Monsoon: ಮಳೆಗಾಲದಲ್ಲಿ ಸಾಕುಪ್ರಾಣಿಗಳ ದೈಹಿಕ ಚಟುವಟಿಕೆ ಹೆಚ್ಚಿಸಲು ಇಲ್ಲಿದೆ ಸರಳ ಟಿಪ್ಸ್
ಮಳೆಗಾಲದಲ್ಲಿ ಸಾಕು ಪ್ರಾಣಿಗಳು ಮನೆಯಲ್ಲೇ ಇರಬೇಕಾಗುತ್ತದೆ. ಇದರಿಂದಾಗಿ ಅವುಗಳ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತದೆ. ಇವುಗಳ ಈ ಚಟುವಟಿಕೆಗಳು ಕಡಿಮೆಯಾಗದಂತೆ ನೋಡಿಕೊಳ್ಳಲು ಒಳಾಂಗಣ ಆಟಗಳನ್ನು ಆಡಿಸಬೇಕು.
ಮಳೆಗಾಲ ನಿಮ್ಮ ಸಾಕುಪ್ರಾಣಿಗಳನ್ನು ಆರಾಧಿಸುವ ಋತುವಾಗಿದೆ. ಏಕೆಂದರೆ ಆಹ್ಲಾದಕರ ವಾತಾವರಣ ಮತ್ತು ಹಚ್ಚ ಹಸಿರಿನ ಸುತ್ತಮುತ್ತಲು ಸಾಕು ಪ್ರಾಣಿಗಳೊಂದಿಗೆ ದೀರ್ಘ ನಡಿಗೆಗೆ ಸೂಕ್ತವಾಗಿದೆ. ಮಳೆಯು ವಾತಾವರಣವನ್ನು ತಂಪೆರೆಯುವುದರಿಂದ ಸಾಕುಪ್ರಾಣಿಗಳಲ್ಲಿ ಮಾನ್ಸೂನ್ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ನೈರ್ಮಲ್ಯದಿಂದ ಪೌಷ್ಟಿಕಾಂಶದವರೆಗೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಜಾಗರೂಕರಾಗಿರಬೇಕು. ನೀವು ವಿಶೇಷವಾಗಿ ನೀವು ಪ್ರತಿದಿನ ಮಳೆ ಬೀಳುವ ಸ್ಥಳದಲ್ಲಿ ತಂಗುತ್ತಿದ್ದರೆ ನಾಯಿಗಳು ಅಥವಾ ಸಾಕುಪ್ರಾಣಿಗಳು ದಿನವಿಡೀ ಮನೆಯಲ್ಲಿಯೇ ಇರಲು ಪ್ರಕ್ಷುಬ್ಧವಾಗಬಹುದು. ಇಂತಹ ಸಂದರ್ಭದಲ್ಲಿ ಅವುಗಳೊಂದಿಗೆ ನೀವು ಸಕ್ರಿಯವಾಗಿರಬೇಕು. ಇದರಿಂದ ಪ್ರಾಣಿಗಳಲ್ಲಿ ಸಂತೋಷ ಮೂಡುತ್ತದೆ.
“ಮುಂಗಾರು ಋತುವಿನಲ್ಲಿ ಸಾಕು ಪ್ರಾಣಿಗಳನ ಮಾಲೀಕರಿಗೆ ಸಾಕಷ್ಟು ಸವಾಲುಗಳನ್ನು ತರುತ್ತದೆ. ಮಳೆಯು ಸೋಂಕುಗಳ ಕಾಲ ಆಗಿರುವುದರಿಂದ ಈ ಅವಧಿಯು ಸಾಕುಪ್ರಾಣಿಗಳಲ್ಲಿ ಸಾಮಾನ್ಯವಾಗಿ ಕಡಿಮೆ ಚಟುವಟಿಕೆಯನ್ನು ಉಂಟುಮಾಡುತ್ತದೆ. ಸಣ್ಣ ತುಂತುರು ಮಳೆಯು ಚೆನ್ನಾಗಿರಬಹುದು, ಆದರೆ ಪೂರ್ಣ ಪ್ರಮಾಣದ ಮಳೆಯಾದರೆ ಮಾಲೀಕರು ಭಯಪಡುತ್ತಾರೆ. ಏಕೆಂದರೆ ಅವರ ಸಾಕುಪ್ರಾಣಿಗಳು ಹೆಚ್ಚು ಕಾಲ ಮನೆಯಲ್ಲಿಯೇ ಇರುತ್ತವೆ” ಎಂದು ಮಠ ಆಫ್ ಕೋರ್ಸ್ ಸಂಸ್ಥಾಪಕಿ ಸಾಕ್ಷಿ ಬಾವಾ ಹೇಳುತ್ತಾರೆ.
ನಿಮ್ಮ ಸಾಕುಪ್ರಾಣಿಗಳ ಚಟುವಟಿಕೆಯ ಸ್ಥಿತಿಯ ಬಗ್ಗೆ ಚಿಂತಿತರಾಗಿರುವ ಮಾಲೀಕರಲ್ಲಿ ನೀವೂ ಒಬ್ಬರಾಗಿದ್ದರೆ ಸಾಕುಪ್ರಾಣಿಗಳು ಸಾಕಷ್ಟು ವ್ಯಾಯಾಮವನ್ನು ಪಡೆಯಲು ಏನು ಮಾಡಬಹುದು ಎಂದು ಸಾಕ್ಷಿ ಬಾವಾ ಸಲಹೆಗಳನ್ನು ನೀಡಿದ್ದಾರೆ. ಅವುಗಳು ಈ ಕೆಳಗಿನಂತಿವೆ:
ಆಟಿಕೆಗಳನ್ನು ನೀಡಿ: ನಿಮ್ಮ ಸಾಕುಪ್ರಾಣಿಗಳು ಮನೆಯಲ್ಲೇ ಇದ್ದಾಗ ಅವುಗಳ ಆಟ ಆಡಲು ಆಟಿಕೆಗಳನ್ನು ನೀಡಿ. ಮಾರುಕಟ್ಟೆಯಲ್ಲಿ ಸಾಕುಪ್ರಾಣಿಗಳಿಗೆ ಲಭ್ಯವಿರುವ ಅನೇಕ ಆಟಿಕೆಗಳು ಲಭ್ಯ ಇವೆ. ಅದಾಗ್ಯೂ, ಪ್ಲಾಸ್ಟಿಕ್ ಬಾಟಲಿಗಳು ಮತ್ತು ರಟ್ಟಿನ ಪೆಟ್ಟಿಗೆಗಳೊಂದಿಗೆ ಒಳಾಂಗಣ ಆಟಗಳನ್ನು ಸಹ ರಚಿಸಬಹುದು.
ಅವುಗಳೊಂದಿಗೆ ನೀವೂ ಆಡಿ: ಸಾಕು ಪ್ರಾಣಿಯ ಮುಂದೆ ನೀವು ಓಡಿ, ಅದು ನಿಮ್ಮನ್ನು ಹುಡುಕುವಂತೆ ಮಾಡಿ, ಅದು ನಿಮ್ಮನ್ನು ಹುಡುಕುವವರೆಗೆ ನಾಯಿ ಅಥವಾ ಬೆಕ್ಕಿಗೆ ಇಟ್ಟ ಹೆಸರನ್ನು ಕರಿಯುತ್ತಿರಿ.
ಅವುಗಳ ಸ್ನೇಹಕ್ಕೆ ಬೆಲೆ ಕೊಡಿ: ಮಳೆಯಿಂದಾಗಿ ಅವುಗಳ ಸ್ನೇಹಿತರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಬೆಕ್ಕು ಅಥವಾ ನಾಯಿಯನ್ನು ಅದರ ಸ್ನೇಹಿತರನ್ನು ಭೇಟಿ ಮಾಡಲು ಕರೆದೊಯ್ಯಿರಿ ಅಥವಾ ಹೊಸ ಸ್ನೇಹಿತರನ್ನು ಪರಿಚಯ ಮಾಡಿಕೊಡಿ.
ಮಾಲ್ಗೆ ಕರೆದುಕೊಂಡು ಹೋಗಿ: ನಿಮ್ಮ ನಾಯಿಯನ್ನು ಮಾಲ್‌ನಲ್ಲಿ ವಾಕ್ ಮಾಡಲು ಅಥವಾ ಸಾಕುಪ್ರಾಣಿ ಸ್ನೇಹಿ ಕೆಫೆಗೆ ಕರೆದುಕೊಂಡು ಹೋಗಿ. ಇದು ಅವುಗಳ ಸಂವಹನಕ್ಕೆ ಸಹಕಾರಿಯಾಗಬಹುದು. ಆದರೆ, ನಿಮ್ಮ ನಾಯಿ ಅಥವಾ ಬೆಕ್ಕನ್ನು ಒತ್ತಾಯಪೂರ್ವಕವಾಗಿ ಭೇಟಿ ಮಾಡಿಸಬೇಡಿ, ಆಕ್ರಮಣಶೀಲತೆಯ ವರ್ತನೆ ತೋರಬಹುದು.
Published On - 5:14 pm, Mon, 8 August 22