Cancer: ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಪ್ರತಿನಿತ್ಯ ಬಾಳೆಹಣ್ಣು ತಿನ್ನಿ; ಹೊಸ ಸಂಶೋಧನೆಯಿಂದ ಮಾಹಿತಿ ಬಹಿರಂಗ

| Updated By: Rakesh Nayak Manchi

Updated on: Aug 08, 2022 | 6:01 PM

ಬಾಳೆಹಣ್ಣು ತಿನ್ನುವುದರಿಂದ ಕ್ಯಾನ್ಸರ್ ಕೂಡ ಬರದಂತೆ ತಡೆಯಬಹುದು ಎಂದು ಹೆಚ್ಚಿನವರಿಗೆ ತಿಳಿಯದ ಸಂಗತಿ. ಸಂಶೋಧನೆಯೊಂದರ ಪ್ರಕಾರ, ಬಾಳೆಹಣ್ಣು ತಿನ್ನುವುದರಿಂದ ಕ್ಯಾನ್ಸರ್ ಬರುವ ಅಪಾಯ ಕಡಿಮೆಯಾಗುತ್ತದೆ.

Cancer: ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಪ್ರತಿನಿತ್ಯ ಬಾಳೆಹಣ್ಣು ತಿನ್ನಿ; ಹೊಸ ಸಂಶೋಧನೆಯಿಂದ ಮಾಹಿತಿ ಬಹಿರಂಗ
ಬಾಳೆಹಣ್ಣು
Follow us on

ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಬಾಳೆಹಣ್ಣು ವಿವಿಧ ಪೋಷಕಾಂಶಗಳಿಂದ ಕೂಡಿದೆ. ಅನೇಕ ಜನರು ತೂಕ ಹೆಚ್ಚಿಸಲು ಅಥವಾ ತಮ್ಮ ದೇಹವನ್ನು ಸದೃಢವಾಗಿಡಲು ಬಾಳೆಹಣ್ಣು ತಿನ್ನುತ್ತಾರೆ. ಆದರೆ ಬಾಳೆಹಣ್ಣು ತಿನ್ನುವುದರಿಂದ ಕ್ಯಾನ್ಸರ್ ಕೂಡ ಬರದಂತೆ ತಡೆಯಬಹುದು ಎಂದು ಹೆಚ್ಚಿನವರಿಗೆ ತಿಳಿಯದ ಸಂಗತಿ. ಸಂಶೋಧನೆಯೊಂದರ ಪ್ರಕಾರ, ಬಾಳೆಹಣ್ಣು ತಿನ್ನುವುದರಿಂದ ಕ್ಯಾನ್ಸರ್ ಬರುವ ಅಪಾಯ ಕಡಿಮೆಯಾಗುತ್ತದೆ. ಇದನ್ನು ಕೇಳಿ ನಿಮಗೂ ಆಶ್ಚರ್ಯವಾಗಬಹುದು. ಆದರೆ ಬಾಳೆಹಣ್ಣು ಮಾತ್ರವಲ್ಲದೆ, ನಿರೋಧಕ ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿರುವ ಇತರ ಆಹಾರಗಳು ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಬಾಳೆಹಣ್ಣು ಕ್ಯಾನ್ಸರ್ ಅನ್ನು ಹೇಗೆ ತಡೆಯುತ್ತದೆ? ಇಲ್ಲಿದೆ ಮಾಹಿತಿ

ಮೆಡಿಕಲ್ ನ್ಯೂಸ್ ಟುಡೇ ವರದಿಯ ಪ್ರಕಾರ, ನಿರೋಧಕ ಪಿಷ್ಟ ಕಾರ್ಬೋಹೈಡ್ರೇಟ್​ಗಳಲ್ಲಿ ಸಮೃದ್ಧವಾಗಿದೆ. ಈ ಪಿಷ್ಟಗಳು ಸಣ್ಣ ಕರುಳಿನಿಂದ ಜೀರ್ಣವಾಗದೆ ದೊಡ್ಡ ಕರುಳಿಗೆ ಹೋಗಿ ಜೀರ್ಣವಾಗುತ್ತದೆ. ನಿರೋಧಕ ಪಿಷ್ಟಗಳಲ್ಲಿ ಧಾನ್ಯಗಳು, ಬಾಳೆಹಣ್ಣುಗಳು, ಬೀನ್ಸ್, ಅಕ್ಕಿ, ಬೇಯಿಸಿದ ಮತ್ತು ಶೀತಲವಾಗಿರುವ ಪಾಸ್ಟಾ ಮುಂತಾದ ಸಸ್ಯ ಆಧಾರಿತ ಆಹಾರಗಳು ಸೇರಿವೆ.

ಇವುಗಳು ಪಿಷ್ಟದ ನಾರಿನ ಭಾಗವಾಗಿದ್ದು, ಕೊಲೊರೆಕ್ಟಲ್ ಕ್ಯಾನ್ಸರ್ ಮತ್ತು ಇತರ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲಿಂಚ್ ಸಿಂಡ್ರೋಮ್ ಹೊಂದಿರುವ ಜನರಲ್ಲಿ ನಿರೋಧಕ ಪಿಷ್ಟದ ಪುಡಿಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಇಂಗ್ಲೆಂಡ್​ನ ಲೀಡ್ಸ್ ವಿಶ್ವವಿದ್ಯಾನಿಲಯದ ಅಧ್ಯಯನಗಳು ಸೂಚಿಸುತ್ತದೆ.

ಪ್ರತಿದಿನ 30 ಗ್ರಾಂ ನಿರೋಧಕ ಪಿಷ್ಟವನ್ನು ಸೇವಿಸುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆ ತೋರಿಸಿದೆ. 30 ಗ್ರಾಂ ನಿರೋಧಕ ಪಿಷ್ಟವು 1 ಬಾಳೆಹಣ್ಣಿಗೆ ಸಮನಾಗಿರುತ್ತದೆ. ಅಧ್ಯಯನದಲ್ಲಿ ಸುಮಾರು 10 ವರ್ಷಗಳ ಅನುಸರಣೆಯ ನಂತರ ಡೇಟಾವನ್ನು ಸಂಗ್ರಹಿಸಲಾಗಿದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Mon, 8 August 22