ಒತ್ತಡದ ಜೀವನಶೈಲಿ(Stress Lifestyle)ಯು ಆಹಾರದ ವಿಷಯಕ್ಕೆ ಬಂದಾಗ ಸುಲಭವಾಗಿ ಲಭ್ಯವಿರುವ ಪ್ಯಾಕೆಟ್ ಪುಡ್ಗಳತ್ತ ವಾಲುವಂತೆ ಮಾಡುತ್ತದೆ. ಜೊತೆಗೆ ಈ ಆಹಾರ ಕ್ರಮವು ದೈನಂದಿನ ದಿನಚರಿಯ ಒಂದು ಭಾಗವಾಗಿ ಬಿಡುತ್ತದೆ. ಆದರೆ ಕಡಿಮೆ ಬೆಲೆಯ ಜೊತೆಗೆ ಸುಲಭವಾಗಿ ಸವಿಯಬಹುದಾದ ಪ್ಯಾಕೆಟ್ ಪುಡ್ (Packed Food)ಗಳನ್ನು ಸವಿಯುವ ಮೊದಲು ಅದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮವನ್ನು ಬೀರುತ್ತದೆ ಎಂಬುದು ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.
ಸಂಸ್ಕರಿಸಿದ ಆಹಾರಗಳು ಕೃತಕ ಪದಾರ್ಥಗಳನ್ನು ಒಳಗೊಂಡಿರುತ್ತವೆ. ಜೊತೆಗೆ ಕೊಬ್ಬು, ಸಕ್ಕರೆ ಮತ್ತು ಉಪ್ಪು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದಲ್ಲದೇ ದೀರ್ಘಕಾಲದ ವರೆಗೆ ಆಹಾರವನ್ನು ಹಾಳಾಗದಂತೆ ತಾಜಾವಾಗಿಡಲು ಸಾಕಷ್ಟು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕಗಳು ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮವನ್ನು ಬೀರಬಹುದು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ. ಹೀಗಾಗಿ, ಈ ಸೇರ್ಪಡೆಗಳು ಮತ್ತು ಅವುಗಳಿಗೆ ಒಡ್ಡಿಕೊಳ್ಳುವಿಕೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.
ಇದನ್ನೂ ಓದಿ: ಎಳ್ಳು ಸೇವನೆ ಎಂಬ ಮನೆಮದ್ದು: ಪ್ರತಿದಿನ ಒಂದು ಚಮಚ ಎಳ್ಳು ಸೇವಿಸಿದರೆ ನಿಮ್ಮ ಆರೋಗ್ಯ ಹೀಗೆ ಕಾಪಾಡಿಕೊಳ್ಳಬಹುದು
ಅಮೇರಿಕಾ ಮತ್ತು ಯುರೋಪ್‌ನಲ್ಲಿನ ದೀರ್ಘಾವಧಿಯ ಅಧ್ಯಯನಗಳ ಪ್ರಕಾರ ಹೆಚ್ಚು ಸಂಸ್ಕರಿಸಿದ ಪ್ಯಾಕೆಟ್ ಪುಡ್ ಸೇವಿಸುವುದರಿಂದ ಸ್ಥೂಲಕಾಯತೆ , ಅಧಿಕ ರಕ್ತದೊತ್ತಡ , ಟೈಪ್ 2 ಮಧುಮೇಹ ಮತ್ತು ಬುದ್ಧಿಮಾಂದ್ಯತೆಯ ಹೆಚ್ಚಳ ಸೇರಿದಂತೆ ಹಲವಾರು ಆರೋಗ್ಯ ಅಪಾಯಗಳಿಗೆ ಸಂಬಂಧಿಸಿವೆ ಎಂದು ಬಹಿರಂಗಪಡಿಸಿದೆ. ಇದಲ್ಲದೇ ಸ್ಪೇನ್ ಮತ್ತು ಫ್ರಾನ್ಸ್‌ನಲ್ಲಿನ ಸಂಶೋಧಕರ ಅಧ್ಯಯನವೊಂದರ ಪ್ರಕಾರ ಹೆಚ್ಚು ಸಂಸ್ಕರಿಸಿದ ಆಹಾರಗಳು ಪ್ರಾಣಕ್ಕೆ ಕುತ್ತು ತರಬಹುದು ಎಂದು ಎಚ್ಚರಿಸಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: