ಡೈಪರ್​ಗಳು ಶಿಶುಗಳಿಗೆ ಮಾರಕವೇ? ಸಂಶೋಧನೆ ಏನು ಹೇಳುತ್ತೆ? ಪರ್ಯಾಯಗಳೇನು?

ನಿತ್ಯವೂ ಶಿಶುಗಳಿಗೆ ಡೈಪರ್ ಬಳಕೆ ಮಾಡುವುದರಿಂದ ಮುಂದೊಂದು ದಿನ ಗಂಭೀರವಾದ ಕಾಯಿಲೆಗಳಿಗೆ ತುತ್ತಾಗಬಹುದು ಎಂದು ಫ್ರಾನ್ಸ್​ನಲ್ಲಿ ನಡೆದ ಸಂಶೋಧನೆಯೊಂದು ಹೇಳಿದೆ.

ಡೈಪರ್​ಗಳು ಶಿಶುಗಳಿಗೆ ಮಾರಕವೇ? ಸಂಶೋಧನೆ ಏನು ಹೇಳುತ್ತೆ? ಪರ್ಯಾಯಗಳೇನು?
Baby
Follow us
TV9 Web
| Updated By: ನಯನಾ ರಾಜೀವ್

Updated on: Aug 09, 2022 | 11:26 AM

ನಿತ್ಯವೂ ಶಿಶುಗಳಿಗೆ ಡೈಪರ್ ಬಳಕೆ ಮಾಡುವುದರಿಂದ ಮುಂದೊಂದು ದಿನ ಗಂಭೀರವಾದ ಕಾಯಿಲೆಗಳಿಗೆ ತುತ್ತಾಗಬಹುದು ಎಂದು ಫ್ರಾನ್ಸ್​ನಲ್ಲಿ ನಡೆದ ಸಂಶೋಧನೆಯೊಂದು ಹೇಳಿದೆ. ANSES ಸಂಸ್ಥೆಯು ನಡೆಸಿದ ಅಧ್ಯಯನದಲ್ಲಿ, ಯುರೋಪ್‌ನಾದ್ಯಂತ ಮಾರಾಟವಾಗುವ ಹಾಗೂ ಯೂಸ್​ಆಂಡ್ ಥ್ರೋ ಡೈಪರ್​ನಲ್ಲಿ 38 ರಾಸಾಯನಿಕಗಳನ್ನು ಗುರುತಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಹೆಚ್ಚಿನ ರಾಸಾಯನಿಕಗಳು ಹಾರ್ಮೋನ್​ಗಳುಗೆ ಅಡ್ಡಿಪಡಿಸುತ್ತವೆ, ಹಾಗಾಗಿ ಅವುಗಳನ್ನು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ.

ಡೈಪರ್​ಗಳು ಶಿಶುಗಳಿಗೆ ಕೆಟ್ಟದ್ದೇ? ಡಯಾಕ್ಸಿನ್‌ಗಳು, ವಿಒಸಿಗಳು, ಸುಗಂಧ, ಟ್ರಿಬ್ಯುಟೈಲ್-ಟಿನ್ (ಟಿಬಿಟಿ) ಮತ್ತು ಸೋಡಿಯಂ ಪಾಲಿಅಕ್ರಿಲೇಟ್‌ಗಳು ಡೈಪರ್‌ಗಳಲ್ಲಿನ ಕೆಲವು ಹಾನಿಕಾರಕ ರಾಸಾಯನಿಕಗಳಾಗಿವೆ. ಈ ರಾಸಾಯನಿಕಗಳು ಶಿಶುಗಳ ಆರೋಗ್ಯವನ್ನು ಹಾಳು ಮಾಡುತ್ತವೆ.

ಚರ್ಮವು ಕೆಂಪಾಗುವುದು, ಸೋಂಕು ಡೈಪರ್​ಗಳನ್ನು ಬಳಸಿದಾಗ ನಿಮ್ಮ ಮಗುವು ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದರೆ ಅಥವಾ ಹೆಚ್ಚಾಗಿ ಅಳುತ್ತಿದ್ದರೆ ಡೈಪರ್ ಜಾಗವನ್ನು ಒಮ್ಮೆ ಪರೀಕ್ಷಿಸಿ ಚರ್ಮವು ಕೆಂಪು ಬಣ್ಣಕ್ಕೆ ತಿರುಗಿದ್ದರೆ ಖಂಡಿತವಾಗಿಯೂ ನೀವು ಡೈಪರ್​ ಅನ್ನು ತೆಗೆದುಬಿಡಿ.

ಮೂತ್ರದ ಸೋಂಕು ಸಾಮಾನ್ಯ ಹತ್ತಿ ಬಟ್ಟೆಯ ಡೈಪರ್ಗಳನ್ನು ಬಳಸುವಾಗ, ನೀವು ಒದ್ದೆಯಾದ ಬಳಿಕ ಪ್ರತಿ ಬಾರಿಯೂ ಡೈಪರ್​ ಅನ್ನು ಬದಲಾಯಿಸಬೇಕಾಗುತ್ತದೆ. ಆದರೆ ನೀವು ದೀರ್ಘಕಾಲದವರೆಗೆ ಡೈಪರ್​ಗಳನ್ನು ಹಾಗೆಯೇ ಬಿಟ್ಟಾಗ, ನಿಮ್ಮ ಮಗು ಮೂತ್ರದ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಅಂಗರಚನಾಶಾಸ್ತ್ರದ ವೈಶಿಷ್ಟ್ಯಗಳಿಂದಾಗಿ ಹೆಣ್ಣು ಶಿಶುಗಳಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ.

ಅಲರ್ಜಿಗಳು ಡೈಪರ್​ಗಳು ಅಲರ್ಜಿಯನ್ನು ಉಂಟುಮಾಡಬಹುದು. ಇದುವಾಸನೆಯನ್ನು ಮರೆಮಾಚಲು ಬಳಸುವ ಪರಿಮಳಗಳು ಅಥವಾ ಹೆಚ್ಚುವರಿ ಹೀರಿಕೊಳ್ಳುವಿಕೆಗೆ ಬಳಸುವ ಜೆಲ್​ಗಳಿಂದ ಸಮಸ್ಯೆ ಉಂಟಾಗುತ್ತದೆ.

ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತೆ ಡೈಪರ್‌ಗಳಲ್ಲಿ ಇರುವ ಬಾಷ್ಪಶೀಲ ಸಾವಯವ ಸಂಯುಕ್ತಗಳು (VOC ಗಳು) ನಿಮ್ಮ ಶಿಶುಗಳ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯು ಆಗಾಗ ಸೋಂಕುಗಳು ಮತ್ತು ಉರಿಯೂತಗಳಿಗೆ ಕಾರಣವಾಗಬಹುದು.

ಡೈಪರ್ ರಾಶಸ್ ಎಲಾಸ್ಟಿಕ್ ಸೇರಿದಂತೆ ಡೈಪರ್ ಹಾಕುವ ಪ್ರದೇಶದಲ್ಲಿ ಕೆಂಪು ರಾಶಸ್​ಗಳು ಮತ್ತು ಕೆಲವೊಮ್ಮೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಉರಿಯೂತದ ಕಾರಣ, ಸ್ಪರ್ಶಿಸಿದಾಗ ಪ್ರದೇಶವು ಬೆಚ್ಚಗಿರುತ್ತದೆ.

ಫಂಗಲ್ ಸೋಂಕುಗಳು ಹೌದು, ಡೈಪರ್​ಗಳು ಪ್ರದೇಶವನ್ನು ಒಣಗಿಸುತ್ತವೆ. ಆದರೆ, ನೀವು ದೀರ್ಘಕಾಲದವರೆಗೆ ಡೈಪರ್ಗಳನ್ನು ಬಳಸುತ್ತಿದ್ದರೆ, ತೇವಾಂಶ ಹೆಚ್ಚಾಗಿ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು.

ಡೈಪರ್​ಗಳಿಗೆ ಪರ್ಯಾಯಗಳು ಡಯಾಪರ್ ಲೈನರ್‌ಗಳು: ಡೈಪರ್ ಲೈನರ್‌ಗಳನ್ನು ಮಾರುಕಟ್ಟೆಯಲ್ಲಿ ಸುಲಭವಾಗಿ ಖರೀದಿಸಬಹುದು ಮತ್ತು ಬಟ್ಟೆಯೊಳಗೆ ಇಡಬಹುದು.

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ