AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಮದ್ಯಪಾನ, ಸಿಗರೇಟ್ ಸೇದಲು ಬಿಡದಿದ್ದಕ್ಕೆ 14 ವರ್ಷದಿಂದ ವಿಮಾನ ನಿಲ್ದಾಣದಲ್ಲೇ ವ್ಯಕ್ತಿಯ ವಾಸ!

ವೀ ಜಿಯಾಂಗುವೋ ವಿಮಾನ ನಿಲ್ದಾಣವನ್ನೇ ತಮ್ಮ ಮನೆ ಎಂದು ಕರೆಯುತ್ತಾರೆ. ಅಲ್ಲದೆ, ಸುಮಾರು ಐದಾರು ಜನರು ವಿಮಾನ ನಿಲ್ದಾಣದ ಟರ್ಮಿನಲ್‌ಗಳಲ್ಲಿ ವಾಸಿಸುತ್ತಿದ್ದಾರೆ.

ಮನೆಯಲ್ಲಿ ಮದ್ಯಪಾನ, ಸಿಗರೇಟ್ ಸೇದಲು ಬಿಡದಿದ್ದಕ್ಕೆ 14 ವರ್ಷದಿಂದ ವಿಮಾನ ನಿಲ್ದಾಣದಲ್ಲೇ ವ್ಯಕ್ತಿಯ ವಾಸ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Mar 31, 2022 | 2:30 PM

Share

ಬೀಜಿಂಗ್: ಚೀನಾದ ವ್ಯಕ್ತಿಯೊಬ್ಬರು ಬೀಜಿಂಗ್ ಕ್ಯಾಪಿಟಲ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್​ನ ಟರ್ಮಿನಲ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ವಾಸಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರು ತಮ್ಮ ಮನೆಗೆ ವಾಪಾಸ್ ಹೋಗಲು ಇಷ್ಟವಿಲ್ಲ ಎಂದು ಹೇಳಿದ್ದಾರೆ. ವೀ ಜಿಯಾಂಗುವೋ ಅವರಿಗೆ ಧೂಮಪಾನ ಮತ್ತು ಮದ್ಯಪಾನದ ಅಭ್ಯಾಸವಿತ್ತು. ಇದಕ್ಕೆ ಅವರ ಕುಟುಂಬದವರು ವಿರೋಧ ಮಾಡುತ್ತಿದ್ದರು. ಈ ಬಗ್ಗೆ ಮನೆಯಲ್ಲಿ ಸದಾ ಜಗಳವಾಗುತ್ತಿತ್ತು. ಇದೇ ಕಾರಣದಿಂದ ಕೋಪಗೊಂಡ ಅವರು ವಿಮಾನ ನಿಲ್ದಾಣದ ಟರ್ಮಿನಲ್‌ಗೆ ತೆರಳಿದರು. ಅಲ್ಲಿಯೇ ವಾಸವಾಗತೊಡಗಿದರು.

ಚೈನಾ ಡೈಲಿ ವರದಿಯ ಪ್ರಕಾರ, 60 ವರ್ಷದ ವೀ ಜಿಯಾಂಗುವೋ ಅವರು ಕೆಲಸಕ್ಕೆ ಹೋಗುವುದನ್ನೂ ನಿಲ್ಲಿಸಿದ್ದಾರೆ. 2008ರಿಂದ ಅವರು ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿಯೇ ವಾಸಿಸುತ್ತಿದ್ದಾರೆ.

ನಾನು ಮನೆಯಲ್ಲೇ ಇರಬೇಕೆಂದರೆ ನಾನು ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಬೇಕು ಎಂದು ನನ್ನ ಕುಟುಂಬದವರು ನನಗೆ ಹೇಳಿದ್ದಾರೆ. ಅದಕ್ಕೆ ನಾನು ಸಿದ್ಧನಿಲ್ಲ. ನಾನು ಅವರಿಗೆ ನನ್ನ ಮಾಸಿಕ 1,000 ಯುವಾನ್ (150 ರೂ.) ಭತ್ಯೆಯನ್ನು ನೀಡಬೇಕಾಗಿತ್ತು. ಇರುವ ಹಣವನ್ನೆಲ್ಲ ಅವರಿಗೆ ನೀಡಿದರೆ ನನಗೆ ಸಿಗರೇಟ್, ಆಲ್ಕೋಹಾಲ್ ಖರೀದಿಸಲು ಹಣ ಎಲ್ಲಿ ಉಳಿಯುತ್ತದೆ? ಎಂದು ಅವರು ಸಂದರ್ಶನದಲ್ಲಿ ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.

ವೀ ಜಿಯಾಂಗುವೋ ಅವರಿಗೆ 40 ವರ್ಷವಾಗಿದ್ದಾಗ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು. ಅವರಿಗೆ ವಯಸ್ಸಾದ ಕಾರಣದಿಂದ ಉದ್ಯೋಗದಲ್ಲಿ ಮುಂದುವರೆಸಲು ಸಾಧ್ಯವಾಗಲಿಲ್ಲ. ವೀ ಜಿಯಾಂಗುವೋ ವಿಮಾನ ನಿಲ್ದಾಣವನ್ನೇ ತಮ್ಮ ಮನೆ ಎಂದು ಕರೆಯುತ್ತಾರೆ. ಅಲ್ಲದೆ, ಸುಮಾರು ಐದಾರು ಜನರು ವಿಮಾನ ನಿಲ್ದಾಣದ ಟರ್ಮಿನಲ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹಿರಿಯ ನೈರ್ಮಲ್ಯ ಕಾರ್ಯಕರ್ತರೊಬ್ಬರು ಚೀನಾ ಡೈಲಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Covid 4th Wave: ಚೀನಾದಲ್ಲಿ ಲಾಕ್​ಡೌನ್, ಫ್ರಾನ್ಸ್​ನಲ್ಲಿ ಹೆಚ್ಚಿದ ಕೊವಿಡ್ ರೋಗಿಗಳ ಸಂಖ್ಯೆ; ಭಾರತದಲ್ಲೂ ಮತ್ತೆ ಕೊರೊನಾ ಆತಂಕ

Shocking News: ಅಕ್ಕನ ಬಾಯ್​ಫ್ರೆಂಡ್​ನಿಂದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಗುಪ್ತಾಂಗಕ್ಕೆ ಕೋಲು ತುರುಕಿ ಚಿತ್ರಹಿಂಸೆ!

Published On - 2:30 pm, Thu, 31 March 22

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ