AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಿಣಿ ಮೇಲೆ ಹರಿದ ಟ್ರಕ್, ಗರ್ಭದಿಂದ ಜೀವಂತವಾಗಿ ಹೊರ ಬಂತು ಶಿಶು

ಗರ್ಭಿಣಿ ಮೇಲೆ ಟ್ರಕ್ ಒಂದು ಹರಿದಿದ್ದು, ಗರ್ಭದಲ್ಲಿದ್ದ ಶಿಶು ಜೀವಂತವಾಗಿ ಹೊರಬಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಗರ್ಭಿಣಿ ಮೇಲೆ ಹರಿದ ಟ್ರಕ್, ಗರ್ಭದಿಂದ ಜೀವಂತವಾಗಿ ಹೊರ ಬಂತು ಶಿಶು
BabyImage Credit source: Times Of India
TV9 Web
| Edited By: |

Updated on: Jul 21, 2022 | 11:49 AM

Share

ಲಕ್ನೋ: ಗರ್ಭಿಣಿ ಮೇಲೆ ಟ್ರಕ್ ಒಂದು ಹರಿದಿದ್ದು, ಗರ್ಭದಲ್ಲಿದ್ದ ಶಿಶು ಜೀವಂತವಾಗಿ ಹೊರಬಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 26 ವರ್ಷದ ಮಹಿಳೆಯನ್ನು ಆಗ್ರಾ ನಿವಾಸಿ ಕಾಮಿನಿ ಎಂದು ಗುರುತಿಸಲಾಗಿದೆ. ಅವಳು ತನ್ನ ಪತಿಯೊಂದಿಗೆ ಬೈಕ್​ನಲ್ಲಿ ಹೆತ್ತವರ ಮನೆಗೆ ಹೋಗುತ್ತಿದ್ದರು.

ಆ ಸಮಯದಲ್ಲಿ ಎದುರಿಗೆ ಬರುತ್ತಿದ್ದ ಕಾರನ್ನು ತಪ್ಪಿಸಲು ಹೋದಾಗ ಟ್ರಕ್​ ಬೈಕ್​ಗೆ ಬಂದು ಗುದ್ದಿದ್ದು, ಮಗು ತಾಯಿಯ ಗರ್ಭದಿಂದ ಹೊರಬಂದಿತ್ತು. ಬೈಕ್​ನಲ್ಲಿದ್ದ ಮಗುವಿನ ತಂದೆಯೂ ಸುರಕ್ಷಿತವಾಗಿದ್ದಾರೆ, ಆದರೆ ಮಹಿಳೆ ಮೃತಪಟ್ಟಿರುವ ಕುರಿತು ವರದಿಯಾಗಿದೆ.

ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಡೆಯಲು ಯತ್ನಿಸಿದ ಆಕೆಯ ಪತಿ ರಾಮು ಬೈಕ್‌ನ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಕಾಮಿನಿ ಕೆಳಗೆ ಬಿದ್ದಿದ್ದು, ವೇಗವಾಗಿ ಬಂದ ಟ್ರಕ್ ಆಕೆಯ ಮೇಲೆ ಹರಿಯಿತು ಎಂದು ತಿಳಿಸಿದ್ದಾರೆ.

ಟ್ರಕ್ ಚಾಲಕ ವಾಹನ ಬಿಟ್ಟು ಓಡಿ ಹೋಗಿರುವ ಸನ್ನಿವೇಶ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪತಿ ನೀಡಿರುವ ಮಾಹಿತಿ ಆಧಾರದ ಮೇಲೆ ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ.

ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಮಗು ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಬರ್ತಾರಾ ಹಳ್ಳಿಯ ಸಮೀಪ ನಡೆದಿದೆ. ಇದು ನರ್ಖಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರುತ್ತದೆ.