Health: ನಿಮ್ಮನ್ನು ಕಾಡುವ ತಲೆನೋವು ಎಂಥದೆಂದು ತಿಳಿದುಕೊಂಡಿದ್ದೀರಾ?

Headache : ತಲೆನೋವು ಒಬ್ಬೊಬ್ಬರಿಗೆ ಒಂದೊಂದು ರೀತಿ ಬರುತ್ತದೆ. ತಲೆನೋವಿನಲ್ಲಿರುವ ಬಗೆಗಳೇನು? ಯಾಕೆ ಆ ತಲೆನೋವು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

Health: ನಿಮ್ಮನ್ನು ಕಾಡುವ ತಲೆನೋವು ಎಂಥದೆಂದು ತಿಳಿದುಕೊಂಡಿದ್ದೀರಾ?
Source: st.theresahospital
TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Jun 30, 2022 | 3:24 PM

Headache : ತಲೆನೋವೇ ಇಲ್ಲ ಎಂದು ಹೇಳದವರು ಇಡೀ ಜಗತ್ತಿನಲ್ಲಿ ಅಪರೂಪ. ವಿಶ್ವದಾದ್ಯಂತ ಶೇ. 75 ರಷ್ಟು ಜನರು ತಲೆನೋವಿಗೆ ಒಳಗಾಗುತ್ತಿರುತ್ತಾರೆ ಎನ್ನುತ್ತಾರೆ ವೈದ್ಯರು. ಸಾಮಾನ್ಯವಾದ ಕಾಯಿಲೆಯಾದ ಈ ತಲೆನೋವು ಎಲ್ಲರಿಗೂ ಒಂದೇ ತೆರನಾಗಿ ಇರುವುದಿಲ್ಲ. ತಲೆನೋವಿನ ಸ್ವರೂಪವನ್ನು ಅವರವರ ಮುಖಲಕ್ಷಣಗಳಿಂದಲೇ ತಿಳಿಯಬಹುದು. ನೋವು ತೀವ್ರವಾಗಿದ್ದಾಗ ಸುಸ್ತು, ಅಸ್ವಸ್ಥತೆ ಸ್ಪಷ್ಟವಾಗಿ ತೋರುತ್ತದೆ. ತಕ್ಷಣಕ್ಕೆ ಮಾತ್ರೆಗಳಿಂದ ತಲೆನೋವು ಶಮನ ಮಾಡಿಕೊಳ್ಳುವುದು ಒಂದು ಉಪಾಯವಾದರೂ ಕೆಲಬಗೆಯ ತಲೆನೋವು ಮೂರು ದಿನಗಳಿಂದ ಮೂರು ತಿಂಗಳವರೆಗೂ ಮುಂದುವರೆಯುವ ಸಾಧ್ಯತೆ ಇರುತ್ತದೆ. ಅದು ಗಂಭೀರವಾದ ಕಾಯಿಲೆಗೆ ತಿರುಗುವ ಅಪಾಯವಿರುತ್ತದೆ. ಆದ್ದರಿಂದ ಕಾಡುವ ತಲೆನೋವು ಎಂಥದ್ದು, ಅದರ ಲಕ್ಷಣಗಳೇನು? ಅವಧಿಯೇನು ಎಂಬುದನ್ನು ನಿಮ್ಮಷ್ಟಕ್ಕೆ ನೀವೇ ಗಮನಿಸಿಕೊಂಡು ನೋಟ್ ಮಾಡಿಕೊಂಡು ಒಂದು ಅಂದಾಜಿಗೆ ಬರಬಹುದು. ನಂತರ ವೈದ್ಯರ ಬಳಿ ಹೋಗಿ ಅವಶ್ಯ ಚಿಕಿತ್ಸೆ ಪಡೆಯಬಹುದು. ಹಾಗಾದರೆ ತಲೆನೋವಿನಲ್ಲಿ ಎಷ್ಟು ಬಗೆಗಳಿವೆ ಎಂಬುದನ್ನು ತಿಳಿದುಕೊಳ್ಳಿ.

ಮೊದಲ ಹಂತದ ತಲೆನೋವು ಇತರೇ ಕಾಯಿಲೆಗಳಿಂದ ಬರುವಂಥದ್ದಲ್ಲ

ಕ್ಲಸ್ಟರ್ ತಲೆನೋವು ಮೈಗ್ರೇನ್ ನಿರಂತರ ತಲೆನೋವು ಒತ್ತಡದ ತಲೆನೋವು

ಎರಡನೇ ಹಂತದ ತಲೆನೋವು ಇತರೇ ಕಾಯಿಲೆಗಳಿಂದ ಬರುತ್ತವೆ

ಮೆದುಳಿನ ರಕ್ತನಾಳದ ಕಾಯಿಲೆ ಮಿದುಳಿನ ಗಾಯ ಅಧಿಕ ರಕ್ತದೊತ್ತಡ ಸೋಂಕು ಔಷಧಿಗಳ ಅತಿಯಾದ ಬಳಕೆ ಸೈನಸ್ ಆಘಾತ ಗೆಡ್ಡೆ (ಹೀಗಾದಾಗ ದೃಷ್ಟಿ ಎರಡೆರಡಾಗಿ ಕಾಣುತ್ತದೆ)

ಇದನ್ನೂ ಓದಿ : Health: ಸಸ್ಯಾಧಾರಿತ ಮಾಂಸ ಏನು ಹೀಗೆಂದರೆ?

ಇಂಥ ತಲೆನೋವಿನಿಂದ ದೈನಂದಿನ ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯ ಕಳೆದುಹೋಗುತ್ತದೆ. ನಿದ್ರೆ ತ್ರಾಸದಾಯಕವಾಗಿರುತ್ತದೆ. ವಾಂತಿ ಮತ್ತು ವಾಕರಿಕೆ ನಿರಂತರವಾಗಿರುತ್ತದೆ. ಆಗ ಕೈಕಾಲುಗಳು ಸೋತಂತಾಗುತ್ತದೆ. ತೊದಲುವಿಕೆಯೂ ಇರುತ್ತದೆ. ನೋವು ನಿವಾರಕ ಮಾತ್ರೆಗಳಿಂದಲೂ ಇದು ವಾಸಿಯಾಗಲಾರದು.

ತಲೆನೋವು ಸಾಮಾನ್ಯವಾಗಿ ಆನುವಂಶಿಕವಾಗಿರುತ್ತದೆ. ದೀರ್ಘಕಾಲದ ತಲೆನೋವಿಗೆ ಒಳಗಾಗುವುದರಿಂದ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಎಂಆರ್​ಐ, ಎಂಆರ್​ಎ ತಂತ್ರಜ್ಞಾನದ ಮೂಲಕ ಪರೀಕ್ಷೆಗೆ ಒಳಪಡುವುದು ಸೂಕ್ತ.

ತಲೆನೋವು ಗುರುತಿಸುವುದು ಹೇಗೆ

ದೈಹಿಕ ಪರೀಕ್ಷೆಯ ಮೂಲಕ ರೋಗನಿರ್ಣಯಿಸಲು ಸಾಧ್ಯ. ಅದಕ್ಕಿಂತ ಮೊದಲು ತಲೆನೋವಿನ ಪ್ರಮಾಣ, ಸಮಯ, ತೀವ್ರತೆಯ ಬಗ್ಗೆ ನೋಟ್ ಮಾಡಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಟ್ಟುಕೊಳ್ಳಿ. ಆಗ ವೈದ್ಯರ ಬಳಿಗೆ ಹೋದಾಗ ತಲೆನೋವಿನ ಪ್ರಕಾರವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ.

ತೀವ್ರ ತಲೆನೋವಿಗೆ ಕಾರಣ

ಮೈಗ್ರೇನ್ ಮಹಿಳೆಯರಲ್ಲಿ ಹೆಚ್ಚು. ಹಸಿವು ತಡೆಗಟ್ಟುವುದು, ಉದ್ವೇಗಕ್ಕೆ ಒಳಗಾಗುವುದು, ಅತಿಯಾಗಿ ಯೋಚಿಸುವುದು, ಅತಿಯಾದ ನಿದ್ರೆ, ಪ್ರಕಾಶಮಾನವಾದ ದೀಪಗಳು ಅಥವಾ ನಿದ್ರೆಗೆಡುವುದು ಇವೇ ಮೈಗ್ರೇನ್​ಗೆ ಕಾರಣ. ಇದರ ಪರಿಣಾಮವಾಗಿ ಮೆದುಳಿನ ಅರ್ಧಭಾಗವು ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ.

ಯುವಜನತೆಯಲ್ಲಿ ಕ್ಲಸ್ಟರ್ ತಲೆನೋವು ಸಾಮಾನ್ಯ. ಒಂದೇ ಸಮ ಕಣ್ಣು, ಮೂಗಿನಿಂದ ನೀರು ಹರಿಯುತ್ತಿರುತ್ತದೆ. ಇದನ್ನು ಸೈನಸ್ ಎಂದೂ ಹೇಳಲಾಗುತ್ತದೆ.

ಇದನ್ನೂ ಓದಿ : Health: ಅಜೀರ್ಣಕ್ಕೆ ಅಜವಾನ್! ಔಷಧಿ ಅಂಗಡಿಗೆ ಹೋಗುವ ಮೊದಲು ಅಡುಗೆಮನೆಗೆ ಹೋಗಿ

ಥಂಡರ್‌ಕ್ಲ್ಯಾಪ್ ತಲೆನೋವು ಅತ್ಯಂತ ತೀವ್ರಥರದ ತಲೆನೋವು, ಇದು ರಕ್ತದೊತ್ತಡಕ್ಕೆ ಸಂಬಂಧಿಸಿದ್ದು, ವ್ಯಾಯಾಮದ ನಂತರ ಪ್ರಜ್ಞಾಹೀನತೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.

ವಯಸ್ಸಾದವರು ಬಿದ್ದಾಗ ಅಥವಾ ಆಘಾತದಿಂದ ಉಂಟಾಗುವುದೇ ಸಬ್​ಡ್ಯೂರಲ್ ತಲೆನೋವು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಈ ನೋವು ಬರುತ್ತದೆ.

ಯಾವಾಗ ವೈದ್ಯಕೀಯ ನೆರವು ಪಡೆಯಬೇಕು?

ಎಪಿಸೋಡಿಕ್ ತಲೆನೋವು ಸಾಮಾನ್ಯವಾಗಿ 48 ಗಂಟೆಗಳ ಒಳಗೆ ಕಡಿಮೆಯಾಗುತ್ತದೆ. ಎರಡು ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ ಅಥವಾ ತಿಂಗಳಿಗೆ 15 ದಿನಗಳಿಗಿಂತ ಹೆಚ್ಚು ಮೂರು ತಿಂಗಳವರೆಗೆ ಮುಂದುವರಿದರೆ ಅಗತ್ಯವಾಗಿ ವೈದ್ಯರನ್ನು ಕಾಣಬೇಕು. ಅಗತ್ಯವಾದ ಚಿಕಿತ್ಸೆ, ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada