Kannada News Health Health benefits of auspicious traditional medicinal plant Bilva Patra tree in Kannada
Bilva Patra: ಬಿಲ್ವ ಪತ್ರೆ -ಈ ಪವಿತ್ರ ಮರದಲ್ಲಿದೆ 12 ಔಷಧೀಯ ಗುಣಲಕ್ಷಣಗಳು, ವಿವರ ಇಲ್ಲಿದೆ
ಒಂದು ಚಮಚ ತಾಜಾ ಎಲೆಯ ರಸ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದು ಕೊಂಡರೆ ಶುಗರ್ ನಾರ್ಮಲ್ ಬರುತ್ತದೆ. ಬಿಲ್ವ ಪತ್ರೆಯ ರಸವನ್ನು ಅಕ್ಕಿ ತೊಳೆದ ನೀರಿನಲ್ಲಿ ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ ಎರಡು ಮೂರು ಬಾರಿ ಗರ್ಭಿಣಿಯರು ಸೇವಿಸಿದರೆ ವಾಂತಿ ಭೇದಿ ನಿಲ್ಲುತ್ತದೆ.
ಬಿಲ್ವ ಪತ್ರೆ -ಈ ಪವಿತ್ರ ಮರದಲ್ಲಿದೆ 12 ಔಷಧೀಯ ಗುಣಲಕ್ಷಣಗಳು, ವಿವರ ಇಲ್ಲಿದೆ
ಇದು ಹಿಂದೂ ಧರ್ಮದಲ್ಲಿ ಪವಿತ್ರ ಮರ. ಶಿವನಿಗೆ ಪ್ರತಿದಿನ ಮತ್ತು ವಿಶೇಷವಾಗಿ ಮಹಾಶಿವರಾತ್ರಿಯ ಮಹಾ ದಿನ ಬಿಲ್ವಪತ್ರೆಯಿಂದ ಶಿವನನ್ನು ಪೂಜಿಸಿದರೆ, ಶಿವನ ವಿಶೇಷ ಅನುಗ್ರಹ ಸಿಗುತ್ತದೆ ಎಂಬುದು ನಂಬಿಕೆ. ಆಯುರ್ವೇದದ ಪ್ರಕಾರ ಬಿಲ್ವ ಪತ್ರೆಯಲ್ಲಿನ ಔಷಧೀಯ ಗುಣ ಉಪಯೋಗಗಳನ್ನು ಮನಗಂಡ ಹಿರಿಯರು ದೇವರ ಪೂಜೆಯ ನೆಪದಲ್ಲಿ ಬಿಲ್ವ ಪತ್ರೆಯನ್ನು ನಮ್ಮೊಂದಿಗೆ ಬೆರೆಸಿ ಬೆಳೆಸಿ ವನದ ರೂಪ ಕೊಟ್ಟಿದ್ದಾರಾ ಎಂಬುದು ಸೋಜಿಗ.
ಊಟದ ನಂತರ ಬಿಲ್ವದ ಹಣ್ಣಿಗೆ ಸ್ವಲ್ಪ ಸಕ್ಕರೆ ಮತ್ತು ಜೀನುತುಪ್ಪ ಸೇರಿಸಿ ತಿಂದರೆ ಕಫ ನಿವಾರಣೆಯಾಗುತ್ತದೆ
ನೆಗಡಿಯಾದಾಗ ಬಿಲ್ವಪತ್ರೆಯ ರಸವನ್ನು ಸ್ವಲ್ಪ ಸ್ವಲ್ಪವೇ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ
ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮುಂಜಾನೆ ಎದ್ದಕೂಡಲೇ ಒಂದು ಬಿಲ್ವದ ಎಲೆಯನ್ನು 2-3 ಕಾಳುಮೆಣಸಿನೊಂದಿಗೆ ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನಬೇಕು
ಬಿಲ್ವಪತ್ರೆಯನ್ನು ಅರೆದು ಅರ್ಧಗಂಟೆಯ ಕಾಲ ತಲೆಗೆ ಲೇಪಿಸಿಕೊಳ್ಳಬೇಕು. ಇದರಿಂದ ತಲೆ ಹೊಟ್ಟು ಮತ್ತು ಹೇನು ಬೀಳುವುದು ನಿವಾರಣೆಯಾಗುತ್ತದೆ.. ಅಕಾಲ ನರೆಕೂದಲು ಸಮಸ್ಯೆಯೂ ನಿವಾರಣೆಯಾಗುತ್ತದೆ
ವಾತದ ದೋಷಗಳನ್ನು ನಿವಾರಿಸುವ ಗುಣ ಬೇರಿನಲ್ಲಿದೆ. ಬಿಲ್ವದ ಹಸಿಕಾಯಿ ಕಫ ಮತ್ತು ವಾತ ನಿವಾರಕವಾಗಿದೆ
ಬಿಲ್ವದ ಹಣ್ಣು ಹಸಿವು ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಹೊಟ್ಟೆ ನೋವು ಮತ್ತು ಭೇದಿಗೆ ಚಿಕಿತ್ಸೆ ಮಾಡಲು ನೆರವಾಗುತ್ತದೆ. ಪಕ್ವವಾದ ಬಿಲ್ವದ ಹಣ್ಣು ವಾತ ಪಿತ್ತವನ್ನು ಹೆಚ್ಚಿಸುತ್ತದೆ. ಕಫವನ್ನು ಕಡಿಮೆ ಮಾಡುತ್ತದೆ
ಬಿಲ್ವ ಪತ್ರೆ ಹಣ್ಣಿನ ಸೇವನೆ ಮಾಡಿದರೆ ಅಜೀರ್ಣ, ಅತಿಸಾರ, ರಕ್ತದಿಂದಾಗುವ ತೊಂದರೆಗಳು ಪಿತ್ತ, ವಾತ, ಕಫ, ಕಡಿಮೆಯಾಗುತ್ತದೆ
ಪಕ್ವಗೊಂಡ ಹಣ್ಣುಗಳನ್ನು ತಿರುಳು ತೆಗೆದು ಒಣಗಿಸಿ ಕಾಲು ಚಮಚ ಪುಡಿಯನ್ನು ಹಾಲು ಅಥವಾ ನೀರು ಸೇರಿಸಿ ಕುಡಿಯುವುದರಿಂದ ದೇಹಪುಷ್ಟಿ ಆಗುತ್ತದೆ. ತಿರುಳನ್ನು ನುಣ್ಣಗೆ ರುಬ್ಬಿ ಎಳ್ಳೆಣ್ಣೆ ಸೇರಿಸಿ ಬೆರಣಿಯಲಿ ತೆಳುವಾದ ಬಟ್ಟೆಯನ್ನು ಸುತ್ತಿ 10 ದಿನ ಬಿಸಿಲಿನಲ್ಲಿ ಇಟ್ಟು ನಂತರ ಸೋಸಿ ಗಾಳಿಯಾಡದಂತೆ ಇಡಬೇಕು. ಇದು ಸುಟ್ಟ ಗಾಯಕ್ಕೆ ಒಳ್ಳೆಯ ಮೆಡಿಸಿನ್
ಬಿಲ್ವ ಪತ್ರೆ ಮರದ ಅಂಟನ್ನು ಪಾನಕ ಮಾಡಿ ಕುಡಿಯುವುದರಿಂದ ಅತಿಸಾರ ಗುಣವಾಗುತ್ತದೆ. ಅಂಟಿನೊಂದಿಗೆ ದನಿಯಾ ಮತ್ತು ಕಲ್ಲು ಸಕ್ಕರೆ ಸೇರಿಸಿ ಕಷಾಯ ಮಾಡಿ ಕುಡಿದರೆ ಕಾಲರಾ ಗುಣವಾಗುತ್ತದೆ
ಬಿಲ್ವ ಪತ್ರೆಯ ರಸವನ್ನು ಅಕ್ಕಿ ತೊಳೆದ ನೀರಿನಲ್ಲಿ ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ ಎರಡು ಮೂರು ಬಾರಿ ಗರ್ಭಿಣಿಯರು ಸೇವಿಸಿದರೆ ವಾಂತಿ ಭೇದಿ ನಿಲ್ಲುತ್ತದೆ
ಒಂದು ಚಮಚ ತಾಜಾ ಎಲೆಯ ರಸ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದು ಕೊಂಡರೆ ಶುಗರ್ ನಾರ್ಮಲ್ ಬರುತ್ತದೆ. ಬಿಲ್ವ ಪತ್ರೆಯ ತಾಜಾ ಎಲೆಯ ರಸ ಅರೆದು ಪೇಸ್ಟ್ ಮಾಡಿ ಗಾಯಕ್ಕೆ ಹಚ್ಚಿದರೆ ಗುಣವಾಗುತ್ತದೆ. ತಾಜಾ ಎಲೆಯನ್ನು ಅರೆದು ಪೇಸ್ಟ್ ಮಾಡಿ ಕಣ್ಣಿಗೆ ಪಟ್ಟಿ ಕಟ್ಟಿದರೆ ಕಣ್ಣು ಉರಿ ನೋವು ಗುಣವಾಗುತ್ತದೆ.
ಎಲೆಯ ರಸದಲ್ಲಿ ಶುದ್ಧ ಆಕಳು ತುಪ್ಪವನ್ನು ಸೇರಿಸಿ ಸೇವಿಸಿದರೆ ಹೃದಯ ಬಲವಾಗುತ್ತದೆ. (ಲೇಖನ: ಸುಮನಾ ಮಳಲಗದ್ದೆ)