AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Corporate Life: ಲ್ಯಾಪ್​ಟಾಪ್​ ಸ್ಕ್ರೀನಿಗಂಟಿ ಕುಳಿತವರೇ ಸ್ವಲ್ಪ ಇತ್ತ ನೋಡಿ

Self Care : ಕಾರ್ಪೊರೇಟ್ ಜೀವನಶೈಲಿಗೆ ಒಗ್ಗಿಕೊಂಡವರು ಚಿಕ್ಕವಯಸ್ಸಿನಲ್ಲಿಯೇ ದೊಡ್ಡದೊಡ್ಡ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೊರೊನಾ ನಂತರ ಆಫೀಸುಗಳಿಗೆ ಓಡಾಟ ಶುರುವಾಗಿದೆಯಾದರೂ ಭಾವನಾತ್ಮಕವಾಗಿಯೂ ಕುಸಿಯುತ್ತಿದ್ದಾರೆ.

Corporate Life: ಲ್ಯಾಪ್​ಟಾಪ್​ ಸ್ಕ್ರೀನಿಗಂಟಿ ಕುಳಿತವರೇ ಸ್ವಲ್ಪ ಇತ್ತ ನೋಡಿ
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 15, 2022 | 12:28 PM

Corporate Lifestyle and Health : ಕಾರ್ಪೊರೇಟ್ ಜೀವನಶೈಲಿಗೆ ಬಿದ್ದಾಗಿನಿಂದಲೂ ನಿಂತಲ್ಲೇ ಓಡುವುದನ್ನು ಕಲಿತಿದ್ದೇವೆ. ದಿನದ ಇಪ್ಪತ್ತು ಗಂಟೆಯೂ ಸ್ಕ್ರೀನಿಗೆ ಕಣ್ಣಂಟಿಸಿ ಮೆದುಳನ್ನು ಒತ್ತೆ ಇಟ್ಟು, ಮೀಟಿಂಗ್, ಡೆಡ್​ಲೈನುಗಳಲ್ಲಿ ಮುಳುಗಿ ಲ್ಯಾಪ್​ಟಾಪ್​ ತಪ್ಪಿದರೆ ಮೊಬೈಲ್ ಮೊಬೈಲ್ ತಪ್ಪಿದರೆ ಲ್ಯಾಪ್​ಟಾಪ್. ದೇಹವೆಂಬ ದೇಗುಲ ಎಚ್ಚರಿಕೆ ಗಂಟೆ  ನೀಡುತ್ತಲೇ ಇರುತ್ತದೆ. ಆದರೂ ಅದಕ್ಕೊಂದಿಷ್ಟು ಔಷಧಿ ಆರೋಗ್ಯ ಕೈಕೊಡುವತನಕವೂ ಹೀಗೆ ಕುಳಿತಲ್ಲೇ ಓಡುತ್ತಲೇ ಇರುವುದು. ಕೈಕೊಟ್ಟರೂ ಔಷಧೋಪಚಾರ ಮಾಡಿಕೊಂಡು ಮಲಗಿದಲ್ಲಿಂದಲೇ ಓಡುತ್ತಿರುವುದು. ಹೀಗಾಗಿಯೇ ಇಂದು ಸಾಕಷ್ಟು ಕಾರ್ಪೊರೇಟ್ ಉದ್ಯೋಗಿಗಳು ಒತ್ತಡಕ್ಕೆ ಒಳಗಾಗಿ ಚಿಕ್ಕವಯಸ್ಸಿನಲ್ಲಿ ದೊಡ್ಡದೊಡ್ಡ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೊರೊನಾ ನಂತರ ಆಫೀಸುಗಳಿಗೆ ಓಡಾಟ ಶುರುವಾಗಿದೆಯಾದರೂ ಓಡಾಟ ಮತ್ತು ಕೆಲಸದ ಒತ್ತಡದಲ್ಲಿ ದೈಹಿಕವಾಗಿಯಷ್ಟೇ ಅಲ್ಲ ಭಾವನಾತ್ಮಕವಾಗಿಯೂ ಕುಸಿಯುತ್ತಿದ್ದಾರೆ.

ಹೀಗೆಲ್ಲ ಇದ್ದಾಗ ಹಾರ್ಮೋನುಗಳ ಏರುಪೇರು ಉಂಟಾಗುತ್ತದೆ. ಎಲ್ಲ ಒತ್ತಡದಿಂದಾಗಿ ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸಲಾರಂಭಿಸುತ್ತವೆ. ಸಣ್ಣ ವಯಸ್ಸಿಗೆ ಹೈಪರ್​ಟೆನ್ಷನ್, ಶುಗರ್, ಥೈರಾಯ್ಡ್​ನಂತ ಸಮಸ್ಯೆಗಳಿಂದ ಒಟ್ಟಾರೆ ಬದುಕು ಡೋಲಾಯಮಾನ ಸ್ಥಿತಿಗೆ ಬಂದು ತಲುಪುತ್ತದೆ. ಅದಕ್ಕಾಗಿ ಒತ್ತಡರಹಿತ ಜೀವನಶೈಲಿ ರೂಢಿಸಿಕೊಳ್ಳುವುದೇ ಉಪಾಯ ಎನ್ನುತ್ತಿದ್ಧಾರೆ ತಜ್ಞವೈದ್ಯರು.

ಇದನ್ನೂ ಓದಿ : Color Psychology : ಬಣ್ಣಗಳ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಅವಧಿಮೀರಿ ಕೆಲಸ ಮಾಡುವುದರಿಂದ ಖಿನ್ನತೆ ಉಂಟಾಗುತ್ತಿದೆ. ಹಾಗಾಗಿ ತಂಡದೊಂದಿಗೆ ಈ ಬಗ್ಗೆ ಚರ್ಚಿಸಿಕೊಂಡು ಮುಂದುವರೆಯುವುದು ಉತ್ತಮ. ಅದಕ್ಕಾಗಿ ಕೆಲಸದ ಸ್ಥಳದಲ್ಲೇ ಅರ್ಧಗಂಟೆಗೊಮ್ಮೆ ಓಡಾಟ, ಸಣ್ಣಪುಟ್ಟ ವ್ಯಾಯಾಮ, ಸಂತುಲಿತ ಆಹಾರವನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಜಂಕ್ ಫುಡ್​ನಿಂದ ದೂರ ಇರುವುದು ಬಹುಮುಖ್ಯ ಅಂಶ. ಪ್ರೊಟೀನ್, ಮಿನರಲ್​ವುಳ್ಳ ಆಹಾರಪದ್ಧತಿ ರೂಢಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ : Health and Beauty : ಈ ಕಾಫಿ ಅಂದ್ರೆ ಬರೀ ಕುಡಿಯೋದಕ್ಕಷ್ಟೇ ಅಲ್ಲ

ಯಾವತ್ತೂ ಬೆಳಗಿನ ಉಪಹಾರವನ್ನು ತಪ್ಪಿಸಬಾರದು. ಉಪಹಾರವನ್ನು ಅತ್ಯವಶ್ಯ ಪೋಷಕಾಂಶಗಳಿಂದ ಯೋಜಿಸಿಕೊಳ್ಳಬೇಕು. ನಿಮ್ಮ ಅಡುಗೆಮನೆಯ ಗೋಡೆಗೆ ಬ್ರೆಕ್​ಫಾಸ್ಟ್ ಪ್ಲ್ಯಾನ್​ ಅಂಟಿಸಬಹುದು. ಸಮಯದ ಅಭಾವದಿಂದ ಹೊರಗಿನ ತಿಂಡಿ ತಿನ್ನುವುದಕ್ಕಿಂತ ಇರುವ ಸಮಯದಲ್ಲೇ ಮನೆಯಿಂದ ಆಹಾರ ತಯಾರಿಸಿ ಆಫೀಸಿಗೆ ತೆಗೆದುಕೊಂಡು ಹೋಗುವುದು ಹೇಗೆ ಎಂದು ಯೋಚಿಸಬೇಕು. ಏಕೆಂದರೆ ನಿಮ್ಮ ಆರೋಗ್ಯ ನಿಮ್ಮ ಆಲೋಚನೆ, ಸಮಯ ನಿರ್ವಹಣೆಯಲ್ಲಿದೆ.

ಬದುಕಿಗೆ ಒಂದು ಹವ್ಯಾಸ ಬೇಕೇಬೇಕು. ಅದು ನಿಮ್ಮ ಉಸಿರನ್ನು ಸಮತೋಲವಾಗಿರಿಸುತ್ತದೆ. ನಿಮ್ಮ ಮನಸ್ಸನ್ನು ಶಾಂತಚಿತ್ತವಾಗಿಡುತ್ತದೆ. ನಿಮ್ಮಲ್ಲಿ ಉತ್ಸಾಹ ಚೈತನ್ಯವನ್ನು ತುಂಬುತ್ತದೆ. ಇಂದೇ ನೀವು ಒಂದು ತಾಸಾದರೂ ನಿಮ್ಮ ಆಯ್ಕೆಯ ಹವ್ಯಾಸಕ್ಕೆ ಮೀಸಲಿಡಿ. ದೇಹ ಮತ್ತು ಮನಸ್ಸು ಆರೋಗ್ಯಪೂರ್ಣವಾಗಿರುವಲ್ಲಿ ಹವ್ಯಾಸ ಬಹಳ ಮುಖ್ಯ.

Published On - 12:03 pm, Wed, 15 June 22

ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!