ನೀವು ಸಸ್ಯಹಾರಿಗಳಾಗಿದ್ದು ವಿಟಮಿನ್ ಬಿ 12 ಕೊರತೆ ಆದ್ರೆ ಯಾವ ರೀತಿಯ ಆಹಾರ ಸೇವನೆ ಮಾಡಬೇಕು ತಿಳಿದುಕೊಳ್ಳಿ
ಇತ್ತೀಚಿನ ದಿನಗಳಲ್ಲಿ ವಿಟಮಿನ್ ಬಿ 12 ಕೊರತೆ ಅನೇಕರಲ್ಲಿ ಕಂಡುಬರುತ್ತಿದೆ. ಇದು ವಿಶೇಷವಾಗಿ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಆತಂಕ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ತೀವ್ರ ಆಲಸ್ಯ ಮತ್ತು ಆಯಾಸವನ್ನು ಕೂಡ ಉಂಟುಮಾಡುತ್ತದೆ. ಈ ಸಮಸ್ಯೆಗಳನ್ನು ತಡೆಗಟ್ಟಲು, ವಿಟಮಿನ್ ಬಿ 12 ಕೊರತೆಯನ್ನು ನೀಗಿಸಿಕೊಳ್ಳುವುದು ಅತ್ಯಗತ್ಯ. ಆದರೆ ಈ ವಿಟಮಿನ್ ಪ್ರಧಾನವಾಗಿ ಮಾಂಸಾಹಾರಗಳಲ್ಲಿ ಕಂಡುಬರುವುದರಿಂದ ಸಸ್ಯಾಹಾರಿಗಳಲ್ಲಿ ಈ ವಿಟಮಿನ್ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಹಾಗಾದರೆ ಸಸ್ಯಾಹಾರಿಗಳು ಯಾವ ರೀತಿಯ ಆಹಾರಗಳ ಸೇವನೆ ಮಾಡುವ ಮೂಲಕ ಈ ವಿಟಮಿನ್ ಪಡೆದುಕೊಳ್ಳಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೇಹಕ್ಕೆ ಜೀವಸತ್ವಗಳು ಸರಿಯಾದ ರೀತಿಯಲ್ಲಿ ಪೂರೈಕೆಯಾದರೆ ಮಾತ್ರ ಎಲ್ಲಾ ಚಯಾಪಚಯ ಕ್ರಿಯೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಯಾವುದೇ ವಿಟಮಿನ್ (Vitamin) ಕೊರತೆಯಾದರೂ ಕೂಡ ಒಟ್ಟಾರೆ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಪ್ರಸ್ತುತ ಜೀವನಶೈಲಿಯಿಂದಾಗಿ, ಅನೇಕರು ಜೀವಸತ್ವಗಳತ್ತ ಗಮನ ಹರಿಸುತ್ತಿಲ್ಲ. ಪ್ರತಿನಿತ್ಯ ಸೇವಿಸುವ ಆಹಾರದಿಂದ ಸಾಕಷ್ಟು ಜೀವಸತ್ವಗಳನ್ನು ಪಡೆಯುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಕೂಡ ತಿಳಿದಿರುವುದಿಲ್ಲ. ಈ ನಿರ್ಲಕ್ಷ್ಯವು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅನೇಕರಲ್ಲಿ ವಿಟಮಿನ್ ಡಿ ಕೊರತೆಯಿದೆ ಅದನ್ನು ಹೊರತು ಪಡಿಸಿದರೆ ಹಲವರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯೆಂದರೆ ವಿಟಮಿನ್ ಬಿ 12 ಕೊರತೆ. ಕೆಂಪು ರಕ್ತ ಕಣಗಳ ಸರಿಯಾದ ಉತ್ಪಾದನೆಗೆ ಮತ್ತು ದೇಹವು ಅಗತ್ಯವಾದ ಶಕ್ತಿಯನ್ನು ಪಡೆಯಲು, ವಿಟಮಿನ್ ಬಿ 12 (Vitamin B12) ಅತ್ಯಗತ್ಯ. ಆದರೆ ಈ ವಿಟಮಿನ್ ಬಿ 12 ಪ್ರಧಾನವಾಗಿ ಮಾಂಸಾಹಾರಗಳಲ್ಲಿ ಕಂಡುಬರುವುದರಿಂದ ಸಸ್ಯಾಹಾರಿಗಳಲ್ಲಿ ಈ ವಿಟಮಿನ್ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಹಾಗಾದರೆ ಸಸ್ಯಾಹಾರಿಗಳು ಯಾವ ರೀತಿಯ ಆಹಾರಗಳ ಸೇವನೆ ಮಾಡುವ ಮೂಲಕ ಈ ವಿಟಮಿನ್ ಪಡೆದುಕೊಳ್ಳಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪನೀರ್
ಸಸ್ಯಾಹಾರಿ ಆಹಾರಗಳಲ್ಲಿ, ವಿಟಮಿನ್ ಬಿ 12 ಅಧಿಕವಾಗಿರುವುದು ಪನೀರ್ ನಲ್ಲಿ. ಅಷ್ಟೇ ಅಲ್ಲ, ಪನೀರ್ ಪ್ರೋಟೀನ್ ಮತ್ತು ಕ್ಯಾಲ್ಸಿಯಂನಲ್ಲಿಯೂ ಸಮೃದ್ಧವಾಗಿದೆ. ಸ್ನಾಯುಗಳನ್ನು ಬಲಪಡಿಸಲು ಮತ್ತು ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ, ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ವಿಟಮಿನ್ ಬಿ 12 ಕೊರತೆಯನ್ನು ನೀಗಿಸಿಕೊಳ್ಳಬಹುದು. ಆದರೆ ಪನೀರ್ ಅನ್ನು ಅತಿಯಾಗಿ ಹುರಿಯಬೇಡಿ. ಈ ರೀತಿ ಮಾಡುವುದರಿಂದ ಅದರಲ್ಲಿರುವ ವಿಟಮಿನ್ ಬಿ 12 ಪ್ರಮಾಣ ಕಡಿಮೆಯಾಗಬಹುದು.
ಮೊಸರು
ಪನೀರ್ ಜೊತೆಗೆ ಮೊಸರಿನಲ್ಲಿಯು ಹೆಚ್ಚಿನ ಪ್ರಮಾಣದ ವಿಟಮಿನ್ ಬಿ 12 ಇರುತ್ತದೆ. ಮೊಸರಿನ ನಿಯಮಿತ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಪ್ರೋಬಯಾಟಿಕ್‌ಗಳನ್ನು ಒದಗಿಸುತ್ತದೆ. ಇದು ವಿಟಮಿನ್ ಬಿ 12 ಅನ್ನು ಯಥೇಚ್ಛವಾಗಿ ಪೂರೈಸುತ್ತದೆ. ಅದರಲ್ಲಿಯೂ ಊಟದ ಜೊತೆಗೆ ಮೊಸರು ತಿನ್ನುವುದು ತುಂಬಾ ಒಳ್ಳೆಯದು. ಆದರೆ ಸಕ್ಕರೆ ಸೇರಿಸಿ ಮೊಸರು ಸೇವನೆ ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ.
ಇದನ್ನೂ ಓದಿ: ಬಾಳೆಹಣ್ಣನ್ನು ಈ ರೀತಿ ಬಳಸಿದರೆ ವಿಟಮಿನ್ ಬಿ12 ಕೊರತೆಯನ್ನು ನೀಗಿಸಿಕೊಳ್ಳಬಹುದು
ಚೀಸ್ ಮತ್ತು ಅಣಬೆಗಳು
ಮೊಸರು ಮತ್ತು ಪನೀರ್‌ನಲ್ಲಿ ಮಾತ್ರವಲ್ಲದೆ, ಚೀಸ್‌ನಲ್ಲಿ ವಿಟಮಿನ್ ಬಿ 12 ಕಂಡುಬರುತ್ತದೆ. ಸ್ಯಾಂಡ್‌ವಿಚ್‌ಗಳು, ರೋಟಿ ರೋಲ್‌ಗಳು ಅಥವಾ ದೋಸೆಗಳಿಗೆ ಚೀಸ್ ಸೇರಿಸುವ ಮೂಲಕ, ನೀವು ಈ ವಿಟಮಿನ್ ಅನ್ನು ಪಡೆಯಬಹುದು. ಮುಖ್ಯವಾಗಿ, ಅಣಬೆಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೃದಯದ ಆರೋಗ್ಯವೂ ಸುಧಾರಿಸುತ್ತದೆ. ಮಾತ್ರವಲ್ಲ ಇದು ಮೆದುಳಿನ ಕಾರ್ಯವನ್ನು ಹೆಚ್ಚಿಸುವುದರ ಜೊತೆಗೆ, ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತವೆ. ಅಣಬೆಗಳಲ್ಲಿ ಖನಿಜಗಳು, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು ಇವುಗಳಲ್ಲಿ ಕಂಡುಬರುವ ಫೈಬರ್ ಅಂಶ ಕೂಡ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಸೇಬುಹಣ್ಣು
ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂದು ಹೇಳಲಾಗುತ್ತದೆ. ಅದೇ ರೀತಿ ಈ ಹಣ್ಣಿನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಸೇಬುಗಳು ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಬಹಳ ಸಹಾಯಕಾರಿಯಾಗಿದೆ. ಅದರಲ್ಲಿಯೂ ವಿಶೇಷವಾಗಿ ಮಧುಮೇಹವನ್ನು ನಿಯಂತ್ರಿಸಲು ಮತ್ತು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತವೆ. ಇದಕ್ಕೆ ಕಾರಣ ಸೇಬು ಹಣ್ಣುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು. ಮಾತ್ರವಲ್ಲ, ಈ ಹಣ್ಣಿನಲ್ಲಿ ಫೈಬರ್ ಮತ್ತು ವಿಟಮಿನ್ ಸಿ ಕೂಡ ಯಥೇಚ್ಛವಾಗಿ ಕಂಡುಬರುವುದರಿಂದ ನಿಮ್ಮ ದೈನಂದಿನ ಆಹಾರದಲ್ಲಿ ಸೇಬು ಹಣ್ಣಿನ ಸೇವನೆ ಮಾಡಲೇಬೇಕು. ಮಾತ್ರವಲ್ಲ ಇದರಲ್ಲಿ ವಿಟಮಿನ್ ಬಿ 12 ಕೂಡ ಸಿಗುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಅದರಲ್ಲಿಯೂ ಜೀರ್ಣಕ್ರಿಯೆಗೆ ಅಗತ್ಯವಾದ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಆದರೆ ಇದರ ಸೇವನೆ ಮಾಡುವಾಗ ಸಿಪ್ಪೆ ತೆಗೆಯಬಾರದು ಎಂಬುದು ನೆನಪಿನಲ್ಲಿರಲಿ.
ಬಾಳೆಹಣ್ಣುಗಳು
ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಬಾಳೆಹಣ್ಣುಗಳು ಬಹಳ ಸಹಕಾರಿ ಎಂಬುದು ತಿಳಿದ ವಿಚಾರ. ಅದರಲ್ಲಿಯೂ ಈ ಹಣ್ಣುಗಳ ಸೇವನೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಈ ಹಣ್ಣು ತ್ವರಿತ ಶಕ್ತಿಯನ್ನು ಕೂಡ ಒದಗಿಸುತ್ತದೆ. ಇನ್ನು ಈ ಹಣ್ಣುಗಳಲ್ಲಿ ಪೊಟ್ಯಾಸಿಯಮ್ ಮತ್ತು ಫೈಬರ್ ಸಮೃದ್ಧವಾಗಿದ್ದು ವಿಟಮಿನ್ ಸಿ ಕೂಡ ಅಧಿಕವಾಗಿರುತ್ತದೆ. ಅಷ್ಟೇ ಅಲ್ಲ, ಬಾಳೆಹಣ್ಣುಗಳಲ್ಲಿ ವಿಟಮಿನ್ ಬಿ 6 ಸಮೃದ್ಧವಾಗಿದೆ. ಇದು ದೇಹವು ವಿಟಮಿನ್ ಬಿ 12 ಅನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಬೆಳಿಗ್ಗೆ ವ್ಯಾಯಾಮ ಮಾಡುವ ಮೊದಲು ಬಾಳೆಹಣ್ಣನ್ನು ತಿನ್ನುವುದು ತ್ವರಿತ ಶಕ್ತಿಯನ್ನು ನೀಡುತ್ತದೆ. ಜೊತೆಗೆ ವಿಟಮಿನ್ ಗಳ ಕೊರತೆಯನ್ನು ನೀಗಿಸುತ್ತದೆ.
ಅಷ್ಟೇ ಅಲ್ಲ, ಮೊಸರು, ಇಡ್ಲಿ ಮತ್ತು ದೋಸೆಯಂತಹ ಹುದುಗಿಸಿದ ಆಹಾರಗಳ ಮೂಲಕವೂ ವಿಟಮಿನ್ ಬಿ 12 ಅನ್ನು ಪಡೆಯಬಹುದು. ಆದರೆ ಕೆಫೀನ್ ಅಧಿಕವಾಗಿ ಸೇವಿಸಿದಾಗ, ವಿಟಮಿನ್ ಬಿ 12 ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ, ಚಹಾ ಅಥವಾ ಕಾಫಿ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಹೆಚ್ಚು ಪಾಲಕ್, ಬೀಟ್ರೂಟ್ ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸುವುದು ಪ್ರಯೋಜನಕಾರಿ, ಏಕೆಂದರೆ ಅವು ವಿಟಮಿನ್ ಬಿ 12 ಅನ್ನು ಒದಗಿಸುತ್ತವೆ. ಜೊತೆಗೆ ಫೈಬರ್ ಅಧಿಕವಾಗಿರುವ ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳನ್ನು ತಿನ್ನುವುದು ಕೂಡ ವಿಟಮಿನ್ ಬಿ 12 ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




