ನಿಮ್ಮ ದೈನಂದಿನ ಜೀವನಕ್ರಮವು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಉಂಟಾಗುತ್ತದೆ. ಒತ್ತಡದ ಜೀವನಶೈಲಿಯಿಂದಾಗಿ ಇಂದು ವಯಸ್ಕರಿಗಿಂತ ಹೆಚ್ಚಾಗಿ ಯುವಕರಲ್ಲಿಯೇ ಸಾಕಷ್ಟು ಅಪಾಯಕಾರಿ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ. ಇದರಲ್ಲಿ ಪ್ರಮುಖವಾದುದು ನಿದ್ದೆ. ಹೌದು ನಿಮ್ಮ ದೈನಂದಿನ ದಿನಚರಿಯನ್ನು ನಿದ್ದೆಗೆ ಸರಿಯಾದ ಸಮಯವನ್ನು ಮೀಸಲಿಡದಿದ್ದರೆ ಅದು ನಿಮ್ಮ ಜೀರ್ಣಕ್ರಿಯೆಯ ಮೇಲೆ ನೇರವಾಗಿ ಪರಿಣಾಮವನ್ನುಂಟು ಮಾಡುತ್ತದೆ. ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದಿರುವುದು ಕರುಳಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಉತ್ತೇಜಿಸಬಹುದು. ಈ ರೀತಿಯ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಯ ಆರೋಗ್ಯವನ್ನು ಹಾಳುಮಾಡುತ್ತದೆ, ಆದರೆ ಅವು ಉತ್ತಮ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ನಿದ್ರೆ ಮತ್ತು ಎಚ್ಚರಗೊಳ್ಳುವ ಸಮಯದ ನಡುವಿನ 90 ನಿಮಿಷಗಳ ಅಂತರವು ಸೂಕ್ಷ್ಮಜೀವಿಯ ಮೇಲೆ ಪರಿಣಾಮ ಬೀರಬಹುದು, ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಆದ್ದರಿಂದ ಆರೋಗ್ಯದ ಮೇಲೆ ನಿದ್ರಾಹೀನತೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಇದನ್ನೂ ಓದಿ: ಎಳ್ಳು ಸೇವನೆ ಎಂಬ ಮನೆಮದ್ದು: ಪ್ರತಿದಿನ ಒಂದು ಚಮಚ ಎಳ್ಳು ಸೇವಿಸಿದರೆ ನಿಮ್ಮ ಆರೋಗ್ಯ ಹೀಗೆ ಕಾಪಾಡಿಕೊಳ್ಳಬಹುದು
ನಿದ್ರೆಯ ಕೊರತೆಯು ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಕಾರಣದಿಂದಾಗಿ ಪ್ರತಿ ರಾತ್ರಿ 6-8 ಗಂಟೆಗಳ ನಿರಂತರ ನಿದ್ರೆಯನ್ನು ಮಾಡಬೇಕು. ಕಿಂಗ್ಸ್ ಕಾಲೇಜ್ ಲಂಡನ್‌ನ ಸಂಶೋಧಕರ ಈ ಸಂಶೋಧನೆಯ ಪ್ರಕಾರ, ನಿದ್ರೆಯ ಮಾದರಿಗಳಲ್ಲಿನ ಸಣ್ಣ ವೈಪರೀತ್ಯಗಳು ಸಹ ದೇಹದ ಜೈವಿಕ ಲಯಗಳ ಮೇಲೆ ಪರಿಣಾಮ ಬೀರುತ್ತವೆ ಸಂಶೋಧಕರು ಕಂಡುಕೊಂಡಿದ್ದಾರೆ.
ಲಂಡನ್‌ನ ಕಿಂಗ್ಸ್ ಕಾಲೇಜ್‌ನ ಸಂಶೋಧನೆಯ ಹಿರಿಯ ಲೇಖಕ ಡಾ ವೆಂಡಿ ಹಾಲ್ ಪ್ರಕಾರ ನಿದ್ರಾ ಭಂಗ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಕರುಳಿನಲ್ಲಿರುವ ಸೂಕ್ಷ್ಮಜೀವಿಗಳ ಸಂಯೋಜನೆಯು ಜೀರ್ಣಕ್ರಿಯೆಯಿಂದ ಚಯಾಪಚಯ ಕ್ರಿಯೆಯವರೆಗೆ ಎಲ್ಲದರ ಮೇಲೆ ಪ್ರಭಾವ ಬೀರುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ನಿದ್ರೆಯ ಕೊರತೆಯು ಕರುಳಿನಲ್ಲಿನ ಕೆಟ್ಟ ಸೂಕ್ಷ್ಮಜೀವಿಯನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ. ಕಳಪೆ ಆಹಾರದ ಗುಣಮಟ್ಟ, ಸ್ಥೂಲಕಾಯತೆ ಮತ್ತು ಕಾರ್ಡಿಯೋಮೆಟಬಾಲಿಕ್ ಆರೋಗ್ಯವು ಹೃದಯಾಘಾತ, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಕೊರತೆಯಿಂದಾಗಿ, ಜೀರ್ಣಕಾರಿ ಆರೋಗ್ಯವು ಹದಗೆಡುತ್ತದೆ, ಇದು ಈ ರೋಗಗಳ ಬೆಳವಣಿಗೆಗೆ ಕಾರಣವಾಗಬಹುದು ಎಂದು ಅಧ್ಯಯನವು ಕಂಡುಹಿಡಿದಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: