Ganesha Chaturthi 2024: ತೂಕ ಕಡಿಮೆ ಮಾಡಿಕೊಳ್ಳಲು ಮೋದಕ ಸೇವನೆ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 28, 2024 | 5:35 PM

Ganesha Chaturthi: ಗಜಮುಖನಿಗೆ ಪ್ರೀಯವಾದ ವಸ್ತುಗಳಲ್ಲಿ ಮೋದಕವು ಒಂದು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿ ಗಣಪನ ಪ್ರತಿಯೊಂದು ಪೂಜೆಯಲ್ಲೂ ಮೋದಕ ಅರ್ಪಿಸುವುದು ರೂಢಿ. ಇದು ಕೇವಲ ಬಾಯಿಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಮೋದಕವನ್ನು ಅಕ್ಕಿ ಇನ್ನು ಕೆಲವರು ಗೋಧಿ ಹಿಟ್ಟು ತೆಂಗಿನಕಾಯಿ, ತುಪ್ಪ ಮತ್ತು ಬೆಲ್ಲದಿಂದ ತಯಾರಿಸಲಾಗುತ್ತದೆ. ಹಾಗಾಗಿ ಇದರಲ್ಲಿ ಬಳಸುವ ಎಲ್ಲಾ ಪದಾರ್ಥಗಳು ದೇಹಕ್ಕೆ ತುಂಬಾ ಒಳ್ಳೆಯದು ಅಲ್ಲದೆ ಇದು ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ.

Ganesha Chaturthi 2024: ತೂಕ ಕಡಿಮೆ ಮಾಡಿಕೊಳ್ಳಲು ಮೋದಕ ಸೇವನೆ ಮಾಡಿ
ಸಾಂದರ್ಭಿಕ ಚಿತ್ರ
Follow us on

ಇನ್ನೇನು ಚೌತಿ ಹಬ್ಬ ಬರುತ್ತಿದೆ. ಹಾಗಾಗಿ ಗಣೇಶನ ಹಬ್ಬಕ್ಕೆ ತಯಾರಿ ಆರಂಭವಾಗಿರುವುದರ ಜೊತೆ ಜೊತೆಗೆ ವಿವಿಧ ರೀತಿಯ ಸಿದ್ದತೆಗಳು ನಡೆಯುತ್ತಿರುತ್ತದೆ. ಗಜಮುಖನಿಗೆ ಪ್ರೀಯವಾದ ವಸ್ತುಗಳಲ್ಲಿ ಮೋದಕವು ಒಂದು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿ ಗಣಪನ ಪ್ರತಿಯೊಂದು ಪೂಜೆಯಲ್ಲೂ ಮೋದಕ ಅರ್ಪಿಸುವುದು ರೂಢಿ. ಇದು ಕೇವಲ ಬಾಯಿಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಮೋದಕವನ್ನು ಅಕ್ಕಿ ಇನ್ನು ಕೆಲವರು ಗೋಧಿ ಹಿಟ್ಟು ತೆಂಗಿನಕಾಯಿ, ತುಪ್ಪ ಮತ್ತು ಬೆಲ್ಲದಿಂದ ತಯಾರಿಸಲಾಗುತ್ತದೆ. ಹಾಗಾಗಿ ಇದರಲ್ಲಿ ಬಳಸುವ ಎಲ್ಲಾ ಪದಾರ್ಥಗಳು ದೇಹಕ್ಕೆ ತುಂಬಾ ಒಳ್ಳೆಯದು ಅಲ್ಲದೆ ಇದು ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ.

ಮೋದಕವನ್ನು ತಿನ್ನುವುದರಿಂದ ಯಾವ ರೀತಿಯ ಆರೋಗ್ಯ ಪ್ರಯೋಜನ ಸಿಗುತ್ತೆ ನೋಡಿ;

  • ಸಾಮಾನ್ಯವಾಗಿ ಮೋದಕ ತಯಾರಿಸುವಾಗ ರುಚಿ ಹೆಚ್ಚಾಗಲು ತುಪ್ಪವನ್ನು ಬಳಸಲಾಗುತ್ತದೆ. ಇದರಲ್ಲಿ ಬಳಕೆಯಾಗುವ ಶುದ್ಧ ತುಪ್ಪ ಮೋದಕದ ರುಚಿ ಮಾತ್ರವಲ್ಲ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.
  • ತುಪ್ಪವು ದೇಹದಿಂದ ವಿಷವನ್ನು ಹೊರ ಹಾಕಲು ಸಹಾಯ ಮಡುತ್ತದೆ. ಅಲ್ಲದೆ ಇದರಲ್ಲಿ ವಿಟಮಿನ್ ಕೆ ಸಮೃದ್ಧವಾಗಿದ್ದು, ಇದು ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ತುಪ್ಪದಲ್ಲಿ ಕಂಡು ಬರುವ ಬ್ಯುಟರಿಕ್ ಆಮ್ಲವು ಕೀಲುಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
  • ಮೋದಕದ ಒಳಗೆ ಹಾಕುವ ಹೂರಣವನ್ನು ಬೆಲ್ಲ ಮತ್ತು ತೆಂಗಿನಕಾಯಿ ತುರಿಯಿಂದ ತಯಾರಿಸಲಾಗುತ್ತದೆ. ಹಾಗಾಗಿ ಬೆಲ್ಲ ಮತ್ತು ತೆಂಗಿನ ತುರಿಯಲ್ಲಿ ಮ್ಯಾಂಗನೀಸ್ ಅಂಶ ಹೆಚ್ಚಾಗಿ ಇರುತ್ತದೆ. ಅಲ್ಲದೆ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕೂಡ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
  • ಮೋದಕ ಸೇವನೆಯು ಥೈರಾಯ್ಡ್ ಗ್ರಂಥಿಗಳನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೆ ಇದರಲ್ಲಿ ಗ್ಲೈಸೆಮಿಕ್ ಸೂಚಿಯು ಬಹಳ ಕಡಿಮೆಯಿದ್ದು ಮಧುಮೇಹವನ್ನೂ ನಿಯಂತ್ರಿಸುತ್ತದೆ.
  • ಬೆಲ್ಲ ತೂಕ ಇಳಿಕೆಗೆ ಒಳ್ಳೆಯ ತಿಂಡಿ ಎನ್ನಬಹುದು. ಹಬ್ಬದ ಸಂದರ್ಭಗಳಲ್ಲಿ ಸಿಹಿ ತಿಂಡಿ ತಿನ್ನಬೇಕು ಎಂದು ಎನಿಸುವುದು ಸಹಜ. ಆದರೆ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಮೋದಕವನ್ನು ಸೇವನೆ ಮಾಡಬಹುದು. ಇದರಿಂದ ನಿಮ್ಮ ತೂಕ ಹೆಚ್ಚಾಗುವುದಿಲ್ಲ. ಜೊತೆಗೆ ಸಿಹಿ ತಿನ್ನುವ ಆಸೆಯೂ ಈ ಡೇರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ