ಶಾಸಕರ ಅನರ್ಹತೆ ವಿಚಾರ: ಶಿವಸೇನಾದ ಎರಡೂ ಬಣಗಳಿಗೆ ಸುಪ್ರೀಂ ನೋಟಿಸ್, ಆಗಸ್ಟ್ 1ಕ್ಕೆ ಮುಂದಿನ ವಿಚಾರಣೆ

ಇನ್ನೂ ಶಾಸಕರನ್ನು ಅನರ್ಹಗೊಳಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಎರಡೂ ಕಡೆಯವರಿಗೆ ನೋಟಿಸ್ ಜಾರಿ ಮಾಡಿದೆ. 

ಶಾಸಕರ ಅನರ್ಹತೆ ವಿಚಾರ: ಶಿವಸೇನಾದ ಎರಡೂ ಬಣಗಳಿಗೆ ಸುಪ್ರೀಂ ನೋಟಿಸ್, ಆಗಸ್ಟ್ 1ಕ್ಕೆ ಮುಂದಿನ ವಿಚಾರಣೆ
Supreme Court
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 20, 2022 | 1:21 PM

ದೆಹಲಿ: ಮಹಾರಾಷ್ಟ್ರದ ಶಿವಸೇನಾದಲ್ಲಿನ (Shiv Sena)  ಉದ್ಧವ್ ಠಾಕ್ರೆ (Uddhav Thackeray)  ಬಣ, ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಬಣಕ್ಕೆ ಸೇರಿದ  ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಈ ಅರ್ಜಿಯ ವಿಚಾರಣೆ ಬುಧವಾರ ನಡೆದಿದೆ. ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಈ ಬಗ್ಗೆ ಅಫಿಡವಿಟ್ ಸಲ್ಲಿಸಲು ಶಿಂಧೆ ಬಣಕ್ಕೆ  ಕಾಲಾವಕಾಶ ನೀಡಿದ್ದು ಆಗಸ್ಟ್ 1ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ. ಶಿವಸೇನಾದಲ್ಲಿ ಶಿಂಧೆ ಬಂಡಾಯವೆದ್ದ ಕಾರಣ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗಿತ್ತು. ಈ ಅರ್ಜಿಯಲ್ಲಿ  ಹೇಳಿರುವ ಸಮಸ್ಯೆಗಳನ್ನು ಪರಿಹರಿಸಲು ಐವರು ನ್ಯಾಯಮೂರ್ತಿಗಳ ನ್ಯಾಯಪೀಠದ ಅಗತ್ಯವಿರುತ್ತದೆ ಎಂದು ಹೇಳಿದೆ. ಸ್ಪೀಕರ್ ಅವರು ಈಗ ಯಥಾಸ್ಥಿತಿ ಕಾಯ್ದುಕೊಳ್ಳುತ್ತಾರೆ ಮತ್ತು ಅನರ್ಹಗೊಳಿಸುವ ಅರ್ಜಿಗಳ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅದೇ ವೇಳೆ ಎಲ್ಲ ದಾಖಲೆಗಳನ್ನು ಸುರಕ್ಷಿತವಾಗಿರಿಸುವಂತೆ ಸುಪ್ರೀಂಕೋರ್ಟ್ ಶಾಸಕಾಂಗ ಸಭೆಯ ಕಾರ್ಯದರ್ಶಿಗೆ ಹೇಳಿದೆ.

ನ್ಯಾಯಾಲಯದಲ್ಲಿನ ವಿಚಾರಣೆಯ ಅಪ್​​​​ಡೇಟ್ಸ್

ಶಿವಸೇನಾದ ಉದ್ಧವ್ ಠಾಕ್ರೆ ಬಣ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದ್ದು, ಈ ವಿಚಾರ ಸುಪ್ರೀಂಕೋರ್ಟ್ ನಲ್ಲಿರುವಾಗ ರಾಜ್ಯಪಾಲರು ನೂತನ ಸರ್ಕಾರದ ಪ್ರಮಾಣವಚನ ಮಾಡಬಾರದಿತ್ತು ಎಂದಿದ್ದಾರೆ. ಅಸೆಂಬ್ಲಿ ಸ್ಪೀಕರ್ ಅವರ ಆಯ್ಕೆ ಸರಿಯಲ್ಲ ಯಾಕೆಂದರೆ ಅನರ್ಹಗೊಳಿಸಬೇಕೆಂದು ತಮ್ಮ ಕಕ್ಷಿದಾರರು ಕೋರಿರುವ ಶಾಸಕರಿಂದ ಅವರು ಚುನಾಯಿತರಾಗಿದ್ದಾರೆ. ಶಾಸಕರ ಅನರ್ಹತೆ ಅರ್ಜಿ ಇನ್ನೂ ಬಾಕಿ ಇದೆ ಎಂದಿದ್ದಾರೆ ಸಿಬಲ್. ಈ ರೀತಿ ಆದರೆ ದೇಶದಲ್ಲಿರುವ ಯಾವುದೇ ಚುನಾಯಿತ ಸರ್ಕಾರವನ್ನು ಪತನ ಮಾಡಬಹುದು. 10ನೇ ವಿಧಿಯಲ್ಲಿನ ಪ್ರತಿಬಂಧದ ಹೊರತಾಗಿಯೂ ರಾಜ್ಯ ಸರ್ಕಾರಗಳನ್ನು ಪತನ ಮಾಡಲಾಗುತ್ತದೆ ಎಂದಾದರೆ ಪ್ರಜಾತಂತ್ರ ಅಪಾಯದಲ್ಲಿದೆ ಎಂದು ಸಿಬಲ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ
Image
International Yoga Day 2022: ಮಾನವೀಯತೆಗೆ ಭಾರತ ನೀಡಿದ ಕೊಡುಗೆಯೇ ಯೋಗ; ರಾಷ್ಟ್ರಪತಿ ರಾಮನಾಥ ಕೋವಿಂದ್ ಬಣ್ಣನೆ
Image
International Yoga Day 2022: ಗಾರ್ಡಿಯನ್ ರಿಂಗ್ ಮೂಲಕ ವಿವಿಧ ದೇಶಗಳ ಯೋಗ ಪ್ರಸಾರ; 5 ಪ್ರಮುಖ ಅಂಶಗಳು ಇಲ್ಲಿವೆ
Image
Thyroid Disease and Yoga: ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ
Image
International Yoga Day 2022: ಯಾವ ರಾಶಿಯವರು ಯಾವ ಯೋಗಾಸನಗಳನ್ನು ಮಾಡಬೇಕು? ಇಲ್ಲಿದೆ ಮಾಹಿತಿ

ಠಾಕ್ರೆ ಬಣದ ಪರವಾಗಿ ಹಾಜರಾದ ಇನ್ನೊಬ್ಬ ವಕೀಲ ಅಭಿಷೇಕ್ ಮನು ಸಿಂಘ್ವಿ , ಶಾಸಕರ ಅನರ್ಹತೆ ದೂರಿನ ಬಗ್ಗೆ ಸ್ಪೀಕರ್​​ಗೆ ಗೊತ್ತಿದ್ದರೂ ಅವರು ಯಾವುದೇ ನೋಟಿಸ್ ಕಳುಹಿಸಿಲ್ಲ ಎಂದಿದ್ದಾರೆ. 10ನೇ ಶೆಡ್ಯೂಲ್ ನಲ್ಲಿರುವ ಷರತ್ತು ಎಂದು ನೀವು 2/3ನ್ನು ಹೊಂದಿರಬೇಕು ಮತ್ತು 2/3 ಇನ್ನೊಂದು ಪಕ್ಷದೊಂದಿಗೆ ವಿಲೀನವಾಗಿರಬೇಕು. ನನ್ನ ಸ್ನೇಹಿತರು ಇನ್ನೊಂದು ಪಕ್ಷದೊಂದಿಗೆ ವಿಲೀನ ಆಗಿಲ್ಲ. ಅವರು ತಮ್ಮನ್ನು ಬಿಜೆಪಿ ಎಂದು ಕರೆದುಕೊಳ್ಳುತ್ತಿಲ್ಲ ಎಂದಿದ್ದಾರೆ ಸಿಂಘ್ವಿ.

ಇದಕ್ಕೆ ಉತ್ತರಿಸಿದ ಏಕನಾಥ್ ಶಿಂಧೆ ಪರ ವಾದಿಸುತ್ತಿರುವ ಹಿರಿಯ ನ್ಯಾಯವಾಗಿ ಹರೀಶ್ ಸಾಳ್ವೆ, ಪಕ್ಷದಲ್ಲಿರುವ ಒಂದು ದೊಡ್ಡ ಗುಂಪು ಬೇರೊಬ್ಬರು ತಮ್ಮ ಪಕ್ಷದ ನೇತೃತ್ವ ವಹಿಸಲಿ ಎಂದು ಬಯಸುವುದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ. ಪಕ್ಷದಲ್ಲೇ ನಿಂತು, ತಮ್ಮ ನಾಯಕರನ್ನು ಪ್ರಶ್ನಿಸಿದರೆ ಏನು? ನಾವು ನಿಮ್ಮನ್ನು ವಿಧಾನಸಭೆಯಲ್ಲಿ ಸೋಲಿಸುತ್ತೇವೆ ಎಂದರೆ ಅದು ಪಕ್ಷಾಂತರ ಅಲ್ಲ. ನೀವು ಪಕ್ಷವನ್ನು ತೊರೆದು ಇನ್ನೊಂದು ಪಕ್ಷಕ್ಕೆ ಸೇರಿದರೆ ಮಾತ್ರ ಪಕ್ಷಾಂತರ. ಅದೇ ಪಕ್ಷದಲ್ಲಿ ಇದ್ದರೆ ಅಲ್ಲ ಎಂದಿದ್ದಾರೆ ಸಾಳ್ವೆ.

ಪಕ್ಷದಲ್ಲಿ ಒಡಕು ಇಲ್ಲವೆಂದಾದರೆ , 10ನೇ ಶೆಡ್ಯೂಲ್ ಪ್ರಕಾರ ಯಾವ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮುಖ್ಯನ್ಯಾಯಮೂರ್ತಿ ಕೇಳಿದ್ದಾರೆ. ನಾವು ಫ್ಯಾಂಟಸಿ ಜಗತ್ತಿನಲ್ಲಿ ಇದ್ದೇವೆಯೇ? 20 ಶಾಸಕರ ಬೆಂಬಲ ಸಿಗದೇ ಇರುವವರನ್ನು ಮುಖ್ಯಮಂತ್ರಿ ಮಾಡಬೇಕೇ ಎಂದು ಸಾಳ್ವೆ ಕೇಳಿದ್ದಾರೆ. ಈ ಅರ್ಜಿಯಲ್ಲಿ ಕೆಲವು ಸಮಸ್ಯೆಗಳಿವೆ. ಹಾಗಾಗಿ ಇದಕ್ಕೆ ದೊಡ್ಡ ನ್ಯಾಯಪೀಠದ ಅಗತ್ಯವಿದೆ ಎಂದು ಅನಿಸುತ್ತದೆ ಎಂದಿದ್ದಾರೆ ಸಿಜೆಐ.

ಠಾಕ್ರೆ ಬಣ ಸಲ್ಲಿಸಿದ ಅರ್ಜಿಗೆ ಉತ್ತರಿಸಲು ಕಾಲಾವಕಾಶ ಬೇಕು ಹಾಗಾಗಿ ಮುಂದಿನ ವಾರಕ್ಕೆ ವಿಚಾರಣೆ ಮುಂದೂಡಬೇಕು ಎಂದು ಸಾಳ್ವೆ ಮನವಿ ಮಾಡಿದ್ದಾರೆ. ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ಎರಡೂ ಬಣಗಳಿಗೆ ನೋಟಿಸ್ ಜಾರಿ ಮಾಡಿದ್ದು, ಆಗಸ್ಟ್ 1ಕ್ಕೆ ವಿಚಾರಣೆ ಮುಂದೂಡಿದೆ.

Published On - 12:47 pm, Wed, 20 July 22

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು