AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಣವಿಲ್ಲದೆ ಬೇಸರವಾಗುತ್ತಾ, ಕೆಟ್ಟ ಆಲೋಚನೆಗಳು ಬರುತ್ತಾ? ಇದಕ್ಕೆಲ್ಲಾ ಕಾರಣ ಈ ವಿಟಮಿನ್! ಮುಕ್ತಿ ಪಡೆಯಲು ಈ ರೀತಿ ಮಾಡಿ

ನಿಮಗೂ ಆಗಾಗ ಬೇಸರ, ಚಡಪಡಿಕೆ ಅಥವಾ ಹತಾಶೆಯ ಭಾವನೆ ಕಾಡುತ್ತಾ? ಹಾಗಾದರೆ ಇವೆಲ್ಲವೂ ವಿಟಮಿನ್ ಬಿ 12 ಕೊರತೆಯ ಸೂಚನೆಯಾಗಿರಬಹುದು. ಹೌದು. ಈ ವಿಷಯ ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು. ಆದರೆ ಈ ಪ್ರಮುಖ ವಿಟಮಿನ್ ಕೊರತೆಯಿದ್ದರೆ, ಮೆದುಳಿನಲ್ಲಿ ಸಂತೋಷದ ಹಾರ್ಮೋನುಗಳು ಕಡಿಮೆಯಾಗುತ್ತವೆ ಮತ್ತು ನಕಾರಾತ್ಮಕ ಆಲೋಚನೆಗಳು ಹೆಚ್ಚಾಗುತ್ತವೆ. ಅಷ್ಟೇ ಅಲ್ಲ, ಆಯಾಸ, ಉಸಿರಾಟದ ತೊಂದರೆ ಮತ್ತು ಸ್ಮರಣಶಕ್ತಿ ನಷ್ಟದಂತಹ ದೈಹಿಕ ಸಮಸ್ಯೆಗಳು ಸಹ ಕಂಡುಬರುತ್ತದೆ. ಹಾಗಾದರೆ ಈ ರೀತಿಯ ಸಮಸ್ಯೆ ತಡೆಗಟ್ಟಲು ಏನು ಮಾಡಬಹುದು, ಯಾಕೆ ಈ ರೀತಿಯಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಾರಣವಿಲ್ಲದೆ ಬೇಸರವಾಗುತ್ತಾ, ಕೆಟ್ಟ ಆಲೋಚನೆಗಳು ಬರುತ್ತಾ? ಇದಕ್ಕೆಲ್ಲಾ ಕಾರಣ ಈ ವಿಟಮಿನ್! ಮುಕ್ತಿ ಪಡೆಯಲು ಈ ರೀತಿ ಮಾಡಿ
Irritability And Negative Thoughts
ಪ್ರೀತಿ ಭಟ್​, ಗುಣವಂತೆ
|

Updated on: Nov 13, 2025 | 5:55 PM

Share

ನಿಮಗೂ ಆಗಾಗ ಕಾರಣವಿಲ್ಲದೆ ಬೇಸರ, ಚಡಪಡಿಕೆ ಅಥವಾ ಹತಾಶೆಯ ಭಾವನೆ ಕಾಡುತ್ತಾ, ಇದಕ್ಕೆ ಕಾರಣ ಏನಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ, ಈ ರೀತಿಯಾಗುವುದು ನಿಮಗೆ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಮಸ್ಯೆ ಹಲವರನ್ನು ಕಾಡುತ್ತಿದೆ. ಕೆಲವರು ಈ ರೀತಿಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಅದು ಸರಿಯಲ್ಲ. ಏಕೆಂದರೆ ಕಾರಣವಿಲ್ಲದೆ ಬೇಸರ, ಕೋಪ ಇವೆಲ್ಲಾ ಬರುವುದಕ್ಕೆ ಕಾರಣವಿದೆ. ಹೌದು. ವಿಟಮಿನ್ ಬಿ 12 (Vitamin B12) ಕೊರತೆ ಈ ರೀತಿಯಾಗುವುದಕ್ಕೆ ಮುಖ್ಯ ಕಾರಣವಾಗಿರಬಹುದು. ಈ ಪ್ರಮುಖ ವಿಟಮಿನ್ ಕೊರತೆಯಿದ್ದರೆ, ಮೆದುಳಿನಲ್ಲಿ ಸಂತೋಷದ ಹಾರ್ಮೋನುಗಳು ಕಡಿಮೆಯಾಗುತ್ತವೆ ಮತ್ತು ನಕಾರಾತ್ಮಕ ಆಲೋಚನೆಗಳು ಹೆಚ್ಚಾಗುತ್ತವೆ. ಅಷ್ಟೇ ಅಲ್ಲ, ಆಯಾಸ, ಉಸಿರಾಟದ ತೊಂದರೆ ಮತ್ತು ಸ್ಮರಣಶಕ್ತಿ ನಷ್ಟದಂತಹ ದೈಹಿಕ ಸಮಸ್ಯೆಗಳು ಸಹ ಸಂಭವಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ರೀತಿಯ ಸಮಸ್ಯೆ ತಡೆಗಟ್ಟಲು ಏನು ಮಾಡಬಹುದು, ಯಾಕೆ ಈ ರೀತಿಯಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ನಮ್ಮ ದೇಹವನ್ನು ಸದೃಢವಾಗಿಡಲು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳು ಅತ್ಯಗತ್ಯ. ಅವು ದೇಹವನ್ನು ಆರೋಗ್ಯವಾಗಿಡುವುದಲ್ಲದೆ, ನಿಮ್ಮ ಮನಸ್ಸು ಮತ್ತು ಮಾನಸಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಆದರೆ ಈ ಪ್ರಮುಖ ಜೀವಸತ್ವಗಳಲ್ಲಿ ಒಂದಾದ ವಿಟಮಿನ್ ಬಿ 12 ನ ನಿರಂತರ ಕೊರತೆಯಿದ್ದರೆ, ಮನಸ್ಸು ಚಂಚಲವಾಗುತ್ತದೆ. ಮೆದುಳಿನ ಕಾರ್ಯವು ನಿಧಾನಗೊಳ್ಳುತ್ತದೆ. ನಿರಂತರವಾಗಿ ತಲೆನೋವು, ಅನಗತ್ಯ ಕಿರಿಕಿರಿ, ಚಡಪಡಿಕೆ ಮತ್ತು ಯಾವುದರಲ್ಲೂ ಆಸಕ್ತಿಯ ಕೊರತೆಯಂತಹ ಭಾವನೆಗಳು ಕಂಡುಬರುತ್ತದೆ. ನಿಮಗೂ ಕೂಡ ಈ ರೀತಿಯಾಗುತ್ತಾ ಹಾಗದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಸಲಹೆಗಳನ್ನು ಅನುಸರಿಸಿ.

ವಿಟಮಿನ್ ಬಿ 12 ಕೊರತೆಯಾದರೆ ಯಾವ ರೀತಿಯ ಸಮಸ್ಯೆಗಳಾಗುತ್ತದೆ?

ಸಾಮಾನ್ಯವಾಗಿ ವಿಟಮಿನ್ ಬಿ 12 ಕೊರತೆಯು ದೈಹಿಕ ಶಕ್ತಿಯನ್ನು ಕಡಿಮೆ ಮಾಡುವುದಲ್ಲದೆ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಬರುವುದಕ್ಕೆ ಕಾರಣವಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಈ ವಿಟಮಿನ್ ಮೆದುಳಿನ ಸಂತೋಷದ ಹಾರ್ಮೋನುಗಳಾದ ಸಿರೊಟೋನಿನ್ ಮತ್ತು ಡೋಪಮೈನ್ ಅನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಯಾವಾಗ ಇದರ ಕೊರತೆಯಾಗುತ್ತದೆಯೋ ಅಂತಹ ಸಮಯದಲ್ಲಿ ಮೆದುಳು ಈ ಹಾರ್ಮೋನುಗಳನ್ನು ಉತ್ಪಾದಿಸುವುದಿಲ್ಲ. ಪರಿಣಾಮವಾಗಿ, ಒಬ್ಬ ವ್ಯಕ್ತಿ ಕಿರಿಕಿರಿ ಮತ್ತು ಖಿನ್ನತೆಗೆ ಒಳಗಾಗಬಹುದು. ಮಾತ್ರವಲ್ಲ, ನಕಾರಾತ್ಮಕ ಅಥವಾ ಗೊಂದಲದ ಆಲೋಚನೆಗಳಿಂದ ಒತ್ತಡಕ್ಕೆ ಒಳಗಾಗಬಹುದು. ನೀವು ಕೂಡ ಮಾನಸಿಕವಾಗಿ ದಣಿದಂತೆ ಅಥವಾ ಕಿರಿಕಿರಿ ಅನುಭವಕ್ಕೆ ಬರುತ್ತಿದ್ದರೆ ಅದಕ್ಕೆ ವಿಟಮಿನ್ ಬಿ 12 ಕೊರತೆಯೂ ಕಾರಣವಾಗಿರಬಹುದು.

ಇದನ್ನೂ ಓದಿ: ನೀವು ಸಸ್ಯಹಾರಿಗಳಾಗಿದ್ದು ವಿಟಮಿನ್ ಬಿ 12 ಕೊರತೆ ಆದ್ರೆ ಯಾವ ರೀತಿಯ ಆಹಾರ ಸೇವನೆ ಮಾಡಬೇಕು ತಿಳಿದುಕೊಳ್ಳಿ

ವಿಟಮಿನ್ ಬಿ 12 ಕೊರತೆಯ ಇತರ ದೈಹಿಕ ಲಕ್ಷಣಗಳು:

  • ನಿರಂತರ ಆಯಾಸ, ಆಲಸ್ಯ, ದೌರ್ಬಲ್ಯ.
  • ಆಗಾಗ ಉಸಿರಾಟದ ತೊಂದರೆ, ತಲೆ ತಿರುಗುವಿಕೆ.
  • ಅಪಧಮನಿಗಳಲ್ಲಿ ದೌರ್ಬಲ್ಯ, ಕುತ್ತಿಗೆ ಮತ್ತು ಭುಜಗಳಲ್ಲಿ ನೋವು.
  • ಅಂಗಗಳಲ್ಲಿ ಊತದ ಭಾವನೆ.
  • ಏಕಾಗ್ರತೆಯ ಕೊರತೆ, ಸ್ಮರಣಶಕ್ತಿ ದುರ್ಬಲಗೊಳ್ಳುವುದು.

ವಿಟಮಿನ್ ಬಿ 12 ಕೊರತೆ ನೀಗಿಸಿಕೊಳ್ಳುವುದು ಹೇಗೆ?

  • ಮಾಂಸಾಹಾರಿಗಳು ಕೋಳಿ, ಮೊಟ್ಟೆ, ಮೀನು ಮುಂತಾದ ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು.
  • ನೀವು ಸಸ್ಯಾಹಾರಿಗಳಾಗಿದ್ದರೆ ಹಾಲು, ಮೊಸರು, ಪನೀರ್ ಮುಂತಾದ ಆಹಾರಗಳನ್ನು ಹೆಚ್ಚು ಸೇವಿಸಬೇಕು.
  • ಸಾಧ್ಯವಾದಲ್ಲಿ ಬಲವರ್ಧಿತ ಧಾನ್ಯಗಳು, ಸೋಯಾ ಹಾಲು ಮತ್ತು ಪೌಷ್ಟಿಕಾಂಶಯುಕ್ತವಾದ ಯೀಸ್ಟ್ ಸೇವನೆಯು ಸಹ ತುಂಬಾ ಪ್ರಯೋಜನಕಾರಿಯಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ