Health Benefits Of Ragi: ಈ ಧಾನ್ಯ ಸೌಂದರ್ಯದೊಂದಿಗೆ ಆರೋಗ್ಯವನ್ನು ಹೆಚ್ಚಿಸುತ್ತೆ!

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 22, 2024 | 2:00 PM

ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು ಇದು ಮೂಳೆಗಳು ಬಲವಾಗಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಮಕ್ಕಳ ಸರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೇವಲ ಮಕ್ಕಳಿಗೆ ಮಾತ್ರವಲ್ಲ ಎಲ್ಲಾ ವಯಸ್ಸಿನವರು ಕೂಡ ಇದರ ಸೇವನೆ ಮಾಡಬಹುದಾಗಿದೆ. ಹಾಗಾದರೆ ರಾಗಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಯಾಕೆ ಈ ಧಾನ್ಯವನ್ನು ಸೇವನೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

Health Benefits Of Ragi: ಈ ಧಾನ್ಯ ಸೌಂದರ್ಯದೊಂದಿಗೆ ಆರೋಗ್ಯವನ್ನು ಹೆಚ್ಚಿಸುತ್ತೆ!
ರಾಗಿ
Follow us on

ರಾಗಿ ನಮ್ಮ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಪ್ರಮುಖ ಧಾನ್ಯಗಳಲ್ಲಿ ಒಂದಾಗಿದೆ. ಇದರಿಂದ ಅನೇಕ ರೀತಿಯಲ್ಲಿ ರುಚಿ ರುಚಿಯಾಗಿ ಪದಾರ್ಥಗಳನ್ನು ತಯಾರಿಸಬಹುದಾಗಿದೆ. ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು ಇದು ಮೂಳೆಗಳು ಬಲವಾಗಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಮಕ್ಕಳ ಸರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೇವಲ ಮಕ್ಕಳಿಗೆ ಮಾತ್ರವಲ್ಲ ಎಲ್ಲಾ ವಯಸ್ಸಿನವರು ಕೂಡ ಇದರ ಸೇವನೆ ಮಾಡಬಹುದಾಗಿದೆ. ಹಾಗಾದರೆ ರಾಗಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಯಾಕೆ ಈ ಧಾನ್ಯವನ್ನು ಸೇವನೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

  • ರಾಗಿಯಿಂದ ಮಾಡಿದ ಆಹಾರಗಳನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಜೊತೆಗೆ ಇದರಲ್ಲಿ ಅಗತ್ಯ ಪೋಷಕಾಂಶಗಳಿದ್ದು ವಿಶೇಷವಾಗಿ ಪ್ರೋಟೀನ್ ಗಳು, ಎ, ಬಿ, ಸಿ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿದೆ.
  • ರಾಗಿ ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಹಸಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದರ ಸೇವನೆ ಮಾಡುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ.
  • ರಾಗಿ ಹಿಟ್ಟಿನಿಂದ ತಯಾರಿಸಿದ ಆಹಾರವನ್ನು ಸೇವನೆ ಮಾಡುವುದರಿಂದ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಮತ್ತು ಅಸ್ತಮಾ ಕಡಿಮೆಯಾಗುತ್ತದೆ.
  • ವೃದ್ಧಾಪ್ಯದ ನಿಶಕ್ತಿ ಕಡಿಮೆ ಮಾಡಲು ರಾಗಿಯಿಂದ ತಯಾರಿಸಿದ ಆಹಾರಗಳನ್ನು ಸೇವನೆ ಮಾಡಿ. ಆದರೆ ಅದಕ್ಕೂ ಮೊದಲು ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಿ.
  • ರಾಗಿಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಚರ್ಮ ಕಾಂತಿಯುತವಾಗುವುದಲ್ಲದೆ, ಮೃದುವಾಗುತ್ತದೆ. ಯಾವಾಗಲೂ ಸುಂದರವಾಗಿ ಕಾಣಬೇಕು ಎಂದು ಬಯಸುವವರಿಗೆ ರಾಗಿ ಸೇವನೆ ಉತ್ತಮ ಆಯ್ಕೆಯಾಗಿದೆ.
  • ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರು ರಾಗಿ ಸೇವನೆ ಮಾಡಬಹುದು. ಏಕೆಂದರೆ ಇದರಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ.
  • ರಾಗಿ ಗಂಜಿ ಮಧುಮೇಹಕ್ಕೆ ಉತ್ತಮ ಔಷಧಿಯಾಗಿದೆ. ಗಂಜಿ ಇಷ್ಟವಿಲ್ಲದಿದ್ದರೆ ರಾಗಿಯನ್ನು ಹಾಲಿನೊಂದಿಗೆ ಬೆರೆಸಿ ಸೇವನೆ ಮಾಡಬಹುದು.
  • ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು ಫೈಬರ್ ಸಮೃದ್ಧವಾಗಿರುವ ರಾಗಿಯಿಂದ ತಯಾರಿಸಿದ ಆಹಾರಗಳನ್ನು ತಿನ್ನುವುದು ಒಳ್ಳೆಯದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: