20 ಶಾಸಕರ ಬೆಂಬಲವೂ ಸಿಗದ ವ್ಯಕ್ತಿ: ಸುಪ್ರೀಂ ಕೋರ್ಟ್‌ನಲ್ಲಿ ಸೇನಾ, ಶಿಂದೆ ಬಣ ಮುಖಾಮುಖಿ
ಮಹಾರಾಷ್ಟ್ರದ ಶಿವಸೇನೆಯ ಉದ್ಧವ್ ಠಾಕ್ರೆ ಬಣ, ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಬಣಕ್ಕೆ ಸೇರಿದ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಈ ಅರ್ಜಿಯ ವಿಚಾರಣೆ ನಡೆದಿದ್ದು, ಶಾಸಕರ ವಿರುದ್ಧ ಸಲ್ಲಿಸಿರುವ ಅನರ್ಹತೆ ನೋಟಿಸ್ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಮಹಾರಾಷ್ಟ್ರದ ಶಿವಸೇನೆಯ ಉದ್ಧವ್ ಠಾಕ್ರೆ ಬಣ, ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಬಣಕ್ಕೆ ಸೇರಿದ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಈ ಅರ್ಜಿಯ ವಿಚಾರಣೆ ನಡೆದಿದ್ದು, ಶಾಸಕರ ವಿರುದ್ಧ ಸಲ್ಲಿಸಿರುವ ಅನರ್ಹತೆ ನೋಟಿಸ್ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಹೊಸ ಸರ್ಕಾರದ ವಿಶ್ವಾಸಮತ ಪರೀಕ್ಷೆಗೆ ತಮ್ಮ ವಿಪ್ ಅನ್ನು ಧಿಕ್ಕರಿಸಿದ 14 ಶಿವಸೇನೆ ಶಾಸಕರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಮುಖ್ಯ ಸಚೇತಕ ಭರತ್ ಗೊಗವಾಲೆ ಅವರು ಅನರ್ಹತೆ ನೋಟಿಸ್ ನೀಡಿದ್ದರು.
ಹರೀಶ್ ಸಾಳ್ವೆ ಅನರ್ಹತೆ ಪ್ರಕ್ರಿಯೆಗಳ ಕುರಿತು ಮಾತನಾಡಿ, “ತನಗೆ ಬೆಂಬಲ ನೀಡಲು 20 ಶಾಸಕರನ್ನೂ ಹುಡುಕಲಾಗದ ವ್ಯಕ್ತಿಯನ್ನು ನ್ಯಾಯಾಲಯದ ಮೂಲಕ ಮತ್ತೆ ಅಧಿಕಾರಕ್ಕೆ ತರಬೇಕಾದಂತಹ ಹತಾಶ ಪರಿಸ್ಥಿತಿಯಲ್ಲಿ ನಾವಿದ್ದೇವೆಯೇ?” ಎಂದು ಅವರು ಹೇಳಿದರು.
ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಈ ಬಗ್ಗೆ ಅಫಿಡವಿಟ್ ಸಲ್ಲಿಸಲು ಶಿಂಧೆ ಬಣಕ್ಕೆ ಕಾಲಾವಕಾಶ ನೀಡಿದ್ದು ಆಗಸ್ಟ್ 1ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ.
ಪ್ರಮುಖ ವಿಚಾರಗಳು -ಸುಪ್ರೀಂ ಕೋರ್ಟ್ ಎಲ್ಲಾ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದ್ದು, ಈ ವಿಷಯದಲ್ಲಿ ಸಲ್ಲಿಸಲಾದ ಆರು ಅರ್ಜಿಗಳಿಗೆ ಪ್ರತಿಕ್ರಿಯೆ ಕೇಳಿದೆ. ಮುಂದಿನ ವಿಚಾರಣೆ ಆಗಸ್ಟ್ 1 ರಂದು ನಡೆಯಲಿದೆ.
-ಆರು ಅರ್ಜಿಗಳಲ್ಲಿ, ಒಂದು ಶಿಂದೆ ಬಣದಿಂದ ಬಂದಿದ್ದು, ಗುವಾಹಟಿಯಲ್ಲಿದ್ದಾಗ ಬಣದ ಶಾಸಕರ ವಿರುದ್ಧ ಡೆಪ್ಯುಟಿ ಅಸೆಂಬ್ಲಿ ಸ್ಪೀಕರ್ ನರಹರಿ ಝಿರ್ವಾಲ್ ಅವರು ಆರಂಭಿಸಿದ ಅನರ್ಹತೆಯ ಪ್ರಕ್ರಿಯೆಗಳನ್ನು ಪ್ರಶ್ನಿಸಿದ್ದಾರೆ.
– ಠಾಕ್ರೆ ಶಿಬಿರದ ಐದು ಮನವಿಗಳು ಹೊಸ ಸ್ಪೀಕರ್ ರಾಹುಲ್ ನಾರ್ವೇಕರ್ ನಡೆ, ಠಾಕ್ರೆ ಸರ್ಕಾರವು ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಬಿಎಸ್ ಕೊಶ್ಯಾರಿ ಅವರ ಆದೇಶ ಮತ್ತು ಶಿಂದೆ ಬಣದ ಶಾಸಕರನ್ನು ಅಮಾನತುಗೊಳಿಸುವಂತೆ ಕೋರಿದ ಅರ್ಜಿಯನ್ನು ಪ್ರಶ್ನಿಸಿದೆ.
-ಶಿಂದೆ ಪಾಳಯದ ಶಾಸಕರು ವಿಪ್ ಧಿಕ್ಕರಿಸಿದ್ದು, ಅನರ್ಹಗೊಳಿಸಬೇಕು ಎಂದು ಠಾಕ್ರೆ ಪರ ವಕೀಲ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದರು. -ಸುಪ್ರೀಂ ಕೋರ್ಟ್ ಕಲಾಪ ಬಾಕಿ ಇರುವಾಗ ರಾಜ್ಯಪಾಲರು ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಬಾರದಿತ್ತು ಎಂದರು.
-ಅವರಿಗೆ ಮತ ಹಾಕಿದ ಶಾಸಕರನ್ನು ಅನರ್ಹಗೊಳಿಸಬೇಕಾಗಿರುವುದರಿಂದ ವಿಧಾನಸಭೆ ಸ್ಪೀಕರ್ ಆಯ್ಕೆ ಅಸಿಂಧು ಎಂದು ಸಿಬಲ್ ವಾದಿಸಿದರು.
-ಇದೇ ರೀತಿ ಮುಂದುವರಿದರೆ ಪ್ರತಿ ಬಾರಿ 7-8 ಶಾಸಕರನ್ನು ಕರೆದುಕೊಂಡು ಹೋಗುತ್ತಾರೆ ಎಂದರು. “ಶಾಸಕರನ್ನು ಆಯ್ಕೆ ಮಾಡಿದ ಜನರ ಇಚ್ಛೆ ಏನಾಗುತ್ತದೆ? ಪಕ್ಷಾಂತರಕ್ಕೆ ಜನರು ಹೇಗೆ ಅನುಮತಿ ನೀಡುತ್ತಾರೆ ಎಂದು ಪ್ರಶ್ನಿಸಿದರು.
Published On - 10:32 am, Thu, 21 July 22