Monsoon Tips: ಮಳೆಗಾಲದ ಅಣಬೆಯು ತಿನ್ನಲೆಷ್ಟು ಯೋಗ್ಯ?

ಮಳೆಗಾಲವೆಂದರೆ ಅದೊಂದು ಹಬ್ಬ. ಪ್ರಕೃತಿ ತನ್ನ ಸೊಬಗನ್ನು ಹೊರಸೂಸುವ ಸುಂದರ ಕ್ಷಣ. ಪ್ರಕೃತಿಯು ಸಕಲ ಜೀವಿಗಳಿಗೂ ಜೀವಿಸಲು ಅನುವಾಗುವ ಎಲ್ಲವನ್ನೂ ಕೊಡುಗೆಯಾಗಿ ನೀಡಿದೆ.

Monsoon Tips: ಮಳೆಗಾಲದ ಅಣಬೆಯು ತಿನ್ನಲೆಷ್ಟು ಯೋಗ್ಯ?
Dr Ravikiran Patwardhan
TV9kannada Web Team

| Edited By: Nayana Rajeev

Aug 09, 2022 | 9:46 AM

ಮಳೆಗಾಲವೆಂದರೆ ಅದೊಂದು ಹಬ್ಬ. ಪ್ರಕೃತಿ ತನ್ನ ಸೊಬಗನ್ನು ಹೊರಸೂಸುವ ಸುಂದರ ಕ್ಷಣ. ಪ್ರಕೃತಿಯು ಸಕಲ ಜೀವಿಗಳಿಗೂ ಜೀವಿಸಲು ಅನುವಾಗುವ ಎಲ್ಲವನ್ನೂ ಕೊಡುಗೆಯಾಗಿ ನೀಡಿದೆ. ಇಂತಹ ಪ್ರಕೃತಿಯನ್ನು ದುರಾಸೆಯಿಂದ ದೋಚದೆ ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಎಲ್ಲ ಜೀವಿಗಳು ಬದುಕಲು ಅವಕಾಶ ಕಲ್ಪಿಸಬೇಕು.

ಪ್ರಕೃತಿಯ ಕಾಲಕ್ಕನುಗುಣವಾಗಿ ಹಲವು ಆಹಾರ ಪದಾರ್ಥಗಳನ್ನು ನೀಡುತ್ತದೆ. ಅಂಥವುಗಳಲ್ಲಿ ಅಣಬೆಗಳು ಒಂದು. ಅಣಬೆಯು ಆರೋಗ್ಯಕ್ಕೆ ಪೌಷ್ಠಿಕವಾದ್ದು ಮತ್ತು ಮಳೆಗಾಲದ ಕೆಲವು ತಿಂಗಳುಗಳ ಕಾಲ ಸಿಗುತ್ತದೆ. ಕಾಡು ಮೇಡುಗಳು ಹಚ್ಚಹಸುರಿನಿಂದ ತುಂಬಿ ತುಳುಕುತ್ತವೆ.

ಅಣಬೆ ಮಾರಾಟಕ್ಕೆ ಪೇಟೆಗೆ ಬಂತೆಂದರೆ ಅಲ್ಲಿ ಜಾತ್ರೆಯಂತೆ ಜನ ಸೇರುತ್ತದೆ.ಕಾಡು ಅಣಬೆಗಳು ನೋಡಲು ಸುಂದರವೇ ಹೊರತು ತಿನ್ನಲು ಯೋಗ್ಯವಲ್ಲ. ಕೆಲವು ಅಣಬೆಗಳನ್ನು ಆಹಾರವಾಗಿ ಬಳಸಲಾಗುತ್ತದೆ‌.

ಅದೇನೇ ಇರಲಿ ಮಳೆಗಾಲದಲ್ಲಿ ಕಾಡಿನ‌ ನಡುವೆ ಅಣಬೆಗಳನ್ನು ನೋಡುವುದೇ ಒಂದು ಮನಮೋಹಕ. ಬಣ್ಣಬಣ್ಣದ, ಚಿತ್ರ ವಿಚಿತ್ರ ಅಣಬೆಗಳ ನೋಡುವುದೇ ಒಂದು ಸೊಬಗು.

-ಸಹ್ಯಾದ್ರಿಯ ಪ್ರದೇಶದಲ್ಲಿ, ಐವತ್ತಕ್ಕೂ ಹೆಚ್ಚು ಅಣಬೆ ಪ್ರಭೇಧಗಳನ್ನು ತಿನ್ನಲು ಬಳಸುತ್ತಾರೆ.

-ಸಾಮಾನ್ಯವಾಗಿ ಸಿಗುವ ತಿನ್ನಲು ಯೋಗ್ಯವಾದ ಅಣಬೆ ಪ್ರಬೇಧಗಳು: Astraeus, , Clitocybe, Fistulina, Lentinus sajor-caju, Pleurotus, Scleroderma, Termitomyces, Agaricus, ತ್ಯಾದಿ ಪ್ರಭೇಧಗಳಿಗೆ ಸೇರಿವೆ. ಅವನ್ನು ಮಾರುಕಟ್ಟೆಯ ಭಾಷೆಯಲ್ಲಿ White Button, Portobello, Shiitake, Oyster, Porcini, Paddy Straw mushrooms ..

-ಸಾಮಾನ್ಯವಾಗಿ ಸಿಗುವ ವಿಷಕಾರಿ ಅಣಬೆ ಪ್ರಬೇಧಗಳು: ( ಇವನ್ನು ಬಳಸಲೇ ಬಾರದು): Omphalotus species, Mycena species, Chlorophyllum species.

-ಕಾಡು ಹಾಗೂ ಬೆಟ್ಟದಿಂದ ಅಣಬೆ ಸಂಗ್ರಹಿಸುವಾಗ ವಹಿಸಬೇಕಾದ ಜಾಗೃತಿ ತೋಟ,ಬೆಟ್ಟ, ಕಾಡಿನ ಸ್ವಚ್ಚ-ನೈಸರ್ಗಿಕ ಪ್ರದೇಶಗಳಿಂದ ಸಂಗ್ರಹಿಸಬಹುದು. ರಸ್ತೆಯಂಚು,

-ಕಾಲುವೆಯಂಚು, ಹೊಳೆ-ಚರಂಡಿ ಬದಿ ಪ್ರದೇಶಗದ್ದು ಬೇಡ.

-ಸಾಧ್ಯವಾದಷ್ಟು ಸಂಗ್ರಹಿಸಿದ 12 ತಾಸಿನ ಮೊದಲು, ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆದು ತಿನ್ನಬೇಕು.

-ಅಣಬೆಯ ಛತ್ರಿಯ ಒಳಗಡೆಯ ಪದರುಗಳು ( ಗಿಲ್) ಅಚ್ಚು ಬಿಳಿ, ನೀಲಿ, ಕಪ್ಪು ಬಣ್ಣದ್ದಾಗಿದ್ದರೆ ಅವು ಬೇಡ. ತಿಳಿಬೂದು, ಕಂದು ಬಣ್ಣ ಇದ್ದರೆ ಅಡ್ಡಿಯಿಲ್ಲ.

-ಅವುಗಳ ಕಾಂಡದ ಮಧ್ಯದಲ್ಲಿ ಅಥವಾ ಬುಡದಲ್ಲಿ ಒಂದು ರಿಂಗ್ ತರಹದ ರಚನೆಯಿದ್ದರೆ ( ಸ್ಕರ್ಟ್) ಅವು ಬೇಡ.

 ಮತ್ತಷ್ಟು ಓದಿ

-ಛತ್ರಿಯಾಕಾರದ ಟೊಪ್ಪಿಯ (ಕ್ಯಾಪ್) ಮೇಲೆ ಅಥವಾ ಕಾಂಡದ ಮೇಲೆ ಕೆಂಪು ಬಣ್ಣದ ಚುಕ್ಕೆಗಳಿದ್ದರೆ ಅವುಬೇಡ.

-ಅಣಬೆಗಳನ್ನು ಹುಡುಕುವಲ್ಲಿ ಹಾಗೂ ಬಳಸುವಲ್ಲಿ ಅನುಭವ ಪ್ರಮುಖ ಪಾತ್ರವಹಿಸುತ್ತದೆ. ಯಾವುದು ಉತ್ತಮ ಯಾವುದು ವಿಷಯುಕ್ತವಾಗಿದೆ ಎಂದು ತಿಳಿಯದೇ ಬಳಸುವುದು ಅಪಾಯಕಾರಿ.

-ಅಣಬೆಗಳನ್ನು ಗುರುತಿಸುವಿಕೆ ಬಹುಮುಖ್ಯ.ಗೊತ್ತಿದ್ದವರೂ ಕೂಡ ಯಾಮಾರುದುಂಟು. ಕಾಡಿನಲ್ಲಿ ಸಿಗುವ ಕೆಲ ಅಣಬೆಗಳು ವಿಷಪೂರಿತವಾಗಿರುತ್ತವೆ.

-ಅಣಬೆ ತಿಂದು ನಾಲ್ಕಾರು ದಿನ ಹಲವರು ಆಸ್ಪತ್ರೆಯಲ್ಲಿ ಕಷ್ಟಪಟ್ಟಿದ್ದು ಇದೆ. ವಾಂತಿ ,ದ್ರವಮಲ ಪ್ರವೃತ್ತಿ ಆಗುವ ಸಾಧ್ಯತೆ ಹೆಚ್ಚು. ಅಲ್ಲದೆ ಒಂದೇ ಕುಟುಂಬದ ಸದಸ್ಯರು ಅನಾರೋಗ್ಯದಿಂದ ಪೀಡಿತರಾಗುವ ಸಾಧ್ಯತೆ ಹೆಚ್ಚು.

ಇದು ಜೀರ್ಣಕ್ಕೆ ಕಷ್ಟಕರವಾಗಿರುವುದರಿಂದ ಇದರ ಜೊತೆ ಮಾಂಸಹಾರ, ಕಳಲೆಯಂತಹ (bamboo shoot) ಆಹಾರಗಳನ್ನು ಕಟ್ಟು ನಿಟ್ಟಾಗಿ ಸೇವಿಸಬಾರದು. ( ಡಾ. ರವಿಕಿರಣ ಪಟವರ್ಧನ ಶಿರಿಸಿ, ಆಯುರ್ವೇದ ವೈದ್ಯರು)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada