ಪ್ರಸ್ತುತ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ನಿಮ್ಮ ಜೀವನಶೈಲಿಯಲ್ಲಿ ಸುಧಾರಣೆ ಮಾಡಿಕೊಳ್ಳುವುದರ ಜೊತೆಗೆ ನೀವು ಸೇವಿಸುವ ಆಹಾರದಲ್ಲಿಯೂ ಬದಲಾವಣೆಗಳನ್ನು ಮಾಡಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆರೋಗ್ಯಕರ ಆಹಾರದ ಆಯ್ಕೆಯಲ್ಲಿ ಮೆಂತ್ಯ ಸೊಪ್ಪು ಒಂದು ಉತ್ತಮ ಪದಾರ್ಥವಾಗಿದೆ. ವಾಸ್ತವದಲ್ಲಿ, ಮೆಂತ್ಯ ಬೀಜ ಮತ್ತು ಸೊಪ್ಪಿನ ಪ್ರಯೋಜನಗಳ ಬಗ್ಗೆ ನೀವು ಅನೇಕ ಬಾರಿ ಕೇಳಿರಬಹುದು ಅಥವಾ ಓದಿರಬಹುದು. ಈ ಸೊಪ್ಪನ್ನು ಸೇವನೆ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾದರೆ ಇದು ನಮ್ಮ ಆರೋಗ್ಯಕ್ಕೆ ಹೇಗೆ ಉತ್ತಮ? ಇದರಿಂದ ಸಿಗುವ ಉಪಯೋಗವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಉತ್ತರ ಭಾರತದಲ್ಲಿ ಅನೇಕರು ಮೆಂತ್ಯ ಪರೋಟಗಳನ್ನು ಪ್ರತಿನಿತ್ಯ ಸೇವನೆ ಮಾಡುತ್ತಾರೆ. ಏಕೆಂದರೆ ಇದು ರೋಗಕ್ಕೆ ಹಾನಿ ಮಾಡದ ಉತ್ತಮ ಆಹಾರ ಪದಾರ್ಥವಾಗಿದೆ. ತಜ್ಞರು ಹೇಳುವ ಪ್ರಕಾರ, ಪ್ರತಿದಿನ ಮೆಂತ್ಯ ಅಥವಾ ಮೆಂತ್ಯ ಎಲೆಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಇದನ್ನು ತಿನ್ನುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಈ ಎಲೆಗಳಲ್ಲಿರುವ ಮಧುಮೇಹ ವಿರೋಧಿ ಗುಣಲಕ್ಷಣಗಳಿಂದಾಗಿ, ಇದು ಮಧುಮೇಹ ರೋಗಿಗಳಿಗೆ ನೀಡಬಹುದಾದ ಸರಿಯಾದ ಆಹಾರವಾಗಿದೆ.
ಮೆಂತ್ಯ ಬೀಜ ಮತ್ತು ಎಲೆಗಳಲ್ಲಿ ಮಧುಮೇಹ ವಿರೋಧಿ ಗುಣಲಕ್ಷಣಗಳಿವೆ. ಅಲ್ಲದೆ ಕಳೆದ ಕೆಲವು ವರ್ಷಗಳಿಂದ, ಮೆಂತ್ಯ ಬೀಜ ಮತ್ತು ಸೊಪ್ಪಿನ ಔಷಧೀಯ ಗುಣಗಳ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಸೌದಿ ಅರೇಬಿಯಾದ ವಿಶ್ವವಿದ್ಯಾಲಯವೊಂದರಲ್ಲಿ ನಡೆಸಿದ ಅಧ್ಯಯನವು ಮೆಂತ್ಯ ಬೀಜಗಳು ಆಂಟಿಡಯಾಬೆಟಿಕ್, ಆಂಟಿಕಾನ್ಸರ್, ಆಂಟಿಮೈಕ್ರೊಬಿಯಲ್, ಬಂಜೆತನ ವಿರೋಧಿ, ಆಂಟಿಪರಾಸಿಟಿಕ್ ಹಾಲುಣಿಸುವ ಉತ್ತೇಜಕ ಮತ್ತು ಹೈಪೊಕೊಲೆಸ್ಟರಾಲೆಮಿಕ್ ಗುಣಲಕ್ಷಣಗಳನ್ನು ಹೊಂದಿವೆ ಎಂದು ಕಂಡು ಹಿಡಿದಿದೆ. ಹಾಗಾಗಿ ಇದು ನಮ್ಮ ದೇಹಕ್ಕೆ ಅತ್ಯುತ್ತಮ ಆಹಾರವಾಗಿದೆ.
ಮೆಂತ್ಯವು ಪ್ರೋಟೀನ್ ಮತ್ತು ಫೈಬರ್ ನಿಂದ ಸಮೃದ್ಧವಾಗಿದೆ, ಅದರ ಜೈವಿಕ ಸಕ್ರಿಯ ಸಂಯುಕ್ತಗಳಿಂದಾಗಿ, ಇದನ್ನು ಔಷಧಿಯಾಗಿ ಬಳಸಬಹುದು. ಮೆಂತ್ಯ ಬೀಜ ಮತ್ತು ಅವುಗಳ ಎಲೆಗಳನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಔಷಧಿಗಳಾಗಿ ಬಳಸಬಹುದು ಎಂದು ಸಂಶೋಧನೆ ತೋರಿಸಿದೆ. ಇದನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದು.
ಇದನ್ನೂ ಓದಿ: ಕರ್ಪೂರ ಪೂಜೆಗೆ ಮಾತ್ರವಲ್ಲ ಆರೋಗ್ಯಕ್ಕೂ ಪ್ರಯೋಜನಕಾರಿ
ಮಧುಮೇಹಕ್ಕೆ ಮೆಂತ್ಯ ಬೀಜಗಳ ಪ್ರಯೋಜನಗಳ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಅದರಲ್ಲಿ ತಿಳಿಸಿರುವಂತೆ ಮೆಂತ್ಯದ ಬಳಕೆಯು ವ್ಯಕ್ತಿಯಲ್ಲಿ ಟೈಪ್ 1 ಮತ್ತು ಟೈಪ್ 2 ಮಧುಮೇಹಕ್ಕೆ ಸಂಬಂಧಿಸಿದ ರೋಗಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ ಎಂಬುದು ಕಂಡು ಬಂದಿದೆ. ಇದನ್ನು ಆಹಾರದಲ್ಲಿ ಸೇವನೆ ಮಾಡುವುದರಿಂದ, ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವೂ ಕಡಿಮೆಯಾಗುತ್ತದೆ. ರೋಗಿಯ ಗ್ಲೂಕೋಸ್ ಮಟ್ಟವು ಗಮನಾರ್ಹವಾಗಿ ಸುಧಾರಿಸುತ್ತದೆ.
ಮೆಂತ್ಯದಲ್ಲಿರುವ ಆಂಟಿವೈರಲ್ ಗುಣಲಕ್ಷಣಗಳು ಗಂಟಲು ನೋವಿಗೆ ಶಕ್ತಿಯುತ ಪರಿಹಾರವಾಗಿದೆ. ಅಲ್ಲದೆ ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಕೂದಲು ಉದುರುವಿಕೆ, ಮಲಬದ್ಧತೆ, ಕರುಳಿನ ಆರೋಗ್ಯ ಸಮಸ್ಯೆ, ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ, ಪುರುಷ ಬಂಜೆತನ ಮತ್ತು ಇತರ ರೀತಿಯ ಲೈಂಗಿಕ ದೌರ್ಬಲ್ಯಗಳಿಗೆ ಮದ್ದಾಗಿ ನೀಡಲು ಮೆಂತ್ಯ ಬೀಜ ಮತ್ತು ಸೋಪು ಪರಿಣಾಮಕಾರಿ ಎಂಬುದು ಕಂಡುಬಂದಿದೆ.
(ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ನಿಮಗೆ ಯಾವುದೇ ರೀತಿಯ ಸಂದೇಹಗಳಿದ್ದರೆ ತಜ್ಞರನ್ನು ಸಂಪರ್ಕಿಸಿ.)
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ