ತಮ ಆಯ್ಕೆಗಳಾಗಿವೆ, ಏಕೆಂದರೆ ಈ ಆಹಾರಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ತಲೆನೋವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ