Garbhageete: ಗರ್ಭಿಣಿಯರು 9ನೇ ತಿಂಗಳಲ್ಲಿ ಅನುಸರಿಸಬೇಕಾದ ಕ್ರಮಗಳೇನು?
9ನೇ ತಿಂಗಳಲ್ಲಿ ಗರ್ಭಕೋಶ ಎದೆಯ ಮೂಲೆಯ ಹಂದರದವರೆಗೆ ಬೆಳೆದಿರುತ್ತದೆ. ಮಗುವಿನ ತಲೆ ಕಿಬ್ಬೊಟ್ಟೆಯತ್ತ ಸರಿದು ಗರ್ಭಿಣಿಯು ರೋಮಾಂಚನದ ಝಳುಕು ಅನುಭವಿಸುತ್ತಾಳೆ
9ನೇ ತಿಂಗಳಲ್ಲಿ ಗರ್ಭಕೋಶ ಎದೆಯ ಮೂಲೆಯ ಹಂದರದವರೆಗೆ ಬೆಳೆದಿರುತ್ತದೆ. ಮಗುವಿನ ತಲೆ ಕಿಬ್ಬೊಟ್ಟೆಯತ್ತ ಸರಿದು ಗರ್ಭಿಣಿಯು ರೋಮಾಂಚನದ ಝಳುಕು ಅನುಭವಿಸುತ್ತಾಳೆ. ಈ ಸಂದರ್ಭದಲ್ಲಿ ಗರ್ಭಿಣಿಗೆ ಅನುವಾಸನ ಬಸ್ತಿಯನ್ನು ನೀಡಿ ಅವಳ ಜನನಾಂಗಗಳನ್ನು ಹೆರಿಗೆಗೆ ಸುಲಭಗೊಳಿಸಲು ಔಷಧಿಯುಕ್ತ ತೈಲಗಳನ್ನು ಹೇಳಬೇಕಾಗುತ್ತದೆ. ಹೀಗೆ ಮಾಡುವುದರಿಂದ ಕರುಳಿನಿಂದ ಮಲವು ಚಲಿಸಲು ಅನುಕೂಲವಾಗಿ ಹೆರಿಗೆ ಸುಲಭವಾಗಿ ಆಗಲು ಸಹಾಯ ಮಾಡುತ್ತದೆ.
ಯಾವುದೇ ಕ್ಷಣದಲ್ಲಿ ಹೊರಬರಲು ಮಗು ಸಿದ್ಧವಾಗಿರುತ್ತದೆ, ಹಿಂದಿನ ಕಾಲದಂತೆ ಇಂದಿನ ಕಾಲದ ಮಹಿಳೆಯು ಹೆಚ್ಚು ಮಕ್ಕಳ ತಾಯಿಯಾಗುವ ಕಾಲವಲ್ಲ. ಮಹಿಳೆ ಇಡೀ ತನ್ನ ದಾಂಪತ್ಯ ಜೀವನದಲ್ಲಿ ಒಂದು ಅಥವಾ ಎರಡು ಮಕ್ಕಳನ್ನು ಮಾತ್ರ ಹೆರಲು ಬಯಸುತ್ತಾಳೆ.
ಗರ್ಭ ಧರಿಸಿದ ಕಾಲ ಮತ್ತು ಹುಟ್ಟುವ ಮಕ್ಕಳ ದೈಹಿಕ ಹಾಗೂ ಮಾನಸಿಕ ಸ್ಥಿತಿ ಬಹಳ ಮುಖ್ಯವಾದದ್ದು ಆದ್ದರಿಂದ ತನ್ನ ಹಾಗೂ ಹುಟ್ಟುವ ಮಗುವಿನ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಹಾರ, ವ್ಯಾಯಾಮಗಳಲ್ಲಿ ಕ್ರಮ ಬದ್ಧತೆಯನ್ನು ಪಾಲಿಸಿದಲ್ಲಿ ಆರೋಗ್ಯವಂತ ಹಾಗೂ ಬುದ್ಧಿವಂತ ಮಕ್ಕಳ ಜನನ ಸಾಧ್ಯವಾಗುತ್ತದೆ.
ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.
ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.