ಸದಾ ಹಸಿವಿನ ಅನುಭವವಾಗುತ್ತದೆಯೇ? ನಿಮಗೆ ಈ ಕಾಯಿಲೆ ಇರಬಹುದು

ಅತಿಯಾಗಿ ತಿನ್ನುವುದೂ ಒಂದು ಕಾಯಿಲೆ, ನಿಮಗೆ ಇಷ್ಟವಾದ ಆಹಾರವನ್ನು ಒಂದು ಬಾರಿ ತಿನ್ನುವುದು ಬೇರೆ ಆದರೆ ಪ್ರತಿ ಐದು, ಹತ್ತು ನಿಮಿಷಗಳಿಗೊಮ್ಮೆ ಅತಿಯಾದ ಆಹಾರ ಸೇವನೆಯೂ ಒಂದು ಕಾಯಿಲೆಯಾಗಿದೆ. ವಿಶ್ವದಲ್ಲಿರುವ ಶೇ. 2ಕ್ಕಿಂತ ಹೆಚ್ಚು ಮಂದಿ Binge Eating Disorderನಿಂದ ಬಳಲುತ್ತಿದ್ದಾರೆ

ಸದಾ ಹಸಿವಿನ ಅನುಭವವಾಗುತ್ತದೆಯೇ? ನಿಮಗೆ ಈ ಕಾಯಿಲೆ ಇರಬಹುದು
Food
TV9kannada Web Team

| Edited By: Nayana Rajeev

Jun 30, 2022 | 4:04 PM

ಅತಿಯಾಗಿ ತಿನ್ನುವುದೂ ಒಂದು ಕಾಯಿಲೆ, ನಿಮಗೆ ಇಷ್ಟವಾದ ಆಹಾರವನ್ನು ಒಂದು ಬಾರಿ ತಿನ್ನುವುದು ಬೇರೆ ಆದರೆ ಪ್ರತಿ ಐದು, ಹತ್ತು ನಿಮಿಷಗಳಿಗೊಮ್ಮೆ ಅತಿಯಾದ ಆಹಾರ ಸೇವನೆಯೂ ಒಂದು ಕಾಯಿಲೆಯಾಗಿದೆ. ವಿಶ್ವದಲ್ಲಿರುವ ಶೇ. 2ಕ್ಕಿಂತ ಹೆಚ್ಚು ಮಂದಿ Binge Eating Disorderನಿಂದ ಬಳಲುತ್ತಿದ್ದಾರೆ. ಅತಿ ಹೆಚ್ಚು ತಿನ್ನುವುದರಿಂದ ದೇಹದಲ್ಲಿ ಕೊಬ್ಬು, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆಗಳು ಹೆಚ್ಚಾಗುತ್ತದೆ.

ಟಿವಿ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡಿದರೆ ಎಷ್ಟು ಪ್ರಮಾಣದಲ್ಲಿ ಆಹಾರವನ್ನು ನಾವು ಸೇವನೆ ಮಾಡುತ್ತೇವೆ ಎಂಬುದೇ ತಿಳಿಯುವುದಿಲ್ಲ. ಅತಿ ಹೆಚ್ಚು ತಿನ್ನಲು ಕಾರಣಗಳು -ಒತ್ತಡ -ಆತ್ಮಹತ್ಯಾ ಯೋಚನೆಗಳು -ಅಡಿಕ್ಷನ್ -ತೂಕದ ಕುರಿತು ತುಂಬಾ ತಲೆಕೆಡಿಸಿಕೊಂಡಿರುವುದು

ಏನು ನೋಡಿದರೂ ತಿನ್ನಬೇಕು ಎನಿಸುವುದು: ಕೆಲವರಿಗೆ ಏನು ನೋಡಿದರೂ ತಿನ್ನಬೇಕು ಅನಿಸುತ್ತದೆ. ಇದು ಮನಸ್ಸಿನ ಭಾವನೆಯಾಗಿರುತ್ತೆ. ಪ್ರತಿಯೊಂದು ಭಾವನೆಯು ನಿಮ್ಮನ್ನು ಅತಿಯಾಗಿ ತಿನ್ನುವಂತೆ ಮಾಡುವುದಿಲ್ಲ. ನೀವು ಒತ್ತಡವನ್ನು ತೊಡೆದು ಹಾಕಲು ಸಾಧ್ಯವಾಗದಿದ್ದ ಸಮಯದಲ್ಲಿ ನಕಾರಾತ್ಮಕ ಭಾವನೆಗಳು ಅತಿಯಾಗಿ ತಿನ್ನಲು ಪ್ರಚೋದನೆ ಮಾಡುತ್ತೆ.

ಎಂಥಹ ಸಮಯದಲ್ಲಿ ಹೆಚ್ಚು ತಿನ್ನುವುದು ರೂಢಿಯಾಗುತ್ತದೆ ಯಾವುದೇ ಖಿನ್ನತೆಯಿಂದ ಬಳಲುತ್ತಿದ್ದರೆ, ಕೋಪ, ಉದ್ವೇಗ, ಭಯ, ಒಂಟಿತನಕ್ಕೆ ಒಳಗಾದರೆ ಅಥವಾ ಯಾವುದೇ ಬೇಸರದಲ್ಲಿದ್ದರೆ ನಕಾರಾತ್ಮಕ ಭಾವನೆಗಳನ್ನು ನಿಗ್ರಹಿಸಲು ಅನೇಕರು ಆಹಾರವನ್ನ ಹೆಚ್ಚಾಗಿ ತಿನ್ನುವುದನ್ನು ರೂಢಿಸಿಕೊಳ್ತಾರೆ.

ಅನೇಕ ಅಭ್ಯಾಸಗಳಂತೆ, ಆಹಾರ ಪದ್ಧತಿಯನ್ನು ಬದಲಾಯಿಸಬಹುದು ಮತ್ತು ಸರಿಪಡಿಸಬಹುದು. ಆದರೆ ಬಹಳ ದಿನಗಳಿಂದ ಈ ಅಭ್ಯಾಸವಿದ್ದರೆ ಹೊರಬರಲು ಸ್ವಲ್ಪ ಕಷ್ಟವಾದರೂ ಖಂಡಿತ ಬದಲಾಯಿಸಬಹುದು.

ಕಡಿಮೆ ಪೌಷ್ಟಿಕಾಂಶದ ಮೌಲ್ಯದೊಂದಿಗೆ ಹೆಚ್ಚಿನ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸುವ ಮೂಲಕ ಒತ್ತಡದಂತಹ ನಕಾರಾತ್ಮಕ ಭಾವನೆಗಳಿಗೆ ಭಾವನಾತ್ಮಕ ಆಹಾರದೊಂದಿಗೆ ಅನೇಕ ಜನರು ಪ್ರತಿಕ್ರಿಯಿಸುತ್ತಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada