Stroke: ಪಾರ್ಶ್ವವಾಯು ಅಪಾಯ ತಪ್ಪಿಸಬೇಕೆಂದರೆ ಈ ಅಭ್ಯಾಸ ಬಿಟ್ಟುಬಿಡಿ

Stroke: ಅತಿಯಾಗಿ ಮದ್ಯಪಾನ( Alcohol)ಸೇವನೆಯು ಪಾರ್ಶ್ವವಾಯು(Stroke)ವಿಗೆ ಕಾರಣವಾಗಬಹುದು, ಜತೆಗೆ ಹೃದಯ ಬಡಿತದಲ್ಲೂ ಏರುಪೇರು ಉಂಟಾಗಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ.

Stroke: ಪಾರ್ಶ್ವವಾಯು ಅಪಾಯ ತಪ್ಪಿಸಬೇಕೆಂದರೆ ಈ ಅಭ್ಯಾಸ ಬಿಟ್ಟುಬಿಡಿ
Alcohol
Follow us
TV9 Web
| Updated By: ನಯನಾ ರಾಜೀವ್

Updated on: Jun 15, 2022 | 4:41 PM

ಅತಿಯಾಗಿ ಮದ್ಯಪಾನ( Alcohol)ಸೇವನೆಯು ಪಾರ್ಶ್ವವಾಯು(Stroke)ವಿಗೆ ಕಾರಣವಾಗಬಹುದು, ಜತೆಗೆ ಹೃದಯ ಬಡಿತದಲ್ಲೂ ಏರುಪೇರು ಉಂಟಾಗಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಇಂಗ್ಲೆಂಡ್​ನ ನ್ಯಾಷನಲ್ ಹೆಲ್ತ್​ ಸರ್ವೀಸ್ ವರದಿ ಪ್ರಕಾರ, ಮದ್ಯಪಾನವು ರಕ್ತದೊತ್ತಡವನ್ನು ಹೆಚ್ಚಿಸಿ, ಹೃದಯಾಘಾತಕ್ಕೂ ಕಾರಣವಾಗಬಹುದು, ಅದರ ಜತೆಗೆ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚಿದೆ ಎಂಬುದು ತಿಳಿದುಬಂದಿದೆ.

ಒಂದೊಮ್ಮೆ ರಕ್ತ ಹಾಗೂ ಆಮ್ಲಜನಕದ ಸರಬರಾಜು ಮೆದುಳಿಗೆ ಸರಿಯಾಗಿ ಆಗದಿದ್ದರೆ ಅಪಧಮನಿಗಳಲ್ಲಿ ಬ್ಲಾಕೇಜ್ ಕಾಣಿಸಿಕೊಳ್ಳಲಿದ್ದು, ಹೆಚ್ಚಿನ ಕೊಬ್ಬಿನಾಂಶ ಸಂಗ್ರಹವಾಗಿ ರಕ್ತದೊತ್ತಡಕ್ಕೂ ಕಾರಣವಾಗಲಿದೆ. ಮದ್ಯಪಾನವನ್ನು ತ್ಯಜಿಸಲು ವ್ಯಾಯಾಮ, ಧ್ಯಾನವು ಉತ್ತಮ ಮಾರ್ಗವಾಗಿದೆ. ಸಮತೋಲಿತ ಡಯೆಟ್, ರೆಗ್ಯುಲರ್ ವರ್ಕೌಟ್ ಹಾಗೂ ಧೂಮಪಾನದಿಂದ ದೂರವಿದ್ದರೆ ಪಾರ್ಶ್ವವಾಯು ಅಪಾಯ ಕಡಿಮೆಯಾಗಲಿದೆ.

ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡವರು ಮಾಡಬೇಕಾಗಿದ್ದೇನು? ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡವರು ಆರೋಗ್ಯದ ಬಗ್ಗೆ ಇನ್ನೂ ಹೆಚ್ಚಿನ ಎಚ್ಚರಿಕೆವಹಿಸಬೇಕು, ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡವರು ಯಾವುದೇ ಕಾರಣಕ್ಕೂ ಧೂಮಪಾನವಾಗಲಿ, ಮದ್ಯಪಾನವಾರಗಲಿ ಸೇವಿಸಲೇಬಾರದು. ಒಂದೊಮ್ಮೆ ಮದ್ಯಪಾನ ಮಾಡಿದರೆ ಜೀವಕ್ಕೇ ಕುತ್ತು ಬರುವ ಸಾಧ್ಯತೆ ಇರುತ್ತದೆ.

ಮದ್ಯಪಾನವು ಹೇಗೆ ಪಾರ್ಶ್ವವಾಯುವಿಗೆ ಕಾರಣವಾಗಬಹುದು? ನ್ಯಾಷನಲ್ ಹೆಲ್ತ್ ಸರ್ವೀಸ್ ಆಫ್ ಇಂಗ್ಲೆಂಡ್​ನ ಮಾಹಿತಿ ಪ್ರಕಾರ, ಆಲ್ಕೋಹಾಲ್ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅನಿಶ್ಚಿತ ಹೃದಯಬಡಿತಕ್ಕೆ ಕಾರಣವಾಗುತ್ತದೆ. ತೂಕ ಹೆಚ್ಚಳವಾಗಲಿದ್ದು, ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಮೂರು ಪಟ್ಟು ಹೆಚ್ಚಿರಲಿದೆ.

ಪಾರ್ಶ್ವವಾಯುವಿನ ಲಕ್ಷಣಗಳೇನು? -ಮುಖದ ಒಂದು ಭಾಗ ಸ್ಪರ್ಶವನ್ನು ಕಳೆದುಕೊಳ್ಳಬಹುದು -ರೋಗಿಯು ನಗಾಡಲು ಅಥವಾ ಬಾಯಿಯನ್ನು ಕಳೆಯಲು ತೊಂದರೆ ಅನುಭವಿಸಬಹುದು -ಎರಡು ಕಾಲುಗಳನ್ನು ಮೇಲಕ್ಕೆತ್ತಲು ಸಾಧ್ಯವಾಗದಿರುವುದು -ತೊದಲು ನುಡಿ -ಬೇರೆಯವರ ಮಾತು ಆಲಿಸಲು ಸಾಧ್ಯವಾಗದೇ ಇರುವುದು -ವಿಪರೀತ ಕಣ್ಣುನೋವು

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್