ಮಕ್ಕಳಿಗೆ ಜ್ವರ ಬಂದಾಗ ಮನೆಯಲ್ಲಿಯೇ ಮಾಡಬಹುದಾದ ಸಾಂಪ್ರದಾಯಿಕ ಮನೆಮದ್ದುಗಳು ಇಲ್ಲಿದೆ

ಜ್ವರ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರೆ ಮನೆಯಲ್ಲಿಯೇ ಪ್ರಥಮ ಚಿಕಿತ್ಸೆ ಮಾಡಿಕೊಳ್ಳುವುದು ಪ್ರಮುಖ ಹಂತವಾಗಿದೆ. ಈ ಸಮಯದಲ್ಲಿ ಕೆಲವು ಮನೆ ಮದ್ದುಗಳ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು. ಅಂತಹ ಸರಳ ಮನೆಮದ್ದುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮಕ್ಕಳಿಗೆ ಜ್ವರ ಬಂದಾಗ ಮನೆಯಲ್ಲಿಯೇ ಮಾಡಬಹುದಾದ ಸಾಂಪ್ರದಾಯಿಕ ಮನೆಮದ್ದುಗಳು ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 01, 2023 | 6:56 PM

ಎಲ್ಲ ಮಕ್ಕಳಿಗೂ (Children) ಮಳೆಗಾಲ ಮತ್ತು ಚಳಿಗಾಲದಲ್ಲಿ ವಾತಾವರಣಕ್ಕೆ ಅನುಗುಣವಾಗಿ ಹೊಂದಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಈ ಸಮಯದಲ್ಲಿ ಜ್ವರ ಬರುವುದು ಸಹಜ, ಆದರೆ ಅದನ್ನು ಹೆಚ್ಚಾಗದಂತೆ ತಡೆಯಲು ಕೆಲವು ಮನೆ ಮದ್ದುಗಳ ಬಗ್ಗೆ ತಿಳಿದುಕೊಂಡರೆ ಉತ್ತಮ. ಸಣ್ಣ ಪುಟ್ಟ ಜ್ವರಕ್ಕೆಲ್ಲ ವೈದ್ಯರ (Doctor) ಬಳಿಗೆ ಹೋಗದೆ ಮನೆಮದ್ದುನಿಂದಲ್ಲೇ ಗುಣಪಡಿಸಬಹುದು. ಆದರೆ ಯಾವುದಕ್ಕಾದರೂ ನಿರ್ಲಕ್ಷ ಮಾಡಬಾರದು. ಹಾಗಾಗಿ ಕೆಲವು ಸರಳ ಮನೆ ಮದ್ದುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

-ಆಡುಸೋಗೆ ಸೊಪ್ಪಿನ ಬಗ್ಗೆ ನೀವು ಕೇಳಿರಬಹುದು. ಇದರಲ್ಲಿ ಹಲವಾರು ಔಷಧ ಗುಣಗಳಿದ್ದು ಎಷ್ಟೋ ವರ್ಷಗಳಿಂದ ಇದನ್ನು ಹಲವಾರು ರೋಗಗಳಿಗೆ ಮನೆಮದ್ದಾಗಿ ಬಳಸಲಾಗುತ್ತಿದೆ. ಈ ಗಿಡವನ್ನು ಆಡುಸೋಗೆ, ಅಡಸಾಲ, ಮತ್ತು ಆಡು ಮುಟ್ಟದ ಗಿಡ ಎಂದೆಲ್ಲ ಕರೆಯುತ್ತಾರೆ. ನೀವು ಇದನ್ನು ತೋಟದ ಬದಿಗಳಲ್ಲಿ, ಮನೆಯ ಹಿತ್ತಲ ಬೇಲಿಗಳಲ್ಲಿ ಹೆಚ್ಚಾಗಿ ಕಾಣಬಹುದು. ಇದರ ವೈಜ್ಞಾನಿಕ ಹೆಸರು ಆಡತೊಡ ಝೆಯ್ಲಾನಿಕಾ (Adhatoda Zeylanica). ಇದರ ಹೂಗಳು ತಿಳಿ ಗುಲಾಬಿ ಬಣ್ಣ ಹೊಂದಿರುತ್ತದೆ ಹಾಗೂ ಇದು ಗೊಂಚಲು ಹೂ ಬಿಡುತ್ತದೆ. ಇದರ ಕಾಯಿಗಳು ಚಪ್ಪಟೆಯಾಗಿರುತ್ತವೆ. ಇದರ ಕಾಂಡ ಹಸಿರು ಬಣ್ಣದಾಗಿರುತ್ತದೆ. ಇದಕ್ಕೆ ಮಾವಿನ ಎಲೆಗಳನ್ನು ಹೋಲುವ ಎಲೆಗಳಿರುತ್ತವೆ. ಇದು ನಿಮ್ಮ ಮನೆಯಲ್ಲಿಯೂ ಇದೇ ಎಂದಾದರೆ ಆದಷ್ಟು ಜೋಪಾನ ಮಾಡಿ. ಏಕೆಂದರೆ ಈ ಗಿಡವು ಅನೇಕ ರೋಗಗಳಿಗೆ ರಾಮಬಾಣವಾಗಿದೆ.

5 ವರ್ಷದ ಒಳಗಿನ ಮಕ್ಕಳಿಗೆ ಜ್ವರ ಬಂದಾಗ, ಆಡುಸೋಗೆ ಎಲೆಯನ್ನು ಚೆನ್ನಾಗಿ ತೊಳೆದು, ಬಳಿಕ ಅದನ್ನು ಬಟ್ಟೆಯಲ್ಲಿ ಒರೆಸಿ, ಬೆಂಕಿಯಲ್ಲಿ ಬಾಡಿಸಿ, ಬಳಿಕ ಮಕ್ಕಳನ್ನು ಬಿಸಿನೀರಿನಿಂದ ಸ್ನಾನ ಮಾಡಿಸಿ ನಂತರ ಅವರ ತಲೆಯ ಮೇಲೆ ಎಲೆಯನಿಟ್ಟು ಬಟ್ಟೆಯಿಂದ ಕಟ್ಟಿ ಮಲಗಿಸುವುದರಿಂದ ಜ್ವರ ಕಡಿಮೆಯಾಗುತ್ತದೆ. ಇದರ ಹೊರತಾಗಿ ಅನೇಕ ರೀತಿಯ ಉಪಯೋಗಗಳಿದ್ದು ವಾಂತಿ, ಕೆಮ್ಮು, ಭೇದಿ ಎಲ್ಲವನ್ನೂ ನಿಯಂತ್ರಿಸುವಲ್ಲಿ ಇದರ ಎಲೆಗಳು ಸಹಾಯ ಮಾಡುತ್ತದೆ.

-ಇನ್ನು ದೊಡ್ಡ ಪತ್ರೆ ಅಥವಾ ಸಾಂಬಾರ್ ಸೊಪ್ಪು, ಇದು ಒಂದು ಎಲೆ ಮುರಿದರೆ ಸಾಕು ಪರಿಮಳ ನಿಮ್ಮ ಸುತ್ತುವರಿಯುತ್ತದೆ. ಇದೆಲ್ಲದರ ಜೊತೆಗೆ ಇದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿದ್ದು, ಇದನ್ನು ಚಿಕ್ಕ ಮಕ್ಕಳಿಗೆ ಜ್ವರ ಬಂದಾಗ ಹೆಚ್ಚಾಗಿ ಉಪಯೋಗಿಸುತ್ತಾರೆ. ಇದನ್ನು ಬೆಂಕಿಯಲ್ಲಿ ಬಾಡಿಸಿ, ಅದರ ರಸ ತೆಗೆದು ಮಕ್ಕಳಿಗೆ ಕುಡಿಯಲು ನೀಡಬೇಕು. ಅದನ್ನು ಕುಡಿಯಲು ಸಾಧ್ಯವಾಗದಿದ್ದರೆ, ಸ್ವಲ್ಪ ಬೆಲ್ಲ ಬೆರೆಸಿ ಕುಡಿಯಲು ನೀಡಬಹುದು. ಇದರಿಂದ ತಟ್ಟನೆ ಜ್ವರ ಕಡಿಮೆಯಾಗುತ್ತದೆ.

-ಬಂಗಾರದ ಗುಣ ಹೊಂದಿರುವ ಬಜೆ ಬೇರು, ಇದು ಅಕೊರಸ್ ಕೆಲಾಮಸ್ (Acorus calamus L) ಎಂದು ಕರೆಯಲ್ಪಟ್ಟ ಬಜೆ ‘ಏರೇಸಿ’ ಕುಟುಂಬಕ್ಕೆ ಸೇರಿದ ಸಸ್ಯಮೂಲಿಕೆ. ಮಕ್ಕಳಿಗೆ ಜ್ವರ ಕಾಣಿಸಿಕೊಂಡಲ್ಲಿ ಬಜೆಯನ್ನು ಅರೆದು ತಿನ್ನಿಸುವುದರಿಂದ ಜ್ವರ ವಾಸಿಯಾಗುತ್ತದೆ. ಹಲ್ಲು ಹುಟ್ಟುವಾಗ ಮಕ್ಕಳಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಆಗಲೂ ಇದರ ರಸವನ್ನು ನಾಲಿಗೆಗೆ ಸರಿಯಾಗಿ ಹಚ್ಚುವುದರಿಂದ ಜ್ವರ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಮೊಡವೆ ನಿವಾರಣೆಗೆ ಸಿಂಪಲ್​​ ಮನೆಮದ್ದು

-ಇನ್ನು ವಿಶಿಷ್ಟ ಆರೋಗ್ಯ ಗುಣವನ್ನು ಹೊಂದಿರುವ ಧನಿಯಾ/ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆಸಿ ಬಳಸುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಜೊತೆಗೆ ಸಣ್ಣ ಮಕ್ಕಳಿಗೆ ಜ್ವರ ಬಂದಾಗ ಬಿಸಿ ನೀರಿಗೆ ಕೊತ್ತಂಬರಿ ಬೀಜಗಳನ್ನು ಸ್ವಲ್ಪ ಕುಟ್ಟಿ ಪುಡಿ ಮಾಡಿ ಹಾಕಿ, ಚೆನ್ನಾಗಿ ಕುದಿಸಿದ ಬಳಿಕ, ಬೇಕಾದಲ್ಲಿ ಸ್ವಲ್ಪ ಬೆಲ್ಲ ಸೇರಿಸಿ ಮಕ್ಕಳಿಗೆ ಕುಡಿಸುವುದರಿಂದ ಜ್ವರ ಕಡಿಮೆಯಾಗುತ್ತದೆ. ದೇಹದ ಉಷ್ಣತೆಯೂ ಹಿಡಿತಕ್ಕೆ ಬರುತ್ತದೆ.

ಮಕ್ಕಳಲ್ಲಿ ಕೆಲವು ಜ್ವರಗಳು ಒಂದೆರಡು ದಿನಗಳಿದ್ದರೆ, ಇನ್ನೂ ಕೆಲ ಜ್ವರ ಸಾಕಷ್ಟು ದಿನಗಳ ಕಾಲ ಇರುತ್ತದೆ. ಜ್ವರ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರೆ ಮನೆಯಲ್ಲಿಯೇ ಪ್ರಥಮ ಚಿಕಿತ್ಸೆ ಮಾಡಿಕೊಳ್ಳುವುದು ಮೊದಲ ಮತ್ತು ಪ್ರಮುಖ ಹಂತವಾಗಿದೆ. ಲಕ್ಷಣ ಹೆಚ್ಚಾದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!