AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರಂತರವಾಗಿ ಚರ್ಮದಲ್ಲಿ ತುರಿಕೆ ಕಂಡುಬರುವುದಕ್ಕೆ ಈ ಅಂಶಗಳೇ ಕಾರಣ

ದೇಹದಲ್ಲಿ ನಿರಂತರವಾಗಿ ತುರಿಕೆ ಕಂಡುಬರುತ್ತಿದ್ದರೆ ಅದನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು. ಇದು ಕೇವಲ ಚರ್ಮದ ಸಮಸ್ಯೆಯಲ್ಲ; ಗಂಭೀರ ಕಾಯಿಲೆಯ ಸಂಕೇತ ಅಥವಾ ದೇಹದಲ್ಲಿನ ಪೋಷಕಾಂಶಗಳ ಕೊರತೆಯೂ ಆಗಿರಬಹುದು. ಹೌದು, ಆರೋಗ್ಯ ತಜ್ಞರ ಪ್ರಕಾರ, ದೇಹದಲ್ಲಿ ಕೆಲವು ಜೀವಸತ್ವ ಅಂದರೆ ವಿಟಮಿನ್ ಗಳ ಕೊರತೆ ಉಂಟಾದಾಗಲೂ ಕೂಡ, ತುರಿಕೆ ಹೆಚ್ಚಾಗಬಹುದು. ಹಾಗಾದರೆ ಯಾವ ವಿಟಮಿನ್ ಕೊರತೆ ಈ ರೀತಿಯ ಸಮಸ್ಯೆಗೆ ಕಾರಣವಾಗುತ್ತೆ, ಇದರಿಂದ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿರಂತರವಾಗಿ ಚರ್ಮದಲ್ಲಿ ತುರಿಕೆ ಕಂಡುಬರುವುದಕ್ಕೆ ಈ ಅಂಶಗಳೇ ಕಾರಣ
itchy skin vitamin deficiency
ಪ್ರೀತಿ ಭಟ್​, ಗುಣವಂತೆ
|

Updated on: Nov 28, 2025 | 6:50 PM

Share

ದೇಹದಲ್ಲಿ ನಿರಂತರವಾಗಿ ತುರಿಕೆ ಕಂಡುಬರುವುದು ಸಾಮಾನ್ಯ ವಿಷಯವಲ್ಲ. ಆದರೆ ಕೆಲವರು ಇದನ್ನು ಚರ್ಮದ ಸಮಸ್ಯೆ, ರಿಂಗ್‌ವರ್ಮ್‌ ಅಥವಾ ಆಹಾರ ಅಲರ್ಜಿಯಿಂದ ಉಂಟಾಗಿರಬಹುದು ಎಂದು ಭಾವಿಸಿ ಅದನ್ನು ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ನಿರಂತರವಾಗಿ ಕಂಡುಬರುವ ತುರಿಕೆ (Itch) ಆಂತರಿಕ ಕಾಯಿಲೆ ಅಥವಾ ಪೋಷಕಾಂಶಗಳ ಕೊರತೆಯ ಸಂಕೇತವೂ ಆಗಿರಬಹುದು ಎಂಬುದನ್ನು ಮರೆಯಬೇಡಿ. ಆರೋಗ್ಯ ತಜ್ಞರ ಪ್ರಕಾರ, ದೇಹದಲ್ಲಿ ಕೆಲವು ಜೀವಸತ್ವ ಅಂದರೆ ವಿಟಮಿನ್ ಗಳ ಕೊರತೆ (Vitamin Deficiencies) ಉಂಟಾದಾಗಲೂ ಕೂಡ, ತುರಿಕೆ ಹೆಚ್ಚಾಗಬಹುದು. ಹಾಗಾದರೆ ಯಾವ ವಿಟಮಿನ್ ಕೊರತೆ ಈ ರೀತಿಯ ಸಮಸ್ಯೆಗೆ ಕಾರಣವಾಗುತ್ತೆ, ಇದರಿಂದ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆರೋಗ್ಯ ತಜ್ಞರ ಪ್ರಕಾರ, ದೇಹದಲ್ಲಿ ತುರಿಕೆಗೆ ಕಂಡು ಬರುವುದಕ್ಕೆ ಹಲವು ಕಾರಣಗಳಿರಬಹುದು, ಅವುಗಳಲ್ಲಿ ಒಂದು ವಿಟಮಿನ್ ಕೊರತೆ.

ವಿಟಮಿನ್ ಎ: ಈ ಜೀವಸತ್ವದ ಕೊರತೆ ತುರಿಕೆಗೆ ಕಾರಣವಾಗಬಹುದು. ಹೌದು, ವಿಟಮಿನ್ ಎ ಕೊರತೆಯು ಚರ್ಮವನ್ನು ಒಣಗಿಸಿ ತುರಿಕೆಗೆ ಕಾರಣವಾಗಬಹುದು. ಅದರಲ್ಲಿಯೂ ಚಳಿಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದು.

ವಿಟಮಿನ್ ಬಿ12: ಸಾಮಾನ್ಯವಾಗಿ ವಿಟಮಿನ್ ಬಿ12 ಕೊರತೆಯಿಂದಲೂ ದೇಹದಲ್ಲಿ ತುರಿಕೆ ಉಂಟಾಗಬಹುದು. ಅದರಲ್ಲಿಯೂ ಈ ಜೀವಸತ್ವದ ಕೊರತೆಯಿಂದ ಕೈ ಮತ್ತು ಕಾಲುಗಳಲ್ಲಿ ತುರಿಕೆ ಹೆಚ್ಚಾಗಬಹುದು. ಅಷ್ಟೇ ಅಲ್ಲ, ವಿಟಮಿನ್ ಬಿ3 ಕೊರತೆಯು ಕೂಡ ತುರಿಕೆಗೂ ಕಾರಣವಾಗಬಹುದು. ಈ ವಿಟಮಿನ್ ಬಿ3 ಕೊರತೆಯನ್ನು ನಿಯಾಸಿನ್ ಎಂದೂ ಕರೆಯುತ್ತಾರೆ.

ಇದನ್ನೂ ಓದಿ: ಕಾರಣವಿಲ್ಲದೆ ಬೇಸರವಾಗುತ್ತಾ, ಕೆಟ್ಟ ಆಲೋಚನೆಗಳು ಬರುತ್ತಾ? ಇದಕ್ಕೆಲ್ಲಾ ಕಾರಣ ಈ ವಿಟಮಿನ್! ಮುಕ್ತಿ ಪಡೆಯಲು ಈ ರೀತಿ ಮಾಡಿ

ಕ್ಯಾಲ್ಸಿಯಂ: ಸಾಮಾನ್ಯವಾಗಿ ಕ್ಯಾಲ್ಸಿಯಂ ಅಂಶ ಕಡಿಮೆಯಿದ್ದಾಗ ಕೈ ಮತ್ತು ಕಾಲುಗಳಲ್ಲಿ ನಡುಕ ಮತ್ತು ಚರ್ಮದ ಮೇಲೆ ತುರಿಕೆ ಕಂಡು ಬರುತ್ತದೆ. ನರಮಂಡಲವು ಸುಲಭವಾಗಿ ಕಿರಿಕಿರಿಗೊಳ್ಳುವುದರಿಂದ ಈ ರೀತಿಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಬಾಯಿ ಅಥವಾ ಬೆರಳುಗಳ ಸುತ್ತ ನಡುಕ ಬರುವುದು ಕೂಡ ಕ್ಯಾಲ್ಸಿಯಂ ಕೊರತೆಯ ಸಂಕೇತವಾಗಿರಬಹುದು.

ವಿಟಮಿನ್ ಇ ಮತ್ತು ವಿಟಮಿನ್ ಸಿ: ನಿಮಗೆ ಗೊತ್ತಾ? ದೇಹದಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಸಿ ಕೊರತೆ ಉಂಟಾದಾಗಲೂ ಕೂಡ ತುರಿಕೆಯಂತಹ ಲಕ್ಷಣಗಳು ಕಂಡುಬರಬಹುದು. ವಿಟಮಿನ್ ಇ ಉರಿಯೂತದ ಗುಣಗಳನ್ನು ಹೊಂದಿದ್ದು ಅದು ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ