Color Psychology : ಬಣ್ಣಗಳ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ

Know Your Personality : ನಾವಿಷ್ಟಪಡುವ ಬಣ್ಣಗಳಿಗೂ, ನಮ್ಮ ಗ್ರಹಿಕೆಗಳಿಗೂ ಮತ್ತು ವ್ಯಕ್ತಿತ್ವಕ್ಕೂ ಪೂರಕ ಸಂಬಂಧವಿದೆ ಎನ್ನುತ್ತದೆ ಮನಃಶಾಸ್ತ್ರ. ಹಾಗಿದ್ದರೆ ಏನಿದು ಕಲರ್ ಸೈಕಾಲಜಿ?

Color Psychology : ಬಣ್ಣಗಳ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 14, 2022 | 4:05 PM

Color Psychology : ನಿತ್ಯಜೀವನದಲ್ಲಿ ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ನಡೆವಳಿಕೆಗಳ ಮೇಲೆ ಬಣ್ಣಗಳೂ ಪ್ರಭಾವ ಬೀರುತ್ತಿರುತ್ತವೆ. ಉದಾಹರಣೆಗೆ ನೀವು ಯಾವುದೋ ನಿರ್ದಿಷ್ಟ ಬ್ರ್ಯಾಂಡ್​ ಅನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದರೆ ಅದರ ಹಿಂದಿರುವುದು ಕಲರ್ ಮಾರ್ಕೆಟಿಂಗ್ ತಂತ್ರ. ಈ ಬಣ್ಣಗಳೇ ಜಾಹೀರಾತಿನ ಮೂಲಕ ನಿಮ್ಮನ್ನು ಪ್ರಭಾವಿಸಿ ಖರೀದಿಸುವಂತೆ ಪ್ರೇರೇಪಿಸುತ್ತಿರುತ್ತವೆ. ಕ್ರಮೇಣ ಖರೀದಿಯತ್ತ ಸೆಳೆಯುತ್ತಿರುತ್ತವೆ. Dell, HP, IBM ನೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಲು ಇಚ್ಛಿಸುವ ಕಂಪೆನಿಗಳು ನೀಲಿ ಬಣ್ಣವನ್ನು ಉಪಯೋಗಿಸಿರುವುದನ್ನು ಇನ್ಫೋಗ್ರಾಫಿಕ್‌ನಲ್ಲಿ ನೀವು ಗಮನಿಸಿರಲು ಸಾಕು. Fanta, Amazon, Nickelodeon ಅಷ್ಟು ದೊಡ್ಡಮಟ್ಟದಲ್ಲಿ ಬ್ರ್ಯಾಂಡ್​ ಸೃಷ್ಟಿಸಲು ಅತಿವೇಗದಲ್ಲಿ ಆಕರ್ಷಿಸಲು ಕಾರಣವಾಗಿದ್ದು ಕಿತ್ತಳೆ ಬಣ್ಣ. ಹಾಗಾಗಿ ಬಣ್ಣಗಳು ನಮ್ಮ ಮನಸ್ಸನ್ನು ಪ್ರಭಾವಿಸುತ್ತವೆ ಎನ್ನುವುದು ಮನಃಶಾಸ್ತ್ರ ಹಲವಾರು ಅಧ್ಯಯಗಳಿಂದ ಆಗಾಗ ಸಾಬೀತುಪಡಿಸುತ್ತಲೇ ಇರುತ್ತದೆ. ಇದು ವ್ಯಾವಹಾರಿಕ ಸತ್ಯವಾದರೂ ಮನಸಿಗೂ ಬಣ್ಣಗಳಿಗೂ ಮತ್ತು ಆ ಬಣ್ಣಗಳನ್ನು ಇಷ್ಟಪಡುವ ನಮಗೂ ಸಂಬಂಧವಿದ್ದೇ ಇದೆ. ಹಾಗಾಗಿ ನಮ್ಮ ಆಯ್ಕೆಯ ಬಣ್ಣ ನಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ?

ಕೆಂಪು : ಈ ಬಣ್ಣವು ಉತ್ಸಾಹ, ಶಕ್ತಿ, ಬೆರಗಿನೊಂದಿಗೆ ಅಪಾಯವನ್ನೂ ಸೂಚಿಸುತ್ತದೆ. ಕೆಲವು ಬ್ರ್ಯಾಂಡ್‌ಗಳು ಆನ್​ಲೈನ್​ನಲ್ಲಿ ‘Call to Action’ ಎಂದು ಕೆಂಪುಬಣ್ಣದ ಹಿನ್ನೆಲೆಯಲ್ಲಿ ಸೂಚಿಸಿರುತ್ತವೆ. ಅಂದರೆ ತಕ್ಷಣವೇ ಆರ್ಡರ್ ಮಾಡಿ ಎಂಬರ್ಥದಲ್ಲಿ. ಕಾರಣ ಇಷ್ಟೇ, ಕೆಂಪು ತೀವ್ರ ಮತ್ತು ಆಳದಲ್ಲಿ ನಿಮ್ಮನ್ನು ಪ್ರಚೋದಿಸಬಲ್ಲದು. ಈ ಮೂಲಕ ಖರೀದಿಗೆ ನಿಮ್ಮನ್ನು ಪ್ರೇರೇಪಿಸಬಹುದು. ಅಂದರೆ, ಕೆಂಪು ಬಣ್ಣವನ್ನು ಇಷ್ಟಪಡುವವರದು ಥಟ್ಟನೆ ಆಕರ್ಷಣೆಗೆ ಒಳಗಾಗಿಬಿಡುತ್ತಾರೆ. ಅದಕ್ಕಾಗಿ ಎಂಥ ಸಾಹಸಕ್ಕೂ ಬೀಳುತ್ತಾರೆ. ಸದಾ ಥ್ರಿಲ್​ನ ಹುಡುಕಾಟದಲ್ಲಿರುತ್ತಾರೆ.

ಕಿತ್ತಳೆ : ಈ ಬಣ್ಣ ಸಾಮಾನ್ಯವಾಗಿ ಸೃಜನಶೀಲತೆ, ಸಂತೋಷ, ಸ್ವಾತಂತ್ರ್ಯ, ಯಶಸ್ಸು ಮತ್ತು ಸಮತೋಲನವನ್ನು ಪ್ರತಿನಿಧಿಸುತ್ತದೆ. ಹಾಗಾಗಿ ವೆಬ್​ಸೈಟ್​ ಡಿಸೈನಿಂಗ್​ನಲ್ಲಿ ಆಕರ್ಷಕ ಶೀರ್ಷಿಕೆ, ಟಿಪ್ಪಣಿಗಳಿಂದ ಗಮನ ಸೆಳೆಯಲು ಈ ಬಣ್ಣವನ್ನು ಹೆಚ್ಚು ಉಪಯೋಗಿಸುತ್ತಾರೆ. ಈ ಬಣ್ಣವನ್ನು ಇಷ್ಟಪಡುವ ವ್ಯಕ್ತಿಗಳು ವಿನೋದಪ್ರಿಯರಾಗಿದ್ದು ಪ್ರತಿಯೊಂದನ್ನೂ ಹಾಸ್ಯಪ್ರವೃತ್ತಿಯಿಂದ ನೋಡುತ್ತಿರುತ್ತಾರೆ. ಬಹಿರ್ಮುಖಿ ವ್ಯಕ್ತಿತ್ವದ ಇವರು ಸಾಮಾಜಿಕವಾಗಿ ಹೆಚ್ಚು ತೊಡಗಿಕೊಂಡಿರುತ್ತಾರೆ. ಯಾರನ್ನೂ ಸಂಭಾಷಣೆಗೆ ಎಳೆಯುವ ಚಾತುರ್ಯ ಹೊಂದಿರುತ್ತಾರೆ. ಹಾಗಾಗಿ ಸಾರ್ವಜನಿಕ ಕಾರ್ಯಕ್ರಮ, ಸಂತೋಷಕೂಟಗಳಲ್ಲಿ ಭಾಗವಹಿಸುವುದೆಂದರೆ ಇವರಿಗೆ ಅತ್ಯುತ್ಸಾಹ.

ಇದನ್ನೂ ಓದಿ
Image
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
Image
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
Image
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Image
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ಹಳದಿ : ಈಗಿದೆಯಲ್ಲ ಬೇಸಿಗೆ. ಈ ಬೇಸಿಗೆಯಲ್ಲಿ ಸೂರ್ಯ ಕಂಗೊಳಿಸುವಂತೆ ಬೆಚ್ಚಗೆ ಈ ಹಳದಿ. ಈ ಬಣ್ಣ ಸಂತೋಷ, ಸಕಾರಾತ್ಮಕತೆಯನ್ನು ಸೂಚಿಸುತ್ತದೆ. ಹಾಗಾಗಿ ಸಾಕಷ್ಟು ಬ್ರ್ಯಾಂಡ್​ಗಳು ತಮ್ಮ ಲೋಗೋದಲ್ಲಿ ಹಳದಿ ಬಣ್ಣವನ್ನು ಉಪಯೋಗಿಸುತ್ತವೆ. ಸಾಮಾನ್ಯವಾಗಿ ವೆಬ್​ಸೈಟ್​ಗಳಲ್ಲಿ ‘ಉಚಿತ ಶಿಪ್ಪಿಂಗ್​’ ಎಂಬುದನ್ನು ಗಮನಿಸಿರುತ್ತೀರಿ. ಅದನ್ನು ನೋಡಿದಾಗ ನೀವು ಹರ್ಷಚಿತ್ತರಾಗಿ ಆ ಉತ್ಪನ್ನವನ್ನು ಕೊಂಡುಕೊಳ್ಳುವ ಪ್ರಭಾವಕ್ಕೆ ಒಳಗಾಗುತ್ತೀರಿ ಎಂಬ ಕಾರಣಕ್ಕೇ ಈ ಬಣ್ಣತಂತ್ರ. ಈ ಬಣ್ಣವನ್ನು ಇಷ್ಟಪಡುವ ವ್ಯಕ್ತಿಗಳು ಸಕಾರಾತ್ಮಕ ಮನೋಭಾವದವರು. ಆಶಾವಾದಿ, ಸದಾ ಹರ್ಷಚಿತ್ತ ಮತ್ತು ಸಾಹಯಮಯ. ಇವರಿರುವ ಕಡೆಯೆಲ್ಲ ವಾತಾವರಣ ಸಮಾಧಾನದಿಂದ ಕೂಡಿರುತ್ತದೆ. ಏಕೆಂದರೆ ಇವರಲ್ಲಿರುವ ಅದಮ್ಯ ಸಂತೋಷ ಒಬ್ಬರಿಂದ ಒಬ್ಬರಿಗೆ ವರ್ಗಾಯಿಸುವ ಶಕ್ತಿಯನ್ನು ಹೊಂದಿರುತ್ತದೆ.

ನೀಲಿ : ನೀಲಿ ಬಣ್ಣವು ಸ್ಥಿರ, ಸಾಮರಸ್ಯ, ಶಾಂತಿಯುತ ಮತ್ತು ವಿಶ್ವಾಸಾರ್ಹವನ್ನು ಸಾಂಕೇತಿಸುತ್ತದೆ. ಹಾಗಾಗಿ ಉತ್ಪನ್ನಗಳ ಬಾಳಿಕೆ ಮತ್ತು ವಿಶ್ವಾಸಾರ್ಹತೆಗಾಗಿ ಪ್ರಸಿದ್ಧಿ ಪಡೆಯಲು ಇಚ್ಛಿಸುವ ಬ್ರ್ಯಾಂಡ್​​ಗಳ ಲೋಗೋಗಳು ನೀಲಿ ಬಣ್ಣವನ್ನೇ ಹೆಚ್ಚು ಉಪಯೋಗಿಸುತ್ತವೆ. ಜನಪ್ರಿಯ ಕಂಪ್ಯೂಟರ್ ಕಂಪನಿಗಳು, ವೆಬ್‌ಸೈಟ್‌ಗಳು, ಫೇಸ್‌ಬುಕ್, ಟ್ವಿಟರ್, ವಿಮಿಯೋ ಲೋಗೋಗಳನ್ನು ಗಮನಿಸಿ. ಈ ಬಣ್ಣವನ್ನು ಇಷ್ಟಪಡುವ ವ್ಯಕ್ತಿಗಳು ನಂಬಲರ್ಹರು. ಸೌಮ್ಯ, ಕರುಣೆ, ಶಾಂತಿ, ನಿಷ್ಠೆ ಮತ್ತು ಉತ್ತಮ ಮನೋಸ್ಥೈರ್ಯ ಉಳ್ಳವರು. ಎಂಥ ಸಂದರ್ಭವನ್ನು ಶಾಂತವಾಗಿ ನಿಭಾಯಿಸಬಲ್ಲವರು.

ಇದನ್ನೂ ಓದಿ : World Blood Donor Day 2022 : ನಿಮ್ಮ ರಕ್ತದ ಗುಂಪಿನ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ಹಸಿರು : ಪ್ರಕೃತಿ, ಸಮೃದ್ಧಿ, ಫಲವತ್ತತೆ, ಅಭಿವೃದ್ಧಿ, ಆರೋಗ್ಯ, ಸಂಪತ್ತು, ಕ್ಷೇಮ, ಔದಾರ್ಯವನ್ನು ಈ ಬಣ್ಣವು ಸೂಚಿಸುತ್ತದೆ. ಈ ಬಣ್ಣವನ್ನು ಇಷ್ಟಪಡುವ ವ್ಯಕ್ತಿಗಳು ಪ್ರ್ಯಾಕ್ಟಿಕಲ್ ಮನೋಭಾವದವರು. ವಿನಯವಂತರು. ಇತರರಿಗೆ ಉತ್ತಮ ಸಲಹೆಗಳನ್ನು ನೀಡುವವರು. ಸಹಾಯ ಮಾಡುವವರು. ಸ್ವತಂತ್ರ ಮನೋಭಾವದ ಇವರು ಅನುಭವಗಳ ಮೂಲಕ ಬದುಕಿನ ಸಮತೋಲನವನ್ನು ಕಂಡುಕೊಳ್ಳುವಂಥವರು.

ನೇರಳೆ : ಕಾಪಿರೈಟ್, ಅಧಿಕಾರ, ಸವಲತ್ತು, ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕತೆಯನ್ನು ಈ ಬಣ್ಣ ಸಾಂಕೇತಿಸುತ್ತದೆ. ಹಾಗೆಯೇ ಇದೊಂದು ನಿರಾಶಾದಾಯಕ ಬಣ್ಣವೆಂದೂ ಪರಿಗಣಿಸುತ್ತಾರೆ. ಇದು ಹತಾಶೆ ಮತ್ತು ಅಹಂಕಾರವನ್ನೂ ಸೂಚಿಸುತ್ತದೆ. ಇದಕ್ಕಾಗಿಯೇ ವೆಬ್‌ಸೈಟ್‌ಗಳು ಮತ್ತು ಬ್ರ್ಯಾಂಡ್​ಗಳು (ಹಾಲ್‌ಮಾರ್ಕ್, ಯಾಹೂ) ನೇರಳೆ ಬಣ್ಣಗಳಿಂದ ಗ್ರಾಹಕರನ್ನು ಸೆಳೆಯುತ್ತವೆ. ಜೊತೆಗೆ ಹಿತವಿರಲಿ ಎಂದು ಬಿಳಿ ಬಣ್ಣವೂ ಅದಕ್ಕೆ ಸಂವಾದಿಯಾಗಿರುವುದನ್ನು ಗಮನಿಸಿರುತ್ತೀರಿ.  ಈ ಬಣ್ಣವನ್ನು ಇಷ್ಟಪಡುವ ವ್ಯಕ್ತಿಗಳು ಚುರುಕು ಬುದ್ಧಿಯುಳ್ಳವರು. ಅಸ್ತಿತ್ವಕ್ಕಾಗಿ ಹಂಬಲಿಸುವವರು. ಗುಂಪಿನಲ್ಲಿ ಹೊಂದಿಕೊಳ್ಳುವ ಸ್ವಭಾವ ಇವರದ್ದಲ್ಲ. ಆದರೆ ಇವರ ಆಯ್ಕೆಗಳು ಅನನ್ಯ ಮತ್ತು ಅಪರೂಪ. ಅದಕ್ಕಾಗಿ ಪ್ರೀತಿಯಿಂದ ತುಡಿಯುತ್ತಿರುತ್ತಾರೆ. ಸಂಗೀತ, ನೃತ್ಯಪ್ರಿಯರು. ಇವರು ಸದಾ ಸೃಜನಶೀಲವಾಗಿರಲು ಇಷ್ಟಪಡುತ್ತಾರೆ.

ಗುಲಾಬಿ : ಈ ಬಣ್ಣ ಸಾಮಾನ್ಯವಾಗಿ ಮಹಿಳಾವಾದ, ಲವಲವಿಕೆ ಮತ್ತು ಗಾಢಪ್ರೇಮವನ್ನು ಸಾಂಕೇತಿಸುತ್ತದೆ. ಮಗುವಿನ ಆಟಿಕೆ, ಪ್ಯಾಕಿಂಗ್​, ಬ್ರ್ಯಾಂಡಿಂಗ್ ಅಥವಾ ವಿಚಿತ್ರ ವಿನೋದವನ್ನು ಪ್ರಸ್ತುತಪಡಿಸಲು ಈ ಬಣ್ಣವನ್ನು ಹೇರಳವಾಗಿ ಉಪಯೋಗಿಸಿರುವುದನ್ನು ಗಮನಿಸಿರುತ್ತೀರಿ. ಮುದ್ದಾದ, ವಿನೋದಪೂರ್ಣ, ಮಾದಕ ಎಂಬುದನ್ನು ಅರ್ಥೈಸಲು ಈ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಬಣ್ಣವನ್ನು ಇಷ್ಟಪಡುವವರು ತಮಾಷೆಯ ವ್ಯಕ್ತಿತ್ವ ಹೊಂದಿರುತ್ತಾರೆ. ಸ್ವಲ್ಪ ನಿಷ್ಕಪಟಿಗಳು. ಅವರಿಗೆ ಪ್ರೀತಿ ಮತ್ತು ಕುಟುಂಬಸುಖ ಮುಖ್ಯ.

ಇದನ್ನೂ ಓದಿ : Personality Development: ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಬೇಕೆ? ಹಾಗಿದ್ದರೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಬಿಳಿ : ಬಿಳಿಬಣ್ಣವು ಸಾಮಾನ್ಯವಾಗಿ ಶುದ್ಧತೆಯನ್ನು ಸಾಂಕೇತಿಸುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಗಳಲ್ಲಿ, ಮದುವೆ, ಆಸ್ಪತ್ರೆಗೆ ಈ ಬಣ್ಣವೇ. ಇದು ಶುಚಿತ್ವವನ್ನೂ ಸೂಚಿಸುತ್ತದೆ. ಈ ಬಣ್ಣವನ್ನು ಇಷ್ಟಪಡುವವರು ಶಾಂತ, ಮುಗ್ಧ, ನಿಷ್ಕಪಟ, ನೇರವಂತಿಕೆಯುಳ್ಳವರಾಗಿರುತ್ತಾರೆ.

ಕಪ್ಪು : ಈ ಬಣ್ಣವು ಧೈರ್ಯ, ರಹಸ್ಯ, ಒಳಸಂಚು ಮತ್ತು ಶಕ್ತಿಯ ಜೊತೆಗೆ ಅತೃಪ್ತಿ, ಕತ್ತಲೆ, ದುಃಖ, ನೋವನ್ನೂ ಸಾಂಕೇತಿಸುತ್ತದೆ. ಸಾವು ಮತ್ತು ಶೋಕದೊಂದಿಗೆ ಈ ಬಣ್ಣ ಹೆಚ್ಚು ಬೆಸೆದುಕೊಂಡಿದೆ. ಆದರೆ ಇದು ಐಷಾರಾಮಿ ಮತ್ತು ತೀವ್ರತೆಯನ್ನೂ ಸಾಂಕೇತಿಸುತ್ತದೆ. ಈ ಬಣ್ಣವನ್ನು ಇಷ್ಟಪಡುವವರು ಅಪಾಯಕ್ಕೆ ಒಡ್ಡಿಕೊಳ್ಳುವವರು. ಗಂಭೀರ ಸ್ವಭಾವದವರು, ಬಲಶಾಲಿಗಳು ಮತ್ತು ಸ್ನೇಹವನ್ನು ಗೌರವಿಸುವವರು ಮತ್ತು ನಂಬಿಕೆಗೆ ಅರ್ಹರು.

Published On - 3:02 pm, Tue, 14 June 22

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ