AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Development: ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಬೇಕೆ? ಹಾಗಿದ್ದರೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

TV9 Web
| Updated By: ganapathi bhat

Updated on: Mar 02, 2022 | 8:23 AM

ಅಟ್ರಾಕ್ಟಿವ್ ಆಗಿ ಕಾಣೋದು ಹೇಗೆ? ನಮ್ಮ ವ್ಯಕ್ತಿತ್ವವನ್ನು ಆಕರ್ಷಕವಾಗಿಸುವುದು ಹೇಗೆ.. ಈ ಪ್ರಶ್ನೆಗಳಿಗೆ ಇಲ್ಲಿ ಆಪ್ತ ಸಮಾಲೋಚಕಿ, ತಜ್ಞೆ ಡಾ. ಸೌಜನ್ಯ ವಸಿಷ್ಠ ಉತ್ತರ ನೀಡಿದ್ದಾರೆ. ಸಂಪೂರ್ಣ ಮಾಹಿತಿಗೆ ವಿಡಿಯೋ ನೋಡಿ..

ನಿಮ್ಮನ್ನು ನೋಡಿದಾಕ್ಷಣ ಮತ್ತೊಬ್ಬರು ನಿಮ್ಮ ಬಗ್ಗೆ ಅಟ್ರಾಕ್ಟ್ ಆಗಬೇಕು ಅಂತ ಜನರು ಬಯಸೋದು ಸಹಜ. ನಿಮ್ಮ ಬಗ್ಗೆ ಮತ್ತೊಬ್ಬರಿಗೆ ಆಸಕ್ತಿ ಮೂಡಬೇಕು. ಫರ್ಸ್ಟ್ ಇಂಪ್ರೆಶನ್ ಚೆನ್ನಾಗಿರಬೇಕು ಅಂತಾದರೆ ಏನು ಮಾಡಬೇಕು? ಈ ಬಗ್ಗೆ ನಿಮಗೂ ಅನುಮಾನ, ಪ್ರಶ್ನೆಗಳು ಇರಬಹುದು. ಇಂಟರ್​ವೀವ್, ನಿಮ್ಮ ಹೊಸ ಗೆಳೆಯರ ಭೇಟಿ, ಹೊಸ ಜನರ ಭೇಟಿ ವೇಳೆ ಈ ಬಗ್ಗೆ ನೀವು ಯೋಚಿಸಿರಬಹುದು. ಅಟ್ರಾಕ್ಟಿವ್ ಆಗಿ ಕಾಣೋದು ಹೇಗೆ? ನಮ್ಮ ವ್ಯಕ್ತಿತ್ವವನ್ನು ಆಕರ್ಷಕವಾಗಿಸುವುದು ಹೇಗೆ.. ಈ ಪ್ರಶ್ನೆಗಳಿಗೆ ಇಲ್ಲಿ ಆಪ್ತ ಸಮಾಲೋಚಕಿ, ತಜ್ಞೆ ಡಾ. ಸೌಜನ್ಯ ವಸಿಷ್ಠ ಉತ್ತರ ನೀಡಿದ್ದಾರೆ.

ಸಣ್ಣ ಮಗುವಿಗೆ ಅಥವಾ ನಾವು ಮಗುವಾಗಿದ್ದಾಗ ನಾವು ಹೇಗಿದ್ದರೂ ನಮಗೆ ನಮ್ಮ ಬಗ್ಗೆ ಎಷ್ಟೊಂದು ಕಾನ್ಫಿಡೆನ್ಸ್ ಇರುತ್ತೆ. ಅಷ್ಟೇ ಕಾನ್ಫಿಡೆನ್ಸ್​ಅನ್ನು ನಾವು ಈಗಲೂ ಹೊಂದಿರಬೇಕು. ಹಾಗಾದಾಗ ನಾವು ಏನನ್ನೂ ಎದುರಿಸಬಹುದು. ನಮ್ಮ ಬಗ್ಗೆ ನಮಗಿರುವ ಕಾನ್ಫಿಡೆನ್ಸ್ ನಮ್ಮ ಸೆಲ್ಫ್ ಎಸ್ಟೀಮ್ ಹೆಚ್ಚಿಸುತ್ತದೆ. ಅಲ್ಲದೆ, ನಾವು ಸ್ಕಿಲ್ಸ್, ಹವ್ಯಾಸ ಬೆಳೆಸಿಕೊಳ್ಳಬೇಕು. ಅದು ಮನುಷ್ಯನಲ್ಲಿ ಹೊಸತನ ತರುತ್ತದೆ.

ಅಷ್ಟೇ ಅಲ್ಲದೆ, ಸಾಧ್ಯವಾದಷ್ಟು ಹೊಟ್ಟೆಕಿಚ್ಚು, ಗಾಸಿಪ್​ಗಳಿಂದ ದೂರ ಇರಬೇಕು. ‘ನೊ’ ಎನ್ನಲು ಕಲಿಯಬೇಕು. ಮುಲಾಜಿಗೆ ಬಿದ್ದು, ನಮ್ಮನ್ನು ನಾವೇ ಹಿಂಸೆ ಮಾಡಿಕೊಂಡು ಇರಬಾರದು. ಬದಲಾಗಿ ಆಗದ ಕೆಲಸವನ್ನು ಆಗುವುದಿಲ್ಲ ಎಂದು ಹೇಳಲು ಗೊತ್ತಿರಬೇಕು. ಯಾವಾಗ ಎಲ್ಲಿ ಬೌಂಡರಿ ಹಾಕಿಕೊಳ್ಳಬೇಕು ಎಂದು ಕೂಡ ತಿಳಿದುಕೊಳ್ಳಬೇಕು. ಪ್ರತಿನಿತ್ಯ ನಿಮಗಾಗಿ ನಿಮ್ಮ ಸಮಯ ಮೀಸಲಿಡಿ. ವ್ಯಾಯಾಮ ಮಾಡಿ, ಒಳ್ಳೆ ಆಹಾರ ಸೇವಿಸಿ, ಚೆನ್ನಾಗಿ ನಿದ್ರೆ ಮಾಡಿ. ಶುಚಿತ್ವ ಕಾಪಾಡಿಕೊಳ್ಳಿ. ಖುಷಿ, ಸಂತೋಷವಾಗಿ ಇರುವುದು, ರಿಲ್ಯಾಕ್ಸ್ ಆಗಿರುವುದು ಕಲಿತುಕೊಳ್ಳಿ. ಇದರಿಂದ ಚೈತನ್ಯ ಹೆಚ್ಚುತ್ತದೆ.

ಇದನ್ನೂ ಓದಿ: Health Tips: ಆಹಾರ ಸೇವನೆ ನಂತರ ಹೊಟ್ಟೆ ಭಾರವಾದಂತೆ ಆಗುತ್ತಿದ್ದರೆ ಈ ಮನೆಮದ್ದುಗಳ ಸಹಾಯ ಪಡೆದುಕೊಳ್ಳಿ

ಇದನ್ನೂ ಓದಿ: Women Health: ಅನಿಯಮಿತ ಮುಟ್ಟಿನ ಸಮಸ್ಯೆ ಎದಿರಿಸುತ್ತಿದ್ದೀರಾ? ಕಾರಣ ಏನು ತಿಳಿಯಿರಿ