ಅನ್ನದ ತಿಳಿಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 01, 2023 | 5:06 PM

ಅನ್ನದ ತಿಳಿ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ನೈಸರ್ಗಿಕ ಪಾನೀಯ ಎಂದರೆ ತಪ್ಪಾಗಲಾರದು. ಅನ್ನದ ತಿಳಿಯನ್ನು ಯಾವ ಯಾವ ರೀತಿಯಲ್ಲಿ ಬಳಸಬಹುದು. ಯಾವ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಅನ್ನದ ತಿಳಿಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಅನ್ನದ ತಿಳಿಯು ಉಪಯೋಗಕ್ಕೆ ಬರಬಹುದು ಎಂಬುದನ್ನು ಯೋಚಿಸಿರುವವರು ತೀರಾ ಕಡಿಮೆ. ಆದರೆ ಈ ದ್ರವವು ಕೂಡ ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಬಗ್ಗೆ ನೀವು ಕೇಳಿರಬಹುದು. ಅನ್ನವನ್ನು ಬೇಯಿಸಿದ ನಂತರ ನೀವು ಬಸಿಯುವ ನೀರು ನಿಮ್ಮ ದೇಹಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಹಾಗಾಗಿ ಇವು ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸಲು ಮತ್ತು ಜೀವನಶೈಲಿಯನ್ನು ಸುಧಾರಿಸಲು ಬಳಸಬಹುದಾದ, ಜೊತೆಗೆ ಅವುಗಳಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗೆಗಿನ ಒಟ್ಟಾರೆ ಮಾಹಿತಿ ಇಲ್ಲಿದೆ.

ಅನ್ನದ ತಿಳಿ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ನೈಸರ್ಗಿಕ ಪಾನೀಯ ಎಂದರೆ ತಪ್ಪಾಗಲಾರದು. ಅಗತ್ಯ ಪೋಷಕಾಂಶಗಳು ಮತ್ತು ಸಂಯುಕ್ತಗಳಿಂದ ತುಂಬಿರುವ ಈ ನೀರು ಶತಮಾನಗಳಿಂದಲೂ ವಿವಿಧ ಆರೋಗ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಹಾಗಾಗಿ ಗರಿಷ್ಠ ಆರೋಗ್ಯ ಪ್ರಯೋಜನಗಳಿಗಾಗಿ ಅನ್ನದ ತಿಳಿಯನ್ನು ಬಳಸುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.

1. ಜೀರ್ಣಕಾರಿ ಸಮಸ್ಯೆಗಳ ನಿವಾರಣೆಗೆ ಸಹಕಾರಿ

2021 ರಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಅನ್ನದ ತಿಳಿಯು ಅಧಿಕ ಪೌಷ್ಟಿಕಾಂಶವನ್ನು ಹೊಂದಿರುತ್ತದೆ, ಇದು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಹಾಯ ಮಾಡುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಅತಿಸಾರ ಅಥವಾ ಹೊಟ್ಟೆ ನೋವು ನಿಮ್ಮನ್ನು ಭಾದಿಸುತ್ತಿದ್ದರೆ ಒಂದು ಸಣ್ಣ ಲೋಟ ಅನ್ನದ ತಿಳಿ ಕುಡಿಯಲು ಪ್ರಯತ್ನಿಸಿ. ಇದು ನಿಮ್ಮ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

2. ಮರುಜಲೀಕರಣ ಅಥವಾ ರೀಹೈಡ್ರೇಟ್ (Rehydration)

ಅನಾರೋಗ್ಯ ಅಥವಾ ತೀವ್ರವಾದ ದೈಹಿಕ ಚಟುವಟಿಕೆಯ ನಂತರ, ದೇಹವನ್ನು ಸರಿಯಾಗಿ ರೀಹೈಡ್ರೇಟ್ ಮಾಡುವುದು ಅತ್ಯಗತ್ಯ. ಅನ್ನದ ತಿಳಿ ನೈಸರ್ಗಿಕ ಎಲೆಕ್ಟ್ರೋಲೈಟ್ ಸಮತೋಲನವನ್ನು ನೀಡುತ್ತದೆ, ಇದು ಮರುಜಲೀಕರಣ ಅಥವಾ ರೀಹೈಡ್ರೇಟ್ ಆಗಲು ನಿಮಗೆ ಸೂಕ್ತ ಆಯ್ಕೆಯಾಗಿದೆ. ನಿರ್ಜಲೀಕರಣ ಮತ್ತು ಆಯಾಸವನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ.

3. ಚರ್ಮದ ಆರೈಕೆ

ಅನ್ನದ ತಿಳಿಯಲ್ಲಿ ವಿಟಮಿನ್​​​ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ನಿಮ್ಮ ಚರ್ಮದ ಸೌಂದರ್ಯ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಕಾಂತಿಯುತ ಚರ್ಮಕ್ಕಾಗಿ ಅನೇಕ ದೇಶಗಳಲ್ಲಿ ಇದನ್ನು ಸಾಂಪ್ರದಾಯಿಕ ಸೌಂದರ್ಯ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಇನ್ನು ಬಿಸಿಲಿನಿಂದ ಉಂಟಾಗುವ ಕಿರಿಕಿರಿಯನ್ನು ನಿವಾರಿಸಲು ನೀವು ಸ್ನಾನ ಮಾಡುವ ನೀರಿನೊಂದಿಗೆ ಸ್ವಲ್ಪ ಅನ್ನದ ತಿಳಿನ್ನು ಸೇರಿಸಿ ಸ್ನಾನ ಮಾಡಬಹುದು.

ಇದನ್ನೂ ಓದಿ: ಬಾದಾಮಿ ಆರೋಗ್ಯಕರವೇ? ಇದರ ಪ್ರಯೋಜನಗಳ ಜೊತೆ ಅಡ್ಡ ಪರಿಣಾಮಗಳನ್ನು ತಿಳಿಯಿರಿ

4. ಕೂದಲಿನ ಆರೈಕೆ

ಅನ್ನದ ತಿಳಿ, ನಿಮ್ಮ ಕೂದಲನ್ನು ಪೋಷಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿರುವ ಅಮೈನೋ ಆಮ್ಲಗಳು ಹಾನಿಗೊಳಗಾದ ಕೂದಲಿನ ರಂಧ್ರಗಳನ್ನು ಸರಿಪಡಿಸಲು ಮತ್ತು ಕೂದಲು ಒಡೆಯುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಕೂದಲಿಗೆ ಶಾಂಪೂ ಬಳಸಿದ ನಂತರ, ಹೊಳಪು ಮತ್ತು ಕೂದಲಿನ ಆರೋಗ್ಯಕ್ಕಾಗಿ ಅನ್ನದ ತಿಳಿಯಲ್ಲಿ ತೊಳೆಯಿರಿ.

5. ಆರೋಗ್ಯ ಕಾಪಾಡಿಕೊಳ್ಳಲು ಇದು ಉತ್ತಮ

ಅನಾರೋಗ್ಯದಿಂದ ರಕ್ಷಿಸಲು ಮತ್ತು ಸೂಕ್ತ ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹಕ್ಕೆ ರೋಗನಿರೋಧಕ ಶಕ್ತಿ ಅಗತ್ಯ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಟಿಸಿದ 2022ರ ಅಧ್ಯಯನವು ಅನ್ನದ ತಿಳಿಯಲ್ಲಿ ವಿಟಮಿನ್ ಬಿ, ಕಬ್ಬಿಣ, ಸತು ಮತ್ತು ಮೆಗ್ನೀಸಿಯಮ್ನಂತಹ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ ಅಕ್ಕಿ ನೀರಿನ ನಿಯಮಿತ ಸೇವನೆಯು ಸೋಂಕುಗಳು ಮತ್ತು ರೋಗಗಳ ವಿರುದ್ಧ ನಿಮ್ಮ ದೇಹದ ರಕ್ಷಣೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

6. ಮುಟ್ಟಿನ ಸೆಳೆತಕ್ಕೆ ಪರಿಹಾರ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಮುಟ್ಟಿನ ಸೆಳೆತವನ್ನು ಅನುಭವಿಸುವ ಮಹಿಳೆಯರಿಗೆ, ಅನ್ನದ ತಿಳಿ ನೈಸರ್ಗಿಕ ಪರಿಹಾರವಾಗಿದೆ. ಅನ್ನದ ತಿಳಿಯಲ್ಲಿರುವ ಗುಣಲಕ್ಷಣಗಳು ಸ್ನಾಯುಗಳ ಸಂಕೋಚನವನ್ನು ಶಮನಗೊಳಿಸಲು ಮತ್ತು ಮುಟ್ಟಿನ ಸಮಯದಲ್ಲಿ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮಗೆ ಹೊಟ್ಟೆ ನೋವು ಅಥವಾ ಸುಸ್ತು ಉಂಟಾದಾಗ ಒಂದು ಕಪ್​​​ನಲ್ಲಿ ಬೆಚ್ಚಗಿನ ಅನ್ನದ ತಿಳಿಯನ್ನು ಕುಡಿಯಿರಿ.

7. ತೂಕ ನಿರ್ವಹಣೆಗೆ ಸಹಕಾರಿ

ಅನ್ನದ ತಿಳಿ ನಿಮ್ಮ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಜೊತೆಗೆ ಅಕ್ಕಿ ಬೇಯಿಸಿದ ನೀರನ್ನು ಕುಡಿಯುವುದರಿಂದ ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವಾಗುವುದರಿಂದ ಊಟದ ನಡುವೆ ಪದೇ ಪದೇ ತಿಂಡಿ ಮಾಡುವ ಪ್ರಲೋಭನೆಯನ್ನು ಕಡಿಮೆ ಮಾಡುತ್ತದೆ. ಅಕ್ಕಿ ನೀರನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸುವುದು ಆರೋಗ್ಯಕ್ಕೆ ಒಳ್ಳೆಯದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: