AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Garbhageete: ಐದನೇ ತಿಂಗಳು ಗರ್ಭಿಣಿಯರು ಅನುಸರಿಸಬೇಕಾದ ಕ್ರಮಗಳೇನು?

ಗರ್ಭಿಣಿಯರು ತಮ್ಮ ಐದನೇ ತಿಂಗಳಿನಲ್ಲಿ ಹಿಂದಿನ ನಾಲ್ಕು ತಿಂಗಳುಗಳಿಗಿಂತ ಮಾಂಸ ಮತ್ತು ರಕ್ತ ಧಾತುಗಳು ವೃದ್ಧಿ ಹೊಂದುತ್ತವೆ. ಈ ಸಮಯದಲ್ಲಿ ಭ್ರೂಣವು ಬಲವಾಗಿ ಒದೆಯುತ್ತದೆ. ಈ ಮೂಲಕ ತನ್ನ ಇರುವನ್ನು ವ್ಯಕ್ತಪಡಿಸುತ್ತದೆ.

Garbhageete: ಐದನೇ ತಿಂಗಳು ಗರ್ಭಿಣಿಯರು ಅನುಸರಿಸಬೇಕಾದ ಕ್ರಮಗಳೇನು?
Kamala Bharadwaj
TV9 Web
| Edited By: |

Updated on: Jun 30, 2022 | 8:30 PM

Share

ಗರ್ಭಿಣಿಯರು ತಮ್ಮ ಐದನೇ ತಿಂಗಳಿನಲ್ಲಿ ಹಿಂದಿನ ನಾಲ್ಕು ತಿಂಗಳುಗಳಿಗಿಂತ ಮಾಂಸ ಮತ್ತು ರಕ್ತ ಧಾತುಗಳು ವೃದ್ಧಿ ಹೊಂದುತ್ತವೆ. ಈ ಸಮಯದಲ್ಲಿ ಭ್ರೂಣವು ಬಲವಾಗಿ ಒದೆಯುತ್ತದೆ. ಈ ಮೂಲಕ ತನ್ನ ಇರುವನ್ನು ವ್ಯಕ್ತಪಡಿಸುತ್ತದೆ.

ಐದನೇ ತಿಂಗಳಲ್ಲಿ ಗರ್ಭಿಣಿಯರು ಹೇಗೆಲ್ಲಾ ಆರೈಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಯೋಗ ತಜ್ಞೆ  ಕಮಲಾ ಭಾರತದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.

ಮಾಂಸಖಂಡಗಳ ಬೆಳವಣಿಗೆಗಳು ಆಗುತ್ತವೆ, ತಲೆಯ ಮೇಲೆ ಕೂದಲುಗಳು ಕಾಣಿಸಿಕೊಳ್ಳುತ್ತವೆ, ಹೀಗಾಗಿ ಗರ್ಭಿಣಿಯು ಘಮ್ಮೆನ್ನುವ ತುಪ್ಪ ಹಾಗೂ ಹಾಲು, ಅನ್ನ ಇವೆಲ್ಲವನ್ನೂ ಸೇವಿಸಬೇಕು. ಅನ್ನದ ಗಂಜಿ ತಯಾರಿಸಿ ಅದಕ್ಕೆ ತುಪ್ಪ ಉಪ್ಪು ಬೆರೆಸಿ ಸೇವಿಸಬೇಕು. ಅನ್ನಕ್ಕೆ ಹಾಲು, ಸಕ್ಕರೆ ಬೆರೆಸಿ ಗೋಡಂಬಿ, ದ್ರಾಕ್ಷಿ ಹಾಕಿ ಪಾಯಸ ತಯಾರಿಸಿ ಸೇವಿಸಬೇಕು.

ತನ್ನ ಹಾಗೂ ಮಗುವಿನ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದಕ್ಕೆ ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಸುವರ್ಣವಜಾ ಎಂಬುದನ್ನು ಸೇವಿಸಬೇಕು, ಇದು ಗರ್ಭಧರಿಸಿದಾಗಿನಿಂದ ಆರಂಭಿಸಿ ಹೆರಿಗೆಯವರೆಗೂ ಮತ್ತು ಮಗು ಹುಟ್ಟಿದ ನಂತರ ಮಗುವಿಗೆ ನೀಡಬೇಕು ಆಗ ಯಾವುದೇ ಕಾಯಿಲೆ ಭಾದಿಸುವುದಿಲ್ಲ.

ಆಯುರ್ವೇದ ವೈದ್ಯರ ಮಾರ್ಗದರ್ಶನದಲ್ಲಿ ಈ ಔಷಧಿ ಸಿಗುತ್ತದೆ, ಮತ್ತೆ ಅವರ ಮಾರ್ಗದರ್ಶನವನ್ನು ತೆಗೆದುಕೊಂಡು ಈ ಔಷಧಿಯನ್ನು ಸೇವಿಸಬೇಕು.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.