High Blood Pressure: ಅಧಿಕ ರಕ್ತದೊತ್ತಡ ಸದ್ದಿಲ್ಲದೇ ಸಾವಿನ ದವಡೆಗೆ ತಳ್ಳಬಹುದು: ಈ ಲಕ್ಷಣ ಬಗ್ಗೆ ಎಚ್ಚರವಿರಲಿ

ಅಧಿಕ ರಕ್ತದೊತ್ತಡ( High Blood Pressure)ವು ನಿಮಗೇ ಅರಿವಿಲ್ಲದಂತೆ ನಿಮ್ಮನ್ನು ಸಾವಿನ ದವಡೆಗೆ ತಳ್ಳಬಹುದು, ಹೀಗಾಗಿ ಕೆಲವು ಲಕ್ಷಣಗಳ ಬಗ್ಗೆ ಜಾಗ್ರತೆವಹಿಸುವುದು ಉತ್ತಮ. ಹೈ ಬಿಪಿಯು ಪಾರ್ಶ್ವವಾಯು, ಹೃದಯಾಘಾತಕ್ಕೂ ಕಾರಣವಾಗಬಹುದು, ರಕ್ತದೊತ್ತಡ ಹೆಚ್ಚಾದಂತೆ ಹೃದಯಕ್ಕೆ ಆಕ್ಸಿಜನ್ ಹಾಗೂ ರಕ್ತದ ಸಂಚಾರದಲ್ಲಿ ವ್ಯತ್ಯಾಸ ಉಂಟಾಗಲಿದೆ.

High Blood Pressure: ಅಧಿಕ ರಕ್ತದೊತ್ತಡ ಸದ್ದಿಲ್ಲದೇ ಸಾವಿನ ದವಡೆಗೆ ತಳ್ಳಬಹುದು: ಈ ಲಕ್ಷಣ ಬಗ್ಗೆ ಎಚ್ಚರವಿರಲಿ
High Blood Pressure
Follow us
TV9 Web
| Updated By: ನಯನಾ ರಾಜೀವ್

Updated on: Jul 01, 2022 | 9:00 AM

ಅಧಿಕ ರಕ್ತದೊತ್ತಡ( High Blood Pressure)ವು ನಿಮಗೇ ಅರಿವಿಲ್ಲದಂತೆ ನಿಮ್ಮನ್ನು ಸಾವಿನ ದವಡೆಗೆ ತಳ್ಳಬಹುದು, ಹೀಗಾಗಿ ಕೆಲವು ಲಕ್ಷಣಗಳ ಬಗ್ಗೆ ಜಾಗ್ರತೆವಹಿಸುವುದು ಉತ್ತಮ. ಹೈ ಬಿಪಿಯು ಪಾರ್ಶ್ವವಾಯು, ಹೃದಯಾಘಾತಕ್ಕೂ ಕಾರಣವಾಗಬಹುದು, ರಕ್ತದೊತ್ತಡ ಹೆಚ್ಚಾದಂತೆ ಹೃದಯಕ್ಕೆ ಆಕ್ಸಿಜನ್ ಹಾಗೂ ರಕ್ತದ ಸಂಚಾರದಲ್ಲಿ ವ್ಯತ್ಯಾಸ ಉಂಟಾಗಲಿದೆ.

ಅಮೆರಿಕನ್ ಹಾರ್ಟ್​ ಅಸೋಸಿಯೇಷನ್ ಪ್ರಕಾರ, ಬಿಪಿಯು 120ಕ್ಕಿಂತ ಹೆಚ್ಚಾಗದಂತೆ 80ಕ್ಕಿಂತ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಅಧಿಕ ರಕ್ತದೊತ್ತಡದ ಲಕ್ಷಣಗಳು -ವಿಪರೀತ ತಲೆನೋವು -ಕಣ್ಣು ಮಂಜಾಗುವುದು -ಉಸಿರಾಟದ ಸಮಸ್ಯೆ -ತೂಕ ಹೆಚ್ಚಳ -ಆಯಾಸ

ಬಿಪಿ ನಿಯಂತ್ರಿಸುವುದು ಹೇಗೆ ಉಪ್ಪಿನ ಬಳಕೆ ಕಡಿಮೆ ಮಾಡಿ: ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಸೇವಿಸಿದರೆ ಅದರಲ್ಲಿರುವ ಸೋಡಿಯಂ ಅಂಶವು ಹೃದಯದ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ. ನಿತ್ಯ ಸಾಧ್ಯವಾಗದಿದ್ದರೂ ವಾರಕ್ಕೊಮ್ಮೆಯಾದರೂ ಒಂದು ದಿನ ಪೂರ್ತಿ ಉಪ್ಪಿಲ್ಲದ ಅಡುಗೆಯನ್ನು ಊಟ ಮಾಡಿ.

ಮದ್ಯಪಾನ ಬಿಟ್ಟುಬಿಡಿ: ಅತಿ ಹೆಚ್ಚು ಮದ್ಯಪಾನವೂ ಕೂಡ ರಕ್ತದೊತ್ತಡಕ್ಕೆ ಕಾರಣವಾಗಬಹುದು, ಇದು ನಿಮ್ಮ ಹೃದಯದ ಮೇಲೂ ಪರಿಣಾಮ ಬೀರುತ್ತದೆ. ನೀವು ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ವಾರಕ್ಕೊಮ್ಮೆ ಮದ್ಯಪಾನ ಮಾಡಿ.

ಒತ್ತಡವನ್ನು ನಿಯಂತ್ರಿಸಿ: ಸುಕಾಸುಮ್ಮನೆ ಯಾವುದೋ ವಿಷಯಕ್ಕೆ ಆತಂಕಗೊಳ್ಳುವುದು, ಒತ್ತಡವನ್ನು ತಂದುಕೊಳ್ಳುವುದು ಬೇಡ, ಹೆಚ್ಚಿನ ಒತ್ತಡವು ರಕ್ತದೊತ್ತಡವನ್ನು ಹೆಚ್ಚು ಮಾಡುತ್ತದೆ. ನಿತ್ಯ ಧ್ಯಾನ ಮಾಡಿ, ಹಾಡು ಕೇಳಿ, ವ್ಯಾಯಾಮ ಮಾಡಿ.

ನಿರಂತರ ವ್ಯಾಯಾಮ ಇರಲಿ: ನೀವು ನಿತ್ಯ ವ್ಯಾಯಾಮ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಚೀಸ್: ಚೀಸ್ ಕೂಡ ಹೆಚ್ಚಿನ ಪ್ರಮಾಣದ ಸೋಡಿಯಂ ಅನ್ನು ಹೊಂದಿರುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಇದನ್ನು ತಿನ್ನುವುದನ್ನು ನಿಲ್ಲಿಸಬೇಕು.

ಸಿಹಿ ಪಾನೀಯಗಳು: ಸಕ್ಕರೆ ಪಾನೀಯಗಳನ್ನು ಸೇವಿಸದ ಜನರಿಗಿಂತ ಸಕ್ಕರೆ ಪಾನೀಯಗಳನ್ನು ಕುಡಿಯುವ ಜನರು ಅಧಿಕ ರಕ್ತದೊತ್ತಡಕ್ಕೆ ಒಳಗಾಗುತ್ತಾರೆ. ನೀವು ಸಿಹಿ ಪಾನೀಯಗಳನ್ನು ಸೇವಿಸಿದರೆ ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲಿ ಅದು ನಿಮಗೆ ಹಾನಿ ಮಾಡುತ್ತದೆ. ಇದು ತೂಕದ ಜೊತೆಗೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

ಕೆಚಪ್: ಒಂದು ಟೀ ಚಮಚ ಕೆಚಪ್‌ನಲ್ಲಿ 190 ಮಿಗ್ರಾಂ ಸೋಡಿಯಂ ಇರುತ್ತದೆ. ನೀವು ಫ್ರೆಂಚ್ ಫ್ರೈಗಳೊಂದಿಗೆ ಕೆಚಪ್ ಅನ್ನು ಸೇವಿಸಿದರೆ, ಹೆಚ್ಚು ಉಪ್ಪನ್ನು ಸೇವಿಸುತ್ತಿದ್ದೀರಿ ಎಂದರ್ಥ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ