ವಾಯುಮಾಲಿನ್ಯದ ಎಫೆಕ್ಟ್; ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವ 4 ಆಹಾರಗಳಿವು
ವಾಯು ಮಾಲಿನ್ಯದಿಂದ ಉಂಟಾಗುವ ಹೊಗೆಯಿಂದ ಅಸ್ತಮಾ, ಚರ್ಮದ ಸಮಸ್ಯೆಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ಕ್ಯಾನ್ಸರ್ ಮತ್ತು ಹೃದ್ರೋಗ ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ವಾಯು ಮಾಲಿನ್ಯವು ಕಣ್ಣುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ದೆಹಲಿಯಂತಹ ಕಲುಷಿತವಾದ ನಗರದಲ್ಲಿ ವಾಸಿಸುವುದರಿಂದ ಪ್ರತಿದಿನ ಹಾನಿಕಾರಕ ಮಾಲಿನ್ಯಕಾರಕಗಳು ಮತ್ತು ಧೂಳಿಗೆ ನಿಮ್ಮನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಇದರಿಂದ ವಿವಿಧ ರೋಗಗಳ ಅಪಾಯ ಹೆಚ್ಚಾಗುತ್ತದೆ. ವಾಯು ಮಾಲಿನ್ಯದಿಂದ ಉಂಟಾಗುವ ಹೊಗೆಯಿಂದ ಅಸ್ತಮಾ, ಚರ್ಮದ ಸಮಸ್ಯೆಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ಕ್ಯಾನ್ಸರ್ ಮತ್ತು ಹೃದ್ರೋಗ ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ವಾಯು ಮಾಲಿನ್ಯವು ಕಣ್ಣುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಅಲರ್ಜಿ ಮತ್ತು ಸೋಂಕುಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ವಾಯು ಮಾಲಿನ್ಯವನ್ನು ಎದುರಿಸಲು ಆರೋಗ್ಯಕರ ಆಹಾರವನ್ನು ಸೇವಿಸುವುದು ಮುಖ್ಯ.
ಈ ಬಗ್ಗೆ ಖ್ಯಾತ ಪೌಷ್ಟಿಕತಜ್ಞರಾದ ಲೊವ್ನೀತ್ ಬಾತ್ರಾ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದು, ನಿಮ್ಮ ಚಳಿಗಾಲದ ಆಹಾರದಲ್ಲಿ ಸೇರಿಸಿಕೊಳ್ಳಬಹುದಾದ 4 ಸೂಪರ್‌ಫುಡ್‌ಗಳನ್ನು ತಿಳಿಸಿದ್ದಾರೆ. ಮಾಲಿನ್ಯಕಾರಕಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ 4 ಆಹಾರಗಳು ಇಲ್ಲಿವೆ:
ಇದನ್ನೂ ಓದಿ: Weight Loss Tips: ಹಸಿ ಮೆಣಸಿನಕಾಯಿ ತಿಂದರೂ ತೂಕ ಇಳಿಯುತ್ತೆ ಗೊತ್ತಾ!
ಕಾಳು ಮೆಣಸು:
ಕರಿಮೆಣಸು ಪೈಪರಿನ್ ಅನ್ನು ಹೊಂದಿರುತ್ತದೆ. ಇದು ಥರ್ಮೋಜೆನೆಸಿಸ್ ಅನ್ನು ಹೆಚ್ಚಿಸುತ್ತದೆ, ಇದು ದೇಹದ ಶಾಖವನ್ನು ಉತ್ಪಾದಿಸುವ ಪ್ರಕ್ರಿಯೆಯಾಗಿದೆ. ಇದು ಚಯಾಪಚಯವನ್ನು ಹೆಚ್ಚಿಸಲು ಮತ್ತು ವಿಶ್ರಾಂತಿ ಸಮಯದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಕಾಳುಮೆಣಸು ಜೀವಸತ್ವಗಳು ಮತ್ತು ಖನಿಜಗಳಂತಹ ಇತರ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ಕೊಬ್ಬನ್ನು ಪರಿಣಾಮಕಾರಿಯಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ. ಕಾಳು ಮೆಣಸಿನಲ್ಲಿರುವ ಪೈಪರಿನ್ ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಿರುವ ಉಷ್ಣತೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.
ಶುಂಠಿ:
ಶುಂಠಿಯು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿರುವ ಪದಾರ್ಥವಾಗಿದೆ. ಶುಂಠಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು, ತಾಮ್ರ, ಮ್ಯಾಂಗನೀಸ್ ಕ್ರೋಮಿಯಂ ಇತ್ಯಾದಿಗಳಿವೆ. ಶುಂಠಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗೇ, ರಕ್ತದಲ್ಲಿನ ಸಕ್ಕರೆ ಅಂಶದ ಏರಿಕೆಯನ್ನು ತಡೆಯುತ್ತದೆ. ಇದು ಮಧುಮೇಹದಿಂದ ಉಂಟಾಗುವ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ವಾಯುಮಾಲಿನ್ಯದ ಹೊಗೆಯು ಭಯಾನಕ ಉಸಿರಾಟದ ಕಾಯಿಲೆಗಳನ್ನು ಉಂಟುಮಾಡುತ್ತದೆ. ಒಂದು ಕಪ್ ಹಿತವಾದ ಶುಂಠಿ ಚಹಾವನ್ನು ಕುಡಿಯುವುದರಿಂದ ಉಸಿರಾಟದ ಸಮಸ್ಯೆಯನ್ನು ನಿಯಂತ್ರಿಸಬಹುದು.
ಇದನ್ನೂ ಓದಿ: ಕೊಬ್ಬು ಕರಗಿಸುವುದರಿಂದ ಜೀರ್ಣಕ್ರಿಯೆವರೆಗೆ; ಅಡುಗೆಮನೆಯಲ್ಲಿರುವ ಹುಣಸೆಹಣ್ಣಿನ ಚಮತ್ಕಾರಗಳಿವು
ನೆಲ್ಲಿ ಕಾಯಿ:
ನೆಲ್ಲಿ ಕಾಯಿ ವಿಟಮಿನ್ ಸಿಯನ್ನು ಹೊಂದಿದೆ. ಶುಂಠಿಯ ಉತ್ಕರ್ಷಣ ನಿರೋಧಕಗಳು ಯಕೃತ್ತನ್ನು ನಿರ್ವಿಷಗೊಳಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ತೂಕವನ್ನು ಇಳಿಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ.
ತುಪ್ಪ:
ತುಪ್ಪವು ಆರೋಗ್ಯಯುತ ಕೊಬ್ಬಿನಾಂಶವನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಡಿ, ಇ, ಕೆ ಮತ್ತು ಲಿನೋಲೆನಿಕ್, ಅರಾಚಿಡೋನಿಕ್ ಆಮ್ಲದಂತಹ ಅಗತ್ಯ ಕೊಬ್ಬಿನಾಮ್ಲಗಳು ಇವೆ. ಇದು ನಮ್ಮ ದೇಹದ ಅಂಗಗಳನ್ನು ರಕ್ಷಿಸುತ್ತದೆ, ಆರೋಗ್ಯಕರ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುತ್ತದೆ ಮತ್ತು ಮೆದುಳಿಗೆ ಪೋಷಣೆ ನೀಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ