ವಿಟಮಿನ್ ಕೆ ಕೊರತೆ ಆದಾಗ ದೇಹ ನೀಡುವ ಈ ಸೂಚನೆಗಳನ್ನು ಎಂದಿಗೂ ಕಡೆಗಣಿಸಬೇಡಿ!
ವಿಟಮಿನ್ ಕೆ ದೇಹಕ್ಕೆ ಬಹಳ ಮುಖ್ಯ. ಆದರೆ ಇದರ ಕೊರತೆಯನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ವಿವಿಧ ಕಾರಣಗಳಿಂದ ದೇಹದಲ್ಲಿ ಇದರ ಕೊರತೆಯಾಗುತ್ತದೆ. ಆದರೆ ಇದನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಇದರ ಕೊರತೆಯನ್ನು ಗುರುತಿಸುವುದು ಎಷ್ಟು ಮುಖ್ಯವೋ ಅದನ್ನು ಸರಿಪಡಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಹಾಗಾದರೆ ವಿಟಮಿನ್ ಕೆ ಕೊರತೆಯಾದಾಗ ದೇಹದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಅದನ್ನು ತಡೆಯಲು ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆರೋಗ್ಯವಾಗಿರಲು, ದೇಹದಲ್ಲಿ ಸಾಕಷ್ಟು ವಿಟಮಿನ್ (Vitamin) ಮತ್ತು ಖನಿಜಗಳಿರುವುದು ಬಹಳ ಮುಖ್ಯ. ಹಾಗಾಗಿ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಒಂದು ವಿಟಮಿನ್ ಕೊರತೆ ಅನಾರೋಗ್ಯಕ್ಕೆ ಕಾರಣವಾಗಬಹುದು. ಹೌದು, ವಿಟಮಿನ್ ಕೆ (Vitamin K) ಈ ರೀತಿಯ ಪೋಷಕಾಂಶಗಳಲ್ಲಿ ಒಂದಾಗಿದೆ. ಇದರ ಕೊರತೆಯು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು. ಹಾಗಾಗಿ ಇದನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಅಷ್ಟು ಮಾತ್ರವಲ್ಲ, ಅದರ ಕೊರತೆಯನ್ನು ನೀಗಿಸಿಕೊಳ್ಳಲು ನೋಡಬೇಕು. ಹಾಗಾದರೆ ವಿಟಮಿನ್ ಕೆ ಕೊರತೆಯಾದಾಗ ದೇಹದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಅದನ್ನು ತಡೆಯಲು ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ವಿಟಮಿನ್ ಕೆ ಎಂದರೇನು? ಲಕ್ಷಣಗಳು ಹೇಗಿರುತ್ತದೆ?
ಸಾಮಾನ್ಯವಾಗಿ ವಿಟಮಿನ್ ಕೆ ದೇಹಕ್ಕೆ ಬಹಳ ಅಗತ್ಯ, ಇದು ಮೂಳೆ, ಹೃದಯ ಮತ್ತು ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ. ಹಾಗಾಗಿ ಇದರ ಕೊರತೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಮೂಳೆ ಬೆಳವಣಿಗೆಯಲ್ಲಿ ಅಸಮರ್ಪಕ ಬದಲಾವಣೆ ಮತ್ತು ಆಸ್ಟಿಯೊಪೊರೋಸಿಸ್ ಗೆ ಕಾರಣವಾಗಬಹುದು. ಈ ವಿಟಮಿನ್ ಕೊರತೆಯಾದಾಗ ದೇಹದಲ್ಲಿ ಅತಿಯಾದ ರಕ್ತಸ್ರಾವ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯ, ಉಸಿರಾಟದ ತೊಂದರೆ, ಬೆನ್ನು ನೋವು ಮತ್ತು ಬೇಗ ಗುಣವಾಗದ ಗಾಯಗಳು, ಆಯಾಸ ಮತ್ತು ತೂಕ ನಷ್ಟ, ಕೂದಲು ಉದುರುವುದು ಮುಂತಾದ ಲಕ್ಷಣಗಳು ಕಂಡುಬರಬಹುದು. ಈ ರೀತಿ ನಿಮಗೂ ಆಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಯಾವುದೇ ಕಾರಣಕ್ಕೂ ದೇಹ ನೀಡುವ ಈ ರೀತಿಯ ಸೂಚನೆಗಳನ್ನು ಕಡೆಗಣಿಸಬೇಡಿ.
ಇದನ್ನೂ ಓದಿ: ನಿರಂತರವಾಗಿ ಚರ್ಮದಲ್ಲಿ ತುರಿಕೆ ಕಂಡುಬರುವುದಕ್ಕೆ ಈ ಅಂಶಗಳೇ ಕಾರಣ
ವಿಟಮಿನ್ ಕೆ ಕೊರತೆ ನೀಗಿಸಲು ಸೇವನೆ ಮಾಡಬೇಕಾದ ಆಹಾರಗಳು:
- ಮೆಂತ್ಯ, ಪಾಲಕ್ ಸೊಪ್ಪು
- ಗೋಧಿ, ಬಾರ್ಲಿ
- ಮೂಲಂಗಿ, ಬೀಟ್ರೂಟ್ಕೆಂ
- ಪು ಮೆಣಸಿನಕಾಯಿ
- ಬಾಳೆಹಣ್ಣು
- ಮೊಳಕೆಯೊಡೆದ ಧಾನ್ಯಗಳು
- ರಸಭರಿತ ಹಣ್ಣುಗಳು
- ಮೊಟ್ಟೆ, ಮಾಂಸ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




